Dinakar Thoogudeepa: ಸ್ವಂತ ಮನೆ ಇಲ್ಲ ಅನ್ನೋ ವಿಚಾರಕ್ಕೆ ದಿನಕರ್ ತೂಗುದೀಪ ಕೊಟ್ಟ ಉತ್ತರವೇನು?
ನಟ ದರ್ಶನ್ ತೂಗುದೀಪ ಅವರ ಸಹೋದರ ದಿನಕರ್ ತೂಗುದೀಪ ಅವರು ಕೂಡ ಚಿತ್ರರಂಗದಲ್ಲಿ ಹೆಸರು ಮಾಡಿದವರು. ಈಗಾಗಲೇ ಹಲವು ಸಿನಿಮಾಗಳನ್ನು ಮಾಡಿ ಗೆದ್ದಿರುವ ಅವರು ದರ್ಶನ್ ಅವರಿಗೂ ಬ್ಲಾಕ್‌ಬಸ್ಟರ್ ಸಿನಿಮಾ ಮಾಡಿದ್ದರು. ನಿರ್ದೇಶಕ, ನಿರ್ಮಾಪಕರಾಗಿರುವ ದಿನಕರ್ ಅವರ ಬಗ್ಗೆ ಇತ್ತೀಚೆಗೆ ಕೆಲವು ವದಂತಿಗಳು ಹಬ್ಬಿದ್ದವು. ಅದಕ್ಕೆ ದಿನಕರ್ ಅವರು ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನಕ್ಕೆ ಒಳಗಾದರು. ಇದಾದ ನಂತರ ದರ್ಶನ್ ಅವರು ಕೋಟಿಗಳ ಒಡೆಯನಾದರೂ ತಮ್ಮ ಸಹೋದರ ಇನ್ನು ಸ್ವಂತ ಮನೆ ಮಾಡಿಕೊಂಡಿಲ್ಲ ಎಂಬ ವದಂತಿ ಸೋಶಿಯಲ್ ಮೀಡಿಯಾಗಳಲ್ಲಿ ಹಬ್ಬಿತ್ತು. ಇದಕ್ಕೆ ಖಡಕ್ ಉತ್ತರ ನೀಡಿರುವ ದಿನಕರ್ ಅವರು, ಸುಮ್ಮನೆ ಓಡಾಡುವ ಗಾಳಿ ಸುದ್ದಿಗಳಿಗೆ ಉತ್ತರ ಕೊಡುತ್ತಾ ಕೂರಲು ಆಗುತ್ತಾ? ಮಾತನಾಡುವವರು ಮಾತನಾಡಿ, ಟೈಮ್ ಬಂದಾಗ ಸತ್ಯ ಹೊರ ಬಂದೇ ಬರುತ್ತೆ ಎಂದು ಡೋಂಟ್‌ಕೇರ್ ಎಂದಿದ್ದಾರೆ.

ನಾನು ಮಾಡಿದ ಮೂರು ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿವೆ. ನಾನು ಹತ್ತು ವರ್ಷದ ಹಿಂದೆಯೇ ದುಬಾರಿ ಫಾರ್ಚೂನರ್ ಕಾರ್ ಖರೀದಿಸಿದ್ದೆ. ನಾನು ಸಿನಿಮಾ ಮಾಡದೆ ಮನೆಯಲ್ಲೇ ಕುಳಿತರೂ ರಾಯಲ್ ಆಗಿಯೇ ಬದುಕುವ ಸಾಮರ್ಥ್ಯ ಇದೆ. ಹೀಗಿರುವಾಗ ನನಗೆ ಸ್ವಂತ ಮನೆ ಮಾಡಿಕೊಳ್ಳೋಕೆ ಹೇಗೆ ಕಷ್ಟ? ಎಂದು ಪ್ರಶ್ನಿಸಿದ್ದಾರೆ.
ಇನ್ನು ನನಗೆ ದರ್ಶನ್ ಮನೆ ಮಾಡಿಕೊಟ್ಟಿಲ್ಲ ಎಂದು ಹೇಳುವವರಿಗೆ ಒಂದು ಮಾತು, ನಾನೇನಾದರೂ ದರ್ಶನ್‌ಗೆ ಈ ಮನೆ ಅಥವಾ ಪ್ರಾಪರ್ಟಿ ಬೇಕು ಅಂದ್ರೆ ಐದೇ ನಿಮಿಷದಲ್ಲಿ ಹಿಂದೂ ಮುಂದು ಯೋಚಿಸದೆ ಅದನ್ನು ನನಗೆ ಕೊಡಿಸುತ್ತಾನೆ ಎಂದು ವದಂತಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.

ಆದರೆ, ನಾನು ತುಂಬಾ ಸ್ವಾಭಿಮಾನಿ ಆಗಿರೋ ಕಾರಣಕ್ಕೆ ನಾನು ಆ ರೀತಿ ದರ್ಶನ್ ಕಡೆಯಿಂದ ಮನೆ ಮಾಡಿಸಿಕೊಳ್ಳುವ ಅಗತ್ಯವೇನಿದೆ? ನಾನು ಯಾರ ಮುಂದೆನೂ ಕೈಚಾಚುವವನಲ್ಲ. ದರ್ಶನ್ ಕೂಡ ಸ್ವಂತ ಪರಿಶ್ರಮದಿಂದ ಮೇಲೆ ಬಂದವನು.
ನಮ್ಮಿಬ್ಬರದ್ದೂ ಒಂದೇ ರಕ್ತ. ಹಾಗಾಗಿ ನಮ್ಮ ದುಡಿಮೆಯಲ್ಲೇ ನಾನು ಬದುಕಬೇಕು, ಅಲ್ಲದೆ ದರ್ಶನ್‌ಗೆ ಸಂಭಾವನೆ ಕೊಟ್ಟು ಸಿನಿಮಾ ಮಾಡುವ ತಾಕತ್ ಇರುವ ನನಗೆ ದರ್ಶನ್ ಯಾಕೆ ಆಸ್ತಿ ಅಥವಾ ಮನೆ ಕೊಡಿಸಬೇಕು? ಎಂದು ಪ್ರಶ್ನಿಸಿದ್ದಾರೆ.

ಇನ್ನು ದರ್ಶನ್ ಅವರಿಗೆ ಸಿನಿಮಾ ಮಾಡುವ ಉದ್ದೇಶವಿದೆ. ಅದರಲ್ಲಿ ಎರಡು ಮಾತಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ 2026ಕ್ಕೆ ದರ್ಶನ್ ಅವರಿಗೆ ನಾನು ಸಿನಿಮಾ ಡೈರೆಕ್ಟ್ ಮಾಡುತ್ತೇನೆ. ನನ್ನ ನಿರ್ದೇಶನದ ಸಿನಿಮಾ ಸೆಟ್ಟೇರಲಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ದಿನಕರ್ ಹೇಳಿದ್ದಾರೆ.
ಸದ್ಯ ದರ್ಶನ್ ಅವರಿಗೆ ಈಗಾಗಲೇ ಹಲವು ಸಿನಿಮಾಗಳು ಸಾಲು ಸಾಲಾಗಿವೆ. ನಾನು ಕೂಡ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ. ನಮ್ಮ ಅಕ್ಕನ ಮಗನನ್ನು ಕೂಡ ಭರ್ಜರಿಯಾಗಿ ಸಿನಿಮಾ ರಂಗಕ್ಕೆ ಪರಿಚಯಿಸುವ ಕೆಲಸಗಳು ನಡೆಯುತ್ತಿವೆ. ಇದು ಕೂಡ ನಮ್ಮ ಬ್ಯಾನರ್‌ನಲ್ಲೇ ಬರಲಿರುವ ಸಿನಿಮಾ. ಅಕ್ಕನ ಮಗ ಚಂದುನ ಲಾಂಚ್ ಮಾಡಿದ ನಂತರ ದರ್ಶನ್ ಸಿನಿಮಾಗೆ ಗಮನ ಕೊಡಬೇಕು. ಅದಕ್ಕೆ ಸಮಯ ಕೂಡ ಹಿಡಿಯುತ್ತದೆ ಎಂದು ದಿನಕರ್ ಮಾಹಿತಿ ಹಂಚಿಕೊಂಡಿದ್ದಾರೆ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ












Click it and Unblock the Notifications