ಚಂದ್ರಗ್ರಹಣಕ್ಕೂ ಮುನ್ನ ಈ ರಾಶಿಯವರ ಅದೃಷ್ಟ ಬೆಳಗಿಸಲಿದ್ದೇನೆ ಶುಕ್ರ: ಸುಖ ಸಮೃದ್ಧಿ, 4 ರಾಶಿಗಳಿಗೆ ಅದೃಷ್ಟದ ಸುರಿಮಳೆ

ಆಗಸ್ಟ್ ತಿಂಗಳು ಖಗೋಳ ಘಟನೆಗಳ ವಿಷಯದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಒಂದು ಕಡೆ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಆಗಸ್ಟ್ ೨೮ ರಂದು ಸಂಭವಿಸಲಿದೆ. ಮತ್ದು ಕಡೆ ಸೌಕರ್ಯ ಮತ್ತು ಸಮೃದ್ಧಿಯ ಗ್ರಹವಾದ ಶುಕ್ರನು ತನ್ನ ಪಥವನ್ನು ಬದಲಾಯಿಸಲು ತಯಾರಿ ನಡೆಸುತ್ತಿದ್ದಾನೆ. ಶುಕ್ರನ ಸಂಚಾರದಲ್ಲಿನ ಬದಲಾವಣೆಗಳು ಎಲ್ಲಾ ದ್ವಾದಶ ರಾಶಿಯವರ ಮೇಲೆ ಪರಿಣಾಮ ಬೀರುವುದು. ಅದರಲ್ಲಿಯೂ ಕೆಲವು ರಾಶಿಯವರಿಗೆ ಹೆಚ್ಚಿನ ಲಾಭವಾಗುವುದು.

ಆಗಸ್ಟ್ 25, 2026 ರಂದು ಮಧ್ಯಾಹ್ನ 12:55 ಕ್ಕೆ ಶುಕ್ರನು ಮಂಗಳನ ಅಧಿಪತ್ಯದ ಚಿತ್ರ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಸೆಪ್ಟೆಂಬರ್ 11 ರವರೆಗೆ ಶುಕ್ರನು ಇದೇ ನಕ್ಷತ್ರದಲ್ಲಿ ಇರುತ್ತಾನೆ. ಜ್ಯೋತಿಷ್ಯದಲ್ಲಿ, ಮಂಗಳ ಮತ್ತು ಶುಕ್ರನ ಈ ಸಂಯೋಗವನ್ನು ಬಹಳ ಶಕ್ತಿಯುತ ಮತ್ತು ಸೃಜನಶೀಲವೆಂದು ಕರೆಯಲಾಗುತ್ತದೆ. ಶುಕ್ರನ ಈ ಸಂಚಾರವು ಭೌತಿಕ ಸೌಕರ್ಯಗಳನ್ನು ಹೆಚ್ಚು ಮಾಡುವುದಲ್ಲದೆ, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಗಮನಾರ್ವಾಗಿ ಧನಾತ್ಮಕ ಬದಲಾವಣೆಗಳನ್ನು ತರಬಹುದು. ಹೀಗಾಗಿ ಕೆಲವು ರಾಶಿಯವರ ಸಂಪತ್ತು ಹೆಚ್ಚಾಗುವುದು. ಜೀವನದ ಸುಖ ಸಂತೋಷ, ಸಮೃದ್ದಿ ಕೂಡಾ ಹೆಚ್ಚಾಗುವುದು.

Venus Brings

ಶುಕ್ರನ ನಕ್ಷತ್ರ ಬದಲಾವಣೆಯಿಂದ ಯಾವ ರಾಶಿಯವರ ಅದೃಷ್ಟ ಬದಲಾಗುವುದು: ಶುಕ್ರನ ಪಥ ಬದಲಾವಣೆಯಿಂದ ನಾಲ್ಕು ರಾಶಿಯವೆ ಜೀವನದ ದಿಕ್ಕು ಕೂಡಾ ಸಕಾರಾತ್ಮಕವಾಗಿ ಬದಲಾಗುವುದು. ಆ ನಾಲ್ಕು ರಾಶಿಗಳು ಯಾವುವು ಎಂದು ನೋಡುವುದಾದರೆ.

ಮೇಷ ರಾಶಿ (Aries): ಮೇಷ ರಾಶಿಯವರಿಗೆ ಇದು ನಿಮ್ಮ ಜೀವನದ ಸುವರ್ಣ ಸಮಯವಾಗಿರುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಕೈ ಹಾಕುವ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಬಡ್ತಿ ಸಿಗುವ ಸಾಧ್ಯತೆ ಇದೆ. ಹೊಸ ಕೆಲಸ ಹುಡುಕುತ್ತಿರುವವರ ಹುಡುಕಾಟ ಕೊನೆಯಾಗುವುದು. ಹೊಸ ಹೊಸ ಅವಕಾಶಗಳು ಸಿಗುವುದು. ಹೂಡಿಕೆಗಳು ಲಾಭವನ್ನು ತರುವುದು.

ವೃಷಭ ರಾಶಿ (taurus): ವೃಷಭ ರಾಶಿಯ ಅಧಿಪತಿ ಗ್ರಹ ಶುಕ್ರ.ಆದ್ದರಿಂದ ಶುಕ್ರನ ಈ ಸಂಚಾರವು ನಿಮಗೆ ಅತ್ಯಂತ ಶುಭವಾಗಿರುವುದು. ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವವು ವಿಶಿಷ್ಟ ಕಾಂತಿಯಿಂದ ಹೊಳೆಯುವುದು. ಆತ್ಮವಿಶ್ವಾಸ ಹೆಚ್ಚಾಗುವುದು. ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸಲು ಸಹಾಯವಾಗುವುದು. ವ್ಯವಹಾರದಲ್ಲಿ ಯಶಸಸ್ಸು ಸಿಗುವುದು. ಪ್ರೇಮ ಜೀವನವು ಹೆಚ್ಚು ಸಿಹಿಯಾಗಿರುವುದು.

ತುಲಾ ರಾಶಿ (Libra): ಈ ಶುಕ್ರ ಸಂಚಾರವು ತುಲಾ ರಾಶಿಯವರಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು. ಹೆಚ್ಚು ಚೈತನ್ಯಶೀಲರಾಗುವಿರಿ. ತಾಳ್ಮೆಯಿಂದ ಇದ್ದುಕೊಂಡೇ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುವಿರಿ. ಬಾಕಿ ಇರುವ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುವುದು. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಹೊಸ ವ್ಯವಹಾರ ಆರಂಭಿಸಲು ಇದು ಸೂಕ್ತ ಸಮಯ.

ವೃಶ್ಚಿಕ ರಾಶಿ (Scrorpio): ಈ ಸಂಚಾರವು ವೃಶ್ಚಿಕ ರಾಶಿಯವರಿಗೆ ವೃತ್ತಿಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ತರಬಹುದು. ಉದ್ಯೋಗಿಗಳಿಗೆ ಕೆಲಸದಲ್ಲಿ ಹೊಸ ಜವಾಬ್ದಾರಿ ಮತ್ತು ಗೌರವ ಸಿಗಬಹುದು. ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುವುದು. ಹಠಾತ್ ಆರ್ಥಿಕ ಲಾಭಗಳಾಗುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ವೈವಾಹಿಕ ಜೀವನದಲ್ಲಿ ಒಳ್ಳೆಯ ಸುದ್ದಿಯನ್ನು ಪಡೆಯಬಹುದು.

ಶುಕ್ರ ಮತ್ತು ಚಿತ್ರ ನಕ್ಷತ್ರದ ಮಹತ್ವ: ಈ ಸಂಯೋಜನೆ ಏಕೆ ವಿಶೇಷ?

ವೈದಿಕ ಜ್ಯೋತಿಷ್ಯದ ಪ್ರಕಾರ, ಚಿತ್ರ ನಕ್ಷತ್ರದ ಅಧಿಪತಿ ಮಂಗಳ. ಮಂಗಳ ಶಕ್ತಿ, ಧೈರ್ಯ ಮತ್ತು ಶೌರ್ಯವನ್ನು ಸಂಕೇತಿಸುತ್ತದೆ. ಶುಕ್ರ ಮಂಗಳನ ನಕ್ಷತ್ರಕ್ಕೆ ಚಲಿಸಿದಾಗ, ಅದು ವ್ಯಕ್ತಿಯೊಳಗೆ ಅಪಾರ ಆತ್ಮವಿಶ್ವಾಸ ಮತ್ತು ಆಕರ್ಷಣೆಯನ್ನು ಸೃಷ್ಟಿಸುತ್ತದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+