Niveditha Gowda: ನಿವೇದಿತಾ ಗೌಡ ಸೀರೆಯ ಹೊಸ ಅವತಾರ: ಹಾಟ್ ವೀಡಿಯೋ ಹಂಚಿಕೊಂಡ ಗೊಂಬೆ!
ಬಿಗ್‌ಬಾಸ್ ಹಳೆಯ ಸ್ಪರ್ಧಿ ನಿವೇದಿತಾ ಗೌಡ ತಮ್ಮ ಇನ್ಸಾಗ್ರಾಮ್ ಖಾತೆಯಲ್ಲಿ ಹೊಸ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಚಂದನ್‌ಶೆಟ್ಟಿಯಿಂದ ವಿಚ್ಚೇದನ ಪಡೆದ ಬಳಿಕ ಸಿಕ್ಕಾಪಟ್ಟೆ ರೀಲ್ಸ್ ಹಂಚಿಕೊಳ್ಳುತ್ತಿರುವ ಗೊಂಬೆ ಇದೀಗ ಸೀರೆಯನ್ನುಂಟು ವೀಡಿಯೋ ಶೇರ್ ಮಾಡಿದ್ದಾರೆ. ಕೆಲ ದಿನಗಳಿಂದ ರೀಲ್ಸ್‌ಗೆ ಬಿಡುವು ಪಡೆದಿದ್ದ ನಿವ್ವಿ ಈಗ ಸೀರೆಯಲ್ಲಿ ಹಾಟ್ ಹಾಟ್ ಆದ ವೀಡಿಯೋವನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು 'ಸೀರೆಯಲಿ ಹುಡುಗಿರ ನೋಡಲೆ ಬಾರದು....' ಹಾಡನ್ನು ಹಾಡಿದ್ದಾರೆ.
ಹೌದು... ನಿವೇದಿತಾ ಗೌಡ ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ಚಂದನ್‌ಶೆಟ್ಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅತ್ಯಂತ ಕ್ಯೂಟ್ ಜೋಡಿ ಅಂತಲೇ ಕರಿಸಿಕೊಂಡಿದ್ದ ಇವರಿಬ್ಬರ ಮೇಲೆ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ. ಮದುವೆಯಾಗಿ ಕೆಲ ವರ್ಷದಲ್ಲೇ ವಿಚ್ಚೇದನ ಪಡೆದುಕೊಂಡರು. ಬಳಿಕ ಚಂದನ್‌ಶೆಟ್ಟಿ ಹಾಡಿನಲ್ಲಿ ಬ್ಯೂಸಿ ಆಗಿದ್ದರೆ, ನಿವೇದಿತಾ ರೀಲ್ಸ್ ಹಾಗೂ ರಿಯಾಲಿಟಿ ಶೋ, ಅಭಿನಯದಲ್ಲಿ ಬ್ಯೂಸಿ ಆಗಿದ್ದಾರೆ. ಇಬ್ಬರಿಗೂ ವಿಚ್ಚೇದನದ ಬಗ್ಗೆ ಬೇಸರ ಇರುವಂತೆ ಕಾಣಿಸುತ್ತಿಲ್ಲ.

ಇನ್ನೂ ಆಗಾಗ ನಿವೇದಿತಾ ರೀಲ್ಸ್‌ಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಲ್ಲಿ ಇರುತ್ತಾರೆ. ಸೋಷಿಯಲ್ ಮೀಡಿಯದಲ್ಲಿ ಅವರು ಸಾಲು ಸಾಲು ರೀಲ್ಸ್‌ಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಎದೆಗೆ ಬಾಣ ಬಿಡುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕುರಿತಾಗಿ ಬರುವ ಯಾವುದೇ ಕಾಮೆಂಟ್‌ಗೂ ತಲೆ ಕೆಡಿಸಿಕೊಳ್ಳದ ನಿವೇದಿತಾ ಗೌಡ ಆಗಾಗ ವಿಭಿನ್ನ ರೀತಿಯಲ್ಲಿ ವಿಡಿಯೋ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇನ್ನೂ ತಿಳಿ ನೀಲಿ ಬಣ್ಣದ ಸೀರೆಯುಟ್ಟ ಹಾಟ್ ಆಗಿ ಕಾಣಿಸಿಕೊಂಡಿರುವ ನಿವೇದಿತಾ ಗೌಡ ರೀಲ್ಸ್‌ಗೆ ಎಂದಿನಂತೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ನಿವೇದಿತಾ ಗೌಡ ಅವರು ಹಂಚಿಕೊಂಡಿರುವ ಈ ರೀಲ್ಸ್ ಈವರೆಗೂ 3.76ಲಕ್ಷ ವೀವ್ಸ್ ಕಂಡಿದೆ. 24,000 ಮಂದಿ ಲೈಕ್ ಮಾಡಿದ್ದಾರೆ. ಆಕೆಯ ದೇಹದ ಭಾಗಗಳ ಬಗ್ಗೆ ಹೆಚ್ಚಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇಲ್ಲಿ ಚಂದನ್ ಶೆಟ್ಟಿಯನ್ನು ನೆನಪಿಸಿಕೊಂಡಿದ್ದಾರೆ.
ಈ ವಿಡಿಯೋಗೆ ಕೆಲವರು ನಿಮ್ಮದು ಸೇಮ್ ವಿಡಿಯೋ ನೋಡಿ ನೋಡಿ ಬೇಜಾರಾಗಿದೆ ಎಂದಿದ್ದಾರೆ. ಈ ಸೀರೆಯೊಂದಿಗೆ ಏನಾದರೂ ಹೊಸದನ್ನು ಮಾಡಿ ಎಂದು ವ್ಯಕ್ತಿಯೊಬ್ಬರು ನಿವೇದಿತಾಗೆ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಬೊಂಬೆ ಅದ್ಬುತ ಸುಂದರಿ, ಚಿನ್ನು ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.
ನಿವೇದಿತಾ ಗೌಡ ಇತ್ತೀಚೆಗೆ ಮನಸಾರೆ ನೀನೆ ಮೂಲಕ ತಮ್ಮ ಮೊದಲ ಆಲ್ಬಮ್ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಈ ಹಾಡು ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಆಗಿತ್ತು. ಇದರಲ್ಲಿ ತೆಲುಗಿನ ಗೌರಿ ನಾಯ್ಡು ನಿವೇದಿತಾ ಗೌಡ ಅವರೊಂದಿಗೆ ರೊಮ್ಯಾನ್ಸ್ ಮಾಡಿದ್ದಾರೆ. ಅಲ್ಲದೆ ಮಳೆಯಲ್ಲಿ ನೆನೆಯುತ್ತಾ ನಿವೇದಿತಾ ಮಾಡಿದ ಡ್ಯಾನ್ಸ್‌ಗೆ ಪಡ್ಡೆ ಹುಡುಗರು ಫಿಧಾ ಆಗಿದ್ದಾರೆ. ನವೆಂಬರ್ 13ರಂದು ಯ್ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದ ಈ ಸಾಂಗ್ 50,000 ಕ್ಕೂ ಹೆಚ್ಚು ವೀವ್ಸ್ ಪಡೆದಿದೆ.












Click it and Unblock the Notifications