2029ರವರೆಗೆ ಈ 2 ರಾಶಿಯವರಿಗೆ ಸುವರ್ಣ ಯುಗ: ಕೋಟ್ಯಾಧಿಪತಿ ಯೋಗದಿಂದ ನಿಮ್ಮ ಕಷ್ಟಗಳು ಮಾಯ

ನವಗ್ರಹಗಳ ಪೈಕಿ ಜನರು ತುಂಬಾ ಹೆದರುವುದು ಶನಿ ಮತ್ತು ರಾಹುಕೇತುವಿಗೆ. ಅದರಲ್ಲಿಯೂ ಯಾರ ಜಾತಕದಲ್ಲಿಯಾದರೂ ಶನಿ ದೆಸೆ ನಡೆಯುತ್ತಿದೆ ಎಂದಾದರೆ ಕಷ್ಟಗಳ ಬೆಟ್ಟ ಎದುರಿಗಿದೆ ಎಂದೇ ನಂಬುತ್ತಾರೆ. ಆದರೆ ಇದು ಎಲ್ಲಾ ಸಮಯದಲ್ಲಿಯೂ ನಿಜ ಅಲ್ಲ. ಶನಿ ಗ್ರಹದ ಕಾರಣದಿಂದ ಕೂಡಾ ವ್ಯಕ್ತಿಯ ಅದೃಷ್ಟ ಬದಲಾಗುವುದು ಸಾಧ್ಯ. ಶನಿದೇವ ನಿಮ್ಮ ಬಾಳಿನ ಸುಖ ಶಾಂತಿಗೆ ಕಾರಣವಾಗಬೇಕಾದರೆ ನೀವು ಮಾಡುವ ಕರ್ಮ ಕೂಡಾ ಮುಖ್ಯವಾಗುತ್ತದೆ. ಅಷ್ಟಿಲ್ಲದೆ ಹೇಳುತ್ತಾರೆಯೇ ಶನಿ ದೇವ ಅಂದರೆ ಕರ್ಮಫಲದಾತ.

ಎಲ್ಲಾ ಗ್ರಹಗಳು ಒಮದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗುವುದಕ್ಕೆ ನಿರ್ದಿಷ್ಟ ಸಮಯ ತೆಗೆದುಕೊಳ್ಳುತ್ತಾರೆ ಎನ್ನುವುದು ಗೊತ್ತಿರುವ ವಿಷಯ. ಅದರಲ್ಲಿ ಅತೀ ನಿಧಾನವಾಗಿ ಚಲಿಸುವ ಗ್ರಹವೇ ಶನಿ. ಇದು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸಲು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ನಂತರ ರಾಹುಕೇತು ಒಂದೂವರೆ ವರ್ಷ, ಗುರು ಗ್ರಹಕ್ಕೆ ಒಂದು ವರ್ಷ ಬೇಕು. ಶನಿ ಸಂಕ್ರಮಣದ ಪ್ರಭಾವ ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆಯುತ್ತದೆ. ಅದರಲ್ಲೊಯೂ ವಿಶೇಷವಾಗಿ ಎರಡು ರಾಶಿಯವರು ಶನಿದೇವನ ಕಾರಣದಿಂದಲೇ ಕೋಟ್ಯಾಧೀಶ್ವರ ಯೋಗವನ್ನು ಪಡೆಯುತ್ತಾರೆ.

Shani transit effect 2026 2 zodiac signs to get lord shani blessings for next 3 year will get huge success in life and career

ವೃಷಭ ರಾಶಿ (Taurus):

ಶನಿಯ ಸಂಚಾರದೊಂದಿಗೆ ವೃಷಭ ರಾಶಿಯವರ ಜೀವನದ ದಿಕ್ಕು ಕೂಡಾ ಬದಲಾಗುವುದು. ಉದ್ಯೋಗ, ವ್ಯವಹಾರದಲ್ಲಿ ಅಭಿವೃದ್ಧಿಯಾಗುವುದು. ಹಣಕಾಸಿನ ಸಮಸ್ಯೆಗಳಿಂದ ಸಂಪೂರ್ಣ ಮುಕ್ತಿ ಸಿಗುವ ಸಮಯ ಇದು. ನೀವು ಮಾಡುವ ಕೆಲಸಕ್ಕೆ ಇಲ್ಲಿಯವರೆಗೆ ಅಡೆತಡೆಗಳು ಎದುರಾಗುತ್ತಲೇ ಇತ್ತು. ಆದರೆ ಇನ್ನು ಮುಂದೆ ನಿಮ್ಮ ಕೆಲಸಗಳು ಸರಾಗವಾಗಿ ಮುಂದುವರೆದುಕೊಂಡು ಹೋಗುವುದು. ಸಾಧ್ಯವೇ ಇಲ್ಲ ಎನ್ನುವಂಥಹ ಕೆಲಸಗಳು ಕೂಡಾ ಕೈಗೂಡುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದ್ದ ಹಾಗೆ ಮನೆ, ಭೂಮಿ ಮತ್ತು ವಾಹನ ಹೀಗೆ ಸ್ಥಿರಾಸ್ತಿಯನ್ನು ಖರೀದಿಸುವ ಅವಕಾಶಗಳು ಸಿಗುವುದು. ಒಟ್ಟಿನಲ್ಲಿ ಇಲ್ಲಿಯವರೆಗೆ ಕಾಣುತ್ತಿದ್ದ ಕನಸು ನನಸಾಗುವ ಕಾಲ. ನೀವು ಪಟ್ಟ ಕಷ್ಟಗಳು ಪರಿಹಾರವಾಗಿ ಸುಖ ಸಂತೋಷ, ಸಮೃದ್ಧಿ ಮನೆ ಮಾಡುವುದು.

ಮಿಥುನ ರಾಶಿ (Gemini) :

ಮಿಥುನ ರಾಶಿಯವರ ಸುವರ್ಣ ಯುಗ ಕೂಡಾ ಇಲ್ಲಿಂದಲೇ ಆರಂಭ. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಸುಲಭವಾಗಿ ಮುಗಿಯುವುದು. ಯಾವುದೇ ವಿಚಾರವಾಗಿ ಕಾನೂನು ಮೆಟ್ಟಿಲು ಹತ್ತಿದ್ದರೆ ಕೇಸ್‌ ನಿಮ್ಮ ಪರವಾಗಿ ಆಗುವುದು. ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗಬೇಕು ಎಂದುಕೊಂಡವರ ಆಸೆ ನೆರವೇರುವುದು. ಇಲ್ಲಿಯವರೆಗೆ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದವರಿಗೆ ನಿರೀಕ್ಷೆಯ ಕೆಲಸ ಸಿಗುವುದು. ಮನೆಯಲ್ಲಿ ಮನೆ ಮಂದಿ ನಡುವೆ ಎದ್ದಿದ್ದ ಮನಸ್ತಾಪ, ಭಿನ್ನಾಭಿಪ್ರಾಯ ಎಲ್ಲವೂ ಕೊನೆಯಾಗುವುದು. ಸಂಬಂಧಗಳು ಗಟ್ಟಿಯಾಗುವುದು.

ಶನಿದೆಸೆಯಲ್ಲಿ ಬರೀ ಕಷ್ಟ ಕೊಡುವುದಿಲ್ಲ

ಜ್ಯೋತಿಷ್ಯ ತಜ್ಞರ ಪ್ರಕಾರ, ಯಾರು ಕಷ್ಟಪಟ್ಟು ದುಡಿದು ಪ್ರಾಮಾಣಿಕವಾಗಿ ಬದುಕು ಸಾಗಿಸುತ್ತಾರೆಯೋ ಅವರ ಕೈಯನ್ನು ಶನಿ ದೇವರು ಯಾವತ್ತೂ ಬಿಡುವುದಿಲ್ಲ. ಶನಿದೆಸೆಯ ಕಾಲದಲ್ಲಿ ಆರಂಭದಲ್ಲಿ ಕಷ್ಟಗಳನ್ನು ನೀಡಿದರೂ ಅಂತಿಮವಾಗಿ ತಾನು ಪಡೆದದ್ದನ್ನೆಲ್ಲಾ ವಾಪಸ್‌ ನೀಡಿಯೇ ಮುಂದೆ ಹೆಜ್ಜೆ ಹಾಕುತ್ತಾರೆಯಂತೆ ಶನಿದೇವರು. ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಜಾತಕ, ದಶಾ-ಭುಕ್ತಿ ಮತ್ತು ಇತರ ಗ್ರಹಗಳ ಸ್ಥಾನಗಳನ್ನು ಅವಲಂಬಿಸಿ ಈ ಫಲಗಳು ಖಂಡಿತವಾಗಿಯೂ ಬದಲಾಗುವುದಕ್ಕೆ ಸಾಧ್ಯವಿದೆ.

ಶನಿಯ ದೇವರ ಕೃಪೆಗೆ ಪಾತ್ರರಾಗುವುದು ಹೇಗೆ?

ಶನಿವಾರದಂದು ಶನಿದೇವರಿಗೆ ಎಳ್ಳೆಣ್ಣೆ ಅರ್ಪಿಸಬೇಕು. ಅವರಿಗೆ ಎಳ್ಳೆಣ್ಣೆ ಹಚ್ಚಬೇಕು. ಆಂಜನೇಯ ಸ್ವಾಮಿಗೆ ತುಳಸಿ ಮಾಲೆಯನ್ನು ಅರ್ಪಿಸಿ, ಪೂಜೆ ಮಾಡಬೇಕು. ಆಂಜನೇಯನ ಭಕ್ತರಿಗೆ ಶನಿ ದೇವರು ಯಾವತ್ತೂ ಕಾಟ ಕೊಡುವುದಿಲ್ಲ ಎನ್ನುತ್ತದೆ ಪುರಾಣ. ಬಡವರು ಮತ್ತು ಅಂಗವಿಕಲರು, ಶಕ್ತಿ ಇಲ್ಲದವರಿಗೆ ಆಹಾರ, ಬಟ್ಟೆಗಳನ್ನು ದಾನ ಮಾಡಿದರ ಶನಿದೇವರು ಸಂತೋಷಗೊಳ್ಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+