Darshan Thoogudeepa: ಬಳ್ಳಾರಿ ಜೈಲಿನಲ್ಲಿ ಜಾಮೀನು ಅರ್ಜಿಗೆ ನಟ ದರ್ಶನ್ ಸಹಿ
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ಪತಿ ದರ್ಶನ್ ನೋಡಲು ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಮೊದಲ ಬಾರಿಗೆ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿ ಜೈಲಿನಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಕೈಯಲ್ಲಿ ಪೇಪರ್‌ಗಳನ್ನು ಹಿಡಿದುಕೊಂಡು ಬಂದಿದ್ದರು. ಹಾಗಾದರೆ ಏನು ತಂದಿದ್ದರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇಂದು (ಸೆಪ್ಟೆಂಬರ್ 05) ನೋಡಲು ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗದೀಪ ಬಳ್ಳಾರಿ ಜಾಮೀನು ಅರ್ಜಿ ಜೊತೆ ಜೈಲಿಗೆ ಬಂದಿದ್ದರು. ಈ ವೇಳೆ ಜಾರ್ಜ್ ಶೀಟ್ ಬಗ್ಗೆ ಕೆಲ ಕಾಲ ಚರ್ಚೆ ನಡೆಸಿದ್ದರಲ್ಲದೆ, ವಿಜಯಲಕ್ಷ್ಮಿ ತಂದಿದ್ದ ಜಾಮೀನು ಅರ್ಜಿಗೆ ನಟ ದರ್ಶನ್ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ರೇಣುಕಾಸ್ವಾಮಿ ನಕಲಿ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಪವಿತ್ರಾ ಗೌಡಗೆ ಮಸೇಜ್, ಫೋಟೋಗಳನ್ನು ಕಳುಹಿಸುತ್ತಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಇನ್‌ಸ್ಟಾಗ್ರಾಂನಲ್ಲಿ 4 ಖಾತೆ ಹೊಂದಿದ್ದ ಪವಿತ್ರಾ ಗೌಡ ಹೆಚ್ಚು ಬಳಸುತ್ತಿದ್ದ pavithragowda777_official ಖಾತೆಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ. ನಟ ದರ್ಶನ್ ಹಾಗೂ ಪವಿತ್ರಾ ಗೌಡ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದರು ಅನ್ನೋದನ್ನು ಚಾರ್ಜ್‌ಶೀಟ್ ಉಲ್ಲೇಖಿಸಿದೆ.
ಇನ್ನು ನಕಲಿ ಖಾತೆಗಳ ಮೂಲಕ ಅಶ್ಲೀಲ ಫೋಟೋ, ಮೆಸೇಜ್ ಮಾಡುತ್ತಿದ್ದ ರೇಣುಕಾಸ್ವಾಮಿ ಕುರಿತು ಪವಿತ್ರಾ ಗೌಡ ಮನೆಯಲ್ಲಿ ಕೆಲಸಕ್ಕಿದ್ದ ಪವನ್ ಹಾಗೂ ವಿನಯ್‌ಗೆ ಮಾಹಿತಿ ನೀಡಿದ್ದರು. ಇವರಿಬ್ಬರು ನಟ ದರ್ಶನ್‌ಗೆ ಈ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆತನ ಪತ್ತೆ ಹಚ್ಚಿ ಬೆಂಗಳೂರಿಗೆ ಕಿಡ್ನಾಪ್ ಮಾಡಿಕೊಂಡು ಬರಲು ದರ್ಶನ್ ಸೂಚಿಸಿದ್ದನಂತೆ ಎಂದು ತಿಳಿದುಬಂದಿದೆ.
ಫೆಬ್ರವರಿ 24ರಂದು ಪವಿತ್ರಾ, ಪವನ್ ಹಾಗೂ ವಿನಯ್ ಸೇರಿ ಪ್ಲಾನ್ ಮಾಡಿದ್ದಾರೆ. ಬಳಿಕ ಪವಿತ್ರಾ ಗೌಡ, ರೇಣುಕಾಸ್ವಾಮಿ ಜೊತೆ ಚಾಟ್ ಮಾಡಲು ಆರಂಭಿಸಿದ್ದಾರೆ. ಜೂನ್ 3ರಂದು ರೇಣುಕಾಸ್ವಾಮಿ ಮೆಸೇಜ್‌ಗೆ ತಕ್ಷಣವೇ ಪವಿತ್ರಾ ಗೌಡ ರಿಪ್ಲೇ ಮಾಡಿದ್ದಾಳೆ. ನಕಲಿ ಖಾತೆಯಲ್ಲಿದ್ದ ರೇಣುಕಾಸ್ವಾಮಿ ಪತ್ತೆ ಹಚ್ಚಲು ಪ್ಲಾನ್ ಮಾಡಲಾಗಿತ್ತು.
ಬಳಿಕ ನಂಬರ್ ಪಡೆದ ಪವಿತ್ರಾ ಗೌಡ, ಪವನ್‌ಗೆ ಕಳುಹಿಸಿದ್ದಾಳೆ. ಇತ್ತ ಪವನ್ ತಾನೆ ಪವಿತ್ರಾ ಗೌಡ ಎಂದು ರೇಣುಕಾಸ್ವಾಮಿ ಜೊತೆ ಚಾಟಿಂಗ್ ಆರಂಭಿಸಿದ್ದಾನೆ. ಚಾಟಿಂಗ್ ವೇಳೆ ರೇಣುಕಾಸ್ವಾಮಿ ತನ್ನ ವಿಳಾಸ, ಕೆಲಸ ಸೇರಿದಂತೆ ಎಲ್ಲವನ್ನೂ ತಿಳಿಸಿದ್ದ. ಇಲ್ಲಿಂದ ಕಾರ್ಯಾಚರಣೆ ಶುರು ಆಗಿದೆ ಎಂದು ತಿಳಿದುಬಂದಿದೆ.












Click it and Unblock the Notifications