Krishnam Pranaya Sakhi: ಹವಾ ಸೃಷ್ಟಿಸಿದ 'ದ್ವಾಪರ ದಾಟುತಾ' ಹಾಡು, ಎಲ್ಲೆಲ್ಲೂ ಹಾಡಿನ ಮೋಡಿ

ಬೆಂಗಳೂರು, ಜುಲೈ 30: ಕನ್ನಡ ಚಿತ್ರರಂಗದಲ್ಲಿನ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ಮಧ್ಯೆ ಏಕ ಭಾಷೆಯಲ್ಲಿ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' (Krishnam Pranaya Sakhi) ಇದೇ ಆಗಸ್ಟ್ 15ರಂದು ತೆರೆಗೆ ಬರಲಿದೆ. ಇದಕ್ಕು ಮೊದಲೇ ಈ ಸಿನಿಮಾ ಹಾಡು ಸಖತ್ ಹವಾ ಸೃಷ್ಟಿ ಮಾಡುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ 'ದ್ವಾಪರಾ ದಾಟುತ' ಹಲಚಲ್ ಎಬ್ಬಿಸಿದೆ. ಅನೇಕರು ರೀಲ್ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ. ಹೊಸ ಹೊಸ ವಿಡಿಯೋಗಳಲ್ಲಿ ಈ ಹಾಡಿಗೆ ಅಗ್ರಸ್ಥಾನ ಧಕ್ಕುತ್ತಿದೆ. ಆಮಟ್ಟಿನಗೆ ಜನರಿಗೆ ಮೋಡಿ ಮಾಡಿದೆ. ಇನ್ಸ್‌ಸ್ಟಾಗ್ರಾಮ್ ನಲ್ಲಿ ಈ ಹಾಡು ಟ್ರೆಂಡಿಂಗ್ ನಲ್ಲಿದೆ.

Actor Ganesh Krishnam Pranaya Sakhi Dwapara Song Viral On Social Media Creates new Record

ಸೋಷಿಯಲ್ ಮಿಡಿಯಾ ಹೊರತಾಗಿ ಯಾವುದೇ ವೇದಿಕೆಗಳ ಮೇಲೆ ನೋಡಿದರೂ ಈ ಹಾಡಿನ ಗುನು ಗುನು ಶುರುವಾಗಿದೆ. ಅಷ್ಟರ ಮಟ್ಟಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಅಭಿನಯಿಸಿರುವ ಸಿನಿಮಾದ ಹಾಡು ಇಷ್ಟವಾಗಿದೆ. ಈ ಹಾಡು ಸಹ ನಟ ಗಣೇಶ್ ಅವರ ಹಿಟ್ ಲಿಸ್ಟ್‌ಗೆ ಸೇರಿದೆ.

ನಟ ಗಣೇಶ್ ಹಿಟ್ ಲಿಸ್ಟ್‌ಗೆ ಮತ್ತೊಂದು ಹಾಡು

ನಟ ಗಣೇಶ್ ಅವರ 'ಮುಂಗಾರು ಮಳೆ, ಅರಮನೆ, ಹುಡುಗಾಟ, ಗಾಳಿಪಟ, ಮಳೆಯಲಿ ಜೊತೆಯಲಿ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಹಾಡುಗಳೇ ಹೈಲೈಟ್. ಈ ಹಾಡು ಸಹ ಸಿನಿ ರಸಿಕರನ್ನು ರಂಜಿಸಿ ಹೊಸ ದಾಖಲೆ ಸೃಷ್ಟಿಸುತ್ತಿದೆ. ಯುಟ್ಯೂನ್‌ನಲ್ಲಿ ಆನಂದ್ ಆಡಿಯೋ ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದ್ದು, ಅತೀ ಕಡಿಮೆ ಅವಧಿಯಲ್ಲಿ 01 ಮಿಲಿಯನ್ ವೀಕ್ಷಣೆ ಸಮೀಪಿಸಿದೆ.

Actor Ganesh Krishnam Pranaya Sakhi Dwapara Song Viral On Social Media Creates new Record

ಸುಮಧುರ ಹಾಡಿಗೆ ಅಭಿಮಾನಿಗಳು ಫಿದಾ

ಶ್ರೀನಿವಾಸ ರಾಜು ನಿರ್ದೇಶನ ಈ ಸಿನಿಮಾದ 'ದ್ವಾಪರಾ ದಾಟುತ' ಹಾಡಿಗೆ ವಿ.ನಾಗೇಂದ್ರ ಪ್ರಸಾದ್ ಈ ಹಾಡಿಗೆ ಸಾಹಿತ್ಯ ಬರೆದರೆ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನೂ 'ಸರಿಗಮಪ' ಶೋ ನಲ್ಲಿ ಹಾಡು ಹಾಡಿದ್ದ ಪಂಜಾಬ್ ರಾಜ್ಯದ ಯುವ ಗಾಯಕ 'ಜಸ್ಕರಣ್ ಸಿಂಗ್' ಅವರು ಹಾಡಿಗೆ ಧ್ವನಿಯಾಗಿದ್ದಾರೆ. ಅವರ ಸುಮಧುರ ಕಂಠಕ್ಕೆ ಗಣೇಶ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಗಣೇಶ್ ಜೊತೆಗೆ ಪರಭಾಷಾ ನಟಿ ಮಾಳ್ವಿಕಾ ನಾಯರ್ ಬಣ್ಣ ಹಚ್ಚಿದ್ದಾರೆ.

ಜನರು ಮೇಲಿಂದ ಮೇಲೆ ಈ ಹಾಡು ಕೇಳುತ್ತಿದ್ದಾರೆ. ಆಗಸ್ಟ್ 15ರಂದು ಫ್ಯಾಮಿಲಿ ಸಮೇತರಾಗಿ ತೆರಳಿ ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+