Bigg Boss: ಬಿಗ್‌ಬಾಸ್ ಮನೆಗೆ ಭವ್ಯಾ ಗೌಡ ತಾಯಿ ಎಂಟ್ರಿ- ತ್ರಿವಿಕ್ರಮ್‌ಗೆ ಚಾನ್ಸ್ ಮಿಸ್
ಬಿಗ್‌ಬಾಸ್ ಕನ್ನಡ ಸೀಸನ್ 11 ಶುರುವಾಗಿ 90 ದಿನಗಳು ಪೂರ್ಣಗೊಂಡಿವೆ. ಮನೆಯ ಎಲ್ಲಾ ಸದಸ್ಯರಿಗೂ ಮನೆ ಮಂದಿಯನ್ನು ನೋಡುವ ಆಸೆ ಹೆಚ್ಚಾಗಿದೆ. ಇದರಿಂದಾಗಿ ದೊಡ್ಮನೆಗೆ ಸ್ಪರ್ಧಿಗಳ ಕುಟುಂಬಸ್ಥರನ್ನು ಕರೆಸಿಕೊಳ್ಳಲಾಗುತ್ತಿದೆ. ಹಾಗಾದರೆ ಬಿಗ್‌ಬಾಸ್ ಮನೆಗೆ ಯಾವ ಸ್ಪರ್ಧಿಯ ಕುಟುಂಬಸ್ಥರು ಭೇಟಿ ನೀಡಿದ್ದಾರೆ? ಕಲರ್ಸ್ ಕನ್ನಡ ಹಂಚಿಕೊಂಡ ಇಂದಿನ ವೈರಲ್ ವೀಡಿಯೋದಲ್ಲಿ ಏನಿದೆ? ತ್ರಿವಿಕ್ರಮ್ ತಾಯಿಯನ್ನು ಭೇಟಿ ಮಾಡಿದ್ರಾ?
ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಆಗಿರುವ ಭವ್ಯಾ ಗೌಡ ಅವರ ತಾಯಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದರಿಂದಾಗಿ ಮನೆ ಮಂದಿಗೆಲ್ಲಾ ಕಣ್ಣಂಚಲ್ಲಿ ನೀರು ಜಿನುಗಿದೆ. ಬಿಗ್‌ಬಾಸ್ ಸ್ಪರ್ಧಿಗಳು ತಮ್ಮ ಕುಟುಂಬಸ್ಥರನ್ನು ಕಾಣದೆ ಸರಿಸುಮಾರು ನೂರು ದಿನಗಳು ಹತ್ತಿರವಾಗುತ್ತಿವೆ. ಬಿಗ್‌ಬಾಸ್ ಕೂಡ ಇನ್ನೇನು ಪೂರ್ಣಗೊಳ್ಳುವ ಸಮಯ ಬಂದಿದೆ. ಹೀಗಿರುವಾಗ ಬಿಗ್‌ಬಾಸ್ ಸ್ಪರ್ಧಿಗಳಲ್ಲಿ ಯಾರು ಉಳಿಯುತ್ತಾರೆ? ಯಾರು ಹೊರ ಹೋಗುತ್ತಾರೆ ಎನ್ನುವುದು ಸ್ಪಷ್ಟವಾಗಿಲ್ಲ. ಎಲ್ಲೋ ಒಂದು ಕಡೆ ಮನಸ್ಸಿನಲ್ಲಿ ತಮ್ಮ ಪೋಷಕರನ್ನು ಭೇಟಿ ಮಾಡುವ ಅವಕಾಶ ಸಿಗಲೆಂದು ಸ್ಪರ್ಧಿಗಳು ಆ ದೇವರನ್ನು ಬೇಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸುಸಂದರ್ಭ ಬಂದಾಗಿದೆ. ಹಾಗಾದರೆ ವೈರಲ್ ಆದ ವೀಡಿಯೋದಲ್ಲಿ ಬಿಗ್‌ಬಾಸ್ ಮನೆಗೆ ಬಂದ ಪೋಷಕರು ಯಾರು?

ಪೋಷಕರ ಮಾತು ಅವರು ಪ್ರೀತಿ ಸಿಕ್ಕರೆ ಸಾಕು ಮಕ್ಕಳಿಗೆ ಯಾವುದೇ ಸಂದರ್ಭ ಬರಲಿ ಎದುರಿಸುವ ಶಕ್ತಿ ಹೆಚ್ಚಾಗುತ್ತದೆ. ಇಂತಹ ಶಕ್ತಿಗಾಗಿ ಬಿಗ್‌ಬಾಸ್ ಮನೆಯ ಮಂದಿಯೆಲ್ಲಾ ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಇದಕ್ಕೆ ಸುವರ್ಣ ಸಮಯ ಬಂದಾಗಿದೆ. ಬಿಗ್‌ಬಾಸ್ ಮನೆಗೆ ಭವ್ಯ ಗೌಡ ತಾಯಿ ಬಂದು ಅವರನ್ನು ಪ್ರೀತಿಯಿಂದ ಮಾತನಾಡಿಸಿ ಧೈರ್ಯ ತುಂಬಿ ಹೊರ ಬಂದಿದ್ದಾರೆ. ಇದರಿಂದ ಮನೆ ಮಂದಿಯೆಲ್ಲಾ ಖುಷಿಯಾಗಿದ್ದು ತಮ್ಮ ಪೋಷಕರು ಕೂಡ ಮನೆ ಒಳಗೆ ಬರಬಹುದು ಎಂದು ಬಾಗಿಲತ್ತ ನೋಡುತ್ತ ಸಮಯ ಕಳೆಯುತ್ತಿದ್ದಾರೆ.
ತಾಯಿಯನ್ನು ನೋಡುವ ಚಾನ್ಸ್ ಮಿಸ್ ಮಾಡಿಕೊಂಡ ತ್ರಿವಿಕ್ರಮ್
ಬಿಗ್ ಬಾಸ್ ತ್ರಿವಿಕ್ರಮ್ ಅವರಿಗೆ ತಾಯಿಯನ್ನು ನೋಡಲು ಅವಕಾಶವನ್ನು ನೀಡುತ್ತಾರೆ. ಆದರೆ ತ್ರಿವಿಕ್ರಮ್ ತಾಯಿಯನ್ನು ನೋಡಬೇಕು ಅಂದರೆ ಅದಕ್ಕೆ ಬಿಗ್‌ಬಾಸ್ ಕೊಟ್ಟ ಟಾಸ್ಕ್ ಅನ್ನು ಪೂರ್ಣಗೊಳಿಸಬೇಕು. ಇತ್ತ ತ್ರಿವಿಕ್ರಮ್ ಟಾಸ್ಕ್ ಆಡ್ತಾಯಿದ್ದರೆ ಅತ್ತ ಮನೆ ಮುಖ್ಯ ದ್ವಾರದಿಂದ ಅವರ ತಾಯಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ.
ತ್ರಿವಿಕ್ರಮ್ ಆಡುತ್ತಿದ್ದ ಸ್ಥಳದಲ್ಲಿರುವ ಟಿವಿಯಲ್ಲಿ ಅವರ ತಾಯಿ ಬಿಗ್‌ಬಾಸ್ ಮನೆಗೆ ಬಂದಿರುವ ದೃಶ್ಯ ತ್ರಿವಿಕ್ರಮ್ ಅವರಿಗೆ ಕಾಣಿಸುತ್ತಿರುತ್ತದೆ. ಆದರೆ ಅವರು ಅವರ ತಾಯಿಯನ್ನು ಭೇಟಿ ಮಾಡಬೇಕು ಅಂದರೆ ಕೊಟ್ಟಿರುವ ಟಾಸ್ಕ್ ಅನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು. ಆದರೆ ತ್ರಿವಿಕ್ರಮ್ ಅವರಿಗೆ ಸಮಯಕ್ಕೆ ಸರಿಯಾಗಿ ಟಾಸ್ಕ್ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಇದರಿಂದ ತ್ರಿವಿಕ್ರಮ್ ಬೇಸರದಿಂದ ಮಕ್ಕಳಂತೆ ಅಳುತ್ತಾ 'ಬಿಗ್‌ಬಾಸ್ ಮತ್ತೊಂದು ಚಾನ್ಸ್ ಕೊಡಿ ನಾನು ಟಾಸ್ಕ್ ಪೂರ್ಣಗೊಳಿಸುತ್ತೇನೆ' ಎಂದು ಬಿಕ್ಕಿಬಿಕ್ಕಿ ಅಳುತ್ತಾರೆ.
'ನೀವಿಬ್ಬರೂ ರಾಧೆ-ಕೃಷ್ಣನಂತೆ ಇದಿರಾ'
ಇತ್ತ ಭವ್ಯಾ ಅವರಿಗೆ ತ್ರಿವಿಕ್ರಮ್ ತಾಯಿ, 'ನೀವಿಬ್ಬರೂ ರಾಧೆ-ಕೃಷ್ಣನಂತೆ ಇದಿರಾ' ಎಂದು ಹೇಳುತ್ತಿರುವ ದೃಶ್ಯ ಕಂಡು ಬಂದಿದೆ. ಇದರಿಂದ ತ್ರಿವಿಕ್ರಮ್ ಹಾಗೂ ಭವ್ಯಾ ಅವರ ಪ್ರೀತಿಗೆ ಪೋಷಕರಿಂದ ಗ್ರೀನ್ ಸಿಗ್ನಲ್ ಕೂಡ ಸಿಕ್ಕಂತಾಗಿದೆ. ಆದರೆ ತ್ರಿವಿಕ್ರಮ್ ಅವರಿಗೆ ಅವರ ತಾಯಿಯನ್ನು ಭೇಟಿ ಮಾಡುವ ಅವಕಾಶ ಸಿಗಲೇ ಇಲ್ಲ. ಇದರಿಂದ ತ್ರಿವಿಕ್ರಮ್ ಅವರು ತುಂಬಾ ಬೇಸರಗೊಂಡು ಕಣ್ಣೀರು ಹಾಕಿದ್ದು ಕಂಡುಬಂದಿದೆ. ಹಾಗಾದರೆ ತ್ರಿವಿಕ್ರಮ್ ತಾಯಿ ಭವ್ಯ ಅವರಿಗೆ ಹೇಳಿದ ಮಾತುಗಳು ಏನು? ತ್ರಿವಿಕ್ರಮ್ ಅವರು ತಾಯಿಯನ್ನು ಭೇಟಿ ಮಾಡಲೇ ಇಲ್ವಾ? ಎಲ್ಲದಕ್ಕೂ ಉತ್ತರ ಇಂದಿನ ಸಂಚಿಕೆಯಲ್ಲಿ ಸಿಗಲಿದೆ.
photo credit:Filmibeat kannada












Click it and Unblock the Notifications