Get Updates
Get notified of breaking news, exclusive insights, and must-see stories!

Rakhi Sawant : ದಿಢೀರ್ ಆಸ್ಪತ್ರೆಗೆ ದಾಖಲಾದ ಬಾಲಿವುಡ್‌ನಲ್ಲಿ ಡ್ರಾಮಾ ಕ್ವೀನ್ ರಾಖಿ ಸಾವಂತ್

ಮುಂಬೈ, ಮೇ. 14 : ಬಾಲಿವುಡ್‌ನಲ್ಲಿ ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿರುವ ರಾಖಿ ಸಾವಂತ್ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟಿವ್ ಆಗಿರುತ್ತಾರೆ. ಯಾವಾಗಲು ಸುದ್ದಿಯಲ್ಲಿರಬೇಕು ಎಂಬ ಹಪಾಹಪಿಯಲ್ಲಿರುವ ಅವರು, ಒಂದಲ್ಲ ಒಂದು ಕಾರಣಕ್ಕೆ ಮಾಧ್ಯಮಗಳು ಮತ್ತು ಪಾಪರಾಜಿಗಳನ್ನು ತಮ್ಮತ್ತ ಸೆಳೆಯುತ್ತಲೆ ಇರುತ್ತಾರೆ.

ಆಗ್ಗಾಗೆ ತಮ್ಮ ವಿಚಿತ್ರ ಡ್ರೆಸ್ಸಿಂಗ್ ಸ್ಟೈಲ್ ಮತ್ತು ವಿವಾದಗಳಿಂದ ಸುದ್ದಿಯಲ್ಲಿರುವ ರಾಖಿ ಸಾವಂತ್ ಈಗ ದಿಢೀರ್‌ ಆಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರದಿಗಳ ಪ್ರಕಾರ ನಟಿಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿದ್ದು, ಅವರನ್ನು ತರಾತುರಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಖಿ ಸಾವಂತ್ ಗಂಭೀರ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Actress Rakhi Sawant hospitalised due to heart ailment picture goes viral

ಆಸ್ಪತ್ರೆಗೆ ದಾಖಲಾದ ರಾಖಿ ಸಾವಂತ್

ನಟಿ ರಾಖಿ ಸಾವಂತ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯ ಬೆಡ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವ ಚಿತ್ರಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವರ ಎಡಗೈಯಲ್ಲಿ ಇಂಟ್ರಾವೆನಸ್ ಕ್ಯಾನುಲಾ ಹಾಕಲಾಗಿದೆ. ಆಕ್ಸಿಮೀಟರ್ ಅನ್ನು ಅವರ ಬಲಗೈಯಲ್ಲಿ ಬೆರಳ ತುದಿಗೆ ಅಲವಡಿಸಲಾಗಿದೆ. ನರ್ಸ್ ರಾಖಿ ಸಾವಂತ್ ಅವರ ರಕ್ತದೊತ್ತಡವನ್ನು ಪರೀಕ್ಷಿಸುತ್ತಿದ್ದಾರೆ. ಈ ಎಲ್ಲ ಆಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿವೆ.

ರಾಖಿ ಸಾವಂತ್ ಈ ಹಿಂದೆಯೂ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಕೆಲ ಸಮಯದ ಹಿಂದೆ ಕೂಡ ರಾಖಿ ತನ್ನ ಹೊಟ್ಟೆಯಲ್ಲಿ ಗೆಡ್ಡೆ ಇತ್ತು ಅದಕ್ಕಾಗಿ ಆಪರೇಷನ್ ಮಾಡಲಾಗಿದೆ ಎಂದು ಹೇಳಿ ಸುದ್ದಿಯಾಗಿದ್ದರು. 4 ಗಂಟೆಗಳ ಕಾಲ ಆಪರೇಷನ್ ನಡೆಯಿತು. ಗರ್ಭಾಶಯದ ಸ್ವಲ್ಪ ಮೇಲೆ ಗೆಡ್ಡೆ ಇತ್ತು. ಇದರಿಂದ ತುಂಬಾ ನೋವು ಅನುಭವಿಸಿದ್ದೆ ಎಂದಿದ್ದರು.

ಪಾಪರಾಜೋ ವೈರಲ್ ಭಯಾನಿ ರಾಖಿ ಸಾವಂತ್ ಅವರ ಫೋಟೋಗಳನ್ನು ಪೋಸ್ಟ್ ಮಾಡಿ, ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಬರೆದಿದ್ದಾರೆ. ರಾಖಿ ಸಾವಂತ್ ಅವರ ಮಾಜಿ ಪತಿ ರಿತೇಶ್, ಶೀಘ್ರದಲ್ಲೇ ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Actress Rakhi Sawant hospitalised due to heart ailment picture goes viral

ಮಾಜಿ ಪತಿಯೊಂದಿಗೆ ಕಾಣಿಸಿಕೊಂಡ ರಾಖಿ ಸಾವಂತ್

ರಾಖಿ ಸಾವಂತ್ ದೀರ್ಘ ಕಾಲ ದುಬೈನಲ್ಲಿ ಇದ್ದು, ಈಗ ಮತ್ತೆ ಮುಂಬೈಗೆ ಮರಳಿದ್ದಾರೆ. ಕೆಲಸದ ನಿಮಿತ್ತ ದುಬೈನಲ್ಲಿ ಬಹಳ ದಿನ ಇದ್ದೆ ಎಂದಿದ್ದಾರೆ. ತನ್ನ ವೈಯಕ್ತಿಕ ಜೀವನದಿಂದ ಸದಾ ಸುದ್ದಿಯಲ್ಲಿರುವ ಅವರು, ತನ್ನ ಪತಿ ಮೈಸೂರಿನ ಆದಿಲ್ ದುರಾನಿ ಜೊತೆಗಿನ ವಿಚ್ಛೇದನದಿಂದ ಮತ್ತಷ್ಟು ಸುದ್ದಿಯಾಗಿದ್ದರು. ಇಆ ವಿಷಯ ಇನ್ನೂ ಇತ್ಯರ್ಥವಾಗಿಲ್ಲ, ಇದಾದ ಬೆನ್ನಲ್ಲೇ ನಟಿ ತನ್ನ ಮಾಜಿ ಪತಿ ರಿತೇಶ್ ಜೊತೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಹಲವು ಬಾರಿ ಮುಂಬೈನಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ರೆಡ್ ಟವಲ್ ಡ್ರೆಸ್ ಮತ್ತು ರಾಖಿ ಸಾವಂತ್

ಆಸ್ಪತ್ರೆಗೂ ದಾಖಲಾಗುವ ಮುನ್ನ ನಟಿ ರಾಖಿ ಸಾವಂತ್ ಕೆಂಪು ಟವೆಲ್ ಧರಿಸಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸುದ್ದಿಯಾಗಿದ್ದರು. ಇತ್ತೀಚೆಗೆ ನಡೆದ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಡೋಜಾ ಕ್ಯಾಟ್‌ ಅವರ ಬಿಳಿ ಟವೆಲ್ ಉಡುಪನ್ನು ಸ್ಪೂರ್ತಿಯಾಗಿ ಪಡೆದು ರಾಖಿ ಈ ಡ್ರೆಸ್ ಡಿಸೈನ್ ಮಾಡಿಸಿದ್ದಾರೆ. ಆದರೆ, ಇದಕ್ಕೆ ಆಭರಣಗಳ ಅಲಂಕಾರವಿದೆ.

ಪಾಪರಾಜಿಗಳ ಮೆಚ್ಚಿನ ನಟಿಯರಲ್ಲಿ ಒಬ್ಬರಾಗಿರುವ ರಾಖಿ ಸಾವಂತ್ ಅವರ ಈ ರೆಡ್ ಟವೆಲ್ ಪೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+