ನಟ ದರ್ಶನ್‌ಗೆ ಜೈಲಲ್ಲಿ ಶುರುವಾಯ್ತು 'ಈ' ಭಯ!
ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಸದ್ಯ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ಅವರಿಗೆ ಹೊಸ ಆತಂಕ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ದರ್ಶನ್ ಜೈಲು ಸೇರಿಕೊಂಡ ದಿನದಿಂದ ಸರಿಯಾಗಿ ಆಹಾರ ಸೇವನೆ ಮಾಡುತ್ತಿರಲಿಲ್ಲ ಎಂದೆಲ್ಲ ಹೇಳಲಾಗುತ್ತಿತ್ತು. ಸದ್ಯ ಅವರು ತಮ್ಮ ಫಿಟ್‌ನೆಸ್ ಕಡೆಗೆ ಹೆಚ್ಚಿನ ಕಾಳಜಿ ವಹಿಸಲು ಶುರು ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕೂ ಒಂದು ಕಾರಣ ಇದೆ ಎನ್ನಲಾಗಿದ್ದು, ಈ ಒಂದೇ ಕಾರಣಕ್ಕೆ ಅವರು ತಮ್ಮ ಫಿಟ್‌ನೆಸ್ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರಂತೆ. ಅದೇನಂದ್ರೆ ಈ ಕೊಲೆ ಕೇಸ್ ಅಡ್ಡಿಯಾಗದಿದ್ದರೆ, ಈ ವರ್ಷ ದರ್ಶನ್ ಅಭಿನಯಿಸುತ್ತಿದ್ದ ʼಡೆವಿಲ್ʼ ಸಿನಿಮಾ ರಿಲೀಸ್ ಆಗಬೇಕಿತ್ತು. ಈ ಶೂಟಿಂಗ್ ಮಧ್ಯದಲ್ಲೇ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದರು.

ಇನ್ನು ನಾಳೆಗೆ ನಟ ದರ್ಶನ್ ಅವರ ಕಸ್ಟಡಿ ಅಂತ್ಯವಾಗಲಿದ್ದು, ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಜಾಮೀನು ಸಿಕ್ಕರೆ, ದರ್ಶನ್ ಮುಂದೆ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ ಎಂಬ ನಿರೀಕ್ಷೆಯಲ್ಲಿ ತಮ್ಮ ಫಿಟ್‌ನೆಸ್ ಕಡೆಗೂ ಗಮನಹರಿಸಿದ್ದಾರೆ ಎನ್ನಲಾಗಿದೆ.
ಹಾಗಾಗಿ ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಅನ್ನ ದೂರವಿಟ್ಟು ಚಪಾತಿ ಹಾಗೂ ಮುದ್ದೆ ಊಟಕ್ಕೆ ಮೊರೆ ಹೋಗಿದ್ದಾರೆ. ಮನೆಯಲ್ಲಿ ಇದ್ದ ದರ್ಶನ್ ಪ್ರತಿದಿನ ಜಿಮ್ ಮಾಡಿ ದೇಹವನ್ನು ಅಚ್ಚುಕಟ್ಟಾಗಿ ಮೇಂಟೇನ್ ಮಾಡಿಕೊಂಡಿದ್ದರು. ಆದರೆ, ಜೈಲು ಸೇರಿದ ದಿನದಿಂದ ವರ್ಕೌಟ್ ಸಾಧ್ಯವಾಗಿಲ್ಲ. ಅಲ್ಲಿ ಜಿಮ್ ಕೂಡ ಇಲ್ಲ. ಹಾಗಾಗಿ ಜಿಮ್ ಮಾಡದಿದ್ದರೆ ಬಾಡಿ ಶೇಪ್ ಕೂಡ ಹಾಳಾಗಬಹುದು ಎಂಬ ಆತಂಕದಲ್ಲಿದ್ದಾರೆ. ಈ ಕಾರಣದಿಂದಲೇ ಜೈಲಿನಲ್ಲೂ ಕೆಲ ಡಯಟ್ ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ.

ಊಟದ ಮೆನು ಬದಲಾವಣೆ ಜೊತೆಗೆ ದೇಹದ ಶಕ್ತಿ ಹೆಚ್ಚಿಸಿಕೊಳ್ಳಲು ವಿಟಮಿನ್ ಟ್ಯಾಬ್ಲೆಟ್ಸ್ ಕೂಡ ಸೇವಿಸುತ್ತಿದ್ದಾರೆ. ಜೊತೆಗೆ ಗಂಟೆಗಟ್ಟಲೆ ವಾಕಿಂಗ್ ಕೂಡ ಶುರು ಮಾಡಿದ್ದಾರಂತೆ. ಇದರಿಂದ ತೂಕ ಕಳೆದುಕೊಳ್ಳಬಹುದು ಎಂದು ದರ್ಶನ್ ಡಯಟ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ನಟ ದರ್ಶನ್ ಅವರನ್ನೇ ನಂಬಿ ಹಲವು ನಿರ್ಮಾಪಕರು ಸಿನಿಮಾಗಾಗಿ ಕೋಟಿಗಟ್ಟಲೆ ಹಣ ಸುರಿದಿದ್ದು, ಶೂಟಿಂಗ್ ಅರ್ಧಕ್ಕೆ ನಿಂತಿದ್ದರೆ, ಇನ್ನು ಕೆಲವು ಶೂಟಿಂಗ್ ಶುರುವಾಗೇ ಇಲ್ಲ. ಹಾಗಾಗಿ ಮುಂದೆ ಅವಕಾಶ ಸಿಕ್ಕರೆ ಶೂಟಿಂಗ್‌ಗೆ ಹಾಜರಾಗಿ ಇವರ ಸಿನಿಮಾಗಳನ್ನು ಕಂಪ್ಲೀಟ್ ಮಾಡಬೇಕು ಎಂದೂ ದರ್ಶನ್ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ನಟ ದರ್ಶನ್ ತೂಗುದೀಪ ಅವರಿಗೆ ನಿನ್ನೆ ಗಣೇಶ ಚತುರ್ಥಿ ದಿನವೇ ಒಂದು ಸ್ಪೆಷಲ್ ಗಿಫ್ಟ್ ಸಿಕ್ಕಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದ ದರ್ಶನ್, ಪೊಲೀಸರ ಬಳಿ ಕೆಲವು ವಸ್ತುಗಳಿಗೆ ಬೇಡಿಕೆ ಇಟ್ಟಿದ್ದರು. ಅದರಂತೆ ಪೊಲೀಸರು ಕೂಡ ದರ್ಶನ್ ಅವರ ಬೇಡಿಕೆಗಳನ್ನು ಒಂದೊಂದಾಗಿ ಈಡೇರಿಸುತ್ತಾ ಬಂದಿದ್ದರು. ಹಬ್ಬದ ದಿನವೇ ನಟ ದರ್ಶನ್ ಅವರ ಕೋರಿಕೆ ಈಡೇರಿತ್ತು.
ಐದು ದಿನಗಳ ಹಿಂದಷ್ಟೇ ನಟ ದರ್ಶನ್ ಜೈಲಿನಲ್ಲಿ ನನಗೆ ಟಿ.ವಿ. ವ್ಯವಸ್ಥೆ ಮಾಡುವಂತೆ ಜೈಲಾಧಿಕಾರಿಗಳ ಮುಂದೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪಿಗೆ ನೀಡಿದ್ದ ಅಧಿಕಾರಿಗಳು ದರ್ಶನ್ ಸೆಲ್‌ನಲ್ಲಿ ಟಿ.ವಿ. ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ತಮ್ಮ ಮೇಲಿನ ಕೇಸ್ ವಿಚಾರಗಳು, ಚಾರ್ಜ್‌ಶೀಟ್ ಸಲ್ಲಿಕೆ ಹಾಗೂ ಜೈಲಿನಿಂದ ಹೊರಗೆ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತಿವೆ? ಎಂಬುದರ ಬಗ್ಗೆ ದರ್ಶನ್ ಅವರಿಗೆ ಕುತೂಹಲವಿದ್ದು, ಈ ಕಾರಣಕ್ಕಾಗಿಯೇ ಅವರು ಟಿ.ವಿ ಬೇಕೆಂದು ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್ ಆಗಿದ್ದ ನಟ ದರ್ಶನ್ ಇಲ್ಲಿನ ಜೈಲಿನಲ್ಲಿದ್ದ ಇಂಡಿಯನ್ ಟಾಯ್ಲೆಟ್ ಬದಲಿಗೆ ವೆಸ್ಟರ್ನ್ ಟಾಯ್ಲೆಟ್ ಬೇಕೆಂದು ಮನವಿ ಮಾಡಿದ್ದರು. ಅದರಂತೆ ಪೊಲೀಸರು ವೆಸ್ಟರ್ನ್ ಟಾಯ್ಲೆಟ್ ವ್ಯವಸ್ಥೆಯೂ ಮಾಡಿ ದರ್ಶನ್ ಕೋರಿಕೆ ಈಡೇರಿಸಿದ್ದರು. ಇದೀಗ ಅವರ ಟಿ.ವಿ. ಬೇಡಿಕೆಯೂ ಈಡೇರಿದೆ.












Click it and Unblock the Notifications