Yearly Prediction 2025: ಮುಂಬರುವ ವರ್ಷ ಮಿಥುನ ರಾಶಿಯವರಿಗೆ ಹೇಗಿದೆ? ವಿದ್ಯಾಶಂಕರಾನಂದ ಗುರೂಜಿ ನುಡಿದ ಭವಿಷ್ಯವಾಣಿ
ವಾರ್ಷಿಕ ಜಾತಕ 2025ರಲ್ಲಿ ಅನೇಕ ಪ್ರಮುಖ ಗ್ರಹಗಳು ಮತ್ತು ನಕ್ಷತ್ರಪುಂಜಗಳು ರಾಶಿಗಳಲ್ಲಿ ಬದಲಾವಣೆಯಾಗಲಿವೆ. ಮುಂಬರುವ ವರ್ಷದಲ್ಲಿ ಗಜಕೇಸರಿ ಯೋಗ, ಮಾಳವ್ಯ ಯೋಗ, ಗುರುಪುಷ್ಯ ಯೋಗ, ಶಿವ ಯೋಗ, ಶಶ ಯೋಗ ಹೀಗೆ ಅನೇಕ ಯೋಗಗಳು ರೂಪಗೊಳ್ಳುತ್ತಿದ್ದು, ದ್ವಾದಶಿ ರಾಶಿಯವರಿಗೆ ಶುಭ ಹಾಗೂ ಅಶುಭ ಫಲವನ್ನು ನೀಡಲಿವೆ. ಅಂದಹಾಗೆ ಜಾತಕದಲ್ಲಿ ಗುರು ಮತ್ತು ಶನಿ ಗ್ರಹದ ಸ್ಥಾನ ಉತ್ತಮವಾಗಿದ್ದರೆ 2025ನೇ ವರ್ಷ ಅದ್ಭುತವಾಗಿರುತ್ತದೆ. ಒಂದು ವೇಳೆ ಶನಿ ಹಾಗೂ ಗುರುವಿನ ಸ್ಥಾನ ದುರ್ಬಲವಾಗಿದ್ದರೆನೀವು ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾದರೆ ಮಿಥುನ ರಾಶಿಯವರಿಗೆ 2025ನೇ ವರ್ಷ ಹೇಗಿರಲಿದೆ ಎಂದು ತಿಳಿಯೋಣ.
ಮಿಥುನ ರಾಶಿಯವರ 2025ನೇ ವರ್ಷದ ಭವಿಷ್ಯ ತಿಳಿಯಲು ಗುರು ಮತ್ತು ಶನಿ ಸಂಚಾರದ ಪ್ರಭಾವಗಳನ್ನು ಮುಖ್ಯವಾಗಿ ಗಮನಿಸಬೇಕಾಗುತ್ತದೆ. ಮೇ ತಿಂಗಳಿನಲ್ಲಿ ಮಿಥುನ ರಾಶಿಯ ಮನೆಯಿಂದ ಕೇತು ಸಂಚಾರ ಶುಭ ರೀತಿಯಲ್ಲಿ ಆಗುತ್ತದೆ. ಭಾಗ್ಯ ಸ್ಥಾನದಲ್ಲಿ ರಾಹು ಇದೆ. ಹಾಗೇ ಕರ್ಮ ಸ್ಥಾನದಲ್ಲಿ ಶನಿ ಇದ್ದು, ಜನ್ಮದಲ್ಲಿ ಗುರು ಇದೆ.
ಅಂದರೆ ಕೇತುವಿನ ಪ್ರಭಾವ ಒಂದಿಷ್ಟು ಶುಭ ರೀತಿಯಲ್ಲಿ ಇರುತ್ತೆ ಎನ್ನುವುದನ್ನು ಬಿಟ್ಟರೆ ಹೇಳಿಕೊಳ್ಳುವ ಮಟ್ಟಿಗೆ ಮುಂಬರುವ ವರ್ಷದಲ್ಲಿ ಶನಿಯಿಂದಾಗಲಿ ಗುರುವಿನಿಂದಾಗಲಿ ಮಿಥುನ ರಾಶಿಯವರಿಗೆ ಸಹಕಾರ ಸಿಗುವುದಿಲ್ಲ. ಹಾಗಂತ ಭಯ ಪಡುವ ಅವಶ್ಯಕತೆ ಇಲ್ಲ. ಕೊನೆಯಲ್ಲಿ ಕೆಲ ಪರಿಹಾರಗಳನ್ನ ನೀಡಲಾಗಿದೆ. ಅವುಗಳನ್ನು ಅನುಸರಿಸುವುದರಿಂದ ಸಮಸ್ಯೆಗಳು ಕಡಿಮೆಯಾಗುತ್ತವೆ. ಹಾಗಾದರೆ ಮಿಥುನ ರಾಶಿಯವರ ಜಾತಕದಲ್ಲಿ ಗುರು ಹಾಗೂ ಶನಿಯ ಸ್ಥಾನ ಯಾವ ಫಲ ನೀಡಲಿದೆ.

ಮಿಥುನ ರಾಶಿಯಲ್ಲಿ ಶನಿ ಹಾಗೂ ಗುರುವಿನ ಸ್ಥಾನ
ಗುರು ಮಿಥುನ ರಾಶಿಯಯಲ್ಲಿ ಸಂಚಾರ ಮಾಡುವುದರಿಂದ ಬಹಳಷ್ಟು ದು:ಖ, ಕಾಯಿಲೆ, ವೇದನೆಗಳನ್ನು ಕೊಡುತ್ತಾನೆ. ಗುರು ನಿಮ್ಮ ಜನ್ಮ ರಾಶಿಯಲ್ಲಿ ಸಂಚಾರ ಮಾಡಿದರೆ ಅದು ಅಶುಭ ಫಲಗಳನ್ನು ನೀಡುತ್ತದೆ. ಗುರು ತಾನಿರುವ ರಾಶಿಗೆ ಕೆಡಕು ಮಾಡಿ, ತನ್ನ ದೃಷ್ಟಿ ಬೀಳುವ ರಾಶಿಗಳಿಗೆ ಒಳಿತನ್ನು ಮಾಡುತ್ತಾನೆ.
ಆದರೆ ಶನಿ ಹಾಗಲ್ಲ. ಶನಿ ಜನ್ಮ ರಾಶಿಯಲ್ಲಿ ಸಂಚಾರ ಮಾಡುವ ಸಂದರ್ಭದಲ್ಲಿ ಶುಭ ಫಲಗಳನ್ನು ನೀಡುತ್ತಾನೆ. ಶನಿ ತಾನಿರುವ ರಾಶಿಗೆ ಒಳಿತು ಮಾಡಿ ತನ್ನ ದೃಷ್ಟಿ ಇರುವ ರಾಶಿಗಳಿಗೆ ಕೆಡಕು ಮಾಡುತ್ತಾನೆ. ಹಾಗಾದರೆ 2025ರಲ್ಲಿ ಮಿಥುನ ರಾಶಿಯವರ ವೃತ್ತಿ ಜೀವನ ಹೇಗಿರುತ್ತದೆ ಎಂದು ತಿಳಿಯೋಣ.

ಮಿಥುನ ರಾಶಿ ವರ್ಷ ಭವಿಷ್ಯ 2025: ವೃತ್ತಿ ಜೀವನ
ಮಿಥುನ ರಾಶಿಯವರಿಗೆ ಮುಂದಿನ ವರ್ಷ ವೃತ್ತಿ ಜೀವನ ಸ್ವಲ್ಪ ತೊಂದರೆಯಲ್ಲಿ ಸಿಲುಕುವ ಸಾಧ್ಯತೆ ಇದೆ. ಯಾಕೆಂದರೆ ಮಿಥುನ ರಾಶಿಯವರಿಗೆ ಗುರು ಹಾಗೂ ಶನಿ ಈ ಎರಡೂ ಗ್ರಹಗಳ ಬಲವಿಲ್ಲ. ಹೀಗಾಗಿ ನಿಮ್ಮ ವೃತ್ತಿ ಜೀವನ ಯಥಾವತ್ತಾಗಿ ಇರುತ್ತದೆ. ಒಂದೇ ರೀತಿಯಲ್ಲಿ ಸಾಗುತ್ತಿರುತ್ತದೆ.
ಏಳಿಗೆ ಕಾಣಲು ಕಷ್ಟ ಪಡಬೇಕಾಗುತ್ತದೆ. ಎಷ್ಟೇ ಕಷ್ಟಪಟ್ಟರೂ ಬೆಳವಣಿಗೆ ಕಾಣುವುದಿಲ್ಲ. ನಿಮ್ಮ ಶ್ರಮವನ್ನು ಯಾರೂ ಕೂಡ ಗುರುತಿಸುವುದಿಲ್ಲ. ನಿಮ್ಮ ದಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳು ಉತ್ಪತ್ತಿಯಾಗುತ್ತವೆ. ನೀವು ಏನೇ ಮಾಡಿದರೂ ಮಾಡಿಲ್ಲ ಅಂತನೇ ಹೆಸರು ಪಡೆದುಕೊಳ್ಳುವಿರಿ. ಹಾಗಾದರೆ 2025ರಲ್ಲಿ ಮಿಥುನ ರಾಶಿಯವರ ಆರ್ಥಿಕ ಜೀವನ ಹೇಗಿರುತ್ತದೆ ಎಂದು ತಿಳಿಯೋಣ.

ಮಿಥುನ ರಾಶಿ ವರ್ಷ ಭವಿಷ್ಯ 2025: ಆರ್ಥಿಕ ಜೀವನ
ಮಿಥುನ ರಾಶಿಯವರ ಆರ್ಥಿಕ ಜೀವನ 2025ರಲ್ಲಿ ಉತ್ತಮವಾಗಿರುವುದಿಲ್ಲ. ಎಷ್ಟು ಲಾಭವನ್ನು ಗಳಿಸುವಿರೋ ಅದಕ್ಕಿಂತ ಹೆಚ್ಚಿನ ಹಣ ಹೊರಗಡೆ ಹೋಗಲು ಕಾಯುತ್ತದೆ. ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ತುಂಬಾ ಏರಿಳಿತಗಳು ಕಂಡು ಬರಲಿದೆ. ಸಾಲ ಜಾಸ್ತಿ ಆಗುತ್ತದೆ. ಮನೆಯಲ್ಲಿ ಹಣಕಾಸಿನ ವಿಚಾರಕ್ಕೆ ಕಿರಿಕಿರಿಗಳು ಉಂಟಾಗುತ್ತವೆ.
ಮುಂದಿನ ವರ್ಷ ಹೂಡಿಕೆ ಮಾಡಬೇಕು ಅಂದುಕೊಂಡಿದ್ದರೆ ಅದನ್ನು ಮುಂದೂಡಿ. ಜೊತೆಗೆ ಹೊಸ ವ್ಯಾಪಾರ ವ್ಯವಹಾರ ಪ್ರಾರಂಭಿಸಲು ಕೂಡ ಮುಂದಿನ ವರ್ಷ ನಿಮಗೆ ಉತ್ತಮವಾಗಿಲ್ಲ. ಹೀಗಾಗಿ ಹೊಸ ಕೆಲಸಗಳು, ಹೂಡಿಕೆ, ಸಾಲ ಮಾಡುವುದನ್ನ ಮುಂದಿನ ವರ್ಷ ತಪ್ಪಿಸುವುದು ಉತ್ತಮ. ಇನ್ನೂ 2025ರಲ್ಲಿ ಮಿಥುನ ರಾಶಿಯವರ ಶೈಕ್ಷಣಿಕ ಜೀವನ ಹೇಗಿರುತ್ತದೆ ಎಂದು ತಿಳಿಯೋಣ.

ಮಿಥುನ ರಾಶಿ ವರ್ಷ ಭವಿಷ್ಯ 2025: ಶೈಕ್ಷಣಿಕ ಜೀವನ
ಮುಂದಿನ ವರ್ಷ ಮಿಥುನ ರಾಶಿಯ ವಿದ್ಯಾರ್ಥಿಗಳು ಕೆಲ ದೋಷಗಳನ್ನು ಅನುಭವಿಸಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಪ್ರೈಮರಿ ಎಜ್ಯುಕೇಶನ್‌ನಲ್ಲಿ ಕೆಲ ತೊಂದರೆಗಳು ಉಂಟಾಗಲಿದೆ. ಮೇ ನಂತರದಲ್ಲಿ ಒಂದಿಷ್ಟು ಸಮಸ್ಯೆಗಳು ವಿದ್ಯಾಭ್ಯಾಸದಲ್ಲಿ ಕಾಡಲು ಶುರುವಾಗುತ್ತವೆ.
ಅದರಲ್ಲೂ ವಿಶೇಷವಾಗಿ ಇಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ, ಮೆಡಿಕಲ್, ಬಿಸಿನೆಸ್ ಮ್ಯಾನೇಜ್‌ಮೆಂಟ್ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ತುಂಬಾನೇ ಕಷ್ಟದ ದಿನಗಳು ಬರಲಿದೆ. ನೀವಂದುಕೊಂಡಷ್ಟು ಸುಲಭವಾಗಿ ವಿಧ್ಯಾಭ್ಯಾಸ ಇರುವುದಿಲ್ಲ. ಹಾಗಾದರೆ 2025ರಲ್ಲಿ ಮಿಥುನ ರಾಶಿಯವರ ಕೌಟುಂಬಿಕ ಜೀವನ ಹೇಗಿರುತ್ತದೆ ಎಂದು ತಿಳಿಯೋಣ.
ಮಿಥುನ ರಾಶಿ ವರ್ಷ ಭವಿಷ್ಯ 2025: ಕೌಟುಂಬಿಕ ಜೀವನ
ಇನ್ನೂ ಮಿಥುನ ರಾಶಿಯವರ ಕೌಟುಂಬಿಕ ಜೀವನ 2025ರಲ್ಲಿ ಉತ್ತಮವಾಗಿ ಇರುವುದಿಲ್ಲ. ಕುಟುಂಬದಲ್ಲಿ ತುಂಬಾ ಅಶಾಂತಿ ಅಸಂತೋಷದ ವಾತಾವರಣವನ್ನು ನೀವು ಅನುಭವಿಸಬೇಕಾಗುತ್ತದೆ. ಮೇ ನಂತರದಲ್ಲಿ ಈ ಸಮಸ್ಯೆಗಳು ಕೊಂಚ ಹೆಚ್ಚಾಗುತ್ತವೆ. ಕೌಟುಂಬಿಕ ಜೀವನದಲ್ಲಿ ತುಂಬಾ ಏರಿಳಿತಗಳನ್ನು ನೀವು ನೋಡುವಿರಿ.
ಸಂಗಾತಿಯೊಂದಿಗೆ ಮಾನಸಿಕ ಅಶಾಂತಿ. ಕುಟುಂಬಸ್ಥರೊಡನೆ ಒಂದಿಷ್ಟು ಮನಸ್ತಾಪಗಳು ಇರುತ್ತವೆ. ವಾಗ್ವಾದಗಳು ಇರುತ್ತವೆ. ಕುಟುಂಬದ ಸಮಸ್ಯೆಗಳನ್ನು ನೀವು ಎಷ್ಟೇ ನಿವಾರಿಸಲು ಪ್ರಯತ್ನಪಟ್ಟರೂ ಅದಕ್ಕೆ ಸರಿಯಾದ ಸಹಕಾರ ದೊರಕದೆ ನೀವು ಹಿಂಸೆ ಪಡುವಿರಿ. ಹೀಗಾಗಿ ತಾಳ್ಮೆಯಿಂದ ವರ್ತಿಸಿ. ಇನ್ನೂ 2025ರಲ್ಲಿ ಮಿಥುನ ರಾಶಿಯವರ ಪ್ರೀತಿ ಹಾಗೂ ವೈವಾಹಿಕ ಜೀವನ ಹೇಗಿರುತ್ತದೆ ಎಂದು ತಿಳಿಯೋಣ.

ಮಿಥುನ ರಾಶಿ ವರ್ಷ ಭವಿಷ್ಯ 2025: ಪ್ರೀತಿ ಮತ್ತು ವೈವಾಹಿಕ ಜೀವನ
ಮಿಥುನ ರಾಶಿಯವರಿಗೆ 2025ರಲ್ಲಿ ವೈವಾಹಿಕ ಜೀವನವಾಗಲಿ ಪ್ರೀತಿ ಜೀವನವಾಗಲಿ ಅಷ್ಟೊಂದು ಚೆನ್ನಾಗಿ ಇರುವುದಿಲ್ಲ. ತುಂಬಾ ಇಷ್ಟಪಡುವ ಸಂಗಾತಿಯೇ ನಿಮ್ಮನ್ನು ಅನುಮಾನಿಸುತ್ತಾರೆ. ನಿಮ್ಮ ಕೆಲಸದ ಬಗ್ಗೆ ಹೀಯಾಳಿಸುತ್ತಾರೆ. ದೊಡ್ಡ ಮಟ್ಟದಲ್ಲಿ ನಿಮ್ಮನ್ನು ಕಡೆಗಣಿಸುತ್ತಾರೆ. ಪ್ರೀತಿ ಭಂಗ ಯೋಗ ಶುರುವಾಗಲಿದೆ.
ವೈವಾಹಿಕ ಜೀವನದಲ್ಲಿ ಹಲವಾರು ತೊಂದರೆಗಳು ಎದುರಾಗಲಿದೆ. ಜೊತೆಗೆ ಏಳು ಬೀಳು, ದಾಂಪತ್ಯ ಕಲಹಗಳು, ಮಾನಸಿಕ ಹಿನ್ನಡೆಗಳು ಆಗುತ್ತವೆ. ಹೀಗಾಗಿ ಸ್ವಲ್ಪ ಜಾಗರೂಕರಾಗಿರಿ. ಇನ್ನೂ 2025ರಲ್ಲಿ ಮಿಥುನ ರಾಶಿಯವರ ಆರೋಗ್ಯ ಹೇಗಿರುತ್ತದೆ ಎಂದು ತಿಳಿಯೋಣ.
ಮಿಥುನ ರಾಶಿ ವರ್ಷ ಭವಿಷ್ಯ 2025: ಆರೋಗ್ಯ
ಮಿಥುನ ರಾಶಿಯವರಿಗೆ 2025ರಲ್ಲಿ ಆರೋಗ್ಯ ಅಷ್ಟೊಂದು ಉತ್ತಮವಾಗಿರುವುದಿಲ್ಲ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಬರುತ್ತವೆ. ಸರಿಯಾಗಿ ಜೀರ್ಣಕ್ರಿಯೆ ಆಗದೇ ಇರುವುದು, ಜ್ವರ, ಕೆಮ್ಮು, ಕಫಾ, ನಗಡಿ ಈ ರೀತಿ ಸಣ್ಣಪುಟ್ಟ ಕಾಯಿಲೆಗಳು ಬರುತ್ತವೆ. ಹೀಗಾಗಿ ಯಾವುದೇ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬೇಡಿ.
ಮಿಥುನ ರಾಶಿ ವರ್ಷ ಭವಿಷ್ಯ 2025: ಪರಿಹಾರಗಳು
ಮಿಥುನ ರಾಶಿಯವರಿಗೆ 2025ನೇ ವರ್ಷ ಉತ್ತಮವಾಗಿಲ್ಲ. ಹಾಗಂತ ಕೈಕಟ್ಟಿ ಕುಳಿತುಕೊಳ್ಳುವುದರಿಂದ ಅಥವಾ ಭಯ ಪಡುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ಹೀಗಾಗಿ ಮುಂದಿನ ವರ್ಷ ಕೆಲ ಪರಿಹಾರಗಳನ್ನು ಮಾಡುವುದರಿಂದ ಮಿಥುನ ರಾಶಿಯವರಿಗೆ ಸಮಸ್ಯೆಗಳ ಪ್ರಭಾವ ಕಡಿಮೆಯಾಗುತ್ತದೆ. ಹಾಗಾದರೆ ಆ ಪರಿಹಾರಗಳು ಯಾವುವು ಎಂದು ತಿಳಿಯೋಣ..
ಮೃಗಶಿರ ನಕ್ಷತ್ರದ ಮಿಥುನ ರಾಶಿಯವರು ಮೇ 18 ತಾರೀಖು ಒಳಗಡೆ ತಿರುಚಂದೂರ್ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಬರುವುದು ಉತ್ತಮ. ಆರಿದ್ರಾ ನಕ್ಷತ್ರದ ಮಿಥುನ ರಾಶಿಯವರು ತಂಜಾವೂರಿನ ಬೃಹದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ. ಪುನರ್ವಸು ನಕ್ಷತ್ರದ ಮಿಥುನ ರಾಶಿಯವರು ಗುರು ದತ್ತಾತ್ರೇಯ ದೇವರ ಆರಾಧನೆ ಮಾಡಿ. ಅಲ್ಲದೆ ಈ ಮೂರು ರಾಶಿಯವರು ಔದುಂಬರ ವೃಕ್ಷ ನೆಟ್ಟು ಪೋಷಣೆ ಮಾಡಿ. ಇದರಿಂದ ಪ್ರಕೃತಿಯೊಂದಿಗೆ ನಿಮ್ಮ ಬದುಕು ಕೂಡ ಉತ್ತಮವಾಗುತ್ತದೆ. ಅಲ್ಲದೆ ನಿಮ್ಮ ಮನೆ ಮುಂದೆ ಮನೆ ಮೇಲೆ ಕುಂಡದಲ್ಲಿ ನೀರನ್ನು ಇಡಿ. ಇದರಿಂದ ಅದೆಷ್ಟೋ ಜೀವ ಜಂತುಗಳಿಗೆ ಸಹಾಯ ಮಾಡಿದಂತಾಗುತ್ತದೆ. ಅವುಗಳ ಜೀವನ ಉಳಿಸಿದ ಪುಣ್ಯದ ಫಲ ನಿಮಗೆ ಸಿಗಲಿದೆ. ಇದರಿಂದ ದೇವರೇ ನಿಮ್ಮನ್ನು ಮೆಚ್ಚಿ ಕೊಂಡಾಡುತ್ತಾನೆ. ಶುಭವಾಗಲಿ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications