Dr Rajkumar: ಅಣ್ಣಾವ್ರ ಸಹೋದರಿ ನಾಗಮ್ಮ ನಿಧನ; ಅಪ್ಪು ಬದುಕಿಲ್ಲ ಎನ್ನುವ ಸುದ್ದಿ ಸಾಯುವವರೆಗೂ ನಾಗಮ್ಮಗೆ ತಿಳಿಯಲೇ ಇಲ್ಲ!
ಸ್ಯಾಂಡಲ್ವುಡ್ನ ವರನಟ ಡಾ. ರಾಜ್ಕುಮಾರ್ ಅವರ ಸಹೋದರಿ ನಾಗಮ್ಮ ಅವರು ನಿಧನರಾಗಿದ್ದಾರೆ. ಅಣ್ಣಾವ್ರ ಸಹೋದರಿ ನಾಗಮ್ಮಅವರು ಗಾಜನೂರಿನ ಮನೆಯಲ್ಲಿದ್ದರು. ತಮಿಳುನಾಡಿನ ತಾಳವಾಡಿ ತಾಲೂಕಿನ ದೊಡ್ಡ ಗಾಜನೂರಿನಲ್ಲಿ ಅವರು ಮೃತಪಟ್ಟಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಜ್ ಕುಮಾರ್ ಅವರ ಸಹೋದರಿ ನಾಗಮ್ಮ ಅವರಿಗೆ ಇಲ್ಲಿಯವರೆಗೂ ಕೂಡ ಅಪ್ಪು ನಿಧನದ ಸುದ್ದಿ ಗೊತ್ತಿರಲಿಲ್ಲ.
ಹುಟ್ಟೂರು ಗಾಜನೂರಿನಲ್ಲಿ ಅಣ್ಣಾವ್ರ ಸಹೋದರಿ ನಾಗಮ್ಮ ವಾಸಿಸುತ್ತಿದ್ದರು. ಆರೋಗ್ಯದಲ್ಲಿ ಏರುಪೇರು ಉಂಟಾಗಿರುವುದರಿಂದ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಇಂದು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಾಗಮ್ಮ ಅವರು ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಡಾಕ್ಟರ್ ರಾಜ್‌ಕುಮಾರ್ ಸಹೋದರಿ ನಾಗಮ್ಮ ಅವರಿಗೆ ಅಪ್ಪು ಬದುಕಿಲ್ಲ ಎನ್ನುವ ಸುದ್ದಿ ಸಾಯುವವರೆಗೂ ತಿಳಿಯಲೇ ಇಲ್ಲ. ಅಪ್ಪು ನಿಧನದ ವಿಷಯವೇ ಗೊತ್ತಿಲ್ಲ. 2021 ಅಕ್ಟೋಬರ್ 29 ರಂದು ಕರ್ನಾಟಕ ಕಂಡ ಅತಿಕೆಟ್ಟ ದಿನವಾಗಿದೆ. ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 2021 ಅಕ್ಟೋಬರ್ 29ರಂದು ನಿಧನ ಹೊಂದಿದ್ದರು. ಆದರೆ ಇನ್ನೂ ಸಹ ಅಪ್ಪು ಅವರ ಅತ್ತೆ ನಾಗಮ್ಮ ಅವರಿಗೆ ಅಪ್ಪು ನಿಧನದ ಸುದ್ದಿಯನ್ನು ರಾಜ್ ಕುಮಾರ್ ಅವರ ಕುಟುಂಬಸ್ಥರು ತಿಳಿಸಿರಲಿಲ್ಲ. ಅಪ್ಪು ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿದ್ದ ನಾಗಮ್ಮ ಅವರನ್ನು ಮನೆಯಲ್ಲೇ ಇರಿಸಲಾಗಿದ್ದು, ಅಪ್ಪು ವಿದೇಶಕ್ಕೆ ಶೂಟಿಂಗ್‌ಗೆ ತೆರಳಿದ್ದಾರೆ ಎಂದು ನಾಗಮ್ಮ ಅವರಿಂದ ವಿಷಯವನ್ನು ಮುಚ್ಚಿಡಲಾಗಿದೆ. ಅಪ್ಪು ಬದುಕಿಲ್ಲ ಎನ್ನುವ ಸುದ್ದಿ ಸಾಯುವವರೆಗೂ ತಿಳಿಯಲೇ ಇಲ್ಲ.
ಅಪ್ಪು ಹೋಗಿ ವರ್ಷಗಳೇ ಕಳೆದು ಹೋಗಿವೆ. ಆದರೆ, ಅತ್ತೆ ನಾಗಮ್ಮ ಅವರಿಗೆ ಪುನೀತ್ ತೀರಿ ಹೋಗಿರೋ ವಿಷಯ ಗೊತ್ತಿಲ್ಲ. ಅತ್ತೆ ನಾಗಮ್ಮ ಆಗಾಗ ಅಪ್ಪು ಕಂದ ಬಂದು ನನ್ ನೋಡ್ಕೊಂಡು ಹೋಗು ಅಂತ ಹೇಳ್ತಾನೇ ಇರುತ್ತಿದ್ದರಂತೆ. ಅಪ್ಪು ಜನ್ಮ ದಿನದ ವಿಷಯ ತಿಳಿದ ನಾಗಮ್ಮ ಅವ್ರು, ಕಂದ ನಿನಗೆ 50 ವರ್ಷ ಆಯಿತೇನೋ ಅಂತಲೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ವಯಸ್ಸಾಗಿರೋ ನಾಗಮ್ಮ ಅವರಿಗೆ ಕುಟುಂಬಸ್ಥರು ಏನೂ ಹೇಳಿಯೇ ಇರಲಿಲ್ಲ. ಅಪ್ಪು ನಿಧನರಾಗಿರೋ ವಿಷಯವನ್ನೂ ತಿಳಿಸೋಕೆ ಹೋಗಿಯೇ ಇಲ್ಲ. ಹೀಗಾಗಿ ಕೊನೆಯವರೆಗೂ ನಾಗಮ್ಮ ಅವರು ಅಪ್ಪು ಬರ್ತಾನೆ. ಬಂದು ನೋಡಿಕೊಂಡು ಹೋಗ್ತಾನೆ ಅನ್ನುವ ನಂಬಿಕೆಯಲ್ಲಿಯೇ ಇದ್ದರು.
ಇನ್ನು ಅಪ್ಪು ಹೆಚ್ಚಾಗಿ ತಮ್ಮ ಗಾಜನೂರಿಗೆ ಭೇಟಿ ನೀಡಿ ಅಲ್ಲಿನ ಕುಟುಂಬಸ್ಥರ ಜತೆ ಕಾಲ ಕಳೆಯುತ್ತಿದ್ದರು. ಅಪ್ಪು ಕೊನೆಯದಾಗಿ ಗಾಜನೂರಿಗೆ ಭೇಟಿ ನೀಡಿದ್ದಾಗ ಇದೇ ನಾಗಮ್ಮನವರೆ ಜತೆಗೆ ಹಲವು ಫೋಟೊಗಳನ್ನು ತೆಗೆಸಿಕೊಂಡಿದ್ದರು. ಇನ್ನು ಪುನೀತ್ ರಾಜ್ ಕುಮಾರ್ ಅವರು ಇಲ್ಲ ಎಂಬ ನಿಜ ಗೊತ್ತಿಲ್ಲದ ನಾಗಮ್ಮ ಶಿವಣ್ಣ ಅವರ ವೇದ ಚಿತ್ರದ ಪೋಸ್ಟರ್ ಕಂಡು ಆಹಾ ಅಣ್ಣನೇ ಕಣಪ್ಪ.. ನಮ್ಮಣ್ಣ ಕಣಪ್ಪ ಎಂದು ಪೋಸ್ಟರ್‌ಗೆ ಮುತ್ತಿಟ್ಟಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಣ್ಣನ ಮಕ್ಕಳ ಮೇಲೆ ಇಷ್ಟು ಪ್ರೀತಿಯನ್ನು ಹೊಂದಿರುವ ನಾಗಮ್ಮ ಅವರಿಗೆ ಅಪ್ಪು ಸಾವಿನ ಸುದ್ದಿ ಗೊತ್ತಾದರೆ ಗತಿಯೇನು, ಅವರಿಗೆ ಸುದ್ದಿ ತಿಳಿಯದಿರುವುದೇ ಒಳ್ಳೆಯದು ಎಂದು ಅಭಿಮಾನಿಗಳು ಸಹ ಕಾಮೆಂಟ್ ಮಾಡುತ್ತಿದ್ದಾರೆ.












Click it and Unblock the Notifications