Darshan Thoogudeepa: ನಾವೊಂದು ತೀರ.. ನೀನೊಂದು ತೀರ: ನಟ ದರ್ಶನ್‌ & ಗ್ಯಾಂಗ್‌ ಛಿದ್ರ-ಇಲ್ಲಿದೆ ಮಾಹಿತಿ

Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್& ಗ್ಯಾಂಗ್‌ ಜೈಲು ಪಾಲಾಗಿ 2 ತಿಂಗಳುಗಳು ಕಳೆದಿವೆ. ಇನ್ನೂ ಇತ್ತೀಚೆಗಷ್ಟೇ ಪರಪ್ಪನ ಅಗ್ರಹಾರ ಜೈಲಿನಲ್ಲಿನ ನಟ ದರ್ಶನ್‌ ರಾಜ್ಯಾತಿಥ್ಯದ ಪೋಟೋಗಳು ವೈರಲ್‌ ಆಗಿದ್ದು, ಬಳಿಕ ಎಚ್ಚೆತ್ತ ಸರ್ಕಾರ ದರ್ಶನ್‌ & ಗ್ಯಾಂಗ್‌ ಅನ್ನು ಚದುರಿಸಲು (ಸ್ಥಳಾಂತರ) ಮಾಡಲು ನಿರ್ಧರಿಸಿದ್ದು, ಕೋರ್ಟ್‌ ಸಹ ಅನುಮತಿ ನೀಡಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲೇ ರೆಸಾರ್ಟ್‌ನಲ್ಲಿ ಪಾರ್ಟಿ ಮಾಡುವ ರೀತಿ ರೌಡಿ ಶೀಟರ್‌ಗಳ ಜೊತೆ ನಟ ದರ್ಶನ್‌ ಒಂದು ಕೈಯಲ್ಲಿ ಕಾಫಿ ಮಗ್‌, ಮತ್ತೊಂದು ಕೈಯಲ್ಲಿ ಸಿಗರೇಟ್‌ ಹಿಡಿದಿರು ಕುಳಿತ್ತಿದ್ದು, ಈ ಪೋಟೋಗಳು ಭಾರಿ ವೈರಲ್‌ ಆಗಿದ್ದವು. ಅಷ್ಟೇ ಸಾಲದೆಂಬಂತೆ ವಿಐಪಿ ಸೆಲ್‌ನಿಂದಲೇ ದರ್ಶನ್‌ ರೌಡಿಗಳ ಜೊತೆ ಮಾತನಾಡಿರುವ ವಿಡಿಯೋ ಸಹ ಬಟಾ ಬಯಲಾಗಿದ್ದು, ಬಳಿಕ ಎಚ್ಚೆತ್ತುಕೊಂಡ ಸರ್ಕಾರ 9 ಮಂದಿ ಜೈಲಾಧಿಕಾರಿಗಳನ್ನು ಅಮನಾತು ಮಾಡಿದೆ.

Actor Darshan amp amp gang shift to another jails here see list

ಇನ್ನು ಈ ಜೈಲಿನಲ್ಲಿನ ರಾಜಾತಿಥ್ಯದ ಬಗ್ಗೆ ಆಕ್ರೋಶಗಳು ಕೂಡ ವ್ಯಕ್ತವಾದವು. ಬಳಿಕ ಈ ಸಂಬಂಧಿಸಿದಂತೆ ದರ್ಶನ್‌ & ಗ್ಯಾಂಗ್‌ ಅನ್ನು ಬೇರೆ ಬೇರೆ ಜೈಲ್‌ಗೆ ಶಿಫ್ಟ್‌ ಮಾಡಲು ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಕೋರ್ಟ್‌ ಸಹ ಅನುಮತಿ ನೀಡಿದೆ. ಹಾಗಾದರೆ ಯಾವ ಆರೋಪಿ ಯಾವ ಜೈಲಿಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಆರೋಪಿಗಳನ್ನು ಸ್ಥಳಾಂತರ ಮಾಡಲು ಜೈಲು ಅಧಿಕಾರಿಗಳು ಕೋರ್ಟ್​ ಮೊರೆ ಹೋಗಿದ್ದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಜೈಲು ಅಧಿಕಾರಿಗಳ‌ ಮನವಿ ಮೇರೆಗೆ 24ನೇ ಎಸಿಎಂಎಂ ಕೋರ್ಟ್ ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ​ ಮಾಡಲು ಅನುಮತಿ ನೀಡಿದೆ.

ಯಾರು ಯಾವ ಜೈಲಿಗೆ?

1. ಎ1 ಆರೋಪಿ ಪವಿತ್ರಾ ಗೌಡ- ಪರಪ್ಪನ ಅಗ್ರಹಾರ ಜೈಲು (ಬೆಂಗಳೂರು)
2. ಎ2 ಆರೋಪಿ ನಟ ದರ್ಶನ್‌ - ಬಳ್ಳಾರಿ ಜೈಲು
3. ಎ3 ಆರೋಪಿ ಪವನ್‌ - ಮೈಸೂರು ಜೈಲು
4. ಎ4 ಆರೋಪಿ ರಾಘವೇಂದ್ರ - ಮೈಸೂರು ಜೈಲು
5. ಎ5 ಆರೋಪಿ ನಂದೀಶ್ - ಮೈಸೂರು ಜೈಲು
6. ಎ6 ಆರೋಪಿ ಜಗದೀಶ್ - ಶಿವಮೊಗ್ಗ ಜೈಲು
7. ಎ7 ಆರೋಪಿ ಅನುಕುಮಾರ್‌ - ಪರಪ್ಪನ ಅಗ್ರಹಾರ ಜೈಲು (ಬೆಂಗಳೂರು)
8. ಎ8 ಆರೋಪಿ ರವಿ - ತುಮಕೂರು ಜೈಲು
9. ಧನರಾಜ್ : ಧಾರವಾಡ ಜೈಲು
10. ಎ10 ಆರೋಪಿ ವಿನಯ್‌ - ವಿಜಯಪುರ ಜೈಲು
11. ಎ11 ಆರೋಪಿ ನಾಗರಾಜ್‌ - ಗುಲ್ಬರ್ಗ್
12. ಎ12 ಆರೋಪಿ ಲಕ್ಷ್ಮಣ್‌ - ಶಿವಮೊಗ್ಗ ಜೈಲು
13. ಎ13 ಆರೋಪಿ ದೀಪಕ್ - ಪರಪ್ಪನ ಅಗ್ರಹಾರ ಜೈಲು (ಬೆಂಗಳೂರು)
14. ಎ14 ಆರೋಪಿ ಪ್ರದೋಶ್ - ಬೆಳಗಾವಿ
15. ಎ15 ಆರೋಪಿ ಕಾರ್ತಿಕ್‌ - ತುಮಕೂರು ಜೈಲು
16. ಎ16 ಆರೋಪಿ ಕೇಶವ ಮೂರ್ತಿ - ತುಮಕೂರು ಜೈಲು
17. ಎ17 ಆರೋಪಿ ನಿಖಿಲ್ -ತುಮಕೂರು ಜೈಲು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+