Aparna: ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅಪರ್ಣಾ ಅವರ ಅಂತ್ಯಕ್ರಿಯೆ

ಅಪ್ಪಟ ಕನ್ನಡತಿ ಆಂಕರ್ ಅಪರ್ಣಾ ಅವರು ಏಳು ಕೋಟಿ ಕನ್ನಡಿಗರನ್ನು ಬಿಟ್ಟು ಇದೀಗ ಬಾರದ ಲೋಕಕ್ಕೆ ಹೋಗಿದ್ದಾರೆ. ಕ್ಯಾನ್ಸರ್ ಕಾಯಿಲೆ ಕಾರಣಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಈಗ ಎಲ್ಲರನ್ನು ಬಿಟ್ಟು ಹೋಗಿದ್ದಾರೆ. ಬೆಂಗಳೂರಲ್ಲಿ ಅಂತಿಮ ದರ್ಶನಕ್ಕೆ ಬಂದ ನೂರಾರು ಗಣ್ಯರು ಕಣ್ಣೀರು ಹಾಕಿದ್ದಾರೆ. ಹೀಗಿದ್ದಾಗ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳ ಜೊತೆಗೆ ನಡೆದಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಅಂದಹಾಗೆ ಆಂಕರ್ ಅಪರ್ಣಾ ಅವರು ನಿನ್ನೆ ಬಾರದ ಲೋಕಕ್ಕೆ ತೆರಳಿದ ನಂತರ, ಅವರ ಪತಿ ಭಾವುಕರಾಗಿ ಮಾತನಾಡಿದ್ದರು. ಅಲ್ಲದೆ ಕಳೆದ 2 ವರ್ಷಗಳಿಂದ ಅಪರ್ಣಾ ಹೇಗೆಲ್ಲಾ ನೋವು ಅನುಭವಿಸಿದ್ದರು ಎಂಬ ವಿಚಾರವನ್ನು ಬಿಡಿಸಿ ಹೇಳಿದ್ದರು. ಹೀಗಿದ್ದಾಗ ಅಪರ್ಣಾ ಅವರ ಅಗಲಿಕೆ ಅವರ ಕುಟುಂಬಕ್ಕೆ ಸಾಕಷ್ಟು ನೋವು ತಂದಿದೆ. ಹಾಗೇ ಕೋಟಿ, ಕೋಟಿ ಅಭಿಮಾನಿಗಳು ಕೂಡ ಕಂಬನಿ ಮಿಡಿದಿದ್ದಾರೆ. ಹೀಗಾಗಿ ಇಂದು ಅಂತಿಮ ದರ್ಶನಕ್ಕೆ ಕೂಡ ವ್ಯವಸ್ಥೆ ಮಾಡಲಾಗಿತ್ತು. ಅಂತಿಮ ದರ್ಶನದ ನಂತರ ಅಂತ್ಯಕ್ರಿಯೆ ನೆರವೇರಿದೆ.

Anchor Aparna Cremation Has Been Done In Bengaluru

ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ...

ಅಪರ್ಣಾ ಅವರು ದೊಡ್ಡ ಮಟ್ಟದ ಸಾಧನೆ ಮಾಡಿದ್ದರು ಹಾಗೂ ಅಪರ್ಣಾ ನಿರೂಪಣೆಯಲ್ಲಿ ಸಾಕಷ್ಟು ಶ್ರದ್ಧೆ ಕೂಡ ವಹಿಸಿದ್ದರು. ನಿರೂಪಣೆ ಜೊತೆಗೆ ನಟನೆಗೂ ಸೈ ಅಂತಿದ್ದರು ನಟಿ ಅಪರ್ಣಾ. ಹೀಗೆ ಎಲ್ಲಾ ಕ್ಷೇತ್ರದಲ್ಲೂ ಮಿಂಚು ಹರಿಸಿದ್ದ ಆಂಕರ್ ಅಪರ್ಣಾ ಅವರು ನಿನ್ನೆ ಕೊನೆಯುಸಿರು ಎಳೆದಿದ್ದರು. ಕ್ಯಾನ್ಸರ್ ಚಿಕಿತ್ಸೆ ಫಲಿಸದ ಕಾರಣಕ್ಕೆ ಅವರು ಇಹಲೋಕವನ್ನ ತ್ಯಜಿಸಿದ್ದರು. ಹೀಗಾಗಿ ಇಂದು ಬೆಂಗಳೂರಿನಲ್ಲಿ ಸಕಲ ಸರ್ಕಾರಿ ಗೌರವದ ಜೊತೆಗೆ ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅಪರ್ಣಾ ಅಂತ್ಯಕ್ರಿಯೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ನಡೆಯಿತು.

ಬನಶಂಕರಿ ಪ್ರದೇಶದಲ್ಲಿ ಮನೆ ಇದೆ

ಸಾಕಷ್ಟು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಬನಶಂಕರಿ 2ನೇ ಹಂತದ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದರು. ಬೆಂಗಳೂರು ದೂರದರ್ಶನಕ್ಕೆ ಸೀನಿಯರ್ ಗ್ರೇಡ್ ನಿರೂಪಕಿ ಆಗಿದ್ದ ಅಪರ್ಣಾ ಅವರು ಆಕಾಶವಾಣಿ ನಿರೂಪಕಿಯಾಗಿ ಕೂಡ ಕೆಲಸವನ್ನ ನಿರ್ವಹಿಸಿದ್ದರು. ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿ ನಿರೂಪಕಿಯಾಗಿಯೂ 3 ದಶಕ ಪೂರೈಸಿದ್ದರು. ಆದರೆ ಇದೀಗ ಎಲ್ಲರನ್ನೂ ಅಗಲಿ ಹೋಗಿದ್ದಾರೆ ನಟಿ ಅಪರ್ಣಾ. ಸಿನಿಮಾ ರಂಗದ ಗಣ್ಯರು & ಅಪರ್ಣಾ ಅವರ ಕುಟುಂಬ ಸದಸ್ಯರು ಮಧ್ಯಾಹ್ನದ ತನಕವು ಅಂತಿಮ ದರ್ಶನ ಪಡೆದರು. ಸಂಜೆ ವೇಳೆಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅಪರ್ಣಾ ಅವರ ಸಾವಿಗೆ ಇದೇ ಕಾರಣ?

ಬ್ರಹ್ಮಾಂಡ ಗುರೂಜಿ ಇಂದು ಆಂಕರ್ ಅಪರ್ಣಾ ಅವರ ಅಂತಿಮ ದರ್ಶನ ಪಡೆದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಕಂಬನಿ ಮಿಡಿದ ಬ್ರಹ್ಮಾಂಡ ಗುರೂಜಿ, ನಟಿ & ನಿರೂಪಕಿಯಾದ ಅಪರ್ಣಾ ಅವರ ಸಾವಿಗೆ ಅಸಲಿ & ಸ್ಫೋಟಕ ಕಾರಣ ಬಿಚ್ಚಿಟ್ಟಿದ್ದಾರೆ. ಇದೀಗ ಬ್ರಹ್ಮಾಂಡ ಗುರೂಜಿ ಅವರು ಹೇಳುವಂತೆ ಆಂಕರ್ ಅಪರ್ಣಾ ಅವರು ಮೃತಪಟ್ಟಿದ್ದು ಶನಿ ಕಾಟದಿಂದ ಅಂತೆ. ಅಷ್ಟಕ್ಕೂ ಯಾರದ್ದೇ ಜೀವನದಲ್ಲಿ ಶನಿ ಕಾಟ ಹೆಚ್ಚಾದರೆ ಕಾಯಿಲೆಗಳು ವಕ್ಕರಿಸಿ, ಸಮಸ್ಯೆಗೆ ಕಾರಣ ಆಗುತ್ತದೆ. ಇದೇ ಕಾರಣಕ್ಕೆ ಕ್ಯಾನ್ಸರ್ ಕಾಯಿಲೆಯಿಂದ ಬಳಲಿದ್ದ ಅಪರ್ಣಾ ಅವರು ಇದೀಗ ಮೃಪತಟ್ಟಿದ್ದಾರೆ ಎಂದಿದ್ದಾರೆ ಬ್ರಹ್ಮಾಂಡ ಗುರೂಜಿ ಅವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+