Pushpa-2: ಪುಷ್ಪ-2 ಯಶಸ್ಸಿನಲ್ಲಿ ಪವನ್ ಕಲ್ಯಾಣ್ ಪಾತ್ರ ವಿವರಿಸಿದ ಅಲ್ಲು ಅರ್ಜುನ್
ಪುಷ್ಪ-2 ಸಿನಿಮಾ ಯಶಸ್ಸಿನಲ್ಲಿ ಡಿಸಿಎಂ ಪವನ್ ಕಲ್ಯಾಣ್ ಅವರ ಪಾತ್ರ ತುಂಬಾ ದೊಡ್ಡದಾಗಿದೆ ಎಂದು ನಟ ಅಲ್ಲು ಅರ್ಜುನ್ ಹೊಗಳಿದ್ದಾರೆ. ಪುಷ್ಪ-2 ದಿ ರೂಲ್ ಸಿನಿಮಾ ಯಶಸ್ಸಿನ ಸಭೆಯಲ್ಲಿ ನಟ ಅಲ್ಲು ಅರ್ಜುನ್ ಅವರು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಪುಷ್ಪ-2 ದಿ ರೂಲ್ ಯಶಸ್ಸಿನ ಸಭೆಯಲ್ಲಿ ಮಾತನಾಡಿದ ಅರ್ಜುನ್, ಸಿನಿಮಾ ಟಿಕೆಟ್ ದರ ಏರಿಕೆಗೆ ಪವನ್ ಕಲ್ಯಾಣ್ ಸರ್ಕಾರ ಅನುಮತಿ ನೀಡಿರುವುದೇ ಸಿನಿಮಾ ಯಶಸ್ಸಿಗೆ ಮತ್ತೊಂದು ಕಾರಣ. ಸರ್ಕಾರದ ಈ ಆದೇಶ ಚಲನಚಿತ್ರದ ವ್ಯಾಪ್ತಿಯನ್ನು ವಿಸ್ತರಿಸಲು ಉತ್ತೇಜನವನ್ನು ನೀಡಿದೆ. ಹೀಗಾಗಿ ಟಿಕೆಟ್ ದರ ಏರಿಕೆಗೆ ಅವಕಾಶ ನೀಡಿರುವ ಪ್ರಮುಖ ಕಾರಣಕ್ಕಾಗಿ ನಾನು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ವೈಯಕ್ತಿಕವಾಗಿ ಕಲ್ಯಾಣ್ ಅಣ್ಣನಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಯಾಕೆಂದರೆ ಅವರು ನಿಜವಾಗಿಯೂ ನನ್ನ ಹೃದಯವನ್ನು ಮುಟ್ಟಿದ್ದಾರೆ ಎಂದು ಅಲ್ಲು ಅರ್ಜುನ್ ಹೊಗಳಿದ್ದಾರೆ. ಇದೇ ವೇಳೆ ಅವರು ಸಿನಿಮಾದ ನಿರ್ದೇಶಕ ಸುಕುಮಾರ್ ಅವರಿಗೂ ಕೃತಜ್ಞತೆ ತಿಳಿಸಿದರು.

ಸುಕುಮಾರ್‌ರನ್ನ ಹೊಗಳಿದ ಅರ್ಜುನ್
ನಾನು ಅಥವಾ ಇತರ ಕಲಾವಿದರು ಈ ಸಿನಿಮಾದಲ್ಲಿ ಎಷ್ಟೇ ಖ್ಯಾತಿ ಗಳಿಸಿದರೂ, ಎಲ್ಲಾ ಶ್ರೇಯಸ್ಸು ಒಬ್ಬ ವ್ಯಕ್ತಿಗೆ ಸಲ್ಲುತ್ತದೆ - ಅದು ನಿರ್ದೇಶಕರಿಗೆ ಎಂದು ಚಿತ್ರದ ಯಶಸ್ಸಿನಲ್ಲಿ ನಿರ್ದೇಶಕ ಸುಕುಮಾರ್ ಅವರ ಪ್ರಮುಖ ಪಾತ್ರವನ್ನು ಅರ್ಜುನ್ ಒತ್ತಿ ಹೇಳಿದರು. ಇದಕ್ಕಾಗಿ ಸುಕುಮಾರ್ ಅವರಿಗೆ ಅರ್ಜುನ್ ಕೃತಜ್ಞತೆಯನ್ನು ತಿಳಿಸಿದರು. ಇವತ್ತು ನಾನು ಇಲ್ಲಿ ನಿಂತಿದ್ದರೆ ಅದಕ್ಕೆ ಸುಕುಮಾರ್ ನನ್ನ ಮೇಲಿನ ಪ್ರೀತಿಯೇ ಕಾರಣ ಎಂದು ನಟ ಅರ್ಜುನ್ ನಿರ್ದೇಶಕ ಸುಕುಮಾರ್ ಅವರನ್ನು ಹೊಗಳಿದ್ದು ಕಂಡು ಬಂತು.
ತಮಿಳು, ಆಂಧ್ರ ಸರ್ಕಾರಗಳನ್ನು ಶ್ಲಾಘಿಸಿದ ಅರ್ಜುನ್
ಇದೇ ವೇಳೆ ಚಲನಚಿತ್ರವನ್ನು ಬೆಂಬಲಿಸಿದ ವಿವಿಧ ಸರ್ಕಾರಗಳು ಮತ್ತು ಅಧಿಕಾರಿಗಳಿಗೆ ಅಲ್ಲು ಅರ್ಜುನ್ ಧನ್ಯವಾದಗಳನ್ನು ತೀಲಿಸಿದರು. ವಿಶೇಷವಾಗಿ ತೆಲಂಗಾಣ ಸರ್ಕಾರದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಸಚಿವ ಕೋಮಟಿರೆಡ್ಡಿ ಅವರು ಚಲನಚಿತ್ರಕ್ಕೆ ಅಸಾಧಾರಣ ಕೊಡುಗೆ ನೀಡಿದ್ದಾರೆ ಎಂದು ಅರ್ಜುನ್ ಹೊಗಳಿದರು.
ಇದಲ್ಲದೆ ಆಂಧ್ರಪ್ರದೇಶ ಸರ್ಕಾರವನ್ನು ಶ್ಲಾಘಿಸಿದ ಅವರು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬೆಂಬಲಕ್ಕೆ ಧನ್ಯವಾದಗಳನ್ನು ತಿಳಿಸಿದರು. ಚಲನಚಿತ್ರೋದ್ಯಮಕ್ಕೆ ಅವರು ನೀಡಿದ ಸಹಕಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
"ಬೆಲೆಗಳನ್ನು ಹೆಚ್ಚಿಸಲು ನಾವು ಇಲ್ಲಿ ಪಡೆದ ಬೆಂಬಲದಂತೆಯೇ, ಆಂಧ್ರಪ್ರದೇಶ ಸರ್ಕಾರವು ನಮಗೆ ಅಂತಹ ಅವಕಾಶವನ್ನು ನೀಡಿತು. ಚಲನಚಿತ್ರೋದ್ಯಮದ ಮೇಲಿನ ಪ್ರೀತಿ ಯಾವಾಗಲೂ ಬಲವಾಗಿ ಇಟ್ಟಿರುವ ಚಂದ್ರಬಾಬು ನಾಯ್ಡು ಅವರಿಗೆ ನನ್ನ ಧನ್ಯವಾದಗಳು. ಅವರ ಕೊಡುಗೆಗಾಗಿ ನಾನು ಸಾರ್ವಜನಿಕವಾಗಿ ಶ್ಲಾಘಿಸುತ್ತೇನೆ' ಎಂದು ಅವರು ಹೇಳಿದರು. ಅಲ್ಲದೆ ಅವರು ಬೆಂಬಲ ನೀಡಿದ ಇತರ ರಾಜ್ಯಗಳ ಸರ್ಕಾರಗಳು ಮತ್ತು ವಿವಿಧ ಭಾಷೆಯ ಚಲನಚಿತ್ರೋದ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.












Click it and Unblock the Notifications