ಆರ್‌ಆರ್‌ಆರ್ ಹೀರೋ ಜೊತೆಗೆ ಮ್ಯೂಸಿಕ್ ಮಾಂತ್ರಿಕನ ಹೊಸ ಸಿನಿಮಾ ಫಿಕ್ಸ್
ದಕ್ಷಿಣ ಭಾರತದ ಸಿನಿಮಾಗಳ ಖದರ್ ನೆಕ್ಸ್ಟ್ ಲೆವೆಲ್. ಇದೇ ಕಾರಣಕ್ಕೆ ಬಾಲಿವುಡ್ ಸಿನಿಮಾ ರಂಗವನ್ನು ಮೀರಿಸಿ, ಇದೀಗ ದಕ್ಷಿಣ ಭಾರತದ ಸಿನಿಮಾ ರಂಗ ಬೆಳೆದು ನಿಲ್ಲುತ್ತಿದೆ. ಇದೇ ಸಮಯದಲ್ಲಿ ಹೊಸ ಹೊಸ ದೊಡ್ಡ ಸಿನಿಮಾಗಳು ಅನೌನ್ಸ್ ಆಗುತ್ತಿವೆ. ಇದೇ ರೀತಿಯಾಗಿ ನಟ ರಾಮ್‌ಚರಣ್ ಅವರ ಮುಂದಿನ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಸಿದ್ಧತೆ ಸಾಗಿರುವಾಗ ಸಿಹಿಸುದ್ದಿ ಹೊರಬಿದ್ದಿದೆ.
ಅಂದಹಾಗೆ ಎ.ಆರ್. ರೆಹಮಾನ್ ಹೆಸರು ಕೇಳದವರೇ ಇಲ್ಲ ಅನ್ನಬಹುದು. ಭಾರತದಲ್ಲಿ ಈ ಮ್ಯೂಸಿಕ್ ಮಾಂತ್ರಿಕನಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅದೇ ರೀತಿ ವಿದೇಶದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಇದ್ದಾರೆ ಎ.ಆರ್. ರೆಹಮಾನ್ ಅವರಿಗೆ. ಹೀಗಾಗಿ, ವಿದೇಶದ ನೆಲದಲ್ಲಿಯೂ ಈ ಸಂಗೀತ ಮಾಂತ್ರಿಕನ ಮ್ಯೂಸಿಕ್‌ಗೆ ತಲೆದೂಗವರಿಲ್ಲ ಎರಡು ಆಸ್ಕರ್ ಪ್ರಶಸ್ತಿ ಗೆದ್ದ ಖ್ಯಾತಿ ಇವರದ್ದು. ಏಷ್ಯಾದಲ್ಲೇ ಆಸ್ಕರ್ ಗೆದ್ದ ಮೊದಲಿಗೆ ಎನ್ನುವ ಕೀರ್ತಿ ಅವರಿಗೆ ಇದೆ.

ರೆಹಮಾನ್‌ರ ಬಗ್ಗೆ ಬಿಗ್ ನ್ಯೂಸ್!
ಹೀಗೆ 6 ರಾಷ್ಟ್ರ ಪ್ರಶಸ್ತಿ, ಎರಡು ಅಕಾಡೆಮಿ ಮತ್ತು ಎರಡು ಗ್ರ್ಯಾಮಿ ಪ್ರಶಸ್ತಿ, 15 ಫಿಲ್ಮಫೇರ್ ಅವಾರ್ಡ್ ಸೇರಿದಂತೆ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಯನ್ನ ಪಡೆದಿರುವ ಸಂಗೀತ ಮಾಂತ್ರಿಕನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇದೇ ಸಮಯದಲ್ಲಿ ರೆಹಮಾನ್ ಫ್ಯಾನ್ಸ್‌ಗೆ, ಭರ್ಜರಿ ಸುದ್ದಿ ಸಿಕ್ಕಿದೆ. ಹಾಗಾದರೆ ಏನದು ಭರ್ಜರಿ ಸುದ್ದಿ? ಅಭಿಮಾನಿಗಳು ಈ ಸುದ್ದಿಯನ್ನ ಕೇಳಿ ಏನ್ ಹೇಳಿದ್ರು? ಮುಂದೆ ಓದಿ.
ಮ್ಯೂಸಿಕ್ ಮಾಂತ್ರಿಕನಿಗೆ ಸ್ವಾಗತ!
ರೆಹಮಾನ್‌ರ ಜನ್ಮ ದಿನಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಜೊತೆಗೆ ಹೊಸ ಪ್ರಾಜೆಕ್ಟ್ ಅನೌನ್ಸ್ ಆಗಿವೆ. ಅದರಂತೆ ಮ್ಯೂಸಿಕ್ ಮಾಂತ್ರಿಕ ರೆಹಮಾನ್ ಅವರು ಈಗ ರಾಮ್ ಚರಣ್ ಅವರ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವುದು ಅಧಿಕೃತವಾಗಿ ಕನ್ಫರ್ಮ್ ಆಗಿದೆ. ಎ.ಆರ್. ರೆಹಮಾನ್ ಜನ್ಮದಿನಕ್ಕೆ ಶುಭ ಕೋರಿ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರ ತಂಡ ಅವರನ್ನು ತಮ್ಮ ತಂಡಕ್ಕೆ ಸ್ವಾಗತ ಮಾಡಿಕೊಂಡಿದೆ.
ರಾಮ್‌ಚರಣ್ ಅಬ್ಬರ ಬಲು ಜೋರು
ಆರ್‌ಆರ್‌ಆರ್ ಸಿನಿಮಾ ಮೂಲಕ, ಗ್ಲೋಬಲ್ ಸ್ಟಾರ್ ಪಟ್ಟಕ್ಕೆ ಏರಿರುವ ರಾಮ್ ಚರಣ್ ಗೇಮ್ ಚೇಂಜರ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಬಳಿಕ ಉಪ್ಪೇನಾ ಡೈರೆಕ್ಟರ್ ಬುಚ್ಚಿ ಬಾಬು ಸಾನಾ ಜೊತೆ ಕೈ ಜೋಡಿಸಿದ್ದಾರೆ. ಮೊದಲ ಸಿನಿಮಾದಲ್ಲೇ ರಾಷ್ಟ್ರಪ್ರಶಸ್ತಿ ಪಡೆದಿರುವ ಬುಚ್ಚಿ ಮತ್ತು ಚೆರ್ರಿ ಪ್ರಾಜೆಕ್ಟ್ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಕ್ರೇಜಿ ಕಾಂಬೋದ ಹೊಸ ಪ್ರಾಜೆಕ್ಟ್‌ಗಾಗಿ ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಬುಚ್ಚಿ ಬಾಬು ಕಥೆ ಬರೆದು ಆಕ್ಷನ್ ಕಟ್ ಹೇಳಲಿರುವ ಸಿನಿಮಾವನ್ನ ವೃದ್ಧಿ ಸಿನಿಮಾಸ್ ಹಾಗೂ ಸುಕುಮಾರ್ ರೈಟಿಂಗ್ಸ್ ಬ್ಯಾನರ್ ಅಡಿ, ವೆಂಕಟ ಸತೀಶ್ ಕಿಲಾರು ನಿರ್ಮಾಣ ಮಾಡುತ್ತಿದ್ದಾರೆ. RRR ಸಿನಿಮಾ ನಿರ್ಮಿಸಿದ್ದ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರವನ್ನು ಬೆಳ್ಳಿತೆರೆಗೆ ತರಲಿದೆ. ದೊಡ್ಡ ಮಟ್ಟದಲ್ಲಿ ನಿರ್ಮಾಣ ಆಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಸದ್ಯ ಸಂಗೀತ ನಿರ್ದೇಶಕರ ಪರಿಚಯಿಸಿರುವ ಚಿತ್ರ ತಂಡ ಮುಂದಿನ ದಿನಗಳಲ್ಲಿ ಉಳಿದ ತಾರಾ ಬಳಗ & ತಾಂತ್ರಿಕ ವರ್ಗವನ್ನು ಕೂಡ ಪರಿಚಯಸಲಿದೆ ಎನ್ನಲಾಗಿದೆ.












Click it and Unblock the Notifications