ಕರ್ಕ ರಾಶಿ ವರ್ಷಭವಿಷ್ಯ 2016 ಮತ್ತು ಪರಿಹಾರೋಪಾಯ
ಕಳೆದ ಮೂರು ವರ್ಷಗಳಿಂದ ಅರ್ಧಾಷ್ಟಮ ಶನಿಕಾಟದಲ್ಲಿದ್ದ ಕರ್ಕ ರಾಶಿಯವರು ಈ ವರ್ಷ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದ್ದಾರೆ ಎನ್ನಬಹುದು. ಏಕೆಂದರೆ ಈಗ ಪಂಚಮ ಶನಿಕಾಟ ಶುರುವಾಗಿದೆ. ಮುಂದಿನ ವರ್ಷದ ಕೊನೆಯ ತಿಂಗಳವರೆಗೂ ಈ ಕಾಟ ಇದ್ದಿದ್ದೆ. ಅರ್ಧಾಷ್ಟಮ ಶನಿಕಾಟದ ಸಮಯದಲ್ಲಿ ಸೂಕ್ತ ಪರಿಹಾರೋಪಾಯಗಳನ್ನು ಮಾಡಿಕೊಂಡಿದ್ದರೆ ಈ ವರ್ಷ ಅಷ್ಟೇನೂ ಬಾಧೆಯಾಗುವುದಿಲ್ಲ. ಆದರೂ ಸ್ವಲ್ಪ ಎಚ್ಚರಿಕೆಯ ಜೀವನ ನಡೆಸಿಕೊಂಡು ಹೋಗುವುದು ಒಳ್ಳೆಯದು ಕರ್ಕ ರಾಶಿಯವರು.
ಈ ವರ್ಷ ಆಗಸ್ಟ್ ವರೆಗೂ ಸ್ವಲ್ಪ ಗೊಂದಲಗಳಿರುವುದರಿಂದ ಹುಷಾರಾಗಿರುವುದು ಒಳ್ಳೆಯದು. ಆ ನಂತರ ಗುರುಬಲ ಬಂದು ಸ್ವಲ್ಪ ಸಮಾಧಾನ ಲಭಿಸುತ್ತದೆ. ದೇಹಾರೋಗ್ಯದಲ್ಲಿ ತೊಂದರೆಗಳ ಉಲ್ಬಣ ಹೆಚ್ಚಳವಾಗುವುದು ಹೀಗಾಗಿ. ಆರೋಗ್ಯಕ್ಕಾಗಿ ಸೂಕ್ತವಾದ ಮುಂಜಾಗ್ರತೆ ತೆಗೆದುಕೊಳ್ಳುತ್ತಲೇ ಇರಬೇಕು.
ಅವರಿವರ ಬಳಿ ಹೆಚ್ಚಿನ ತೊಂದರೆಗಳನ್ನು ಹೇಳಿಕೊಂಡು ತಿರುಗಾಡಬಾರದು. ಹಾಗೆ ಮಾಡಿದರೆ ನಿಮ್ಮ ಒಂದು ತೊಂದರೆ ಊರಿಗೆಲ್ಲಾ ಗೊತ್ತಾಗಿ ನೂರೆಂಟು ತೊಂದರೆಗಳು ಉದ್ಭವಿಸಲಾರಂಭಿಸುತ್ತವೆ. [ನಾಗಗಳಂತೆ ವ್ಯಕ್ತಿತ್ವವಿರುವ ಆಶ್ಲೇಷಾ ನಕ್ಷತ್ರದವರು]

ಏನು ಮಾಡಿದರೆ ಶುಭಫಲ : ರವಿವಾರ, ಸೋಮವಾರ, ಮಂಗಳವಾರ, ಗುರುವಾರಗಳಂದು ಮುಖ್ಯವಾದ ಕೆಲಸಗಳನ್ನು ಇಟ್ಟುಕೊಳ್ಳಿ. ಗೌರಿ ದೇವಸ್ಥಾನಕ್ಕೆ ಸಾಧ್ಯವಾದಷ್ಟು ಹೋಗಿ. ಉತ್ತರ ಅಥವಾ ಪೂರ್ವ ದಿಕ್ಕಿಗೆ ಹೆಚ್ಚಿನ ಮಹತ್ವ ಕೊಟ್ಟರೆ ಶುಭಫಲ. ಜೀವನವಿಡೀ ಬಿಳಿ, ಹಸಿರು, ಕೇಸರಿ ಮತ್ತು ತಿಳಿ ನೀಲಿ ಬಣ್ಣದ ವಸ್ತುಗಳನ್ನು ಮತ್ತು ಬಟ್ಟೆಗಳನ್ನು ಉಪಯೋಗಿಸಿ. ಸಿಂಹ, ಕನ್ಯಾ, ಮಿಥುನ ಮತ್ತು ಮೀನ ರಾಶಿಯವರು ನಿಮ್ಮ ಒಳಿತನ್ನು ಬಯಸುವುದರಿಂದ ಅವರೊಂದಿಗೆ ಉತ್ತಮ ಬಾಂಧವ್ಯ ಉಳಿಸಿ ಬೆಳೆಸಿಕೊಳ್ಳುವುದು ಸೂಕ್ತ. 2, 1, 5, 6 ಸಂಖ್ಯೆಗಳನ್ನು ನಿಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಿ.
ಶಂಭೋಲಿಂಗನ ನಿತ್ಯ ಆರಾಧನೆ ಸಾಕಷ್ಟು ಬಲ ನೀಡುತ್ತದೆ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕು. ಗೊತ್ತಿರಲಿ ಶನಿದೇವನು ಹೆದರುವುದು ಕೇವಲ ಶಂಭೋಲಿಂಗನಿಗೆ ಮಾತ್ರ ಎಂಬುದು. ಅಮವಾಸ್ಯೆ ಅಥವಾ ಹುಣ್ಣಿಮೆಗಳಂದು ದುರ್ಗಮ್ಮನ ದೇವಾಲಯದಲ್ಲಿ ದರ್ಶನ ಪಡೆದುಕೊಳ್ಳಿ. ಅನ್ನದಾಸೋಹ ನಡೆಯುವ ಸ್ಥಳಗಳಲ್ಲಿ ಅಥವಾ ಬಡವರಿಗೆ, ಅನಾಥರಿಗೆ ಅಕ್ಕಿಯನ್ನು ಕೈಲಾದಷ್ಟು ದಾನ ಕೊಡಿ.
ಮಕರ ಮತ್ತು ಕುಂಭ ರಾಶಿಯವರೊಂದಿಗೆ ಹೆಚ್ಚಿನ ವಾಗ್ವಾದ ಮಾಡುವುದು ಬೇಡ. ಇದರಿಂದ ನಿಮಗೇನೇ ನಷ್ಟ. ಅಷ್ಟೊಂದು ವೈರತ್ವ ಅವರಿಗೆ ನಿಮ್ಮೊಂದಿಗೆ. ಬೇಕಿದ್ದರೆ ಪರೀಕ್ಷೆ ಮಾಡಿಕೊಳ್ಳಿ ನಿಮ್ಮ ಸುತ್ತಮುತ್ತಲಿರುವ ಆ ರಾಶಿಗಳವರೊಂದಿಗೆ ನೀವು ಹೇಗಿದ್ದೀರಿ ಎಂದು.
ಅತೀ ಸಂಶಯ, ಸ್ವತಃ ನಿರ್ಣಯ ತೆಗೆದುಕೊಳ್ಳುವುದು ಮತ್ತು ಅತೀ ಹೆಚ್ಚಿನ ದುರಾಸೆಗಳನ್ನು ಈ ಮೂರು ವರ್ಷ ಬಿಟ್ಟು ಬಿಡಬೇಕು. ಎಂದಿನಂತೆ ನಿಮ್ಮಲ್ಲಿರುವ ಚತುರತೆ ಮತ್ತು ಸಂಪೂರ್ಣ ತಿಳಿದುಕೊಳ್ಳಬೇಕೆನ್ನುವ ಗುಣ ಹೆಚ್ಚಿಸಿಕೊಳ್ಳಿ. ಎಲ್ಲರೊಂದಿಗೆ ಸ್ನೇಹದೊಂದಿಗೆ ಇರುವುದನ್ನು ಮುಂದುವರೆಸಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಯೋಗಾಸನ ಅಥವಾ ವ್ಯಾಯಾಮ ಮಾಡುತ್ತಿರಿ ನಿಯಮಿತವಾಗಿ.
ಒಟ್ಟಿನಲ್ಲಿ ಈ ವರ್ಷ ಆಗಸ್ಟ್ ವರೆಗೂ ತಣ್ಣಗೆ ಇದ್ದು ಸಮಾಧಾನ ಶಾಂತಿ ಹೆಚ್ಚಿಸಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಬರುವ ಸಂತೋಷಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ.
ಪರಿಹಾರೋಪಾಯಗಳು : ಓಂ ವ್ಹೀಂ ಕ್ಲೀಂ ಶ್ರೀಂ ಮಂತ್ರ, ಓಂ ಶ್ರಾಂ ಶ್ರೀಂ ಶ್ರೌಂ ಸಃ ಚಂದ್ರಾಯ ನಮಃ ಬೀಜಮಂತ್ರ ಮತ್ತು ತಾಂತ್ರಿಕ ಮಂತ್ರವಾದ ಓಂ ಸೋಮಾಯ ನಮಃ ವನ್ನು ನಿರಂತರವಾಗಿ ಪಠಿಸುತ್ತಿರಿ ಸಮಯ ಸಿಕ್ಕಾಗ. ಹನುಮನಿಗೆ ಅನುಕೂಲವಿದ್ದಾಗ ಎಳ್ಳೆಣ್ಣೆ ಅಭಿಷೇಕ ಮಾಡಿಸಬಹುದು. ಅಥವಾ ಶಿವಪಂಚಾಕ್ಷರಿ ಮಂತ್ರ ನಿತ್ಯ ಪಠಿಸಿ. ಈ ಮಂತ್ರ ಗೊತ್ತಿದ್ದರೆ ಹೇಳಿಕೊಳ್ಳಿ. ಗೊತ್ತಿಲ್ಲದಿದ್ದರೆ ನಮಗೆ ಕರೆ ಮಾಡಿ ನಾವು ಹೇಳುತ್ತೇನೆ. ಶಿವಪಂಚಾಕ್ಷರಿ ಮಂತ್ರವನ್ನು ಗುರುವಿನಿಂದಲೇ ಕೇಳಿಕೊಳ್ಳಬೇಕು. ಎಲ್ಲಿಯೂ ಅದನ್ನು ಉಲ್ಲೇಖಿಸಿರಲ್ಲ ಅರ್ಥ ಮಾಡಿಕೊಳ್ಳಿ.
ಅದೃಷ್ಟ ಮಂತ್ರವೆಂದು ಓಂ ಶ್ರಾಂ ಹ್ರಾಂ ಗ್ರಾಂ ಪ್ರಾಂ ಸಃ ರವಿಚಂದ್ರ ಗುರು ಶೌರಿ ಗ್ರಹಾಯ ನಮಃ ವನ್ನು ಪಠಿಸಲು ರೂಢಿ ಮಾಡಿಕೊಳ್ಳಿ. ಇದರೊಂದಿಗೆ ಶುಕ್ರ ಗಾಯತ್ರೀ ಮಂತ್ರ ಓಂ ಕ್ಷೀರಪುತ್ರಾಯ ವಿದ್ಮಹೇ ಅಮೃತ ತತ್ವಾಯ ಧೀಮಹೀ ತನ್ನೋ ಚಂದ್ರೇಃ ಪ್ರಚೋದಯಾತ್ ಹೇಳಿಕೊಳ್ಳಿ ಸಮಾಧಾನ ಬೇಕಾದಲ್ಲಿ.
ಅಲ್ರೀ, ಮಂತ್ರಕ್ಕೇನು ಮಾವಿನಕಾಯಿ ಉದರತಾವೇನ್ರೀ ಎಂದರೆ, ಅದಕ್ಕೆ ಸಾಮೇರು ಮೊದ್ಲು ಮಂತ್ರ ಹೇಳ್ಯಾಕ್ ಕಲ್ಕೋ ಮುಶ್ಯಾ ಆಮೇಲೆ ಆ ಕಾಯಿ ಈ ಕಾಯಿ ಅನ್ನು ಎನ್ನುತ್ತಾರೆ.
ಮುಂದಿನ ಲೇಖನದಲ್ಲಿ : ಸಿಂಹ ರಾಶಿ ವರ್ಷಫಲ ಮತ್ತು ಪರಿಹಾರೋಪಾಯಗಳು.












Click it and Unblock the Notifications