Surya Gochar: ವರ್ಷಗಳ ನಂತರ ಒಂದೇ ರಾಶಿಯಲ್ಲಿ ಸೂರ್ಯ- ಕೇತು: 3 ರಾಶಿಯವರಿಗೆ ಧನಲಾಭ, ವೃತ್ತಿ ಪದೋನ್ನತಿ

ಆಗಸ್ಟ್ ತಿಂಗಳು ಜ್ಯೋತಿಷ್ಯ ದೃಷ್ಟಿಕೋನದಿಂದ ಅತ್ಯಂತ ಮಹತ್ವದ್ದಾಗಿದೆ. ಆಗಸ್ಟ್ 17, 2026 ರಂದು, ಗ್ರಹಗಳ ರಾಜನಾದ ಸೂರ್ಯ ತನ್ನದೇ ಅಧಿಪತ್ಯದ ರಾಶಿ ಸಿಂಹವನ್ನು ಪ್ರವೇಶಿಸುತ್ತಾನೆ. ಕೇತು ಈಗಾಗಲೇ ಸಿಂಹ ರಾಶಿಯಲ್ಲಿಯೇ ಸಂಚಾರ ಮಾಡುತ್ತಿದ್ದಾರೆ. ಹೀಗಾಗಿ ಸೂರ್ಯ ಮತ್ತು ಕೇತುವಿನ ನಡುವೆ ಪ್ರಬಲವಾದ ಸಂಯೋಗ ಸಿಂಹ ರಾಶಿಯಲ್ಲಿ ಆಗುತ್ತದೆ. ಈ ಸಂಯೋಗವನ್ನು ಖಗೋಳ ಮತ್ತು ಜ್ಯೋತಿಷ್ಯ ಎರಡೂ ದೃಷ್ಟಿಕೋನದಲ್ಲಿಯೂ ಬಹಳ ಮುಖ್ಯ ಎಂದು ಹೇಳಲಾಗಿದೆ.

ಜ್ಯೋತಿಷ್ಯ ತಜ್ಞರ ಪ್ರಕಾರ, ಸೂರ್ಯ ಮತ್ತು ಕೇತುವಿನ ಈ ಸಂಯೋಗವು ಮುಂದಿನ 30 ದಿನಗಳಲ್ಲಿ ಕೆಲವು ರಾಶಿಯವರಿಗೆ ರಾಜಯೋಗವನ್ನು ತರಲಿದೆ. ಸೂರ್ಯ ಕೇತು ಸಂಯೋಗದಿಂದ ಕೆಲವು ರಾಶಿಯವರಿಗೆ ಹೆಚ್ಚು ಪ್ರಯೋಜನವಾಗಲಿದೆ. ಈ ರಾಶಿಯವರು ಪ್ರತಿ ಹೆಜ್ಜೆಯಲ್ಲಿಯೂ ಯಶಸ್ಸು ಸಾಧಿಸಲಿದ್ದಾರೆ.

Surya Ketu Transit

ರಾಶಿಗಳ ಮೇಲೆ ಸೂರ್ಯ-ಕೇತು ಸಂಯೋಗದ ಪರಿಣಾಮ:

ಈ ಸಂಯೋಗವು ಸೂರ್ಯನ ಸ್ವಂತ ರಾಶಿಯಾದ ಸಿಂಹ ರಾಶಿಯಲ್ಲಿ ನಡೆಯುತ್ತಿದೆ. ಸೂರ್ಯನು ತನ್ನದೇ ಆದ ಮನೆಯಲ್ಲಿದ್ದಾಗ, ಅದು ಅತ್ಯಂತ ಶಕ್ತಿಶಾಲಿಯಾಗಿರುತ್ತದೆ. ಕೇತು ಪ್ರತ್ಯೇಕತೆ ಮತ್ತು ಆಧ್ಯಾತ್ಮಿಕತೆಯನ್ನು ಪ್ರತಿನಿಧಿಸಿದರೆ, ಸೂರ್ಯನೊಂದಿಗಿನ ಅದರ ಸಂಯೋಗವು ಧೈರ್ಯ ಮತ್ತು ನಾಯಕತ್ವದ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ.

1. ಸಿಂಹ ರಾಶಿ (Leo):

ಈ ಸಂಯೋಗವು ಸಿಂಹ ರಾಶಿಯಲ್ಲಿ ಸಂಭವಿಸುತ್ತಿದೆ. ಆದ್ದರಿಂದ ಈ ರಾಶಿಯವರಿಗೆ ಹೆಚ್ಚಿನ ಲಾಭವಾಗುತ್ತದೆ. ನಿಮ್ಮ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವು ಹೊಸ ಎತ್ತರಕ್ಕೆ ಹೋಗುವುದು. ಸಾಮಾಜಿಕ ಸ್ಥಾನಮಾನ ಹೆಚ್ಚಾಗುವುದು. ಬಾಕಿ ಇರುವ ಕೆಲಸಗಳು ಬೇಗನೆ ಪೂರ್ಣಗೊಳ್ಳುವುದು. ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವ ಸಾಧ್ಯತೆಯಿದೆ.

2. ಕನ್ಯಾ ರಾಶಿ (Virgo):

ಈ ಸಮಯವು ಆರ್ಥಿಕ ದೃಷ್ಟಿಕೋನದಿಂದ ಕನ್ಯಾ ರಾಶಿಯವರಿಗೆ ತುಂಬಾ ಅನುಕೂಲಕರ ಆಗಲಿರಲಿದೆ. ಹೂಡಿಕೆಗಳಿಂದ ಲಾಭ ಪಡೆಯುವ ಬಲವಾದ ಸಾಧ್ಯತೆಯಿದೆ. ತುಂಬಾ ದಿನಗಳಿಂದ ನಿಂತು ಹೋಗಿರುವ ಕೆಲಸ ಪೂರ್ಣವಾಗುವುದು. ಈ ಅವಧಿಯಲ್ಲಿ ಯಶಸ್ಸಿನ ದಾರಿ ತೆರೆದುಕೊಳ್ಳುವುದು. ಹಣಕಾಸಿನ ವಿಷಯದಲ್ಲಿ ಸ್ಥಿರತೆ ಇರುವುದು. ಹೊಸ ಆದಾಯದ ಮೂಲಗಳು ತೆರೆದುಕೊಳ್ಳಬಹುದು.

3. ಧನು ರಾಶಿ (Sagitarius) :

ಈ ಸಂಯೋಗವು ಧನು ರಾಶಿಯವರ ಅದೃಷ್ಟದ ಬಾಗಿಲು ತೆರೆಯುವುದು. ಬಾಕಿ ಕೆಲಸಗಳು ಪೂರ್ಣಗೊಳ್ಳುವುದು. ದೂರದ ಊರಿಗೆ ಪ್ರಯಾಣ ಬೆಳೆಸುವಿರಿ. ವಿದೇಶ ಪ್ರಯಾಣದ ಯೋಗವೂ ಇದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗುವಿರಿ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುವುದು. ಮಾನಸಿಕ ಶಾಂತಿ ಹೆಚ್ಚಾಗುವುದು.

ಸೂರ್ಯ ಕೇತು ಸಂಯೋಗದ ಶುಭ ಫಲವನ್ನು ಹೆಚ್ಚಿಸುವುದು ಹೇಗೆ?

ಸೂರ್ಯ ಮತ್ತು ಕೇತುವಿನ ಸಂಯೋಗದ ಪರಿಣಾಮವು ಒಂದು ತಿಂಗಳ ಕಾಲ ಇರುತ್ತದೆ. ಈ ಅವಧಿಯಲ್ಲಿ ಶುಭ ಫಲಿತಾಂಶಗಳನ್ನು ಸಾಧಿಸಲು ಈ ಕೆಳಗಿನ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು.

ಸೂರ್ಯ ದೇವರಿಗೆ ಜಲವನ್ನು ಅರ್ಪಿಸಿ: ಪ್ರತಿದಿನ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ, ತಾಮ್ರದ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಸೂರ್ಯದೇವರಿಗೆ ಅರ್ಪಿಸಿ. ಅಕ್ಷತೆ ಮತ್ತು ಕುಂಕುಮವನ್ನು ಕೂಡಾ ಅರ್ಪಿಸಿ ಓಂ ಸೂರ್ಯಾಯ ನಮಃ ಎಂದು ಜಪಿಸಿ.

ಕೇತುವಿಗೆ ದಾನ: ಕೇತುವಿನ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸಲು ಕಪ್ಪು ಮತ್ತು ಬಿಳಿ ಎಳ್ಳು ದಾನ ಮಾಡಿ. ಕಂಬಳಿಗಳನ್ನು ಕೂಡಾ ದಾನ ಮಾಡಬಹುದು.

ಶಿಸ್ತು ಕಾಪಾಡಿಕೊಳ್ಳಿ: ಸೂರ್ಯನ ಪ್ರಭಾವ ನಮ್ಮ ಜಾತಕದಲ್ಲಿ ಹೆಚ್ಚಾಗಬೇಕಾದರೆ ಶಿಸ್ತು ಪಾಲಿಸಬೇಕು. ಆದ್ದರಿಂದ ಈ ಸಮಯದಲ್ಲಿ ಸೋಮಾರಿತನವನ್ನು ಬಿಟ್ಟುಬಿಡಿ. ನಿಮ್ಮ ಕೆಲಸದ ಸ್ಥಳದಲ್ಲಿ ಸಂಪೂರ್ಣ ಪ್ರಾಮಾಣಿಕತೆಯಿಂದ ಕೆಲಸ ಮಾಡಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+