"ಕಿಚ್ಚು" ಹಚ್ಚಿಸಿದ ದಿಗಂತ್ ಹೇಳಿದ "ಸುದೀಪ್" ಸಿನಿಮಾ ಮಾತು!
ಕನ್ನಡ ಚಿತ್ರರಂಗದಲ್ಲಿ ಬೇಡ.. ಬೇಡ ಎಂದರೂ ಹೊಸ ಹಾಗೂ ಒಂದಿಲ್ಲೊಂದು ವಿವಾದಗಳು ಸೃಷ್ಟಿಯಾಗುತ್ತಿರುತ್ತವೆ. ಇದೀಗ ದೂದ್ ಪೇಡಾ ಖ್ಯಾತಿಯ ನಟ ದಿಗಂತ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ನಟ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಟ ಕಿಚ್ಚ ಸುದೀಪ್ ಅವರ ಸಿನಿಮಾ ಹಾಗೂ ಅವರ ಸಿನಿಮಾದ ನಿರ್ದೇಶಕರ ಬಗ್ಗೆ ದಿಗಂತ ಅವರು ಮಾತನಾಡಿದ್ದು ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ನಟ ದಿಗಂತ್ ಅವರು ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು. ಪರ - ವಿರೋಧ ಚರ್ಚೆ ಶುರುವಾಗಿದೆ. ಈ ಕಾರ್ಯಕ್ರಮದಲ್ಲಿ ಅವರು ನಟ ಸುದೀಪ್ ಅವರ ಬಗ್ಗೆ ನೇರವಾಗಿ ಮಾತನಾಡಿಲ್ಲ. ಆದರೆ ಅವರ ಸಿನಿಮಾವೊಂದು ಪ್ಲಾಪ್ ಆಗಿರುವ ಬಗ್ಗೆ ಚರ್ಚೆ ನಡೆದಿದ್ದು. ಇದಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಸುದೀಪ್ ಅವರ ಅಭಿಮಾನಿಗಳು ದಿಗಂತ್ ಅವರ ಮೇಲೆ ಗರಂ ಆಗಿದ್ದಾರೆ. ಇಷ್ಟಕ್ಕೂ ಏನಿದು ವಿವಾದ ಅಂತ ನೋಡೋಣ.

ಕನ್ನಡ ಚಿತ್ರರಂಗದಲ್ಲಿ ಒಂದು ವಿವಾದ ಮುಗಿಯುವುದರ ಒಳಗೆ ಮತ್ತೊಂದು ವಿವಾದ ಸೃಷ್ಟಿಯಾಗುತ್ತಿದೆ. ಇದೀಗ ಹಾಸ್ಯದ ಕಾರ್ಯಕ್ರಮವೊಂದರಲ್ಲಿ ದಿಗಂತ ಅವರು ಹೇಳಿರುವ ಮಾತುಗಳು ಚರ್ಚೆಗೆ ನಾಂದಿ ಹಾಡಿದೆ. ಮುಂಗಾರು ಮಳೆ ಸಿನಿಮಾದಲ್ಲಿ ಬಗ್ಗೆ ಮಾತನಾಡಿರುವ ಅವರು, "ಮುಂಗಾರು ಮಳೆ ಸಿನಿಮಾದಲ್ಲಿ ಎರಡು ಮೂರು ದಿನಗಳ ಪಾತ್ರ ಸಿಕ್ಕಿತ್ತು. ನಾನು ಸಿನಿಮಾದಲ್ಲಿ ಎರಡು ಮೂರು ದಿನಕ್ಕೆ ಹೇಗೆ ನಟಿಸೋದು ಅಂತ ಯೋಚಿಸುತ್ತಿದ್ದೆ. ಆ ಸಿನಿಮಾದ ನಟ ಯಾರು ಅಂತ ಕೇಳ್ದೆ, ಅದಕ್ಕೆ ಕಾಮಿಡಿ ಟೈಮ್ ಗಣೇಶ್ ಅಂತ ಹೇಳಿದ್ರು. ಆದರೆ, ನನಗೆ ಕಾಮಿಡಿ ಟೈಮ್ ಗಣೇಶ್ ಯಾರು ಅಂತ ಗೊತ್ತಿರಲಿಲ್ಲ" ಅಂತ ದಿಗಂತ್ ಅವರು ಹೇಳಿದ್ದಾರೆ.
"ಮುಂದುವರಿದು ಆ ಸಿನಿಮಾದ ನಿರ್ದೇಶಕರು ಯಾರು ಅಂತ ಕೇಳಿದೆ. ಅದಕ್ಕೆ ಅವರು ಮಣಿ ಹಾಗೂ ರಂಗ ಎಸ್‌ಎಸ್‌ಎಲ್‌ಸಿ ಮಾಡಿದ್ದಾರೆ ಅಂತ ಹೇಳಿದ್ದರು. ಆ ಸಿನಿಮಾಗಳು ಸಹ ಏನು ಹಿಟ್ ಆಗಿರಲಿಲ್ಲ" ಅಂತ ದಿಂಗತ್ ಹೇಳಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ.
ಎರಡು ಮೂರು ದಿನದ್ದು ಹೇಗೆ ಮಾಡಲಿ ಅಂತ ಯೋಚಿಸಿದ್ದೆ!
"ಮುಂಗಾರು ಮಳೆ" ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಹಾಗೂ ಟ್ರೆಂಡ್ ಸೆಟ್ ಮಾಡಿದ ಸಿನಿಮಾ. ಹೊಸ ಪ್ರೇಕ್ಷಕರನ್ನು ಹಾಗೂ ವಿಭಿನ್ನ ಕಥಾ ಮಾದರಿಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿರುವ ಸಿನಿಮಾಗಳಲ್ಲಿ ಮುಂಗಾರು ಮಳೆಯ ಸಿನಿಮಾವೂ ಒಂದು. ಈ ಸಿನಿಮಾದಲ್ಲಿ ನಟ ದಿಗಂತ್ ಅವರು ಸಹ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಅವಕಾಶ ಸಿಕ್ಕಾಗ ಎರಡು ಮೂರು ದಿನಗಳಿಗೆ ಮಾತ್ರ ಹೇಗೆ ಸಿನಿಮಾದಲ್ಲಿ ಅಭಿನಯಿಸುವುದು ಅಂತ ವಿಚಾರ ಮಾಡಿದ್ದೆ ಅಂತ ಅವರು ಹೇಳಿದ್ದಾರೆ.
ದಿಗಂತ್ ಅವರು, "ನಾನು ಆಗ ಜಾಹೀರಾತುಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಒಳ್ಳೆ Adds ಮಾಡ್ತಿದ್ದೆ ಈ ರೀತಿ ಇರುವಾಗ ಎರಡು ಮೂರು ದಿನಗಳ ಮಾತ್ರ ಸಿನಿಮಾದಲ್ಲಿ ಮಾಡಬೇಕಾ ಅಂತ ವಿಚಾರ ಮಾಡಿದ್ದೆ" ಅಂತ ಅವರು ಹೇಳಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಅವರು ಎರಡು ಸಿನಿಮಾಗಳು ಅಂತಹ ಹಿಟ್ ಏನೂ ಆಗಿರಲಿಲ್ಲ ಎಂದು ನೇರವಾಗಿ ಕಾರ್ಯಕ್ರಮದಲ್ಲೇ ಹೇಳಿದ್ದಾರೆ.
ದುರಹಂಕಾರದ ಮಾತು ಎಂದ ಜನ!
ಇನ್ನು ಹಲವರು ನಟ ದಿಗಂತ್ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ದುರಹಂಕಾರದ ಮಾತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ದಿನೇಶ್ ವೀರಶೈವಾ ಎನ್ನುವವರು ಈ ದುರಹಂಕಾರದಿಂದಲೇ ದಿಗಂತ್ ಅವರು ಅವಕಾಶಗಳನ್ನು ಕಳೆದುಕೊಂಡಿದ್ದಾರೆ ಎಂಬರ್ಥದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
-
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications