ಸೂರ್ಯ ಗೋಚರ : ಈ 3 ರಾಶಿಯವರ ಕಷ್ಟ ಕಾಲ ಶುರು : ಏನೇ ಮಾಡಿದರೂ ತಪ್ಪಲ್ಲ ಕಿರಿಕಿರಿ

Surya Sanchara 2026 : ಜ್ಯೋತಿಷ್ಯದ ಪ್ರಕಾರ, ಗ್ರಹ ಚಲನೆಯಲ್ಲಿನ ಬದಲಾವಣೆ ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಯಾವುದೇ ಒಂದು ಗ್ರಹ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಾಗುವುದನ್ನು ಗ್ರಹ ಸಂಚಾರ ಎಂದು ಕರೆಯಲಾಗುತ್ತದೆ. ಅಕ್ಟೋಬರ್ 17ಕ್ಕೆ ಸಂಜೆ 7.45 ಕ್ಕೆ, ಸೂರ್ಯ ಕನ್ಯಾರಾಶಿಯಿಂದ ಹೊರ ಬಂದು ತುಲಾ ರಾಶಿಗೆ ಪ್ರವೇಶಿಸುತ್ತಾನೆ. ಈ ಸಂಕ್ರಮಣವನ್ನು ಸೂರ್ಯನ ಕೆಳ ಸಂಚಾರ ಎಂದು ಪರಿಗಣಿಸಲಾಗಿದೆ. ಈ ಸಮಯ ಸೂರ್ಯನ ಪ್ರಭಾವ ದುರ್ಬಲಗೊಳ್ಳುತ್ತದೆ ಎನ್ನುವುದು ಜ್ಯೋತಿಷ್ಯ ನಂಬಿಕೆ.

Surya Sanchara 2026 Will Bring Tough Time To 3 Zodiac Sign Financial Trouble And Problem Every Step

ಸೂರ್ಯ ಸಂಚಾರದಿಂದ ಕೆಲವು ರಾಶಿಯವರಿಗೆ ತೊಂದರೆ :

ಸೂರ್ಯನನ್ನು ಆತ್ಮವಿಶ್ವಾಸ, ಆರೋಗ್ಯ (health), ಗೌರವ, ನಾಯಕತ್ವ, ಸ್ಥಾನಮಾನ ಮತ್ತು ಪ್ರತಿಷ್ಠೆಯ ಸೃಷ್ಟಿಕರ್ತ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಮುನ್ಸೂಚನೆಗಳ ಪ್ರಕಾರ, ಸೂರ್ಯನ ರಾಶಿ ಬದಲಾವಣೆಯಿಂದ ಅಕ್ಟೋಬರ್ 17 ರಿಂದ ನವೆಂಬರ್ 17 ರವರೆಗೆ ಕೆಲವು ರಾಶಿಯವರ ಜೀವನದಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಉದ್ಯೋಗ, ಕೌಟುಂಬಿಕ ಸಂಬಂಧ ಮತ್ತು ಆರ್ಥಿಕ ವಿಷಯದಲ್ಲಿ ಜಾಗರೂಕರಾಗಿರಬೇಕು. ವಿಶೇಷವಾಗಿ ಮಿಥುನ ರಾಶಿ, ಕರ್ಕಾಟಕ ರಾಶಿ ಮತ್ತು ವೃಶ್ಚಿಕ ರಾಶಿಯವರು ಈ ಸಮಯದಲ್ಲಿ ಹೆಚ್ಚು ಜಾಗೃತೆಯಿಂದ ಇರಬೇಕು. ಈ ಹೊತ್ತಿನಲ್ಲಿ ಮೈಯೆಲ್ಲಾ ಕಣ್ಣಾಗಿದ್ದರೂ ಸಾಲದು.

ಮಿಥುನ ರಾಶಿ (Gemini):

ಸೂರ್ಯ ಸಂಚಾರ ಮಿಥುನ ರಾಶಿಯವರ ಮಾನಸಿಕ ಒತ್ತಡ ಹೆಚ್ಚಾಗುವುದು. ಎಷ್ಟೇ ಪ್ರಯತ್ನ ಮಾಡಿದರೂ ಅರ್ಧಕ್ಕೆ ನಿಂತಿರುವ ಕೆಲಸ ಪೂರ್ಣವಾಗುವುದೇ ಇಲ್ಲ. ಮಾನಸಿಕ ಕಿರಿ ಕಿರಿ ಹೆಚ್ಚಾಗುವುದು. ಕಷ್ಟಪಟ್ಟು ಕೆಲಸ ಮಾಡಿದರೂ, ನಿಮಗೆ ಸಿಗಬೇಕಾದ ಮನ್ನಣೆ ಸಿಗುವುದೇ ಇಲ್ಲ. ಕೆಲಸದ ಒತ್ತಡದಿಂದಾಗಿ ಆಯಾಸ, ಹತಾಶೆ ಹೆಚ್ಚಾಗುವ ಸಾಧ್ಯತೆಯಿದೆ. ಸಣ್ಣ ಸಣ್ಣ ವಿಷಯಗಳಿಗೂ ಕಿರಿ ಕಿರಿ ಹೆಚ್ಚಾಗುವುದು. ಮೇಲಧಿಕಾರಿಯೊಂದಿಗೆ, ಸಹೋದ್ಯೋಗಿಯೊಂದಿಗೆ ವಾದ ಮಾಡಲು ಹೋಗಬೇಡಿ. ಈ ಸಮಯದಲ್ಲಿ ನೀವು ಏನೇ ಮಾಡಿದರೂ ಎಲ್ಲವೂ ನಿಮ್ಮ ವಿರುದ್ಧವಾಗಿಯೇ ಇರುವುದು.

Surya Sanchara ಕರ್ಕಾಟಕ ರಾಶಿ (Cancer) :

ಕೌಟುಂಬಿಕ ಸಂಬಂಧಗಳ (relationship) ದೃಷ್ಟಿಯಿಂದ ಈ ಅವಧಿ ತುಂಬಾ ಸೂಕ್ಷ್ಮವಾಗಿರುವುದು. ಆಪ್ತರು ಅಥವಾ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗುವುದು. ಅನಿರೀಕ್ಷಿತ ಖರ್ಚು ಹುಟ್ಟಿಕೊಳ್ಳುವುದು. ಹಣಕಾಸಿನ ಯೋಜನೆಯಲ್ಲಿ ಸಮಸ್ಯೆ ಹೆಚ್ಚಾಗುವುದು. ಯಾರಿಗೂ ಸಾಲ ಕೊಡಲು ಹೋಗಬೇಡಿ. ಈ ಅವಧಿಯಲ್ಲಿ ಹೊರಗೆ ಕೊಡುವ ಹಣ ಮತ್ತೆ ವಾಪಾಸಾಗುವ ಸಾಧ್ಯತೆ ತೀರಾ ಕಡಿಮೆ. ಯಾವ ಹೂಡಿಕೆಯನ್ನು ಕೂಡಾ ಮಾಡಲು ಹೋಗಬೇಡಿ. ಹೊಸ ಕೆಲಸ ಮಾಡುವ ನಿರ್ಧಾರ ಮುಂದಕ್ಕೆ ಹಾಕಿ. ಯಾರೊಂದಿಗೂ ಜಗಳಕ್ಕೆ ಹೋಗಬೇಡಿ. ಮಾನಸಿಕ ಒತ್ತಡ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ.

ವೃಶ್ಚಿಕ ರಾಶಿ (Scorpio):

ಕಠಿಣ ಪರಿಶ್ರಮದ ಫಲಿತಾಂಶ ವಿಳಂಬವಾಗಬಹುದು. ನಿರಾಶೆ ಹೆಚ್ಚಾಗುವುದು. ಹಣಕಾಸಿನ ಯೋಜನೆಯಲ್ಲಿ ಹಿನ್ನೆಡೆಯಾಗುವುದು. ಸಾಲ ಸಮಸ್ಯೆ ಕಾಡಬಹುದು. ಐಶಾರಾಮಿ ವಸ್ತುಗಳನ್ನು ಖರೀದಿ ಮಾಡುವ ನಿರ್ಧಾರ ಮುಂದಕ್ಕೆ ಹಾಕಿ. ಆತುರಕ್ಕೆ ಬಿದ್ದು ಯಾವ ನಿರ್ಧಾರ ಕೂಡಾ ತೆಗೆದುಕೊಳ್ಳಬೇಡಿ. ಈ ಸಮಯದಲ್ಲಿ ಎಷ್ಟು ತಾಳ್ಮೆ ವಹಿಸಿದರೂ ಸಾಕಾಗಲ್ಲ. ಪ್ರತೀ ಹೆಜ್ಜೆ ಎಚ್ಚರಿಕೆಯಿಂದ ಇಡಬೇಕು. ಖರ್ಚುಗಳನ್ನು ನಿಯಂತ್ರಿಸಲೇ ಬೇಕು, ಇಲ್ಲವಾದರೆ ಸಮಸ್ಯೆ ಎದುರಾಗುವುದು ಖಂಡಿತಾ. ಹೊಸ ಕೆಲಸಕ್ಕೆ ಕೈ ಹಾಕಲೇ ಬೇಡಿ. ಕಚೇರಿ ವಿವಾದಗಳಿಂದ ದೂರವಿರುವುದು ಮುಖ್ಯ.

ಪರಿಹಾರ : ಸೂರ್ಯನು ತುಲಾ ರಾಶಿಯಲ್ಲಿರುವವರೆಗೆ, ಪ್ರತಿದಿನ ಬೆಳಿಗ್ಗೆ ತಾಮ್ರದ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಸೂರ್ಯನಿಗೆ ಅರ್ಪಿಸಬೇಕು. ಹಿರಿಯರನ್ನು ಗೌರವಿಸುವುದನ್ನು ರೂಢಿ ಮಾಡಿಕೊಳ್ಳಿ. ಮಿಥುನ ರಾಶಿ, ಕರ್ಕಾಟಕ ರಾಶಿ ಮತ್ತು ವೃಶ್ಚಿಕ ರಾಶಿಯವರು ನವೆಂಬರ್ 17 ರವರೆಗೆ ಏನೇ ಕೆಲಸ ಮಾಡಬೇಕಾದರೂ ಹತ್ತು ಸಾರಿ ಯೋಚಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+