Darshan Thoogudeepa: ತಾಯಿ ಚಾಮುಂಡೇಶ್ವರಿಗೆ ಹರಕೆ ತೀರಿಸಿದ ನಟ ದರ್ಶನ್ ಕುಟುಂಬ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಸಿಕ್ಕ ಹಿನ್ನೆಲೆ ನಟ ದರ್ಶನ್ ತೂಗುದೀಪ ಅವರು ಮೈಸೂರಿನಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂದು ದರ್ಶನ್ ಅವರ ಕುಟುಂಬಸ್ಥರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ ತೂಗುದೀಪ, ಸಹೋದರ ದಿನಕರ್ ಅವರು ಇಂದು ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದಾರೆ ಎನ್ನಲಾಗಿದೆ. ಇನ್ನು ದರ್ಶನ್ ಅವರು ಕೂಡ ಚಾಮುಂಡೇಶ್ವರಿ ದರ್ಶನಕ್ಕೆ ಬರುತ್ತಾರೆ ಎಂಬ ಮಾಹಿತಿ ಇತ್ತು. ಈ ಹಿನ್ನೆಲೆ ಚಾಮುಂಡಿ ಬೆಟ್ಟದಲ್ಲಿ ಸಾವಿರಾರು ಮಂದಿ ದರ್ಶನ್ ಅವರ ದರ್ಶನ ಭಾಗ್ಯಕ್ಕೆ ಬಂದಿದ್ದರು. ಆದರೆ, ದರ್ಶನ್ ಅವರನ್ನು ಹೊರತುಪಡಿಸಿ, ಉಳಿದ ಕುಟುಂಬಸ್ಥರು ಮಾತ್ರವೇ ಚಾಮುಂಡಿ ಬೆಟ್ಟಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ.

ನಟ ದರ್ಶನ್ ಅವರು ಮೈಸೂರಿನ ಫಾರ್ಮ್‌ಹೌಸ್‌ನಲ್ಲೇ ರೆಸ್ಟ್ ಮಾಡುತ್ತಿದ್ದಾರೆ. ದರ್ಶನ್ ಅವರು ತಾಯಿ ಚಾಮುಂಡೇಶ್ವರಿಯ ಪರಮಭಕ್ತ ಎನ್ನಲಾಗಿದೆ. ಹಾಗಾಗಿ ಅವರು ಬಿಡುವು ಸಿಕ್ಕಾಗೆಲ್ಲ ಮೈಸೂರಿಗೆ ತೆರಳಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಿದ್ದರು. ಇನ್ನು ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ ಬಳಿಕ, ತಾಯಿ ಚಾಮುಂಡೇಶ್ವರಿಗೆ ಹರಕೆ ಹೊತ್ತಿಕೊಂಡಿದ್ದರು ಎನ್ನಲಾಗಿದೆ.
ಹಾಗಾಗಿ, ಇಂದು ದರ್ಶನ್ ಅವರ ಕುಟುಂಬಸ್ಥರು ಚಾಮುಂಡಿ ಬೆಟ್ಟಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದಾರೆ ಎಂದು ತಿಳಿದುಬಂದಿದೆ. ದರ್ಶನ್ ಅವರು ಕೂಡ ಹರಕೆ ತೀರಿಸಲು ಹೋಗಬೇಕಿತ್ತು. ಆದರೆ, ಜಾಮೀನು ಷರತ್ತುಗಳು ಇರುವುದರಿಂದ ಅವರು ಫಾರ್ಮ್‌ಹೌಸ್‌ನಿಂದ ಹೊರಗೆ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ದರ್ಶನ್ ಅವರ ಬದಲಿಗೆ ಕುಟುಂಬಸ್ಥರೆಲ್ಲ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಬಂದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಹೈಕೋರ್ಟ್‌ನಿಂದ ಜಾಮೀನು ಸಿಕ್ಕ ಬಳಿಕ ಕಾರಣ ನಟ ದರ್ಶನ್ ತೂಗುದೀಪ ಅವರು ತಮ್ಮ ತವರು ಮೈಸೂರಿನತ್ತ ಕುಟುಂಬ ಸಮೇತರಾಗಿ ತೆರಳಿದ್ದು, ಮೈಸೂರಿನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರೋ ದರ್ಶನ್ ಮನೆಯ ಬಳಿ ಅಭಿಮಾನಿಗಳು ಹೆಚ್ಚಾಗಿ ಸೇರುವ ಕಾರಣ, ಹಾಗೂ ಅವರ ಆರೋಗ್ಯ ದೃಷ್ಟಿಯಿಂದ ಪ್ರಶಾಂತವಾಗಿರಲು ಅವರು ಮೈಸೂರಿನಲ್ಲಿ ಬೀಡುಬಿಟ್ಟಿದ್ದಾರೆ.
ಹಾಗಾಗಿ ಟಿ.ನರಸೀಪುರ ರಸ್ತೆಯಲ್ಲಿರುವ ತಮ್ಮ ಒಡೆತನದ ಫಾರ್ಮ್ ಹೌಸ್‌ನಲ್ಲಿ ದರ್ಶನ್ ಅವರು ಕಾಲಕಳೆಯುತ್ತಿದ್ದಾರೆ. ದರ್ಶನ್ ಅವರೊಂದಿಗೆ ಪತ್ನಿ ವಿಜಯಲಕ್ಷ್ಮಿ, ಪುತ್ರ, ತಾಯಿ ಮೀನಾ, ಸಹೋದರ ದಿನಕರ್ ಸೇರಿದಂತೆ ಇಡೀ ಕುಟುಂಬ ಕೂಡ ಮೈಸೂರಿನಲ್ಲೇ ಬೀಡುಬಿಟ್ಟಿದೆ. ಸದ್ಯ ಅವರು ಕುಟುಂಬದೊಂದಿಗೆ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಹೈಕೋರ್ಟ್ ಜಾಮೀನು ಮಂಜೂರು ಮಾಡಿದರೂ ದರ್ಶನ್ ಅವರು ಬೆಂಗಳೂರಿನಿಂದ ಹೊರಗೆ ಎಲ್ಲೂ ಹೋಗುವಂತಿಲ್ಲ ಎಂದು ಷರತ್ತು ವಿಧಿಸಿತ್ತು. ಆದರೆ ದರ್ಶನ್ ಅವರು ಮೈಸೂರಿಗೆ ತೆರಳಲು ಕೋರ್ಟ್‌ನಿಂದ ಅನುಮತಿ ಕೋರಿದ್ದರು. ಇದಕ್ಕೆ ಕೋರ್ಟ್ ಕೂಡ ಒಪ್ಪಿಗೆ ನೀಡಿತ್ತು. ಹಾಗಾಗಿ ದರ್ಶನ್ ಅವರು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದು, ಮುಂದಿನ ಜನವರಿ 5ರವರೆಗೆ ದರ್ಶನ್ ಅವರಿಗೆ ಮೈಸೂರಿನಲ್ಲೇ ಇರಲಿದ್ದಾರೆ ಎನ್ನಲಾಗಿದೆ.












Click it and Unblock the Notifications