ರಾಜಯೋಗದಿಂದ 4 ರಾಶಿಯವರಿಗೆ ಅದೃಷ್ಟ! ಅನಿರೀಕ್ಷಿತ ಧನ ಲಾಭ: ಸ್ವಂತ ಮನೆ, ಸಕಾರಾತ್ಮಕ ಪ್ರಗತಿ

ಜ್ಯೋತಿಷ್ಯದ ಪ್ರಕಾರ, ಬುಧ ಗ್ರಹವು ಬುದ್ಧಿವಂತಿಕೆ, ಆಲೋಚನಾ ಶಕ್ತಿ, ಮಾತು, ವ್ಯವಹಾರ ಮತ್ತು ಸಂವಹನಕ್ಕೆ ಕಾರಣ ಕರ್ತ ಎನ್ನಲಾಗುತ್ತದೆ. ಮತ್ತೊಂದು ಕಡೆ ಸೂರ್ನು ಆತ್ಮವಿಶ್ವಾಸ, ಪಿತೃತ್ವ, ಗೌರವ, ನಾಯಕತ್ವ ಮತ್ತು ಆರೋಗ್ಯವನ್ನು ಸಂಕೇತಿಸುತ್ತಾನೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಆಗಸ್ಟ್ 27, 2026 ರಂದು ರಾತ್ರಿ 10:31 ಕ್ಕೆ ಸೂರ್ಯ ಮತ್ತು ಬುಧ ವಿಶೇಷ ಸ್ಥಾನಕ್ಕೆ ಬಂದಾಗ ಶುಭ ಯೋಗವೊಂದು ರೂಪುಗೊಳ್ಳುವುದು. ಈ ಯೋಗದ ಪ್ರಭಾವದಿಂದ, ನಾಲ್ಕು ರಾಶಿಯವರಿಗೆ ಹಣ, ಉದ್ಯೋಗ ಮತ್ತು ವ್ಯವಹಾರದ ವಿಷಯದಲ್ಲಿ ಹೊಸ ಅವಕಾಶಗಳು ಬರಬಹುದು.

ವೃಷಭ ರಾಶಿ (Taurus):

ವೃಷಭ ರಾಶಿಯವರಿಗೆ ಸೂರ್ಯ-ಬುಧ ಯೋಗವು ಶುಭ ಫಲವನ್ನು ನೀಡುವುದು. ವ್ಯವಹಾರದಲ್ಲಿ ಹೊಸ ಅವಕಾಶಗಳು ಹುಟ್ಟಿಕೊಳ್ಳಬಹುದು. ಹೊಸ ಆದಾಯದ ಮಾರ್ಗಗಳು ತೆರೆದು ಕೊಳ್ಳುವುದು. ತುಂಬಾ ದಿನಗಳಿಂದ ನಿಂತು ಹೋಗಿದ್ದ ಕೆಲಸ ಮತ್ತೆ ಮುಂದುವರಿಯುವ ಸಾಧ್ಯತೆಯಿದೆ. ಉದ್ಯೋಗಿಗಳಿಗೆ ಹೊಸ ಜವಾಬ್ದಾರಿ, ಬಡ್ತಿ ಅಥವಾ ಉತ್ತಮ ಅವಕಾಶಗಳು ಸಿಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕ ಲಾಭವಾಗುವುದು. ಮನೆಯಲ್ಲಿ ಮದುವೆ ಮಾತುಕತೆ ನಡೆಯುವ ಸಾಧ್ಯತೆ ಇದೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಬಹುದು. ಕುಟುಂಬ ವಿಷಯಗಳಲ್ಲಿ ಸ್ವಲ್ಪ ಶಾಂತಿ ಮತ್ತು ಪರಿಹಾರವೂ ಸಿಗಬಹುದು.

Sun Mercury Transit

ಮಿಥುನ ರಾಶಿ (Gemini):

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ-ಬುಧ ಯೋಗವು ಮಿಥುನ ರಾಶಿಯವರಿಗೆ ಅನುಕೂಲಕರವಾಗಿರುವುದು. ಈ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ. ಆದಾಯದಲ್ಲಿ ಹೆಚ್ಚಳವಾಗುವುದು. ಆರ್ಥಿಕ ಒತ್ತಡ ಕಡಿಮೆಯಾಗಬಹುದು. ಉದ್ಯೋಗದಲ್ಲಿರುವವರು ತಮ್ಮ ಕಚೇರಿಯಲ್ಲಿ ಕೆಲಸದಲ್ಲಿ ಪ್ರಗತಿ ಸಾಧಿಸುವರು. ಹೊಸ ಅವಕಾಶಗಳನ್ನು ಕೂಡಾ ಪಡೆಯಬಹುದು. ಉದ್ಯಮಿಗಳಿಗೂ ಹೊಸ ಅವಕಾಶಗಳು ಸಿಗುವ ಸೂಚನೆಗಳಿವೆ. ಕುಟುಂಬ ಜೀವನದಲ್ಲಿಯೂ ಸಕಾರಾತ್ಮಕ ಬದಲಾವಣೆಗಳಾಗುವುದು. ಮನೆ ನಿರ್ಮಾಣದ ಕನಸು ನನಸಾಗುವುದು. ಹೊಸ ವಾಹನ ಖರೀದಿ ಯೋಗವೂ ಇದೆ. ದೀರ್ಘಕಾಲದಿಂದ ಬಗೆಹರಿಯದ ಸಮಸ್ಯೆಗೆ ಪರಿಹಾರ ಸಿಗುವುದು. ಕುಟುಂಬ ಸದಸ್ಯರ ನಡುವಿನ ಬಾಂಧವ್ಯ ಮತ್ತಷ್ಟು ಹೆಚ್ಚಾಗುವುದು.

ಸಿಂಹ ರಾಶಿ (Leo):

ಈ ಯೋಗವು ಸಿಂಹ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುವುದು. ಕೆಲಸದ ಉತ್ಸಾಹ ಹೆಚ್ಚಾಗುವುದು. ಕೆಲಸದಲ್ಲಿ ಪ್ರಗತಿ, ಹೊಸ ಜವಾಬ್ದಾರಿಗಳು ಅಥವಾ ಪ್ರಮುಖ ಅವಕಾಶಗಳು ಸಿಗಬಹುದು. ಈ ಸಮಯ ಆರ್ಥಿಕವಾಗಿಯೂ ಅನುಕೂಲಕರವಾಗಿರುವುದು. ವ್ಯಾಪಾರದಲ್ಲಿ ಆಗುತ್ತಿದ್ದ ನಷ್ಟಗಳು ಸರಿ ಹೊಂದುವುದು. ಸಾಲದಿಂದ ಮುಕ್ತಿ ಸಿಗುವುದು. ಉದ್ಯಮಿಗಳು ಹೊಸ ಒಪ್ಪಂದಗಳಿಗೆ ಸಹಿ ಹಾಕಬಹುದು. ವ್ಯವಹಾರವನ್ನು ವಿಸ್ತರಿಸಲು ಅವಕಾಶ ಸಿಗುವುದು. ಆದಾಯ ಹೆಚ್ಚಾಗುವುದರ ಜೊತೆಗೆ, ಹೆಚ್ಚುವರಿ ಆದಾಯದ ಮೂಲಗಳು ಕೂಡಾ ಸೃಷ್ಟಿಯಾಗುವ ಸಾಧ್ಯತೆ ಇದೆ. ಪ್ರೀತಿ ಮತ್ತು ಕುಟುಂಬ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು.

ಮೀನ ರಾಶಿ (Pisces):

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ-ಬುಧನ ಈ ವಿಶೇಷ ಸಂಯೋಗವು ಮೀನ ರಾಶಿಯವರಿಗೆ ಸ್ವಲ್ಪ ಆರ್ಥಿಕ ಪರಿಹಾರವನ್ನು ತರಬಹುದು. ಹೊಸ ವ್ಯವಹಾರ ಒಪ್ಪಂದಗಳು ಅಥವಾ ಹೂಡಿಕೆಗೆ ಅವಕಾಶಗಳು ಸಿಗಬಹುದು. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಮುಂದುವರಿಯುವ ಸಾಧ್ಯತೆಯಿದೆ. ಹೊಸ ಕೆಲಸಕ್ಕೆ ಕೈ ಹಾಕಬಹುದು.

ಉದ್ಯೋಗ ಬದಲಾಯಿಸುವವರಿಗೂ ಇದು ಒಳ್ಳೆಯ ಸಮಸಯ. ಪೂರ್ವಜರ ಆಸ್ತಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವ ಸಾಧ್ಯತೆಯಿದೆ. ಸಾಮಾಜಿಕ ಗೌರವ ಮತ್ತು ಮನ್ನಣೆ ಹೆಚ್ಚಾಗುವುದು. ಹಣ, ವ್ಯವಹಾರ ಮತ್ತು ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುವುದು.

ಪ್ರತಿಯೊಬ್ಬರ ವೈಯಕ್ತಿಕ ಜಾತಕದಲ್ಲಿ ಗ್ರಹ, ನಕ್ಷತ್ರಗಳ ಸ್ಥಾನ, ಪಾದಗಳಿಗೆ ಅನುಸಾರವಾಗಿ ಶುಭ ಅಶುಭ ಫಲಗಳು ಬದಲಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+