Anchor Anushree: ಮದುವೆ ಬೆನ್ನಲ್ಲೇ ಆ್ಯಂಕರ್ "ಅನುಶ್ರೀ"ಗೆ ಸಂಕಷ್ಟ, ಫ್ಯಾನ್ಸ್ ಹೇಳಿದ್ದೇನು ?
Anchor Anushree: ಆ್ಯಂಕರ್ ಅನುಶ್ರೀ ಅವರು ದಾಂಪತ್ಯ ಜೀವನಕ್ಕೆ ಇಂದು ಕಾಲಿರಿಸಿದ್ದಾರೆ. ಮದುವೆಯಾದ ಬೆನ್ನಲ್ಲೇ ಅವರಿಗೆ ಸಾರ್ವಜನಿಕ ವಲಯದಿಂದ ಭಾರೀ ಆಕ್ಷೇಪ ಹಾಗೂ ಅಭಿಮಾನಿಗಳಿಂದ ಟೀಕೆ ವ್ಯಕ್ತವಾಗುತ್ತಿದ್ದು, ಅನುಶ್ರೀ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು ಕನ್ನಡದ ಸ್ಟಾರ್ ಆ್ಯಂಕರ್ ಅನುಶ್ರೀ ಅವರು ಆಗಸ್ಟ್ 28ರ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇದರ ಬೆನ್ನಲ್ಲೇ ಅವರಿಗೆ ಭಾರೀ ಸಂಕಷ್ಟ ಎದುರಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಆ್ಯಂಕರ್ ಮತ್ತು ನಟಿ ಅನುಶ್ರೀ ಅವರು ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಬೆಂಗಳೂರಿನಲ್ಲಿ ಭಾರೀ ಅದ್ಧೂರಿಯಾಗಿ ಮದುವೆ ಸಂಭ್ರಮ ನಡೆದಿದೆ. 38 ವರ್ಷದ ಅನುಶ್ರೀ ಅವರಿಗೆ ಕಂಕಣಭಾಗ್ಯ ಕೂಡಿ ಬಂದಿದ್ದು, ಗುರುವಾರ ಅವರ ಮದುವೆ ಸಮಾರಂಭ ಭರ್ಜರಿಯಾಗಿ ನಡೆಯಿತು. ಅನುಶ್ರೀ ಅವರು ಕೊಡಗು ಮೂಲದ ರೋಷನ್ ಜೊತೆಗೆ ಅನುಶ್ರೀ ಕೈಹಿಡಿದಿದ್ದಾರೆ. ಇದರ ಬೆನ್ನಲ್ಲೇ ಅನುಶ್ರೀ ಅವರಿಗೆ ಉಭಯ ಸಂಕಟವೊಂದು ಎದುರಾಗಿದೆ. ಅನುಶ್ರೀ ಅವರು ವಿವಾಹದ ಬಗ್ಗೆ ಹೆಚ್ಚಾಗಿ ಎಲ್ಲೂ ಮಾತನಾಡಿರಲಿಲ್ಲ. ಈ ಹಿಂದೆಯೂ ಅನುಶ್ರೀ ಅವರಿಗೆ ವಿವಾಹವಾಗಿದೆ ಎನ್ನುವ ಗಾಳಿ ಸುದ್ದಿ ಹಬ್ಬಿದ್ದು ಸಹ ಇದಕ್ಕೆ ಪ್ರಮುಖ ಕಾರಣ. ಆದರೆ ಗುರುವಾರ ಅನುಶ್ರೀ ಅವರನ್ನು ಇಷ್ಟು ವರ್ಷಗಳ ಕಾಲ ಮೆಚ್ಚಿಕೊಂಡಿದ್ದ ಅಭಿಮಾನಿಗಳೇ ತಮ್ಮ ಕೋಪವನ್ನು ಹೊರಹಾಕಿದ್ದಾರೆ.

ಹೌದು ಆ್ಯಂಕರ್ ಅನುಶ್ರೀ ಅವರ ವಿವಾಹವು ಬೆಂಗಳೂರಿನ ಕಗ್ಗಲಿಪುರ ಬಳಿಯ ರೆಸಾರ್ಟ್‌ವೊಂದರಲ್ಲಿ ಭಾರೀ ಅದ್ಧೂರಿಯಾಗಿ ನೆರವೇರಿದೆ. ಗಣ್ಯರ ದಂಡೇ ವಿವಾಹ ಕಾರ್ಯಕ್ರಮಕ್ಕೆ ಬಂದು ಶುಭಕೋರಿದ್ದಾರೆ. ಮೊದಲಿನಿಂದಲೂ ಅನುಶ್ರೀ ಅವರಿಗೆ ಅಪಾರ ಪ್ರಮಾಣದ ಅಭಿಮಾನಿಗಳು ಇದ್ದಾರೆ. ಅನುಶ್ರೀ ಅವರು ದಿ. ಪವರ್ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಅವರು ಅಭಿಮಾನಿ. ಅವರ ಯೂಟ್ಯೂಬ್ ಚಾನೆಲ್‌ನ ಲೋಗೋ ಸಹ ನಟ ಪುನೀತ್ ರಾಜ್‌ಕುಮಾರ್ ಅವರದ್ದೇ ಇದೆ. ಇದೇ ಕಾರಣಕ್ಕೆ ಇಂದು ವಿವಾಹ ಕಾರ್ಯಕ್ರಮಕ್ಕೆ ಅನುಶ್ರೀ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು ಸಹ ಆಗಮಿಸಿದ್ದರು. ಆದರೆ, ಅಭಿಮಾನಿಗಳು ನಿರಾಸೆಗೆ ಒಳಗಾಗಿದ್ದಾರೆ.
ಅನುಶ್ರೀ ಅವರ ಮದುವೆಯನ್ನು ನೋಡುವುದಕ್ಕೆ ಅವರ ಅಭಿಮಾನಿಗಳು ಬೆಂಗಳೂರು ಮಾತ್ರವಲ್ಲದೇ ಕರ್ನಾಟಕದ ವಿವಿಧ ಭಾಗಗಳಿಂದ ಬಂದಿದ್ದರು. ಆದರೆ ಮದುವೆ ಸಂಭ್ರವನ್ನು ಕಣ್ತುಂಬಿಕೊಳ್ಳುವುದಕ್ಕೆ ಹಲವು ಅಭಿಮಾನಿಗಳಿಂದ ಸಾಧ್ಯವಾಗಿಲ್ಲ. ಅಪಾರ ಪ್ರಮಾಣದ ಅಭಿಮಾನಿಗಳು ಸೇರಿದ್ದರಿಂದ ಅವರನ್ನು ನಿಯಂತ್ರಿಸುವುದಕ್ಕೆ ಪೊಲೀಸರಿಗೂ ಕಷ್ಟವಾಗಿದೆ. ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸಪಟ್ಟರು.
ಆ್ಯಂಕರ್ ಅನುಶ್ರೀ ಅವರು ಬೆಳೆದಿರುವುದು ಹಾಗೂ ಇಷ್ಟೊಂದು ಹೆಸರು ಮಾಡಿರುವುದೇ ಅಭಿಮಾನಿಗಳಿಂದ. ನಾವೆಲ್ಲಾ ಇಲ್ಲಿ ಫ್ರೀಯಾಗಿ ಊಟ ಮಾಡುವುದಕ್ಕೆ ಬಂದಿಲ್ಲ. ಅಕ್ಷತೆ ಹಾಕಿ ವಧು-ವರರನ್ನು ನೋಡೋಣ ಎಂದು ಬಂದಿದ್ದೇವೆ. ಆದರೆ ನಮಗೆ ಅವಮಾನ ಮಾಡಲಾಗಿದೆ ಎಂದು ಅವರ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಅನುಶ್ರೀ ಮದುವೆಯಲ್ಲಿ ಅಭಿಮಾನಿಗಳಿಗೆ ತುಂಬಾ ಇನ್ಸಲ್ಟ್ ಮಾಡಲಾಗಿದೆ ಅಂತಾ ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫ್ಯಾನ್ಸ್‌ಗೆ ಆಹ್ವಾನವಿರಲಿಲ್ಲ: ಇನ್ನು ಅನುಶ್ರೀ ಅವರ ಮದುವೆಗೆ ಫ್ಯಾನ್ಸ್‌ಗೆ ಅವಕಾಶ ಇರಲಿಲ್ಲ. ಕೇವಲ ಗಣ್ಯರು ಹಾಗೂ ಆಪ್ತ ವಲಯದಲ್ಲಿ ಇರುವವರಿಗೆ ಮಾತ್ರ ಅನುಶ್ರೀ ಅವರು ಮದುವೆ ಆಹ್ವಾನ ನೀಡಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಹಲವು ಫ್ಯಾನ್ಸ್‌ಗಳಿಗೆ ಅನುಶ್ರೀ ಅವರ ವಿವಾಹ ನೋಡಲು ಸಾಧ್ಯವಾಗಿಲ್ಲ ಅಂತಾ ಹೇಳಲಾಗಿದೆ.
ಸೋಷಿಯಲ್ ಮೀಡಿಯದಲ್ಲಿ ಮೆಚ್ಚುಗೆ: ಇನ್ನು ಅನುಶ್ರೀ ಅವರು ಅದ್ಧೂರಿಯಾಗಿ ಅವರು ಪ್ರೀತಿಸಿದವರೊಂದಿಗೆ ವಿವಾಹವಾಗಿರುವುದಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಷ್ಟದಿಂದಲೇ ಬೆಳೆದು ಬಂದಿರುವ ಅನುಶ್ರೀ ಅವರ ಬದುಕು ಚೆನ್ನಾಗಿರಲಿ ಎಂದು ವಿಶ್ ಮಾಡಿದ್ದಾರೆ.












Click it and Unblock the Notifications