ತ್ರಿಗ್ರಹಿ ಯೋಗ: ನಾಳೆಯಿಂದ ಈ 4 ರಾಶಿಯವರಿಗೆ ಸುವರ್ಣ ಕಾಲ ಆರಂಭ, ಒಲಿಯುವಳು ಅದೃಷ್ಟ ಲಕ್ಷ್ಮೀ!

Trigrahi Yoga 2026: ಜ್ಯೋತಿಷ್ಯದ ಪ್ರಕಾರ ಬುಧ ಗ್ರಹಗಳ ರಾಜಕುಮಾರ. ಈ ಗ್ರಹ ಬುದ್ಧಿವಂತಿಕೆ, ಮಾತು, ವ್ಯವಹಾರ, ತರ್ಕ ಮತ್ತು ಸಂವಹನದ ಅಂಶ. ಪಂಚಾಂಗದ ಪ್ರಕಾರ, ಬುಧ ಗ್ರಹ ನಾಳೆ ಅಂದರೆ ಆಗಸ್ಟ್ 5 ಕ್ಕೆ, ಸಂಜೆ 7:58 ಕ್ಕೆ ಕರ್ಕ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯ ಮತ್ತು ಗುರು ಈಗಾಗಲೇ ಕರ್ಕ ರಾಶಿಯಲ್ಲಿದ್ದಾರೆ. ಅಂದರೆ ಬುಧ ಕೂಡಾ ಕರ್ಕ ರಾಶಿಗೆ ಬಂದು ಸೇರಿದರೆ ಅಲ್ಲಿ ಬುಧ, ಗುರು ಮತ್ತು ಸೂರ್ಯನ ಸಂಯೋಗವಾಗಿ ಪ್ರಬಲವಾದ ತ್ರಿಗ್ರಹಿ ಯೋಗ ರೂಪುಗೊಳ್ಳುವುದು. ಈ ಯೋಗವು ವೃಷಭ ಮತ್ತು ಮಿಥುನ ಸೇರಿದಂತೆ ನಾಲ್ಕು ರಾಶಿಯವರಿಗೆ ಸಂಪತ್ತು ಮತ್ತು ಪ್ರಗತಿಯ ಸಾಮರ್ಥ್ಯವನ್ನು ತಂದು ಕೊಡ್ತದೆ. ಆಗಸ್ಟ್ 17ರವರೆಗೆ ಸೂರ್ಯ ಕರ್ಕ ರಾಶಿಯಲ್ಯೇ ಇರ್ತಾನೆ. ಅಂದರೆ ಅಲ್ಲಿಯವರೆಗೆ ಈ ಯೋಗದ ಪರಿಣಾಮ ಕೂಡಾ ಇರುವುದು.ತ್ರಿಗ್ರಹಿ ಯೋಗ ಯಾವ ರಾಶಿಯವರಿಗೆ ಅದೃಷ್ಟ ಹೊತ್ತು ತರುತ್ತದೆ ನೋಡೋಣ.

ವೃಷಭ ರಾಶಿ (Taurus) ದೊಡ್ಡ ಮಟ್ಟದ ಪ್ರಗತಿ ಸಿಗಲಿದೆ

ಈ ತ್ರಿಗ್ರಹಿ ಯೋಗವು ವೃಷಭ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿರುವುದು. ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವುದು. ಹೊಸ ಕೆಲಸ ಸಿಗುವುದು. ಕೆಲಸ ಬದಲಾಯಿಸಬೇಕು ಅಂದುಕೊಂಡವರಿಗೆ ಇದು ಸೂಕ್ತ ಸಮಯ. ಉದ್ಯಮಿಗಳಿಗೆ ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗುವುದು. ಕೈ ಹಾಕುವ ಕೆಲಸಗಳು ಯಶಸ್ಸಿನತ್ತಲೇ ಸಾಗುವುದು. ಯಾವುದೇ ಅಡೆತಡೆಯಿಲ್ಲದೆ ಕೆಲಸ ಮುಂದುವರಿಯಲಿದೆ. ಒಟ್ಟಿನಲ್ಲಿ ಉದ್ಯೋಗವೇ ಇರಲಿ, ವ್ಯವಹಾರವೇ ಇರಲಿ ಈ ಅವಧಿಯಲ್ಲಿ ಗೆಲುವಿನ ಹಾದಿಯಲ್ಲಿಯೇ ನಡೆಯುವಿರಿ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಹಣಕಾಸಿನ ಸಮಸ್ಯೆಗೂ ಪರಿಹಾರ ಸಿಗುವುದು.

Trigrahi Yoga 2026

ಮಿಥು ರಾಶಿ (Gemini) ಶುರು ಮಾಡಿದ ಕೆಲಸದಲ್ಲಿ ಯಶಸ್ಸು

ಸೂರ್ಯ, ಗುರು ಮತ್ತು ಬುಧರ ತ್ರಿಗ್ರಹ ಸಂಯೋಗವು ಮಿಥುನ ರಾಶಿಯವರಿಗೆ ಸಂಪತ್ತನ್ನು ತರುತ್ತದೆ. ನಿಮ್ಮ ಮಾತಿನಿಂದಲೂ ನಿಮಗೆ ಲಾಭವಾಗುವುದು. ಪ್ರಮುಖ ಕೆಲಸಗಳನ್ನು ಸುಲಭವಾಗಿ ಸಾಧಿಸಿ ಬಿಡುವಿರಿ.ಹಣದ ಸಮಸ್ಯೆಗಳನ್ನು ಎದುರಿಸುತ್ತಿದ್ದವರು ಅಥವಾ ಪ್ರಗತಿಯ ಹಾದಿಯಲ್ಲಿ ಅಡೆತಡೆಗಳನ್ನು ಎದುರಿಸಿದವರಿಗೆ ಪರಿಹಾರ ಸಿಗುವುದು. ಅರ್ಧಕ್ಕೆ ನಿಂತು ಹೋದ ಎಲ್ಲಾ ಕೆಲಸಗಳು ಮತ್ತು ವ್ಯವಹಾರಗಳನ್ನು ಪೂರ್ಣಗೊಳಿಸುವಿರಿ. ಕುಟುಂಬದೊಂದಿಗೆ ಸಮಯ ಕಳೆಯುವ ಮೂಲಕ ಸಂತೋಷದಿಂದ ಇರುವಿರಿ. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗುವುದು.

ಕನ್ಯಾ ರಾಶಿ (Virgo) ಹೊಸ ಆದಾಯದ ಮೂಲ ಸೃಷ್ಟಿ

ಕನ್ಯಾ ರಾಶಿಯವರಿಗೂ ತ್ರಿಗ್ರಹಿ ಯೋಗದ ರಚನೆ ಲಾಭದಾಯಕವಾಗಿರುವುದು. ಹೊಸ ಮೂಲದಿಂದ ಹಣ ಸಿಗಬಹುದು. ಹೆಚ್ಚಿನ ಹಣ ಸಂಪಾದಿಸಲು ಹೊಸ ಅರೆಕಾಲಿಕ ಉದ್ಯೋಗವನ್ನು ಪ್ರಾರಂಭಿಸಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಲಾಭವಾಗುವುದು. ಹಣ ಹೂಡಿಕೆಗೆ ಇದು ಸರಿಯಾದ ಸಮಯ. ಇದು ನಿಮ್ಮ ಪಾಲಿನ ಲಾಭದಾಯಕ ಸಮಯ. ಹಾಗಾಗಿ ಏನೇ ಕೆಲಸಕ್ಕೆ ಕೈ ಹಾಕಿದರೂ ಲಾಭವೇ ಆಗುವುದು. ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ.

Trigrahi Yoga 2026: ವೃಶ್ಚಿಕ ರಾಶಿ (Scorpio) ವಿದೇಶ ಪ್ರಯಾಣದ ಯೋಗವಿದೆ

ಸುಮಾರು 12 ದಿನಗಳ ಕಾಲ ಇರುವ ತ್ರಿಗ್ರಹಿ ಯೋಗವು ವೃಶ್ಚಿಕ ರಾಶಿಯವರಿಗೆ ವಿದೇಶ ಪ್ರಯಾಣದ ಅವಕಾಶವನ್ನು ನೀಡಬಹುದು. ಸಿಕ್ಕಿ ಹಾಕಿಕೊಂಡಿರುವ ಹಣ ವಾಪಸ್‌ ಬರುವುದು. ಸರ್ಕಾರಿ ವಲಯದಿಂದ ಹೆಚ್ಚಿನ ಪ್ರಯೋಜನಗಳಾಗುವುದು. ಈ ಸಮಯದಲ್ಲಿ ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಮನಸ್ಸಿನ ಶಾಂತಿ ಮತ್ತು ನೆಮ್ಮದಿ ಹೆಚ್ಚುವುದು. ಸಾಲ ನೀಡಿದ ಹಣವೂ ಮರಳಿ ಬರುವುದು. ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಪರಿಹಾರ ಸಿಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+