ಸಿಂಹ ರಾಶಿ ವರ್ಷ ಭವಿಷ್ಯ: ಆರೋಗ್ಯದ ಬಗ್ಗೆ ಇರಲಿ ಎಚ್ಚರ, ಬದುಕಿನಲ್ಲಿ ಏರಿಳಿತ ಸಹಜ -Leo Horoscope 2026
ಸಿಂಹ ರಾಶಿಯವರ ವರ್ಚಸ್ಸು ಆಕರ್ಷಕವಾಗಿರುತ್ತದೆ. ನಾಯಕತ್ವದ ಗುಣ ಹೊಂದಿರುತ್ತಾರೆ. ಈ ರಾಶಿ ಕ್ರಿಯಾಶೀಲತೆಯ ಸಂಕೇತವೆಂದು ಭಾವಿಸಲಾಗುತ್ತದೆ. ನಾವೆಲ್ಲರು ಹೊಸ ವರ್ಷಕ್ಕೆ ಇನ್ನೇನು ಕಾಲಿಡುತ್ತಿದ್ದೇವೆ. 2026 ರಲ್ಲಿ 'ಸಿಂಹ ರಾಶಿ'ಯವರ ಭವಿಷ್ಯ ಹೇಗಿರುತ್ತದೆ? ಯಾವ ವಿಚಾರಗಳಲ್ಲಿ ಹೆಚ್ಚು ಎಚ್ಚರವಹಿಸಬೇಕು? ಈ ಲೇಖನದಲ್ಲಿದೆ ಮಾಹಿತಿ.
ಈ ರಾಶಿಯವರು ಮುಂದಿನ ಒಂದು ವರ್ಷ ಹೆಚ್ಚು ತಾಳ್ಮೆಯಿಂದ ಇರಬೇಕಿದೆ. ಕೆಲ ವಿಚಾರಗಳಲ್ಲಿ ಸಂಕಷ್ಟಗಳು ಎದುರಾಗಬಹುದು. ಸಂಚಾರ, ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಗುರುವಿನ ಬಲ ಇರುವ ಕಾರಣ ಒಂದಷ್ಟು ಸಕಾರಾತ್ಮಕ ಅಂಶಗಳಿವೆ. ಆರೋಗ್ಯದಲ್ಲಿ ಮಾತ್ರ ಏರಿಳಿತಗಳು ಸಂಭವಿಸಬಹುದು.

ಆರೋಗ್ಯದಲ್ಲಿ ಏರಿಳಿತ: ಎಚ್ಚರ ಅಗತ್ಯ
2026ರಲ್ಲಿ ಸಿಂಹ ರಾಶಿಯವರ ಭವಿಷ್ಯದಲ್ಲಿ ಆರೋಗ್ಯ ವಿಚಾರದಲ್ಲಿ ಹೆಚ್ಚು ಅನುಕೂಲಕರವಾಗಿಲ್ಲ. ಜನವರಿಯಿಂದ ಜೂನ್ 2 ರವರೆಗೆ ಗುರುವಿನ ಬಲ ಇರುತ್ತದೆ. ಸಕಾರಾತ್ಮಕ ಪ್ರಭಾವ ಉಂಟಾಗಲಿದ್ದು, ಇದು ಒಳ್ಳೆಯದರ ಸಂಕೇತವಾಗಿದೆ. ನಂತರ ರಾಹು ಮತ್ತು ಕೇತುವಿನ ಪ್ರಭಾವವು ಡಿಸೆಂಬರ್ 5 ರವರೆಗೆ ಮುಂದುವರಿಯುತ್ತದೆ. ಶನಿಯ ಪ್ರಭಾವ ಹೆಚ್ಚಿರುವ ಕಾರಣ ಡಿಸೆಂಬರ್ ವರೆಗಿನ ಅವಧಿಯನ್ನು "ಶನಿ ಧೈಯ"ವೆಂದು ಭಾವಿಸಲಾಗುತ್ತದೆ. ಈ ಕಾರಣ ವರ್ಷವಿಡೀ ನಿಮ್ಮ ಆರೋಗ್ಯದಲ್ಲಿ ಏರಿಳಿತಗಳು ಸಂಭವಿಸುತ್ತವೆ. ಮೆದುಳು, ದೇಹದ ಮೇಲ್ಭಾಗ, ಕೆಳ ಬೆನ್ನು ಅಥವಾ ಸಂತಾನೋತ್ಪತ್ತಿ ಅಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಇದೆ. ಹೀಗಾಗಿ ನೀವು ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕಿದೆ.
ಶನಿಯ ಸ್ಥಾನ ಬದಲಾವಣೆ ಆಗುವ ಹಿನ್ನೆಲೆಯಲ್ಲಿ ಈ ರಾಶಿಯವರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಯಾವುದೇ ಕೆಲಸ ಮಾಡುವಾಗ ತಾಳ್ಮೆ ಕಳೆದುಕೊಳ್ಳಬಾರದು. ಆತುರ ಬೇಡ. ವರ್ಷದಲ್ಲಿ ಆಗಾಗ ಒಂದಷ್ಟು ಕಾಲ ಗುರುವಿನ ಬಲ ಹೆಚ್ಚಾಗುವ ಕಾರಣಕ್ಕೆ ಆರೋಗ್ಯ ಸಮಸ್ಯೆಗಳ ತೀವ್ರತೆ ತಗ್ಗುತ್ತದೆ. ಅದೇ ಸಮಯದಲ್ಲಿ ನೀವು ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ಒಟ್ಟಾರೆ 2026ರಲ್ಲಿ ಸಿಂಹ ರಾಶಿಯವರ ಆರೋಗ್ಯದ ವಿಚಾರದಲ್ಲಿ ಕೊಂಚ ದುರ್ಬಲವಾಗಿದೆ.

ಶಿಕ್ಷಣದಲ್ಲಿ ಉತ್ತಮ ಫಲಿತಾಂಶ
ಶಿಕ್ಷಣದ ವಿಷಯದಲ್ಲಿ 2025ಕ್ಕಿಂತ 2026ರಲ್ಲಿ ಉತ್ತಮ ಸ್ಥಿತಿ ಕಂಡು ಬರಲಿದೆ. ಸ್ಥಿರ ಆರೋಗ್ಯದ ವ್ಯಕ್ತಿಗಳು, ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುತ್ತಾರೆ. ಶಿಕ್ಷಣ ನಿಯಂತ್ರಿಸುವ ಗುರು ಗ್ರಹವು ವರ್ಷದ ಆರಂಭದಿಂದ ಜೂನ್ ವರೆಗೆ ಉತ್ತಮ ಸ್ಥಾನದಲ್ಲಿರುತ್ತದೆ. ಹೀಗಾಗಿ ನಿಮಗೆ ಸಕಾರಾತ್ಮಕ ಅನುಭವ ಆಗಲಿದೆ. ಉನ್ನತ ವ್ಯಾಸಂಗ ಮಾಡುವವರಿಗೆ ಇದು ಪ್ರಶಸ್ತ ಕಾಲ. ಕಾನೂನು ಮತ್ತು ಹಣಕಾಸು ಅಧ್ಯಯನಕ್ಕೆ ಸೂಕ್ತ ಸಮಯ. ಸಂಶೋಧನಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಕಾಣಲಿದ್ದಾರೆ. ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಗುರು ಬಲ ಚೆನ್ನಾಗಿದ್ದು, ಕೆಲವರಿಗೆ ಶೈಕ್ಷಣಿಕ ಯಶಸ್ಸು ಲಭಿಸಲಿದೆ.
ಸಕಾರಾತ್ಮಕ ಹಣಕಾಸು ವ್ಯವಹಾರ
ಸಿಂಹ ರಾಶಿಯವರಿಗೆ 2026ರ ಹೊಸ ವರ್ಷವು ಕೊಂಚ ನೆಮ್ಮದಿ ತರುವ ಜೊತೆಗೆ ದುರ್ಬಲವು ಆಗಿರಲಿದೆ. ಅಧಿಪತಿ ಶುಕ್ರನ ಸ್ಥಾನವು ಅನುಕೂಲಕರವಾಗಿರುತ್ತದೆ. ಇದರಿಂದ ವರ್ಷದ ಮೊದಲ ಭಾಗದಲ್ಲಿ ಆರು ತಿಂಗಳವರೆಗೆ ಗುರು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶ ತರುತ್ತಾನೆ. ಈ ಅವಧಿಯಲ್ಲಿ ನೀವು ವ್ಯವಹಾರ ಸಂಬಂಧ ಮುಖ್ಯ ನಿರ್ಧಾರ ಕೈಗೊಳ್ಳಬಹುದು. ರಾಹು ಮತ್ತು ಕೇತುವಿನ ಪ್ರಭಾವವು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಇದು ವ್ಯವಹಾರದಲ್ಲಿ ಅನಗತ್ಯ ಅಪಾಯಗಳನ್ನು ತೆಗೆದುಕೊಳ್ಳುವ ಪ್ರವೃತ್ತಿಗೆ ಕಾರಣವಾಗಬಹುದು. ಈ ಪ್ರಭಾವವು ಡಿಸೆಂಬರ್ 5 ವರೆಗೆ ಉಂಟಾಗುವ ನಿರೀಕ್ಷೆ ಇದೆ. ಹೊಸ ವರ್ಷದ ಎರಡನೇ ಭಾಗದಲ್ಲಿ ಹಣಕಾಸು ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವಲ್ಲ.
ಹೊಸ ಉದ್ಯಮ ಆರಂಭಿಸುವವರು ಹಣಕಾಸು ವಿಚಾರದಲ್ಲಿ ಜಾಗೃತೆ ವಹಿಸಬೇಕು. ಅನುಭವಿಗಳಿಂದ ಮಾರ್ಗದರ್ಶನ ಪಡೆದು ಹೊಸ ಉದ್ಯಮಕ್ಕೆ ಕೈ ಹಾಕಿದರೆ ಯಶಸ್ಸು ಲಭಿಸುತ್ತದೆ. ವರ್ಷದ ಎರಡನೇ ಭಾಗದಲ್ಲಿ ಅಂದರೆ ಜೂನ್ 2ರಿಂದ ಸಿಂಹ ರಾಶಿ ಮೇಲೆ ರಾಹು, ಕೇತು ಮತ್ತು ಶನಿಯ ಪ್ರಭಾವ ಉಂಟಾಗುತ್ತದೆ. ಆಗ ಗುರುವಿನ ಬಲ ಕ್ಷೀಣಿಸಬಹುದು. ಜೂನ್ ತಿಂಗಳಿನಿಂದ ನೀವು ಕೈಗೊಳ್ಳುವ ನಿರ್ಧಾರಗಳ ಮೇಲೆ ಶನಿ ಪ್ರಭಾವ ಹೆಚ್ಚಿರುತ್ತದೆ, ಯಾವುದೇ ಉದ್ಯಮ ಆರಂಭಿಸುವ ನಿರ್ಧಾರ ಬೇಡವೆಂದು ತಿಳಿಸಲಾಗಿದೆ.
ಸಿಂಹ ರಾಶಿಯವರ ವೈವಾಹಿಕ ಜೀವನ
ಸಿಂಹ ರಾಶಿಯವರಿಗೆ 2026ರ ಆರಂಭದಿಂದ ಜೂನ್ 2ರವರೆಗೆ ಮತ್ತು ಅಕ್ಟೋಬರ್ 31ರ ನಂತರ ವಿವಾಹ ಕಾರ್ಯಗಳಿಗೆ ಶುಭ ಕಾಲ. ಆದರೆ ಜೂನ್‌ನಿಂದ ಅಕ್ಟೋಬರ್ ಅವಧಿಯು ಸವಾಲಿನಿಂದ ಕೂಡಿರುತ್ತದೆ. ರಾಹು ಮತ್ತು ಶನಿ ಪ್ರಭಾದಿಂದ ವೈವಾಹಿಕ ಜೀವನದಲ್ಲಿ ತಪ್ಪು ತಿಳುವಳಿಕೆ ಹಾಗೂ ಅನುಮಾನಗಳು ಕಾಡಬಹುದು. ಆದ್ದರಿಂದ ದಂಪತಿಗಳು ಸಣ್ಣ ವಿಷಯಗಳನ್ನು ದೊಡ್ಡದು ಮಾಡದೆ, ಶಾಂತಿಯುತ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಉತ್ತಮ. ಗುರುವಿನ ಕೃಪೆಯಿಂದ ಮದುವೆ ಮಾತುಕತೆಗಳು ಯಶಸ್ವಿಯಾಗಲಿವೆ. ದಂಪತಿಗಳಿಗೆ ತಾಳ್ಮೆ ಮತ್ತು ಸಹನೆ ಮುಖ್ಯವಾಗಿರುತ್ತದೆ.
ಪ್ರೇಮಿಗಳಿಗೆ ಈ ವರ್ಷ ಪರೀಕ್ಷೆ
ಸಿಂಹ ರಾಶಿಯವರಿಗೆ 2026ರಲ್ಲಿ ಪ್ರೇಮ ಜೀವನ ಉತ್ತಮವಾಗಿರಲಿದೆ. ಆದರೆ ಶನಿ ಗ್ರಹದ ಕೆಟ್ಟ ದೃಷ್ಟಿಯು ನಿಮ್ಮ ಮೇಲಿರಲಿದೆ. ಕೆಲವು ಸಂದರ್ಭಗಳು ಅನಾನುಕೂಲ ಉಂಟು ಮಾಡಬಹುದು. ನಿಜವಾದ ಪ್ರೀತಿ ಉಳ್ಳವರು ದೀರ್ಘಕಾಲ ಸಂಬಂಧ ಉಳಿಸಿಕೊಳ್ಳಲಿದ್ದಾರೆ. ಕೆಲವರಿಗೆ ಅಹಂಕಾರ ಅಥವಾ ಹಟದಿಂದ ಸಂಬಂಧದಲ್ಲಿ ಗೊಂದಲಗಳು ನಿರ್ಮಾಣವಾಗುವ ಸಾಧ್ಯತೆ ಇದೆ. 2026ರ ಆರಂಭದಿಂದ ಜೂನ್ 2ರವರೆಗೆ ಗುರು ಉತ್ತಮ ಸ್ಥಾನದಲ್ಲಿರುತ್ತದೆ. ಈ ಅವಧಿಯಲ್ಲಿ ಪ್ರೇಮ ಸಂಬಂಧಗಳಿಗೆ ಹಾಗೂ ಪ್ರೇಮ ವಿವಾಹಕ್ಕೆ ಸೂಕ್ತ ವಾತಾವರಣ ನಿರ್ಮಾಣವಾಗುತ್ತದೆ.
ಸಿಂಹ ರಾಶಿಯವರಿಗೆ ಪರಿಹಾರಗಳು
ಪ್ರತಿದಿನ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಅಷ್ಟೋತ್ತರ ಪಾರಾಯಣದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ವಾರಕ್ಕೆ ಒಮ್ಮೆಯಾದರೂ ನಿಮ್ಮ ಮನೆ ಹತ್ತಿರದ ದೇವಸ್ಥಾನಕ್ಕೆ ಭೇಟಿ ಕೊಟ್ಟು 10 ನಿಮಿಷ ಕಣ್ಮುಚ್ಚಿ ಕುಳಿತುಕೊಳ್ಳಿ. ನಿಮ್ಮ ಮನಸ್ಸಿಗೆ ಸಮಾಧಾನ ಎನ್ನಿಸುತ್ತದೆ. ಹಣೆಯ ಮೇಲೆ ಕೇಸರಿ ಬಣ್ಣದ ಕುಂಕುಮ (ಬೊಟ್ಟು) ಇರಿಸಿಕೊಳ್ಳಿ. ಇತರರ ಕೆಟ್ಟ ದೃಷ್ಟಿಯಿಂದ ಇದು ಕಾಪಾಡುತ್ತದೆ. ಬೆಳ್ಳಿಯ ಬಣ್ಣದ ಕರವಸ್ತ್ರವೊಂದನ್ನು ಸದಾ ಜೊತೆಗೆ ಇರಿಸಿಕೊಂಡಿರಿ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications