ಈ ರಾಶಿಯವರಿಗೆ ಶುಕ್ರ ದೆಸೆ :ಜೀವನದ ಟರ್ನಿಂಗ್‌ ಪಾಯಿಂಟ್‌, ಶ್ರೀಮಂತರಾಗುವ ಕಾಲ

Shukra Gochara: ಶುಕ್ರನನ್ನು ಸಂಪತ್ತು, ಪ್ರೀತಿ, ಮದುವೆ, ಸಂತೋಷ ಮತ್ತು ಸಮೃದ್ಧಿಯ ಗ್ರಹ ಅಂತ ಹೇಳಲಾಗುತ್ತದೆ. ಈಗಾಗಲೇ ಶುಕ್ರ ತುಲಾ ರಾಶಿಯನ್ನು ಪ್ರವೇಶಿಸಿದ್ದಾನೆ. ನವೆಂಬರ್‌ 6 ರವರೆಗೆ ಅದರೆ ಮುಂದಿನ ಒಂದು ತಿಂಗಳು ಇದೇ ರಾಶಿಯಲ್ಲಿ ಸಂಚಾರ. ತುಲಾ ರಾಶಿಯಲ್ಲಿ ಶುಕ್ರನ ಸಂಚಾರ ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.

ಶುಕ್ರನ ಈ ಸಂಚಾರದಿಂದಾಗಿ 5 ರಾಶಿಯವರುಗೆ ಧನಲಾಭ ಮತ್ತು ಆಸ್ತಿ ಗಳಿಕೆಯ ಶುಭ ಯೋಗಗಳು ರೂಪುಗೊಳ್ಳುತ್ತದೆ. ಆದರೆ 3 ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚಿ ಜಾಗರೂಕರಾಗಿರಬೇಕು.

Shukra Gochara In Libra Major Turning Point For Five Zodiac Sign Tough Time For Three Till November 6

ಮೇಷ ರಾಶಿ (Aries):

ಶುಕ್ರನ ಈ ಸಂಚಾರ ಮೇಷ ರಾಶಿಯವರಿಗೆ ಅಷ್ಟಾಗಿ ಅನುಕೂಲಕರವಲ್ಲ. ಕೌಟುಂಬಿಕ ಸಮಸ್ಯೆ, ಮಾನಸಿಕ ಒತ್ತಡ ಹೆಚ್ಚಾಗಬಹುದು. ಮಾತೇ ನಿಮಗೆ ಮುಳ್ಳಾಗಬಹುದು. ನೀವಾಡುವ ಮಾತಿನಿಂದ ಮನೆಯಲ್ಲಿ ಭಿನ್ನಾಭಿಪ್ರಾಯ ಏಳಬಹುದು. ಈ ಹೊತ್ತಿನಲ್ಲಿ ಎಷ್ಟು ತಾಳ್ಮೆಯಿಂದ ಇರುವಿರೋ ಅಷ್ಟು ಒಳ್ಳೆಯದು. ಹಣದ ವಿಷಯದಲ್ಲೂ ಬಹಳ ಜಾಗೃತೆ ಬೇಕು.

Shukra Gocharaದ ಪ್ರಭಾವ ವೃಷಭ ರಾಶಿ ಮೇಲೆ (Taurus):

ಆರೋಗ್ಯದ ( health) ಮೇಲೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಸ್ವಲ್ಪ ಅಸಡ್ಡೆ ಮಾಡಿದರೂ ಗಂಭೀರ ಪರಿಣಾಮ ಎದುರಾಗುವುದು. ಕೆಲಸದ ಒತ್ತಡ ಹೆಚ್ಚಾಗುವುದು. ಆದರೂ ವಿಶ್ರಾಂತಿ ಪಡೆಯುವುದನ್ನು ಮರೆಯಬೇಡಿ.ನಿಮ್ಮ ದೇಹ ಮತ್ತು ಮನಸ್ಸು ಎರಡಕ್ಕೂ ವಿಶ್ರಾಂತಿ ಕೊಡಿ. ಯಾರ ಮೇಲೂ ಕೂಗಾಡುವುದಕ್ಕೆ ಹೋಗಬೇಡಿ. ಖರ್ಚು ಸೂಕ್ಷ್ಮವಾಗಿದ್ದಷ್ಟು ಒಳ್ಳೆಯದು.

ಮಿಥುನ ರಾಶಿ (Gemini):

ಮಿಥುನ ರಾಶಿಯವರಿಗೆ ಈ ಸಂಚಾರದ ಅವಧಿ ಸಮಾಧಾನ ತರಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ನಿಂತುಹೋಗಿದ್ದ ಹಣಕಾಸಿನ ವ್ಯವಹಾರ ಮತ್ತೆ ಶುರುವಾಗುವುದು. ಇದರಿಂದ ಲಾಭವೂ ಆಗುವುದು. ಕೆಲಸದಲ್ಲಿ ಹೊಸ ಅವಕಾಶ ಸಿಗುವುದು. ಒಳ್ಳೆಯ ಕಂಪನಿಯಿಂದ ಆಫರ್‌ ಬರುವುದು.

ಕರ್ಕಾಟಕ ರಾಶಿ (Cancer):

ಹಣ ಮತ್ತು ಆಸ್ತಿ ಗಳಿಕೆಯ ದೃಷ್ಟಿಯಿಂದ ನೋಡುವುದಾದರೆ ಇದು ನಿಮ್ಮ ಪಾಲಿನ ಅತ್ಯಂತ ಶುಭ ಸಮಯ. ಆಸ್ತಿ ಖರೀದಿ ಲಾಭ ತರುವುದು. ನೀವು ಮಾಡುವ ಕೆಲಸಕ್ಕೆ ಕುಟುಂಬ ಸದಸ್ಯರು ಬೆಂಬಲ ನೀಡುವರು. ಹಳೆಯ ವಿವಾದಗಳು ಬಗೆಹರಿಯಲಿವೆ.

ಸಿಂಹ ರಾಶಿ (Leo):

ವೃತ್ತಿ ಮತ್ತು ಹಣಕಾಸಿನ ಕ್ಷೇತ್ರದಲ್ಲಿ ಉತ್ತಮ ಯೋಗಗಳು ರೂಪುಗೊಳ್ಳುತ್ತಿವೆ. ಹೊಸ ಜವಾಬ್ದಾರಿ ಸಿಗುವುದು. ಈ ತಿಂಗಳಲ್ಲಿ ಶುಭ ಸುದ್ದಿ ಸಿಗಬಹುದು. ವ್ಯಾಪಾರಸ್ಥರಿಗೆ ಲಾಭ ಗಳಿಸುವ ಅವಕಾಶ ಇದೆ. ಅದರೂ ಹಣದ ವಿಷಯದಲ್ಲಿ ಸ್ವಲ್ಪ ಎಚ್ಚರ ಇರಲಿ.ಆದಾಯ (income), ಖರ್ಚಿನ ನಡುವೆ ಸಮತೋಲನ ಇರಲಿ. ರಿಸ್ಕ್ ತೆಗೆದುಕೊಳ್ಳುವುದು ಬೇಡ.

ಕನ್ಯಾ ರಾಶಿ (Virgo):

ಹಣದ ಸಮಸ್ಯೆಗೆ ಪರಿಹಾರ ಸಿಗುವುದು. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳುವುದು. ಹಳೆಯ ಹೂಡಿಕೆ ಅಥವಾ ಆಸ್ತಿಯಿಂದ ಉತ್ತಮ ಲಾಭವಾಗುವುದು. ಖರ್ಚು ಮತ್ತು ಉಳಿತಾಯದ ನಡುವೆ ಸಮತೋಲನ ಇರಲಿ.

ತುಲಾ ರಾಶಿ (Libra):

ಶುಕ್ರನು ಇದೇ ರಾಶಿಯಲ್ಲಿ ಸಂಚಾರ ಮಾಡ್ತಾ ಇರೋದ್ರಿಂದ ಈ ರಾಶಿಯವರಿಗೆ ವಿಶೇಷ ಫಲ ಸಿಗವುದು. ವೃತ್ತಿ, ಕುಟುಂಬ ಮತ್ತು ವೈಯಕ್ತಿಕ ಜೀವನದಲ್ಲಿಯೂ ಬದಲಾವಣೆಯಾಗುವುದು. ಕಂಡ ಕನಸು ನನಸಾಗುವುದು. ಹೊಸ ಕೆಲಸ ಸಿಗುವುದು. ಮನೆ ಖರೀದಿ ಆಸೆ ಈಡೇರುವುದು.

ವೃಶ್ಚಿಕ ರಾಶಿ (Scorpio):

ಮನೆಯಲ್ಲಿ ಶುಭ ಕಾರ್ಯ ನೆರವೇರುವುದು. ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದೆ. ಆದರೆ ಭಾವನೆಗಳಿಗೆ ಕಟ್ಟು ಬಿದ್ದು ಯಾವ ದೊಡ್ಡ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ. ಹಣ ವಿಪರೀತ ಖರ್ಚಾಗಬಹುದು. ಕಾಲು ನೋವಿನ ಸಮಸ್ಯೆ ಕಾಣಿಸಿಕೊಳ್ಳಬಹುದು.

ಧನು ರಾಶಿ (Sagittarius):

ಸಂಪತ್ತು (assets) ಮತ್ತು ಆಸ್ತಿ ಗಳಿಕೆ ವಿಚಾರದಲ್ಲಿ ಉತ್ತಮ ಲಾಭವಾಗಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಹೊಸ ಆದಾಯದ ಮಾರ್ಗಗಳು ತೆರೆದುಕೊಳ್ಳುವುದು. ಆದಾಯ ಹೆಚ್ಚಿದರೂ ಅನಗತ್ಯ ಖರ್ಚುಗಳನ್ನು ನಿಲ್ಲಿಸಿದರೆ ಒಳ್ಳೆಯದು. ಮನೆ ನಿರ್ಮಾಣಕ್ಕೆ ಇಳಿಯಬಹುದು.

ಮಕರ ರಾಶಿ (Capricorn):

ಈ ಸಮಯದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಮಾನಸಿಕ ಒತ್ತಡ ಹೆಚ್ಚಾಗಬಹುದು. ಮನೆಯಲ್ಲಿ ಅಶಾಂತಿಯ ವಾತಾವರಣ ಇರುವುದು. ಸಣ್ಣ ವಿಷಯವನ್ನು ಸುಮ್ಮನೆ ಎಳೆದು ಎಳೆದು ದೊಡ್ಡದು ಮಾಡಬೇಡಿ. ಕೋಪ ನಿಯಂತ್ರಣದಲ್ಲಿರಲಿ. ಕೋಪದ ಕೈಗೆ ಬುದ್ದಿ ಕೊಟ್ಟು ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ.

ಕುಂಭ ರಾಶಿ (Aquarius):

ಬಂಪರ್ ಲಾಭವಾಗುವ ಸಮಯ. ಸಂಪತ್ತು ಹೆಚ್ಚಾಗುವುದು. ನಿಮಗೆ ಇಷ್ಟವಾದ ಉಡುಗೊರೆ ಸಿಗಲಿದೆ. ಕಚೇರಿಯಲ್ಲಿ ಜೊತೆಯಲ್ಲಿ ಕೆಲಸ ಮಾಡುವವರ ಸಹಾಯ ಸಿಗಲಿದೆ. ವ್ಯವಹಾರದಲ್ಲಿ ಲಾಭವಾಗುವುದು.

ಮೀನ ರಾಶಿ (Pisces):

ವೈವಾಹಿಕ ಜೀವನದಲ್ಲಿ ಕೆಲವು ಗೊಂದಲ ಉಂಟಾಗಬಹುದು. ಸಂಗಾತಿಯಿಂದ ಯಾವ ವಿಚಾರವನ್ನೂ ಮುಚ್ಚಿಡಬೇಡಿ. ನಿಮ್ಮ ರಹಸ್ಯಗಳೇ ನಿಮಗೆ ಸಮಸ್ಯೆಯಾಗಬಹುದು. ತಾಳ್ಮೆಯಿಂದ ವ್ಯವಹರಿಸುವುದು ಒಳ್ಳೆಯದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+