Darshan Thoogudeepa: ದರ್ಶನ್‌ ಸರ್‌ ಗೆ ನಾನು ಕಪಾಳಕ್ಕೆ ಹೊಡೆದಿದ್ದೆ: ಸಾನ್ಯಾ ಅಯ್ಯರ್‌ ಬಿಚ್ಚಿಟ್ಟ ಸತ್ಯವೇನು?

ಬೆಂಗಳೂರು, ಏಪ್ರಿಲ್‌ 11: ದರ್ಶನ್‌ ಕೆನ್ನೆಗೆ ಹೊಡೆದ ವಿಚಾರವಾಗಿ ಈ ನಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ದರ್ಶನ್‌ ಸರ್‌ ಅಂದಿಗೂ ಇಂದಿಗೂ ಸಖತ್‌ ಫೇಮಸ್. ಅವರ ಜೊತೆ ನಟನೆ ಮಾಡುವುದು ಅಂದಾಗ ಇಲ್ಲ ಅನ್ನೋ ಮನಸೆ ಆಗಲಿಲ್ಲ ಎಂದಿದ್ದಾರೆ. ದರ್ಶನ್‌ ಅವರ ಜೊತೆ ತುಂಬಾ ಆರಾಮಾಗಿ ನಟನೆ ಮಾಡಿದ್ದೆ. ಅದರಲ್ಲೂ ಅವರ ಕೆನ್ನೆಗೆ ಹೊಡೆದಿದ್ದೆ ಎಂದು ಕಿರುತೆರೆಯಲ್ಲಿ ಫೇಮಸ್‌ ಆಗಿ ಕನ್ನಡ ಚಿತ್ರರಂಗಕ್ಕೆ ಈಗಷ್ಟೇ ನಾಯಕಿಯಾಗಿ ಎಂಟ್ರಿಕೊಟ್ಟ ನಟಿ ಸಾನ್ಯಾ ಅಯ್ಯರ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಸಾನ್ಯಾ ಅಯ್ಯರ್‌ ಅವರು ಮಾತನಾಡಿ, ನಟ ದರ್ಶನ್‌ ಜೊತೆ ತುಂಬಾ ಆರಮಾವಾಗಿಯೇ ನಟಿಸಿದ್ದೆ. ಅದರಲ್ಲೂ ದರ್ಶನ್‌ ಸರ್‌ ಅವರ ಕೆನ್ನೆಗೆ ಹೊಡೆಯುವ ಸೀನ್‌ ಕೂಡ ಮಾಡಿದ್ದೆ ಎಂದು ಹೇಳಿಕೊಂಡಿದ್ದಾರೆ. ದರ್ಶನ್‌ ನಟನೆಯ ಗಜ ಸಿನಿಮಾದಲ್ಲಿ ಚಿಕ್ಕ ಹುಡುಗಿಯ ಪಾತ್ರವನ್ನು ಮಾಡಿದ್ದೆ. ಗಜ ಸಿನಿಮಾದಲ್ಲಿ ದರ್ಶನ್‌ ಸರ್‌ ಅವರ ಅಣ್ಣನ ಮಗಳ ಪಾತ್ರವನ್ನ ನಾನು ಮಾಡಿದ. ಆ ಸಿನಿಮಾದಲ್ಲಿ ದರ್ಶನ್ ಸರ್‌ಗೆ ಕಪಾಳಕ್ಕೆ ಹೊಡೆಯುವ ಸೀನ್‌ ಎಲ್ಲಾ ಇತ್ತು. ಅವಾಗ ಚಿಕ್ಕ ಹುಡುಗಿ ಅಲ್ವಾ. ಯಾವ ಸೀನ್‌ಗೂ ಭಯ ಎಲ್ಲಾ ಆಗುತ್ತಿರಲಿಲ್ಲ. ನಟನೆ ಕಡೆ ನನಗೆ ಒಲವು ಜಾಸ್ತಿ ಇತ್ತು. ಹೀಗಾಗಿ ಆಟ ಆಡಿಕೊಂಡೇ ಗಜ ಸಿನಿಮಾದ ಶೂಟಿಂಗ್‌ ಮುಗಿಸಿದ್ದೆ ಎಂದು ಸಾನ್ಯಾ ಅಯ್ಯರ್‌ ಅವರು ಹೇಳಿದ್ದಾರೆ.

Actress Sanya Iyer Said That I Slapped Darshan

ದರ್ಶನ್‌ ಸರ್‌ ಜೊತೆ ತುಂಬಾ ಆರಾಮಾಗಿ ನಟನೆ ಮಾಡಿದ್ದೆ. ಅವರ ಜೊತೆ ನಟನೆ ಮಾಡಿರುವುದಕ್ಕೆ ಖುಷಿ ಇದೆ. ಗಜ ಸಿನಿಮಾ ಮಾಡುವಾಗ ನನಗೆ ನಟನೆಯ ತಲೆ-ಬುಡ ಅರ್ಥ ಆಗುತ್ತಿರಲಿಲ್ಲ. ಸುಮ್ಮನೆ ಆಟ ಆಡಿಕೊಂಡೇ ಆ್ಯಕ್ಟಿಂಗ್‌ ಮಾಡುತ್ತಿದ್ದೆ. ಆ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿತ್ತು ಎಂದು ಹೇಳಿದರು. ಇನ್ನೂ ನನಗೆ ಪುಟ್ಟ ಗೌರಿ ನನಗೆ ತುಂಬಾ ದೊಡ್ಡ ಹೆಸರು ತಂದು ಕೊಟ್ಟಿತ್ತು. ಒಳ್ಳೆಯ ಮೆಚ್ಚುಗೆ ತಂದು ಕೊಟ್ಟಿತು ಎಂದು ಸಾನ್ಯಾ ಅಯ್ಯರ್‌ ಸಂದರ್ಶನದಲ್ಲಿ ತಿಳಿಸಿದರು.

ಪಿಯುಸಿಯಲ್ಲಿ ನನ್ನ ಬೆಸ್ಟ್‌ ಫ್ರೆಂಡ್‌ ಇದ್ಲು.. ಅವಳಿಗೆ ಕ್ಯಾನ್ಸರ್‌ ಇತ್ತು. ಆರೋಗ್ಯ ಸಮಸ್ಯೆಯಿಂದ ಕಾಲೇಜ್‌ ಬರುವುದು ಬಿಟ್ಲು.. ಕಾಲೇಜ್‌ ಯಾವಾಗ್‌ ಬರ್ತಾಳೆ ಅಂತ ಕಾಯ್ತಾ ಇದ್ವಿ. ತುಂಬಾ ಮುಗ್ದ ಮನಸ್ಸಿನ ಹುಡುಗಿ ಅವಳು. ಒಂದು ದಿನ ಅವರ ಅಮ್ಮನಿಂದ ಕಾಲ್‌ ಬರುತ್ತೆ ಅವಳು ಇಲ್ಲ ಅಂತ ಹೇಳ್ತಾರೆ. ನನ್ನ ಲೈಫ್‌ ನಲ್ಲಿ ನಾನು ನೋಡಿರುವ ಮೊದಲ ಸಾವು ಅದು. ತುಂಬಾ ದಿನ ಆದ್ಮೆಲೆ ನನಗೆ ನಾನೇ ಅವಳಿಗೆ ಪ್ರಶ್ನೆ ಮಾಡಿದ್ದೆ.ಯಾಕೆ ಹೋದೆ ನೀನು.. ಹೋರಾಟ ಮಾಡ್ಬೇಕಿತ್ತು. ಇದಕ್ಕೆ ಉತ್ತರ ಕೊಡು ಅಂತ ಸಾಕಷ್ಟು ಬಾರೀ ನಾನು ಅವಳಿಗೆ ಪ್ರಶ್ನೆ ಮಾಡಿದ್ದೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+