Darshan Thoogudeepa: ನಟ ದರ್ಶನ್ ಗೆ ಆಪರೇಷನ್ ಡೇಟ್‌ ಫಿಕ್ಸ್ : ಪ್ರಮುಖ ಮಾಹಿತಿ ಇಲ್ಲಿದೆ

ಬೆಂಗಳೂರು, ಜನವರಿ 04: ಚಿತ್ರದುರ್ಗದ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಈಗಾಗಲೇ ರೆಗ್ಯುಲರ್ ಬೇಲ್ ಸಿಕ್ಕಿದ್ದು, ತಮ್ಮ ಪತ್ನಿ, ಮಗ ಹಾಗೂ ಕುಟುಂಬದ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಬೇಲ್‌ ಸಿಕ್ಕ ಬಳಿಕ ಆಸ್ಪತ್ರೆಯಿಂದ ನಟ ದರ್ಶನ್‌ ಅವರು ಡಿಸ್ಚಾರ್ಜ್‌ ಆಗಿದ್ರು, ಇದೀಗ ಆಪರೇಷನ್ ಮಾಡಿಸಿಕೊಳ್ಳುವ ಕುರಿತು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಹೌದು, ನಟ ದರ್ಶನ್ ಅವರು ಸಂಕ್ರಾಂತಿ ಹಬ್ಬದ ವೇಳೆ ಆಪರೇಷನ್ ಗೆ ಒಳಗಾಗುವ ಸಾಧ್ಯತೆಯಿದ್ದು ಈಗಾಗಲೇ ಆಪರೇಷನ್ ಮಾಡಿಸಿಕೊಳ್ಳುವ ಕುರಿತು ಗ್ರೀನ್ ಸಿಗ್ನಲ್ ನೀಡಿದ್ದಾರೆ. ನಟ ದರ್ಶನ್ ಗೆ ಆಪರೇಷನ್ ಮಾಡುವ ವೈದ್ಯರಾದಂತಹ ಅಜಯ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಆಪರೇಷನ್ ಗೆ ನಟ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸಂಕ್ರಾಂತಿ ಹಬ್ಬದ ವೇಳೆ ದರ್ಶನ್ ಆಪರೇಷನ್ ಫಿಕ್ಸ್ ಆಗಿದೆ. ಆಪರೇಷನ್ ಬಳಿಕ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಒಂದುವರೆ ತಿಂಗಳುವರೆಗೂ ಫೈಟ್ ದೃಶ್ಯದಲ್ಲಿ ಭಾಗಿ ಆಗುವಂತೆ ಇಲ್ಲ ಆದರೆ ಕೇವಲ ಚಿತ್ರಿಕರಣದಲ್ಲಿ ಮಾತ್ರ ಭಾಗಿಯಾಗಬಹುದು ಎಂದು ತಿಳಿದು ಬಂದಿದೆ.

Actor Darshan Operation Fixed During Sankranti Festival

ಇನ್ನೂ ಆಪರೇಷನ್‌ ಬಳಿಕ ಫೆಬ್ರವರಿಯಲ್ಲಿ ಚಿತ್ರೀಕರಣದಲ್ಲಿ ನಟ ದರ್ಶನ್ ಅವರು ಭಾಗಿಯಾಗಲಿದ್ದಾರೆ. ಚಿತ್ರೀಕರಣಕ್ಕೂ ಮುನ್ನ ಅವರು ಆಪರೇಷನ್ ಮಾಡಿಸಿಕೊಳ್ಳಲು ನಿರ್ಧಾರ ಕೈಗೊಂಡಿದ್ದಾರೆ. ಆಪರೇಷನ್ ಮಾಡಿಸಿಕೊಂಡು ಮೂರು ದಿನ ವಿಶ್ರಾಂತಿಯಲ್ಲಿ ಇರಬೇಕು ಎಂದು ನಟ ದರ್ಶನ್‌ ಅವರಿಗೆ ಚಿಕಿತ್ಸೆ ನೀಡುತ್ತಿರುವ ಅಂತಹ ವೈದ್ಯ ಅಜಯ್ ಮಾಹಿತಿ ನೀಡಿದ್ದಾರೆ.

ಚಿತ್ರದುರ್ಗದ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಬಳ್ಳಾರಿ ಜೈಲಿನಲ್ಲಿದ್ದಾಗ ಬೆನ್ನು ನೋವಿನ ಸಮಸ್ಯೆ ಕಾಡಿತ್ತು.ಈ ವೇಳೆ ಅವರು ಬೆನ್ನುನೋವಿನ ಸಮಸ್ಯೆ ಯನ್ನ ಹೈಕೋರ್ಟಿಗೆ ತಿಳಿಸಿ, ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಬಳಿಕ ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗದೆ, ರೆಗ್ಯುಲರ್ ಬೇಲ್ ಪಡೆದುಕೊಂಡು ಬಿಡುಗಡೆಯಾಗಿದ್ದರು. ಇದೀಗ ಸಂಕ್ರಾಂತಿ ಹಬ್ಬದ ವೇಳೆ ಅವರು ಶಸ್ತ್ರಚಿಕಿಚಿಗೆ ಒಳಗಾಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು, ನಟ ದರ್ಶನ್ ಇತ್ತೀಚೆಗೆ ಡೆವಿಲ್ ಸಿನಿಮಾ ಡಬ್ಬಿಂಗ್ ಕೆಲಸದಲ್ಲಿ ಭಾಗಿಯಾಗಿದ್ದರು. ಆ ಬಳಿಕ ಅವರ ಅಭಿಮಾನಿಗಳೂ ದರ್ಶನ್‌ ಕುರಿತು ನಿಟ್ಟುಸಿರು ಬಿಟ್ಟಿದ್ದರು. ಶೀಘ್ರದಲ್ಲಿಯೇ 'ಡೆವಿಲ್' ಶೂಟಿಂಗ್ ಆರಂಭ ಮಾಡುತ್ತಾರೆಂಬ ನಿರೀಕ್ಷೆಯಲ್ಲಿ ಇದ್ದರು. ಆದರೆ, ಇದೀಗ ನಟ ದರ್ಶನ್‌ಗೆ ಮತ್ತೆ ಬೆನ್ನು ನೋವು ಹೆಚ್ಚಾಗಿರುವ ಬಗ್ಗೆ ಸುದ್ದಿ ಓಡಾಡುತ್ತಿದೆ. ದರ್ಶನ್‌ಗೆ ಬೆನ್ನು ನೋವು ಇನ್ನೂ ಕಮ್ಮಿಯಾಗಿಲ್ಲ. ಫಿಸಿಯೋಥೆರಪಿ ಹಾಗೂ ಔಷಧಿಗಳಿಂದ ಗುಣವಾಗದೇ ಇದ್ದಿದ್ದರಿಂದ ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಮೈಸೂರಿನ ವೈದ್ಯ ಅಜಯ್ ಹೆಗಡೆ ಚಿಕಿತ್ಸೆ ನೀಡುತ್ತಿದ್ದು, ದರ್ಶನ್‌ ಸರ್ಜರಿಗೆ ಒಪ್ಪಿಕೊಂಡಿದ್ದಾರೆಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+