'ಕೂಲಿ' ಸಿನಿಮಾದಲ್ಲಿ ನಟಿಸಿದ್ದು ದೊಡ್ಡ ತಪ್ಪು ಅಂದ್ರಾ ನಟ ಅಮೀರ್ ಖಾನ್?
ಬಾಲಿವುಡ್ ನಟ ಅಮೀರ್ ಖಾನ್ ಅವರು ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವರ ಪಾತ್ರದ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದರೆ ಕೂಲಿ ಸಿನಿಮಾದಲ್ಲಿ ನಟಿಸಿದ ವಿಚಾರವಾಗಿ ಅಮೀರ್ ಖಾನ್ ಅಸಮಾಧಾನ ಹೊರಹಾಕಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಅಮೀರ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ಅಮೀರ್ ಕೂಲಿ ಚಿತ್ರ ಹಾಗೂ ತಮ್ಮ ಪಾತ್ರ ನಿರ್ವಹಣೆಯನ್ನು ಟೀಕಿಸಿದ್ದಾರೆ ಎಂಬ ಊಹಾಪೋಹಗಳು ಆನ್‌ಲೈನ್‌ನಲ್ಲಿ ಹರದಾಡಿತ್ತು.
ಕೂಲಿ ಬಿಡುಗಡೆಗೂ ಮುನ್ನ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಒಂದು ಅತಿಥಿ ಪಾತ್ರವನ್ನು ಅಮೀರ್ ಖಾನ್. ಆದರೆ ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು "ತಪ್ಪು" ಎಂದು ಅಮೀರ್ ಸ್ವತಃ ಒಪ್ಪಿಕೊಂಡಿದ್ದಾರೆ. ಅಲ್ಲದೆ ತಮ್ಮ ಪಾತ್ರವನ್ನು ಕೆಟ್ಟದಾಗಿ ಬರೆಯಲಾಗಿದೆ ಎಂದು ಹೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

'ರಜನಿ ಅವರಿಗಾಗಿ ನಾನು ಅತಿಥಿ ಪಾತ್ರವನ್ನು ಒಪ್ಪಿಕೊಂಡೆ. ನಿಜ ಹೇಳಬೇಕೆಂದರೆ, ನನ್ನ ಪಾತ್ರ ಏನು ಮಾಡಬೇಕೆಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ನಾನು ಒಳಗೆ ಹೋಗಿ ಒಂದು ಅಥವಾ ಎರಡು ಸಾಲುಗಳನ್ನು ಹೇಳಿ ಕಣ್ಮರೆಯಾದಂತೆ ಭಾಸವಾಯಿತು. ಅದರ ಹಿಂದೆ ನಿಜವಾದ ಉದ್ದೇಶವಿರಲಿಲ್ಲ, ಯಾವುದೇ ಆಲೋಚನೆ ಇರಲಿಲ್ಲ. ಅದನ್ನು ಕೆಟ್ಟದಾಗಿ ಬರೆಯಲಾಗಿತ್ತು' ಎಂದು ಅಮೀರ್ ಖಾನ್ ಹೇಳಿದ್ದಾರೆ ಎನ್ನಲಾಗಿದೆ.
'ನಾನು ಕ್ರಿಯೇಟಿವ್ ಆಗಿ ತೊಡಗಿಸಿಕೊಂಡಿರಲಿಲ್ಲ. ಆದ್ದರಿಂದ ಅಂತಿಮ ದೃಶ್ಯಗಳು ಹೇಗೆ ಬರುತ್ತೆ ಅನ್ನೋದು ತಿಳಿದಿರಲಿಲ್ಲ. ಇದು ಕಾಮಿಡಿ ಪ್ರದರ್ಶನವಾಗಿರುತ್ತದೆ ಎಂದು ನಾನು ಭಾವಿಸಿದೆ. ಆದರೆ ಸ್ಪಷ್ಟವಾಗಿ ಅದು ಯಶಸ್ವಿಯಾಗಲಿಲ್ಲ. ಜನರು ಏಕೆ ನಿರಾಶೆಗೊಂಡರು ಎಂದು ನನಗೆ ಆ ಮೇಲೆ ಅರ್ಥವಾಯಿತು. ಆ ದೃಶ್ಯವು ಕೆಲಸ ಮಾಡಲಿಲ್ಲ. ಈ ತಪ್ಪಿನಿಂದ ಪಾಠ ಕಲಿತಿದ್ದೇನೆ, ಭವಿಷ್ಯದಲ್ಲಿ ನಾನು ತುಂಬಾ ಜಾಗರೂಕರಾಗಿರುತ್ತೇನೆ' ಎಂದಿದ್ದಾರಂತೆ.
'ನೆಗೆಟಿವ್ ಕಾಮೆಂಟ್ ಮಾಡಿಲ್ಲ'
ಕೂಲಿ ಚಿತ್ರದಲ್ಲಿನ ತಮ್ಮ ಅತಿಥಿ ಪಾತ್ರಕ್ಕೆ ಅಮೀರ್ ಖಾನ್ ಬೇಸರ ಹಂಚಿಕೊಂಡಿದ್ದಾರೆ ಎಂಬ ವದಂತಿಗಳಿಗೆ ಅವರ ತಂಡವು ಸ್ಪಷ್ಟೀಕರಣ ನೀಡಿದೆ. 'ಖಾನ್ ಅವರು ಚಿತ್ರದ ಬಗ್ಗೆ ಯಾವುದೇ ನೆಗೆಟಿವ್ ಕಾಮೆಂಟ್ ಮಾಡಿಲ್ಲ ಎಂದು ನಿರಾಕರಿಸಿದೆ. ರಜನಿಕಾಂತ್, ಲೋಕೇಶ್ ಮತ್ತು ಇಡೀ ಕೂಲಿ ತಂಡದ ಬಗ್ಗೆ ಅಮೀರ್ ಅವರಿಗೆ ಅಪಾರ ಗೌರವವಿದೆ' ಎಂದು ಹೇಳಿದೆ.
'ಅಮೀರ್ ಖಾನ್ ಅವರು ಕೂಲಿ ಚಿತ್ರದ ಬಗ್ಗೆ ಯಾವುದೇ ಸಂದರ್ಶನ ನೀಡಿಲ್ಲ. ಯಾವುದೇ ನೆಗೆಟಿವ್ ಕಾಮೆಂಟ್‌ಗಳನ್ನು ಮಾಡಿಲ್ಲ. ರಜನಿಕಾಂತ್, ಲೋಕೇಶ್ ಮತ್ತು ವಾಸ್ತವವಾಗಿ ಕೂಲಿ ಚಿತ್ರದ ಸಂಪೂರ್ಣ ತಂಡದ ಬಗ್ಗೆ ಅಮೀರ್ ಖಾನ್ ಅವರಿಗೆ ಹೆಚ್ಚು ಗೌರವವಿದೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿಗೂ ಹೆಚ್ಚು ಗಳಿಸಿದ್ದು, ಇದೇ ನಿಜ ಏನೆಂದು ಹೇಳುತ್ತದೆ' ಎಂದು ಅಮೀರ್ ಖಾನ್ ಅವರ ತಂಡ ಸ್ಪಷ್ಟನೆ ನೀಡಿದೆ. ಸೋಷಿಯಲ್ ಮೀಡಿಯಾದಲ್ಲಿ ಅಮೀರ್ ಖಾನ್ ಮಾತನಾಡಿರುವ ವಿಡಿಯೋಗಳು ಕೂಡ ವೈರಲ್ ಆಗಿವೆ.












Click it and Unblock the Notifications