'ನಟ ದರ್ಶನ್‌ಗೆ ಜಾಮೀನು ಸಿಗೋದು ಪಕ್ಕಾ'
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಪಟಾಲಂ ಗ್ಯಾಂಗ್ ಜೈಲು ಸೇರಿದೆ. ಇನ್ನು ಶನಿವಾರ ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದ್ದ ನಟ ದರ್ಶನ್ ಜಾಮೀನು ಅರ್ಜಿ ಇಂದು (ಸೆಪ್ಟೆಂಬರ್ 23) ವಿಚಾರಣೆ ನಡೆಯಲಿದೆ. ಈ ಬಗ್ಗೆ ಲಾಯರ್ ಜಗದೀಶ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದು, ಇದು ಭಾರೀ ವೈರಲ್ ಆಗುತ್ತಿದೆ.
ಲಾಯರ್ ಜದೀಶ್ ಒಂದಲ್ಲ ಒಂದು ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಹಾಗೆಯೇ ಇದೀಗ ಅವರು ದರ್ಶನ್ ಜಾಮೀನು ಭವಿಷ್ಟು ನುಡಿದುದ್ದು, ಈ ಹೇಳಿಕೆ ಇದೀಗ ಭಾರೀ ವೈರಲ್ ಆಗುತ್ತಿದೆ. "ಹಲವು ಕೆಸ್‌ಗಳಿಂದ ಮುನಿರತ್ನ ಒಳಗೆ ಹೋದ, ದರ್ಶನ್ ಮಾಡಿದ ಒಂದು ತಪ್ಪಿನಿಂದ ಹೊರಗಡೆ ಬರ್ತಾನೆ," ಎಂದು ಹೇಳಿದ್ಧಾರೆ. ಈ ಹೇಳಿಕೆ ಇದೀಗ ಭಾರೀ ವೈರಲ್ ಆಗುತ್ತಿದೆ.

ಶನಿವಾರ ಸಲ್ಲಿಸಲಾಗಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರದ ಎ2 ಆರೋಪಿ ನಟ ದರ್ಶನ್‌ನ ಜಾಮೀನು ಅರ್ಜಿಯ ವಿಚಾರಣೆ ಇಂದು (ಸೆಪ್ಟೆಂಬರ್ 23) ನಡೆಯಲಿ. ದರ್ಶನ್ ಪರ ಎಸ್ ಸುನಿಲ್ ಕುಮಾರ್ ಹಾಗೂ ಪ್ರಕರಣದ ಎ1 ಆರೋಪು ಪವಿತ್ರಾ ಗೌಡ ಪರ ಟಾಮಿ ಸೆಬಾಸ್ಟಿಯನ್ ಅವು ವಾದ ಮಂಡನೆ ಮಾಡಲಿದ್ದಾರೆ. ಇನ್ನು ಸರ್ಕಾರ ಪರವಾಗಿ ಎಸ್‌ಪಿಪಿಇ ಪ್ರಸನ್ನಕುಮಾರ್ ಅವರು ವಾದ ಮಂಡಿಸಿ ಜಾಮೀನಿಗೆ ಆಕ್ಷೇಪಣೆಯೊಡ್ಡಲಿದ್ದಾರೆ ಎನ್ನಲಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ನನ್ನು ಹೊರತರಲು ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ನು ಪತಿ ದರ್ಶನ್‌ಗಾಗಿ ವಿಜಯಲಕ್ಷ್ಮಿ ಟೆಂಪಲ್ ರನ್ ಮುಂದುವರೆಸಿ ವಿಶೇಷ ಪೂಜೆ, ವ್ರತಗಳನ್ನು ಸಹ ಮಾಡಿದ್ದಾರೆ. ಮತ್ತೊಂದೆಡೆ ಅಭಿಮಾನಿಗಳು ಸಹ ದೇವಸ್ಥಾನಗಳಲ್ಲಿ ತಮ್ಮ ನಟ ಆದಷ್ಟು ಬೇಗ ಹೊರಬರಲೆಂದು ವಿಶೇ ಪೂಜೆಗಳನ್ನು ಮಾಡಿಸುತ್ತಲೇ ಇದ್ದಾರೆ.
ಇನ್ನೂ ದರ್ಶನ್ ಕುಟುಂಬದ ಸದಸ್ಯರನ್ನೆಲ್ಲ ದೂರ ಮಾಡಿಕೊಂಡಿದ್ದ. ಆದರೆ ಕೊನೆಗೆ ಆಸರೆಗೆ ಬಂದಿದ್ದು ಕುಟುಂಬದವರೇ. ಈಗಾಗಲೇ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್, ಸಹೋದರ ದಿನಕರ ತುಗೂದೀಪ ಹಲವಾರು ಬಾರಿ ಜೈಲಿಗೆ ಭೇಟಿ ನೀಡಿ ದರ್ಶನ್‌ಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದರು. ಅಷ್ಟೇ ಅಲ್ಲದೆ, ಎಲ್ಲಾ ಮುನಿಸುಗಳನ್ನು ಮರೆತು ಮೊದಲ ಬಾರಿ ಬಳ್ಳಾರಿ ಜೈಲಿನಲ್ಲಿ ಮೀನಾ ತುಗೂದೀಪ ಅವರು ಮಗ ದರ್ಶನ್‌ನನ್ನು ಭೇಟಿ ಮಾಡಿದ್ದರು. ಈ ವೇಳೆ ದರ್ಶನ್ ಬಿಕ್ಕಿ ಬಿಕ್ಕಿ ಅತ್ತಿದ್ದರು ಎಂದು ತಿಳಿದುಬಂದಿತ್ತು.
ಯಾರೇ ದೂರು ಮಾಡಿದರೂ ಕೊನೆಗೆ ಆಗೋರೆ ಕುಟುಂಬಸ್ಥರು ಅದಕ್ಕೂ ಮಿಗಿಲಾಗಿ ಕರುಳ ಬಳ್ಳಿ ಎಂಬುದನ್ನು ನಟ ದರ್ಶನ್ ತಿಳಿದುಕೊಳ್ಳಬೇಕಿದೆ ಎಂದು ಹಲವರು ಹೇಳುತ್ತಲೇ ಇದ್ದಾರೆ. ಇನ್ನಾದರೂ ದರ್ಶನ್ ಬದಲಾಗಿ ಉತ್ತಮ ದಾರಿಯಲ್ಲಿ ನಡೆಯುತ್ತಾರೆಯಾ ಎಂದು ಕಾದುನೋಡಬೇಕಿದೆ.












Click it and Unblock the Notifications