Get Updates
Get notified of breaking news, exclusive insights, and must-see stories!

Weekly Horoscope 2025: ಜೂನ್‌ 01 ರಿಂದ ಜೂನ್‌ 06ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ

ಜೂನ್‌ ತಿಂಗಳ ಮೊಲದ ವಾರ ಶುರುವಾಗಲಿದೆ. ಈ ವಾರ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ ಮುಂಬರುವ ವಾರ ದ್ವಾದಶಿ ರಾಶಿಗಳ ಆರೋಗ್ಯ, ಹಣಕಾಸು, ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರೋಗ್ಯ, ವೃತ್ತಿ ಜೀವನ ಹೇಗಿರಲಿದೆ ಎಂದು ಈಗ ತಿಳಿಯೋಣ.

ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಶುಕ್ಲಪಕ್ಷದ ಷಷ್ಠಿ ಯಿಂದ ದ್ವಾದಶಿಯವರೆಗೆ ಅಂದರೆ 01.06.25 ರಿಂದ 08.06.25 ರ ವರೆಗೆ ಈ ವಾರದ ಚಂದ್ರನ ಸಂಚಾರ ಆಶ್ಲೆಷಾದಿಂದ ಸ್ವಾತಿ ನಕ್ಷತ್ರದ ವರೆಗೆ ಈ ವಾರದ ಚಂದ್ರನ ಸಂಚಾರ ಭರಣಿ ನಕ್ಷತ್ರದಿಂದ ಆಶ್ಲೆಷಾದ ವರೆಗೆ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಸಂಪೂರ್ಣವಾಗಿ ತಿಳಿಯೋಣ.

weekly horoscope in kannada from June 01 to June 08 2025

ಮೇಷ ರಾಶಿ

ಹನ್ನೊಂದನೇ ಮನೆಯಲ್ಲಿ ರಾಹು ಒಬ್ಬನೇ ನಿಮ್ಮ ದೊಡ್ಡ ಶಕ್ತಿ. ಮೂರು ಗುರು ನಾಲ್ಕು ಕುಜ ಐದನೇ ಮನೆಯಲ್ಲಿ ಕೇತು ಸಮಯ ಸ್ವಲ್ಪ ಮಧ್ಯಮ. ಚಿಂತೆಗಳು ಜಾಸ್ತಿ, ದೈಹಿಕ ಶ್ರಮ ಜಾಸ್ತಿ. ಮನಸ್ಸಿಗೆ ಉತ್ಸಾಹ ಕಡಿಮೆ. ಹಣಬಲ ಇದ್ದರೂ ಖರ್ಚುಗಳು ಹೆಚ್ಚು ಇದೆ. ವಿವೇಚನೆಯಿಂದ ನಿಭಾಯಿಸಿಕೊಳ್ಳಿ.

ವೃಷಭರಾಶಿ

ಎರಡನೇ ಮನೆಯಲ್ಲಿ ಗುರು, ಹನ್ನೊಂದರಲ್ಲಿ ಶನಿ ಸಮಯ ತುಂಬಾ ಚೆನ್ನಾಗಿದೆ. ನೀವಂದುಕೊಂಡ ಕೆಲಸಗಳೆಲ್ಲ ಸಾಧಿಸಿಕೊಳ್ಳುತ್ತೀರಿ. ನೌಕರಿಯಲ್ಲಿ ಬಡ್ತಿ, ಅಧಿಕಾರ ಲಾಭ ಇದೆ. ಮೇಲಧಿಕಾರಿಗಳ‌ ಪ್ರಶಂಸೆ ಸಿಗುತ್ತದೆ. ರಾಜಕೀಯ ವ್ಯಕ್ತಿಗಳಿಗೂ ಲಾಭ ಇದೆ. ಸ್ಥಾನಮಾನ‌ ಪ್ರಾಪ್ತಿ‌ಇದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಇದೆ.

ಮಿಥುನರಾಶಿ

ನಿಮ್ಮ ರಾಶಿಯಲ್ಲೇ ಗುರು ಇರುವುದರಿಂದ ಒತ್ತಡಗಳು ಹೆಚ್ಚು. ಹನ್ನೊಂದರಲ್ಲಿ ಶುಕ್ರನಿಂದ ಧನಲಾಭ ಇದೆ. ಹತ್ತರ ಶನಿ ತಟಸ್ಥ. ಮೂರರಲ್ಲಿ ಕೇತು ಇರುವುದು ನಿಮ್ಮ ಶಕ್ತಿ ಸಾಮರ್ಥ್ಯವನ್ನು ಹೆಚ್ಚು ಮಾಡುತ್ತದೆ. ಸರ್ಕಾರದಿಂದ ಆಗಬೇಕಾದ ಕೆಲಸಗಳು ನಿಧಾನವಾಗುತ್ತದೆ. ಕೌಟುಂಬಿಕ ಅಶಾಂತಿ ಇರುತ್ತದೆ.

ಕಟಕರಾಶಿ

12 ನೇ ಮನೆ ಗುರು ಜಾಗ ಬದಲಾವಣೆ ಯನ್ನು ತೋರಿಸುತ್ತಾನೆ. ‌ವರ್ಗಾವಣೆ ಅಥವಾ ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನ ಪಡುತ್ತಿದ್ದರೆ ಈಗ ಅನುಕೂಲವಾಗಬಹುದು. ಒಂಬತ್ತನೇ ಮನೆಯಲ್ಲಿ ಶನಿ ನ್ಯಾಯಾಧೀಶರಿಗೆ , ವಕೀಲಿ ವೃತ್ತಿ ಮಾಡುವವರಿಗೆ ಒಳ್ಳೆಯದು. ಲಾಭಸ್ಥಾನದಲ್ಲಿ ಸೂರ್ಯ ಒಳ್ಳೆಯ ಅಧಿಕಾರ ಪದವಿ ಕೊಡಿಸುತ್ತಾನೆ.‌ ಕಂಪ್ಯೂಟರ್ ಹಾಗು ಗಣಿತ, ಅಕೌಂಟಿಂಗ್ ಕ್ಷೇತ್ರದವರಿಗೆ ಲಾಭ ಇದೆ.

ಸಿಂಹರಾಶಿ

ಈಗ ಒತ್ತಡಗಳ ನಡುವೆ ಜೀವನ. ಸವಾಲುಗಳು ಬೇಕಾದಷ್ಟು ಇವೆ. ಬೆಟ್ಟದ ಹಾಗೆ ನೀವು ನಡೆಯುವ ದಾರಿಯಲ್ಲಿ ಅಡ್ಡಲಾಗಿ ನಿಂತಿದೆ. ಆದರೆ ಗುರುಬಲ ಇರುವುದರಿಂದ ಆ ಬೆಟ್ಟಗಳ ನಡುವೆಯೂ ಒಂದು ಸಣ್ಣ ದಾರಿ ಕಾಣಿಸುತ್ತದೆ. ಗುರುಬಲ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಯುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿದೆ. ಅಷ್ಠಮಶನಿಯ ಪ್ರಭಾವ ಇರುವುದರಿಂದ ಆಗಾಗ ಎಡರರೊಡರು ಬರುವುದು ಸ್ವಾಭಾವಿಕ. ನಿಮ್ಮ ಮನೆದೇವರ ಪ್ರಾರ್ಥನೆ ಮಾಡಿ.

ಕನ್ಯಾರಾಶಿ

ರಾಹು ಆರನೇ ಮನೆಗೆ ಬಂದಿದಾನೆ. ಇದು ನಿಮಗೆ ಧನಲಾಭ ಕೊಡುತ್ತದೆ. ಎಂಟರಲ್ಲಿ ಶುಕ್ರ, ಒಂಬತ್ತರಲ್ಲಿ ಬುಧ, ಹನ್ನೊಂದರಲ್ಲಿ ಕುಜ ತಕ್ಕಮಟ್ಟಿಗೆ ಲಾಭವನ್ನು ಕೊಡುತ್ತಾರೆ. ಹತ್ತನೇ ಮನೆಯ ಗುರು ಅಧಿಕಾರ ಕಸಿಯುತ್ತಾನೆ ಎಚ್ಚರಿಕೆಯಿಂದ ಇರಿ. ಮೇಲಧಿಕಾರಿಗಳೊಡನೆ ಯಾವುದೇ ಗಲಾಟೆ ತಗಾದೆ ಇಟ್ಟುಕೊಳ್ಳಬೇಡಿ. ರಾಜಕೀಯ ಕ್ಷೇತ್ರದವರಂತೂ ಅತಿ ಹೆಚ್ಚಿನ ಕಾಳಜಿ ವಹಿಸಬೇಕು.

ತುಲಾರಾಶಿ

12 ರಾಶಿಗಳಲ್ಲೂ ಈಗ ನಿಮ್ಮ ರಾಶಿಯೇ ಮೊದಲ ಸಾಲಲ್ಲಿ ನಿಲ್ಲುತ್ತದೆ. ಶನಿ ಆರನೇ ಮನೆ, ಗುರು ಒಂಬತ್ತನೇ ಮನೆ, ಕೇತು‌ ಹನ್ನೊಂದನೇ ಮನೆ ಭಾಗ್ಯ ಅದೃಷ್ಟ ಗಳ ಸುಗ್ಗಿ. ದೂರವಾದವರೆಲ್ಲ ಹತ್ತಿರವಾಗುತ್ತಾರೆ. ನಿಮ್ಮ ಮಾತಿಗೆ ಬೆಲೆ ಇದೆ. ಧನಾಗಮನ ಉತ್ತಮವಾಗಿದೆ. ವಿವಾಹಾದಿ ಶುಭಕಾರ್ಯಗಳು ನಡೆಯುತ್ತದೆ. ಮನೆಯಲ್ಲಿ ಉಲ್ಲಾಸದ ವಾತಾವರಣ. ಕೌಟುಂಬಿಕ ಸುಖಶಾಂತಿ‌ ಇದೆ. ಬಡ್ತಿ, ವಿದೇಶ ಪ್ರಯಾಣ ಮೊದಲಾದ ಸವಲತ್ತುಗಳು ಸಿಗುತ್ತದೆ. ಜೀವನ ಸರಾಗವಾಗಿದೆ.

ವೃಶ್ಚಿಕರಾಶಿ

ಈಗ ನಿಮಗೆ ಯಾವುದೇ ಗ್ರಹಬಲ ಇಲ್ಲ. ಕೊಂಚ ಎಡರುತೊಡರುಗಳ ಜೀವನ. ಯಾವ ಕೆಲಸಕ್ಕೆ ಕೈಹಾಕಿದರೂ ನಿಧಾನ. ಅಡ್ಡಿಗಳು ಎದುರಾಗುತ್ತದೆ. ವಿವಾಹಾದಿ ಶುಭಕಾರ್ಯಗಳು ಮುಂದಕ್ಕೆ ಹೋಗುತ್ತದೆ. ನೌಕರಿಯಲ್ಲಿ ನಿಧಾನ‌ಪ್ರಗತಿ. ಬಹಳಷ್ಟು ಕಿರಿಕಿರಿಗಳನ್ನು ಅನುಭವಿಸುತ್ತೀರಿ.‌ ದೇವರ ಧ್ಯಾನ ಮಾಡಿ. ಮನೆದೇವರ ಪ್ರಾರ್ಥನೆ ಮಾಡಿ. ಧೈರ್ಯವನ್ನು ಸಮತೋಲನವನ್ನೂ ಕಾಪಾಡಿಕೊಳ್ಳಿ.

ಧನಸ್ಸುರಾಶಿ

ಈಗ ನಿಮಗೆ ಎರಡು ಗ್ರಹಗಳ ಬಲ ಇದೆ. ಗುರು‌ ಮತ್ತು‌ ರಾಹು. ರಾಹು ಧೈರ್ಯ ಸ್ಥೈರ್ಯ ಪರಾಕ್ರಮವನ್ನು ಹೆಚ್ಚಿಸುತ್ತಾನೆ. ಗುರು ನಿಮ್ಮ ಜೀವನವನ್ನು ರೂಪಿಸುತ್ತಾನೆ. ಜೀವ ಜೀವನಕ್ಕೆ ಅಗತ್ಯವಾದ ಸಂಗತಿಗಳನ್ನು‌ ಕೊಡುತ್ತಾನೆ. ಧನಾಗಮನ ಉತ್ತಮವಾಗಿದೆ. ವಿವಾಹಾದಿ ಶುಭಕಾರ್ಯಗಳು ನಡೆಯುತ್ತದೆ. ನೌಕರಿಯಲ್ಲಿ ಬಡ್ತಿ ಇದೆ. ಯಶಸ್ಸು ಇದೆ. ಶತ್ರುಗಳು ದೂರವಾಗುತ್ತಾರೆ.

ಮಕರರಾಶಿ

ಎರಡನೇ ಮನೆಯಲ್ಲಿ ರಾಹು ಧನಾಗಮನವನ್ನು ಸೂಚಿಸುತ್ತಾನೆ. ಮೂರನೇ ಮನೆಯ‌ ಶನಿ ಪರಾಕ್ರಮದಿಂದ ಕೆಲಸಗಳನ್ನು ಹಗುರ ಮಾಡುತ್ತಾನೆ. ಅಡೆತಡೆಗಳನ್ನು ನಿವಾರಣೆ ಮಾಡುತ್ತಾನೆ. ಐದನೇ ಮನೆಯಲ್ಲಿ ಬುಧ ನಾಲ್ಕನೇ ಮನೆಯಲ್ಲಿ ಶುಕ್ರ ಸಮಯ ಬಹಳ ಚೆನ್ನಾಗಿದೆ. ವಾಹನದಿಂದ ಲಾಭ ಇದೆ. ಭೂಮಿ ಸಂಬಂಧಿಸಿದ ವ್ಯವಹಾರ ಮಾಡಲು ಈಗ ಅನುಕೂಲ. ಸುಖಕರವಾದ ನಿದ್ರೆ ಸುಗ್ರಾಸ ಭೋಜನ ಎಲ್ಲವನ್ನೂ ಅನುಭವಿಸುವ ಯೋಗ.

ಕುಂಭರಾಶಿ

ಐದನೇ ಮನೆಯಲ್ಲಿ ಗುರು ಸಮಯ ಬಹಳ ಚೆನ್ನಾಗಿದೆ. ಯಾವುದೇ ಅಡೆತಡೆಗಳು ಬಂದರೂ ಗುರುವಿನಿಂದ ನಿವಾರಣೆ ಆಗುತ್ತದೆ. ಅರ್ಹರಿಗೆ ವೇಳೆ ವಸಹ ಯೋಗ ಇದೆ. ಮೂರರಲ್ಲಿ ಶುಕ್ರ ನಾಲ್ಕರಲ್ಲಿ ಬುಧ ಆರನೇ ಮನೆಯಲ್ಲಿ ಕುಜ ಇವರುಗಳಿಂದಲೂ ಲಾಭ ಇದೆ. ಸಹೋದರರಿಂದ ಸಹಾಯ ಸಿಗುತ್ತದೆ. ಬ್ಯಾಂಕಿಂಗ್ ಕ್ಷೇತ್ರದವರಿಗೆ ಲಾಭ ಇದೆ. ದೋಷಾರೋಪಣೆ ನಿವಾರಣೆ ಆಗುತ್ತದೆ. ಕೋರ್ಟಿನಲ್ಲಿ ವ್ಯಾಜ್ಯಗಳು ಇತ್ಯರ್ಥ ಹಂತಕ್ಕೆ ಬರುತ್ತದೆ.

ಮೀನರಾಶಿ

ನಿಮ್ಮ ರಾಶಿಯಿಂದ ರಾಹು ಬದಲಾವಣೆ ಆಗಿದ್ದಾನೆ. ಫಂಗಲ್ ಸೋಂಕು, ಬ್ಯಾಕ್ಟೀರಿಯಾ ಸೋಂಕು ಇಂಥವು ಉಪಶಮನ ವಾಗುತ್ತದೆ. ಆರೋಗ್ಯ ಸುಧಾರಿಸುತ್ತದೆ. ಆರನೇ ಮನೆಯಲ್ಲಿ ಕೇತು ಧನಾಗಮನ ಸೂಚಿಸುತ್ತಾನೆ. ನಾಲ್ಕನೇ ಮನೆಯಲ್ಲಿ ಗುರು ಕೊಂಚ ಒತ್ತಡಗಳನ್ನು ಕೊಡುತ್ತಾನೆ. ಎಚ್ಚರಿಕೆಯಿಂದ ನಿಭಾಯಿಸಿ. ಮನೆದೇವರ ಪ್ರಾರ್ಥನೆ ಮಾಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+