Anchor Anushree: ಅನುಶ್ರೀ ಮದುವೆಯಾಗ್ತಿರೋ ಹುಡುಗನಿಗೂ ಪುನೀತ್ ರಾಜ್‌ಕುಮಾರ್‌ಗೆ ಇರುವ ಲಿಂಕ್ ಏನು?
ನಿರೂಪಣೆಯ ಲೋಕದಲ್ಲಿ ತನ್ನದೇ ಆದ ಹೆಸರು ಮಾಡಿದ ಸ್ಯಾಂಡಲ್‌ವುಡ್ ನಟಿ, ಆಂಕರ್ ಅನುಶ್ರೀ ಅವರು ಅಂತು ಇಂತು ಕೊನೆಗೂ ಮದುವೆ ಫಿಕ್ಸ್ ಆಗಿದೆ. ಆಂಕರ್ ಹಾಗೂ ಮಂಗಳೂರು ಚೆಲುವೆಯ ಮದುವೆ ಯಾವಾಗ? ಯಾಕೆ ಮದುವೆಯಾಗಿಲ್ಲ ಎನ್ನುವ ಸಾಕಷ್ಟು ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಈ ಹಿಂದೆ ನಿರೂಪಕಿ ಅನುಶ್ರೀ ಅವರ ಮದುವೆ ಬಗ್ಗೆ ಈ ಹಿಂದೆ ಸಾಕಷ್ಟು ಚರ್ಚೆಯಾಗಿತ್ತು. ಅನುಶ್ರೀ ಅವರಿಗೆ ಮದುವೆಯಾಗಿದೆ. ರಕ್ಷಿತ್ ಶೆಟ್ಟಿ ಜೊತೆಗೆ ಮದುವೆಯಾಗುತ್ತಾರೆ ಎಂಬ ಸುದ್ದಿಯೂ ಸಹ ಈ ಹಿಂದೆ ಸಾಕಷ್ಟು ಸದ್ದು ಮಾಡಿತ್ತು. ಆದರೆ ಇದೀಗ ಅನುಶ್ರೀ ಮದುವೆ ಯಾವಾಗ ಹಾಗೂ ಹುಡುಗ ಯಾರು ಎಂಬ ಬಗ್ಗೆ ಕೊನೆಗೂ ಉತ್ತರವನ್ನ ನೀಡಿದ್ದಾರೆ.
ಇಷ್ಟು ದಿನ ಮದುವೆ ಬಗ್ಗೆ ಸ್ಪಷ್ಟ ಹೇಳಿಕೆ ನೀಡದ ನಟಿ ಕೊನೆಗೂ ಮದುವೆ ಕುರಿತು ಮಾಹಿತಿ ನೀಡಿದ್ದಾರೆ. ಮದುವೆ ಕುರಿತು ತಮ್ಮ ಅಭಿಮಾನಿಗಳಿಗೆ ನಿರೂಪಕಿ ಅನುಶ್ರೀ ಅವರು ಗುಡ್ ನ್ಯೂಸ್ ನೀಡಿದ್ದಾರೆ. ಇಷ್ಟು ದಿನ ಮದುವೆ ಆಗಲೋ ಬೇಡವೋ ಎನ್ನುವ ಗೊಂದಲದಲ್ಲಿದ್ದ ನಿರೂಪಕಿ ಅನುಶ್ರೀ ಕೊನೆಗೂ ಮದುವೆ ಆಗಲು ಒಪ್ಪಿಕೊಂಡಿದ್ದಾರೆ. ಈ ಹಿಂದೆ ನಟಿ ಅನುಶ್ರೀ ಅವರು ನಾನು ಮದುವೆ ಆಗಲಿದ್ದೇನೆ. ನನ್ನ ತಂದೆ-ತಾಯಿಯ ದಾಂಪತ್ಯದ ಕಹಿ ಅನುಭವವನ್ನು ಕಣ್ಣಾರೆ ಕಂಡಿದ್ದ ನನಗೆ ಮದುವೆ ಎಂದರೆ ನೋವು ತರುವ ಸಂಗತಿಯಾಗಿತ್ತು. ನಾನು ನನ್ನ ಮದುವೆ ಬಗ್ಗೆ ಯೋಚಿಸಿದಾಗಲೆಲ್ಲಾ ನನಗೆ ಮದುವೆ-ದಾಂಪತ್ಯ ಇವೆಲ್ಲಾ ನನಗೆ ಬೇಡವೇ ಬೇಡ. ನನ್ನ ಅಮ್ಮ-ಅಪ್ಪನ ಸಂಸಾರದ ಸುಖದ ಹಣೆಬರಹವನ್ನು ನೋಡಿದ್ದಾಗಿದೆ, ಸಾಕು ಎನಿಸುತ್ತಿತ್ತು ಎಂದು ಹೇಳಿದ್ದರು.

ನನ್ನದೇ ಪೋಷಕರ ಮುರಿದ ಬಿದ್ದ ಮದುವೆ ನೋಡಿದ ಮೇಲೂ ನನಗೆ ಮದುವೆ ಆಗಬೇಕೆಂಬ ಕನಸು ಕಾಣುವುದರಲ್ಲಿ ಅರ್ಥವೇ ಇಲ್ಲ ಎನ್ನಿಸುತ್ತಿತ್ತು. ಆದರೆ ಈಗ, ವರ್ಷಗಳು ಉರುಳುತ್ತಿವೆ. ನನಗೂ ವಯಸ್ಸಾಗುತ್ತಿದೆ. ಎಲ್ಲರ ಜೀವನದಲ್ಲೂ ಮದುವೆ ಕಹಿ ಘಟನೆ ಆಗಲೇಬೇಕು ಎಂದೇನಿಲ್ಲ, ಅದು ಸುಮಧುರ ಕೂಡ ಆಗಬಹುದು ಎನ್ನಿಸುತ್ತಿದೆ. ಹೀಗಾಗಿ ನಾನು ಮದುವೆಯಾಗಲು ನಿರ್ಧರಿಸಿದ್ದೇನೆ. ಮದುವೆಯೇ ಬೇಡ ಎನ್ನುತ್ತಿದ್ದವಳು ಮದುವೆಗೆ ಗ್ರೀನ್ ಸಿಗ್ನಲ್ ನೀಡಿಬಿಟ್ಟಿದ್ದೇನೆ ಎಂದು ಈ ಹಿಂದೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದ ಅನುಶ್ರೀ ಇದೀಗ ಆಗಸ್ಟ್ 28 ಕ್ಕೆ ಮದುವೆಯಾಗಲಿದ್ದಾರೆ.
ಇನ್ನೂ ನಟಿ ಹಾಗೂ ನಿರೂಪಕಿ ಅನುಶ್ರೀ ಮದುವೆಯಾಗುತ್ತಿರುವ ಹುಡುಗ ರೋಷನ್ ಯಾರು? ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಮೊದಲಿನಿಂದಲೂ ನಟ ಪುನೀತ್ ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿ ಅನುಶ್ರೀ ಅವರು, ಪುನೀತ್ ರಾಜ್ ಕುಮಾರ್ ಅವರಿಂದಲೇ ರೋಷನ್ ಪರಿಚಯವಾಗಿರುವುದು. ಅನುಶ್ರೀ ಮದುವೆಗೂ ಅಪ್ಪುಗೂ ಒಂದು ಲಿಂಕ್ ಇದೆ. ಅನುಶ್ರೀ ಹಾಗೂ ರೋಷನ್ ಭೇಟಿಗೆ ಕಾರಣ ಪುನೀತ್ ರಾಜ್‌ಕುಮಾರ್ ಅವರೇ.
ಅನುಶ್ರೀ ಅವರಿಗೆ ಪುನೀತ್ ರಾಜ್‌ಕುಮಾರ್ ಅವರು ಅಂದ್ರೆ ಸಾಕಷ್ಟು ಅಚ್ಚು ಮೆಚ್ಚು. ಅಪ್ಪು ಮೇಲೆ ಅನುಶ್ರೀ ಅಪಾರ ಗೌರವ ಹಾಗೂ ಅಭಿಮಾನ ಹೊಂದಿದ್ದಾರೆ. ತಾವು ಅಪ್ಪು ಅಭಿಮಾನಿ ಅಂತಲೇ ಇನ್ಸ್ಟಾಗ್ರಾಮ್‌ನಲ್ಲಿ ಅನುಶ್ರೀ ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮ ಯೂಟ್ಯೂಬ್ ಚಾನೆಲ್‌ಗೆ ಅಪ್ಪು ಇರುವ ಲೋಗೋವನ್ನೇ ಅನುಶ್ರೀ ಮಾಡಿಸಿದ್ದಾರೆ. ಇದೀಗ ಅನುಶ್ರೀ ಮದುವೆ ಆಗುತ್ತಿರುವ ರೋಷನ್ ಸಹ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. ಅನುಶ್ರೀ ಅವರು ಅಪ್ಪು ಅವರ ಅಭಿಮಾನಿಯನ್ನೇ ಅನುಶ್ರೀ ವಿವಾಹವಾಗುತ್ತಿದ್ದಾರೆ.
ಅನುಶ್ರೀ - ರೋಷನ್ ಅವರದ್ದು ಅರೇಂಜ್ಡ್ ಮ್ಯಾರೇಜ್ ಅಲ್ಲ. ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮೊದಲ ಬಾರಿಗೆ ಅನುಶ್ರೀ ಹಾಗೂ ರೋಷನ್ ಭೇಟಿಯಾಗಿದ್ದು ಅಪ್ಪು ಮನೆಯಲ್ಲಿ. ಅಪ್ಪು ನಿವಾಸದಲ್ಲೇ ಅನುಶ್ರೀ ಹಾಗೂ ರೋಷನ್ ಪರಿಚಿತರಾದರು. ಯುವ ರಾಜ್‌ಕುಮಾರ್‌ಗೆ ರೋಷನ್ ಆಪ್ತ ಸ್ನೇಹಿತ. ಪುನೀತ್ ರಾಜ್‌ಕುಮಾರ್ ಅವರ 'ಗಂಧದ ಗುಡಿ' ಡಾಕ್ಯುಮೆಂಟರಿ ಪ್ರೀ - ರಿಲೀಸ್ ಈವೆಂಟ್ ನಡೆಯಿತು. ಪ್ಯಾಲೇಸ್ ಗ್ರೌಂಡ್ನಲ್ಲಿ ಜರುಗಿದ 'ಪುನೀತ್ ಪರ್ವ' ಕಾರ್ಯಕ್ರಮದ ನಿರೂಪಣೆ ಮಾಡಿದ್ದು ಅನುಶ್ರೀ. ಅಂದ್ಹಾಗೆ, ಈ ಈವೆಂಟ್‌ನ ನಿರ್ವಹಣೆಯಲ್ಲಿ ರೋಷನ್ ತೊಡಗಿಕೊಂಡಿದ್ದರು. ಪುನೀತ್ ಪರ್ವ' ಈವೆಂಟ್ ಬಳಿಕ ಅನುಶ್ರೀ ಹಾಗೂ ರೋಷನ್ ಮಧ್ಯೆ ಆತ್ಮೀಯತೆ ಬೆಳೆಯಿತು. ನಂತರ ಅನುಶ್ರೀ ಹಾಗೂ ರೋಷನ್ ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ಇಬ್ಬರ ಪ್ರೀತಿಗೆ ಕುಟುಂಬಸ್ಥರು ಸಮ್ಮತಿ ನೀಡಿದ್ದು ಆಗಸ್ಟ್ 28 ರಂದು ವಿವಾಹವಾಗುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲಿದ್ದಾರೆ.












Click it and Unblock the Notifications