ಶನಿ ಉದಯದೊಂದಿಗೆ ಮೂರು ರಾಶಿಯವರ ಭಾಗ್ಯೋದಯ: ಇವರಿಗೆ ಮಾತ್ರ ಎದುರಾಗುವುದು ಕಷ್ಟ, ಸವಾಲುಗಳು
ನ್ಯಾಯದ ದೇವರಾದ ಶನಿ, ಮೀನ ರಾಶಿಯಲ್ಲಿ ಉದಯಿಸಿದ್ದಾನೆ. ಶನಿಯ ಸ್ಥಾನದಲ್ಲಿ ಸ್ವಲ್ಪ ಬದಲಾವಣೆಯಾದರೂ ಅದು ಪ್ರತಿಯೊಬ್ಬರ ಮೇಲೆ ಒಂದಲ್ಲ ಓಂದು ರೀತಿಯಲ್ಲಿ ಪ್ರಭಾವ ಬೀರುತ್ತದೆ. ಶನಿಯ ಒಂದು ದೃಷ್ಟಿ ಜನರ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಇದೀಗ ಕಳೆದ ಹಲವಾರು ತಿಂಗಳುಗಳ ಕಾಲ ಅಸ್ತ ಸ್ಥಿತಿಯಲ್ಲಿದ್ದ ಶನಿದೇವ, ಉದಯಿಸಿರುವುದು ಕೂಡಾ ರಾಶಿಫಲದ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡುತ್ತದೆ.
ಶನಿಯ ಉದಯದಿಂದ ಅದೃಷ್ಟ:
ಏಪ್ರಿಲ್ ೨೨ ರಿಂದ ಅಂದರೆ ಇಂದಿನಿಂದ ಶನಿಯ ಸ್ಥಾನದಲ್ಲಿ ಗಮನಾರ್ಹ ಬದಲಾವಣೆಯಾಗುವುದು. ಇದು ಮೂರು ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಮಾರ್ಚ್ ೧೩ ರಿಂದ ಅಸ್ತವಾಗಿದ್ದ ಶನಿ ಗ್ರಹ ಇದೀಗ ಮತ್ತೆ ಉದಯವಾಗಿದೆ. ಇಂದು ಮೀನ ರಾಶಿಯಲ್ಲಾದ ಶನಿಯ ಉದಯವು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಮೂರು ರಾಶಿಯವರಿಗೆ ಇದು ಅತ್ಯಂತ ಶುಭವಾಗಿರಲಿದೆ. ಇನ್ನು ಎರಡು ರಾಶಿಯವರಿಗೆ ಮಾತ್ರ ಪ್ರತಿ ಹೆಜ್ಜೆಯಲ್ಲಿಯೂ ಸವಾಲು ಎದುರಾಗಲಿದೆ.
ಶನಿ ಉದಯದಿಂದ ಬೆಳಗುವುದು ಈ ರಾಶಿಯವರಿಗೆ ಅದೃಷ್ಟ:

ವೃಷಭ ರಾಶಿ:
ವೃಷಭ ರಾಶಿಯ ಲಾಭ ಮತ್ತು ಆದಾಯದ ಸ್ಥಾನವಾದ ಹನ್ನೊಂದನೇ ಮನೆಯಲ್ಲಿ ಶನಿ ಉದಯಿಸುತ್ತಿದ್ದಾನೆ. ಹೀಗಾಗಿ ಈ ರಾಶಿಯವರ ಸಂಪತ್ತು ಗಣನೀಯವಾಗಿ ಏರಿಕೆ ಕಾಣುತ್ತದೆ. ದೀರ್ಘಕಾಲದಿಂದ ಮಾಡಲು ಅಥವಾ ಪೂರ್ಣಗೊಳಿಸಲು ಸಾಧ್ಯವಾಗದೇ ಇದ್ದಂಥಹ ಕೆಲಸವನ್ನು ಬಹಳ ಸರಾಗವಾಗಿ ಪೂರ್ಣಗೊಳಿಸುವಿರಿ. ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುವುದು. ಕೆಲವು ಪ್ರಮುಖ ಕೆಲಸಗಳು ಪೂರ್ಣಗೊಳ್ಳುತ್ತವೆ. ನೀವು ಪ್ರಯತ್ನ ಪಡುವ ಕೆಲಸಗಳಲ್ಲಿ ಯಶಸ್ಸು ಸಿಗುತ್ತಾ ಹೋಗುವುದು.

ಮಿಥುನ ರಾಶಿ:
ಕೆಲಸ ಮತ್ತು ಪ್ರತಿಷ್ಠೆಯ ಸ್ಥಾನವಾದ ಮಿಥುನ ರಾಶಿಯ ಹತ್ತನೇ ಮನೆಯಲ್ಲಿ ಶನಿ ಗ್ರಹ ಉದಯಿಸುತ್ತಿದ್ದಾನೆ. ಈ ಸಮಯವು ನಿಮ್ಮ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲಾಗಬಹುದು. ಕೆಲಸದಲ್ಲಿ ಬಡ್ತಿ ಸಿಗಬಹುದು. ನೀವು ಮಾಡುತ್ತಿರುವ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಯಾವ ಕೆಲಸವನ್ನು ನಿಯತ್ತಾಗಿ, ಶ್ರಮಪಟ್ಟು ಮಾಡುತ್ತಿರೋ ಆ ಕೆಲಸಕ್ಕೆ ದೊಡ್ಡ ಮಟ್ಟದ ಯಶಸ್ಸು ಸಿಗುವುದು.

ಮಕರ ರಾಶಿ:
ನಿಮ್ಮ ರಾಶಿಯ ಅಧಿಪತಿಯೇ ಶನಿ ಗ್ರಹ. ಇದು ಧೈರ್ಯ ಮತ್ತು ಶೌರ್ಯದ ಸ್ಥಾನವಾದ ಮೂರನೇ ಮನೆಯಲ್ಲಿ ಉದಯಿಸುತ್ತಿದೆ. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕೆಲಸ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಅಷ್ಟೇ ಅಲ್ಲ ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುವುದು. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು. ಹೊಸ ಹೊಸ ಜನರನ್ನು ಭೇಟಿಯಾಗುವಿರಿ. ಪ್ರತಿ ಹಂತದಲ್ಲಿಯೂ ಯಶಸ್ಸಿನ ಬಾಗಿಲು ತೆರೆಯುವುದು. ವಿಶ್ವಾಸ ಹೆಚ್ಚಾಗುವುದು.
ಎರಡು ರಾಶಿಯವರ ಮೇಲಿರುವುದು ಅತಿಯಾದ ಒತ್ತಡ:
ಶನಿಯ ಉದಯವು ಕುಂಭ ಮತ್ತು ಮೀನ ರಾಶಿಯವರಿಗೆ ಸವಾಲುಗಳನ್ನು ತಂದೊಡ್ಡಬಹುದು. ಮೀನ ರಾಶಿಯವರು ಶನಿ ಸಾಡೇಸಾತಿಯ ಎರಡನೇ ಹಂತದಲ್ಲಿದ್ದರೆ, ಕುಂಭ ರಾಶಿಯವರಿಗೆ ಶನಿ ಸಾಡೇಸಾತಿಯ ಕೊನೆಯ ಹಂತ ನಡೆಯುತ್ತಿದೆ. ಆದ್ದರಿಂದ, ಈ ಸಮಯದಲ್ಲಿ ಹಣಕಾಸಿನ ವಹಿವಾಟುಗಳು ಮತ್ತು ಖರ್ಚುಗಳ ಬಗ್ಗೆ ಜಾಗರೂಕರಾಗಿರಿ. ಇಲ್ಲವಾದಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗಬಹುದು. ಮಾಡಬೇಕೆಂದಿರುವ ಕೆಲಸ ಕಾರ್ಯಗಳು ನಿಧಾನವಾಗಿ ನಡೆಯುವುದು.ತಾಳ್ಮೆಯಿಂದ ಇದ್ದರೆ ಎಲ್ಲವೂ ಸರಿಯಾಗಿ ನಡೆಯುವುದು.
(ಬರಹ : ರಂಜಿತಾ ಆರ್.ಕೆ)













Click it and Unblock the Notifications