Weekly Horoscope: ಜನವರಿ ನಾಲ್ಕನೇ ವಾರ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?
ಜನವರಿ ನಾಲ್ಕನೇ ವಾರದಲ್ಲಿ ಹಲವಾರು ಯೋಗಗಳು ರೂಪಗೊಳ್ಳುವುದರಿಂದ ಈ ಸಮಯ ತುಂಬಾ ವಿಶೇಷವಾಗಿದೆ. ಈ ಸಮಯದಲ್ಲಿ ಶಶ ರಾಜಯೋಗ, ಗಜಕೇಸರಿ ಯೋಗ, ಲಕ್ಷ್ಮೀನಾರಾಯಣ ಯೋಗ ರೂಪಗೊಳ್ಳುತ್ತವೆ. ಹಾಗಾಗಿ ಜನವರಿ ತಿಂಗಳ ನಾಲ್ಕನೇ ವಾರ ದ್ವಾದಶಿ ರಾಶಿಯವರು ವಿಶೇಷ ಲಾಭವನ್ನು ಪಡೆಯಲಿದ್ದಾರೆ. ಜೀವನದಲ್ಲಿ ಗೌರವ, ಖ್ಯಾತಿ, ಪ್ರಗತಿ, ಸಂಪತ್ತು ವೃದ್ಧಿಯಾಗಲಿದೆ. ಅಪೂರ್ಣವಾದ ಆಸೆಗಳು ಈ ಅವಧಿಯಲ್ಲಿ ಪೂರ್ಣಗೊಳ್ಳಲಿವೆ. ಹಾಗಾದರೆ 12 ರಾಶಿಯವರಿಗೆ ಜ.19 ರಿಂದ 26ರವರೆಗೆ ವಾರ ಭವಿಷ್ಯ ಹೇಗಿದೆ ಎಂದು ತಿಳಿಯೋಣ.
ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಪುಷ್ಯ ಮಾಸದ ಕೃಷ್ಣಪಕ್ಷದ ಪಂಚಮಿಯಿಂದ ದ್ವಾದಶಿಯವರೆಗೆ
ಅಂದರೆ 19.01.25ರಿಂದ 26.01.25 ರ ವರೆಗೆ
ಈ ವಾರದ ಚಂದ್ರನ ಸಂಚಾರ ಉತ್ತರಾ ನಕ್ಷತ್ರದಿಂದ ಜ್ಯೇಷ್ಠ ನಕ್ಷತ್ರದ ವರೆಗೆ.

ಮೇಷರಾಶಿ:
ಮುಂದಿನ ದಿನಗಳಲ್ಲಿ ಸಾಡೆಸಾತಿ ಶನಿಯ ಪ್ರಭಾವ ಪ್ರಾರಂಭ ವಾಗುವುದರಿಂದ ಈಗಿನಿಂದಲೇ ನಿಮಗೆ ಅದರ ಬಿಸಿ ಗೋಚರವಾಗುತ್ತಿದೆ. ಮನೆಯಲ್ಲಿ ಹಿರಿಯರ ಅನಾರೋಗ್ಯ, ಅನಾವಶ್ಯಕ ಖರ್ಚುಗಳು, ಮಾನಸಿಕ ಒತ್ತಡಗಳು ಇರುತ್ತದೆ. ತುಂಬಾ ವಿವೇಚನೆಯಿಂದ ನಿಭಾಯಿಯಿಸಿ. ಯಾವುದಕ್ಕೂ ದುಡುಕಬೇಡಿ. ತಾಳ್ಮೆ ಇರಲಿ. ಗುರುಬಲ ಇರುವುದರಿಂದ ಸಮಸ್ಯೆಗಳು ಎದುರಾದರೂ ಪರಿಹಾರವೂ ಒದಗಿ ಬರುತ್ತದೆ.

ವೃಷಭರಾಶಿ:
ಗುರು ನಿಮ್ಮ ರಾಶಿಯಲ್ಲೇ ಇರುವುದರಿಂದ ಒತ್ತಡಗಳು ಇರುತ್ತದೆ. ತಂದೆಯ ಆರೋಗ್ಯಕ್ಕೆ ಧಕ್ಕೆ. ಲಾಭಸ್ಥಾನದ ರಾಹುವಿನಿಂದ ಹಣದ ಹರಿವು ಉತ್ತಮವಾಗಿದ್ದರೂ ಹಣದ ಖರ್ಚು ಕೂಡ ಇರುತ್ತದೆ. ನೀವಂದುಕೊಂಡ ರೀತಿಯಲ್ಲಿ ಖರ್ಚು ಮಾಡಲಿಕ್ಕಾಗದೆ ಲೆಕ್ಕಾಚಾರ ತಲೆಕೆಳಗಾಗುಗುತ್ತದೆ. ಮಾನಸಿಕ ದೈಹಿಕ ಶ್ರಮ ಅಶಾಂತಿ ಇರುತ್ತದೆ. ಕೆಲವೇ ದಿನಗಳಲ್ಲಿ ಗುರುಬಲ ಹಾಗೂ ಶನಿಬಲ ದೊರೆಯುತ್ತದೆ ಅಲ್ಲಿಯವರೆಗೆ ಕಾಯಬೇಕು.

ಮಿಥುನ ರಾಶಿ:
ಯಾವುದೇ ಗ್ರಹಬಲ ಇಲ್ಲದ ರಾಶಿ ಎಂದರೆ ಮಿಥುನ. ಯಾವುದೇ ಗ್ರಹದ ಅವದೃಷ್ಟಿಯೂ ಇಲ್ಲ ಕೃಪಾದೃಷ್ಡಿಯೂ ಇಲ್ಲ. ನೀವು ಒಳ್ಳೆಯ ಫಲಗಳನ್ನು ಪಡೆಯಲು ಇನ್ನೂ ಕೊಂಚಕಾಲ ಕಾಯಬೇಕು. ಈಗೇನಿದ್ದರೂ ಪರಿಸ್ಥಿತಿ ಹೇಗೆ ಕೊಂಡೊಯ್ದರೆ ಹಾಗೆ ಹೋಗಬೇಕು. ದೈಹಿಕವಾಗಿ ಶ್ರಮ ಎನಿಸುವ ಕಾಲ ಈಗ. ಊಟ ನಿದ್ರೆ ಸರಿಯಿಲ್ಲದೆ ವೃಥಾ ಅಲೆಯುವ ಕಾಲ.

ಕಟಕ ರಾಶಿ:
ಅಷ್ಟಮಶನಿಯ ಪ್ರಭಾವ ಮುಗಿಯುತ್ತ ಬಂದಿದೆ, ಲಾಭಸ್ಥಾನದಲ್ಲಿ ಗುರು ಇದ್ದು ನಿಮಗೆ ಧನಕನಕ ವಸ್ತ್ರ ಆಭರಣ ವನ್ನು ಕೊಡುತ್ತಾನೆ. ಒಳ್ಳೆಯ ಊಟ ಮಾಡುವ ಯೋಗ ಇದೆ. ಸಮಾರಂಭಗಳಿಗೆ ಹೋಗುವುದು, ವಿಹಾರ ಮೊದಲಾದ ಸುಖಗಳೆಲ್ಲ ಸಿಗುತ್ತದೆ. ಮನಸ್ಸಿಗೆ ಉಲ್ಲಾಸ ಇರುತ್ತದೆ.

ಸಿಂಹ ರಾಶಿ:
ಆರನೇ ಮನೆಯಲ್ಲಿ ನಿಮ್ಮ ರಾಶಿಯ ಅಧಿಪತಿಯೇ ಇದ್ದಾನೆ. ಧನಲಾಭ ಕೊಡುವುದರ ಜೊತೆಗೆ ನಿಮ್ಮ ಮಾನಸಿಕ ದೈಹಿಕ ಬಲ ವೃದ್ಧಿಗೊಳಿಸುತ್ತಾನೆ. ಏಳನೇ ಮನೆಯ ಶುಕ್ರ, ಐದನೇ ಮನೆಯ ಬುಧ ಶುಭಫಲಗಳನ್ನು ಕೊಡುತ್ತಾರೆ. ಮುಂಬರುವ ದಿನಗಳಲ್ಲಿ ಗುರುಬಲ ಬರುವುದರಿಂದ ಇನ್ನಷ್ಟು ಶಕ್ತಿ ನಿಮಗೆ. ಅಷ್ಟಮ ಶನಿಯ ಪ್ರಭಾವಕ್ಕೂ ಸಿಕ್ಕುವಿರಿ. ಜಾಗ್ರತೆ ಇರಲಿ.

ಕನ್ಯಾ ರಾಶಿ:
ಗುರುಬಲ, ಶನಿಬಲ ಸಧ್ಯಕ್ಕೆ ಇದೆ. ಎಲ್ಲ ಯೋಜನೆಗಳನ್ನೂ ಕಾರ್ಯ ರೂಪಕ್ಕೆ ತನ್ನಿ. ಬೇಗ ಬೇಗ ಮುಗಿಸಿಕೊಳ್ಳಿ. ಮುಂದಿನ ದಿನಗಳು ನಿಮಗೆ ಅಷ್ಟೊಂದು ಲಾಭದಾಯಕವಾಗಿ ಇಲ್ಲ. ಈಗ ಕೇತು ನಿಮ್ಮ ರಾಶಿಯಲ್ಲೇ ಇರುವುದು ಅಲರ್ಜಿ ತುರಿಕೆ ಮುಂತಾದ ಸಮಸ್ಯೆಗಳಿರುತ್ರದೆ. ಕೇತು ನಿಮ್ಮ ರಾಶಿ ಬಿಟ್ಟು ಸಿಂಹಕ್ಕೆ ಬಂದಾಗ ಈ ಸಮಸ್ಯೆಗಳು ಪರಿಹಾರ ಕಾಣುತ್ತದೆ.

ತುಲಾ ರಾಶಿ:
ಈಗ ನಿಮಗೆ ಭಾಗ್ಯೋದಯವಾಗುವ ಕಾಲ. ಇಷ್ಡು ವರ್ಷ ಕಷ್ಟ ಪಟ್ಟಿದೀರಿ. ಈಗ ಸುಖವನ್ನು ಬಾಚಿಕೊಳ್ಳುವ ಸಮಯ. ಆರೋಗ್ಯ ಹಣಕಾಸು ಸಮಸ್ಯೆ ಎಲ್ಲವೂ ಹಂತಹಂತವಾಗಿ ಸುಧಾರಣೆ ಕಾಣಲಿದೆ. ಮುಂಬರುವ ದಿನಗಳು ನಿಮಗೆ ಅದೃಷ್ಟಶಾಲಿಯಾಗಿದೆ. ಯಾವ ಕೆಲಸಕ್ಕೂ ಕೈಹಾಕಬಹುದು. ಹಣದ ಹರಿವು ಉತ್ತಮವಾಗಿದೆ. ವೃತ್ತಿಯಲ್ಲಿ ಪ್ರಗತಿಇದೆ. ವಿವಾಹಯೊಗ್ಯರಿಗೆ ವಿವಾಹ ಪ್ರಾಪ್ತಿ ಇದೆ.

ವೃಶ್ಚಿಕ ರಾಶಿ:
ಈಗ ಸಧ್ಯದ ಪರಿಸ್ಥಿತಿಯಲ್ಲಿ ಗುರುಬಲ ಇರುವುದರಿಂದ ಯಾವುದಕ್ಕೂ ಯೋಚನೆ ಇಲ್ಲ. ಎಲ್ಲ ಕೆಲಸಗಳೂ ಸುಸೂತ್ರವಾಗಿ ಮುನ್ನಡೆಯುತ್ತದೆ. ನಾಲ್ಕರಲ್ಲಿ ಶುಕ್ರ ಎರಡನೇ ಮನೆಯಲ್ಲಿ ಬುಧ ಸಹ ಶುಭಫಲಗಳನ್ನು ಕೊಡುತ್ತಾರೆ. ಮನೆಯಲ್ಲಿ ಮಂಗಳಕಾರ್ಯದ ಶುಭಸೂಚನೆ ಇದೆ. ಹಣದ ಹರಿವು ಉತ್ತಮವಾಗಿದೆ. ಮೂರನೇ ಮನೆಯಲ್ಲಿ ಸೂರ್ಯ ಧೈರ್ಯ ಸಾಹಸ ಕೊಡುತ್ತಾನೆ. ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಸುಲಭ ಮಾಡುತ್ತಾನೆ.

ಧನಸ್ಸು ರಾಶಿ:
ನಿಮ್ಮ ರಾಶಿಯಲ್ಲೇ ಬುಧ ಮೂರನೇ ಮನೆಯಲ್ಲಿ ಶನಿ ಶುಕ್ರ ಸಮಯ ಬಹಳ ಚೆನ್ನಾಗಿ ಇದೆ ಹಣಕಾಸಿ ನ ಹರಿವು ಉತ್ತಮವಾಗಿದೆ. ಆದರೆ ಆರನೇ ಮನೆಯಲ್ಲಿ ಗುರು ಇರುವುದು ಆರೋಗ್ಯಕ್ಕೆ ಕೊಂಚ ತೊಂದರೆ. ಹೊಟ್ಟೆಯೊಳಗಿನ ಅಂಗಾಂಗಳಿಗೆ ಘಾಸಿಯಾಗಬಹುದು. ಯಾವುದೇ ಏರುಪೇರನ್ನೂ ನಿರ್ಲಕ್ಷ್ಯ ಮಾಡಬೇಡಿ. ವೈದ್ಯರ ಸಲಹೆಯಂತೆ ನಡೆಯಿರಿ. ಕೆಲವು ದಿನಗಳ ನಂತರ ಗುರುಬಲ ಬರುತ್ತದೆ ಆಗ ಸಮಸ್ಯೆಗಳು ಹಗುರವಾಗುತ್ತದೆ.

ಮಕರ ರಾಶಿ:
ಎರಡನೇ ಮನೆಯಲ್ಲಿ ಶುಕ್ರ ಆರನೇ ಮನೆಯಲ್ಲಿ ಕುಜ ಮೂರರಲ್ಲಿ ರಾಹು ಐದನೇ ಮನೆಯಲ್ಲಿ ಗುರು ಸಮಯ ಬಹಳ ಚೆನ್ನಾಗಿ ಇದೆ. ಯಾವುದೇ ಅವಕಾಶಗಳು ನಿಮಗೆ ಸಿಗಬಹುದು. ಮುಂಬರುವ ದಿನಗಳಲ್ಲಿ ಶನಿ ಮೂರನೇ ಮನೆಗೆ ಪ್ರವೇಶವಾದಾಗ ಇನ್ನೂ ಹೆಚ್ಚಿನ ಶುಭಫಲಗಳನ್ನು ಪಡೆಯಿವಿರಿ.

ಕುಂಭರಾಶಿ:
ನಿಮ್ಮ ರಾಶಿಯಲ್ಲೇ ಶುಕ್ರ, ಲಾಭ ಸ್ಥಾನದಲ್ಲಿ ಬುಧ ಸಮಯ ಚೆನ್ನಾಗಿದೆ. ಸಾಡೆಸಾತಿ ಶನಿಯ ಕೊನೆಯ ಹಂತದಲ್ಲಿ ಇದ್ದೀರಿ, ಇನ್ನು ಕೆಲವೇ ಸಮಯದಲ್ಲಿ ಗುರುಬಲವೂ ಬರಲಿದೆ. ನೀವು ಅಂದುಕೊಂಡ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತದೆ. ಆರೋಗ್ಯ, ಹಣಕಾಸು ಎಲ್ಲವೂ ಸುಧಾರಿಸುತ್ತದೆ.

ಮೀನರಾಶಿ:
ಲಾಭಸ್ಥಾನದಲ್ಲಿ ಸೂರ್ಯ ಇರುವುದೊಂದೇ ನಿಮಗೆ ಈಗ ಗ್ರಹಬಲ. ಇನ್ನು ಕೆಲವೇ ದಿನಗಳಲ್ಲಿ ಶನಿ ನಿಮ್ಮ ರಾಶಿಗೇ ಪ್ರವೇಶ ಮಾಡುತ್ತಾನೆ. ಅಲ್ಲಿಗೆ ನೀವು ಸಾಡೆಸಾತಿ ಶನಿಯ ಒಂದು ಹಂತ ಪೂರೈಸುತ್ತೀರಿ. ಪರೀಕ್ಷಾ ಸಮಯ ಇನ್ನೂ ಬಾಕಿ ಇದೆ. ಧೈರ್ಯ ಮತ್ತು ಸಹನೆ ಕಾಯ್ದುಕೊಳ್ಳಿ. ಮನೆಯಲ್ಲಿ ಹಿರಿ ಕಿರಿಯರ ಆರೋಗ್ಯದ ಬಗ್ಗೆ ನಿಗಾ ಇರಲಿ. ಸರ್ಕಾರದಿಂದ ಆಗಬೇಕಾದ ಕೆಲಸಗಳಿದ್ದರೆ ಸುಲಭವಾಗಿ ನೆರವೇರುತ್ತದೆ.ಶುಭಮಸ್ತು












Click it and Unblock the Notifications