ಕಾಂಡೋಮ್ ಬಳಸು, ಇಷ್ಟಪಟ್ಟವರ ಜೊತೆ ಮಲಗು: ಖ್ಯಾತ ನಟಿಗೆ ಅಮ್ಮನಿಂದಲೇ ಸಲಹೆ
ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ನಡತೆ, ಸಭ್ಯತೆ ಬಗ್ಗೆ ಚಿಕ್ಕಂದಿನಿಂದಲೂ ಪಾಠ ಹೇಳಿ ದಾರಿ ತಪ್ಪದಂತೆ ಜಾಗ್ರತೆ ವಹಿಸುತ್ತಾರೆ. ಆದರೆ ಕೆಲವರು ಮನೆಯಲ್ಲಿ ತಂದೆ ತಾಯಿ ಎಷ್ಟೇ ಭಯದ ವಾತಾವರಣದಲ್ಲಿ ಮಕ್ಕಳನ್ನು ಬೆಳೆಸಿದರೂ ಅವರ ಕಣ್ತಪ್ಪಿಸಿ, ಮಾಡಬಾರದ ಕೆಲಸಗಳನ್ನು ಮಾಡುತ್ತಿರುತ್ತಾರೆ. ಯಾವ ಪೋಷಕರೂ ಸಹ ಮಕ್ಕಳಿಗೆ ಕೆಟ್ಟ ಚಟಗಳನ್ನು ಬೆಳೆಸಿಕೊಳ್ಳುವಂತೆ ಹೇಳುವುದಿಲ್ಲ. ಆದರೆ ಖ್ಯಾತ ನಟಿಗೆ ತಮ್ಮ ತಾಯಿಯೇ 'ನಿನಗೆ ಇಷ್ಟವಾದವರ ಜೊತೆ ಮಲಗು, ಎಂಜಾಯ್ ಮಾಡು, ಆದ್ರೆ ಪ್ರೊಟೆಕ್ಷನ್ ಯಾವಾಗಲೂ ಬಳಸು' ಎಂದು ಸಲಹೆ ಕೊಟ್ಟಿದ್ದಾರೆ. ಇದನ್ನು ಆ ನಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
'ನನ್ನ ತಾಯಿ, ನೀನು ಏನಾದರೂ ಮಾಡು, ಆದರೆ ಪ್ರೊಟೆಕ್ಷನ್ (ಕಾಂಡೋಮ್) ಬಳಸು, ಇಷ್ಟಪಟ್ಟವರ ಜೊತೆ ಮಲಗು ಎಂದು ನೇರವಾಗಿ ಹೇಳುತ್ತಾಳೆ. ಸಾಮಾನ್ಯವಾಗಿ ಪೋಷಕರು ಮನೆಯಿಂದ ಹೊರಗೆ ಹೋಗಬೇಡ ಎಂದು ಹೇಳುತ್ತಾರೆ. ಆದರೆ ನನ್ನ ತಾಯಿ ಹೊರಗೆ ಹೋಗು, ಪಾರ್ಟಿ ಮಾಡು, ಎಂಜಾಯ್ ಮಾಡು ಎಂದು ಹೇಳುತ್ತಾಳೆ' ಎಂದು ನಟಿ ರೋಶ್ನಿ ವಾಲಿಯಾ (Roshni Walia) ತಮ್ಮ ತಾಯಿಯ ದಿಟ್ಟತನದ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಬಾಲಿವುಡ್ ನಟ ಅಜಯ್ ದೇವಗನ್ ನಟನೆಯ ಸನ್ ಆಫ್ ಸರ್ದಾರ್-2 ಸಿನಿಮಾದಲ್ಲಿ ನಟಿ ರೋಶ್ನಿ ವಾಲಿಯಾ ನಟಿಸಿದ್ದು, ಈ ಹೇಳಿಕೆಯಿಂದಾಗಿ ಸಖತ್ ಸುದ್ದಿಯಲ್ಲಿದ್ದಾರೆ. "ನಾನು ಇಂದು ಈ ಸ್ಥಿತಿಯಲ್ಲಿದ್ದೇನೆ ಎಂಬುದಕ್ಕೆ ಸಂಪೂರ್ಣ ಕೀರ್ತಿ ನನ್ನ ತಾಯಿಗೆ ಸಲ್ಲುತ್ತದೆ. ನನ್ನ ತಾಯಿ ತಮ್ಮ ಊರನ್ನು ತೊರೆದು ಮುಂಬೈಗೆ ಬಂದಿದ್ದು, ನನ್ನನ್ನು ಮತ್ತು ನನ್ನ ಕನಸುಗಳನ್ನು ಬೆಂಬಲಿಸಲು ಮಾತ್ರ. ಅವರ ತ್ಯಾಗವಿಲ್ಲದಿದ್ದರೆ ನಾನು ಇಲ್ಲಿಯವರೆಗೆ ಬರುತ್ತಿರಲಿಲ್ಲ'' ಎಂದೂ ನಟಿ ರೋಶ್ನಿ ಭಾವುಕರಾಗಿದ್ದಾರೆ.
ಬಾಲ್ಯದಲ್ಲೇ ವಯಸ್ಕರ ಜೊತೆ...
'ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ರೋಶ್ನಿ ತನ್ನ ಬಾಲ್ಯದ ಬಹುಭಾಗವನ್ನು ಚಲನಚಿತ್ರ ಮತ್ತು ದೂರದರ್ಶನ ಸೆಟ್‌ಗಳಲ್ಲಿ ಕಳೆದಿದ್ದರು. ಇಷ್ಟು ಚಿಕ್ಕ ವಯಸ್ಸಿನಿಂದಲೇ ವಯಸ್ಕರೊಂದಿಗೆ ಕೆಲಸ ಮಾಡಿದ್ದು ನನಗೆ ಜೀವನದ ಬಗ್ಗೆ ಬಹಳಷ್ಟು ಕಲಿಸಿದೆ. ನಾನು ಇಂಡಸ್ಟ್ರಿಯ ಪಾಲಿಟಿಕ್ಸ್ ಬಗ್ಗೆ ಬಹಳ ಬೇಗನೆ ಕಲಿತಿದ್ದೇನೆ. ಅದು ಬಹಳ ವಿಶಿಷ್ಟ ಅನುಭವವಾಗಿತ್ತು. ನನ್ನ ಅಮ್ಮನಿಂದಾಗಿ ನಾನು ಸರಿಯಾಗಿ ಬೆಳೆಯುತ್ತಿದ್ದೇನೆ. ಅವರು ನನಗೆ ಸ್ವಾತಂತ್ರ್ಯ ಮತ್ತು ಮಾರ್ಗದರ್ಶನ ಎರಡನ್ನೂ ನೀಡುತ್ತಾರೆ. ಅವರ ನಿಯಮಗಳು ನನಗೆ ಒತ್ತಡದಂತೆ ಅನಿಸುವುದಿಲ್ಲ. ಅವು ಟ್ರೆಂಡಿಯಾಗಿವೆ' ಎಂದು ರೋಶ್ನಿ ಹೇಳಿದ್ದಾರೆ.

'ನನ್ನ ಅಮ್ಮ ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಾರೆ. ಪ್ರೊಟೆಕ್ಷನ್ ಮುಖ್ಯ ಎಂದು ಅವರು ಯಾವಾಗಲೂ ನನಗೆ ನೆನಪಿಸುತ್ತಾರೆ. ಅವರು ನನ್ನ ಸಹೋದರಿಗೂ ಅದೇ ವಿಷಯವನ್ನು ಹೇಳುತ್ತಿದ್ದರು. ಈಗ, ಅವರು ನನಗೆ ಹೇಳುತ್ತಿದ್ದಾರೆ' ಎಂದು ಹೇಳಿಕೊಂಡಿದ್ದಾರೆ. ಪೋಷಕರ ನಿರ್ಬಂಧಗಳ ಬಗ್ಗೆ ಅವರ ಹಾಸ್ಯಮಯ ಹೇಳಿಕೆ ಆನ್‌ಲೈನ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು, ಅನೇಕ ಜನರು ಕಾಮೆಂಟ್ ಮಾಡಿದ್ದಾರೆ. ಅವರ ಮಾತುಗಳು ಅವರ ತಾಯಿಯ ಪ್ರಗತಿಪರ ಪೋಷಕರ ಶೈಲಿ, ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಹುಡುಗಿಗೆ ಅಪರೂಪದ, ಸ್ವಾತಂತ್ರ್ಯ ಮತ್ತು ಬೆಂಬಲದ ಬಗ್ಗೆ ಮೆಚ್ಚುಗೆಯೂ ವ್ಯಕ್ತಪಡಿಸಿ, ಮಾಡ್ರನ್ ಮಮ್ಮೀ ಎಂದು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications