ರಾಹು-ಕೇತು ಸಂಚಾರ: ರಾತ್ರಿ ಬೆಳಗಾಗುವುದರಲ್ಲೇ ಕೀರ್ತಿ, ಹಣ, ಯಶಸ್ಸು ಸಿಗೋ ಅದೃಷ್ಟ ಯಾರಿಗೆ?

Rahu-Ketu Sanchara : ಜ್ಯೋತಿಷ್ಯದಲ್ಲಿ, ರಾಹು ಮತ್ತು ಕೇತುವನ್ನು ಛಾಯಾಗ್ರಹ ಎಂದು ಕರೆಯಲಾಗುತ್ತದೆ. ರಾಹು ಕೇತು ಅಂದರೆ ಬರೀ ಕಷ್ಟವನ್ನೇ ಕೊಡುವವರಲ್ಲ. ಜಾತಕದಲ್ಲಿ ಇವರ ಸ್ಥಾನ ಬಲವಾಗಿದ್ದರೆ ರಾತ್ರಿ ಬೆಳಗಾಗುವುದರೊಳಗೆ ಹಣ, ಕೀರ್ತಿ ಸಕ್ಸಸ್ ಎಲ್ಲವೂ ಸಿಗುತ್ತದೆ. ಜೀವನದ ಹಠಾತ್ ತಿರುವಿಗೆ ರಾಹು ಪ್ರಮುಖ ಕಾರಣನಾಗುತ್ತಾನೆ. ಈ ಗ್ರಹಗಳ ಸಂಚಾರ ಎಲ್ಲಾ ರಾಶಿಯವರ ಜಾತಕ ಫಲದ ಮೇಲೆ ಪರಿಣಾಮ ಬೀರುವುದು.

Rahu Ketu Sanchara On December 3rd 2026 Will Bring Huge Luck And Big Change In 3 Zodiac Peoples Life

ರಾಹು ಕೇತು ಸಂಚಾರ (Rahu-Ketu Sanchara):

ರಾಹು ಮತ್ತು ಕೇತ ಒಂದೂವರೆ ವರ್ಷಗಳಿಗೊಮ್ಮೆ ತಮ್ಮ ರಾಶಿಯನ್ನು ಬದಲಿಸುತ್ತಾರೆ. ಇವರು ಯಾವಾಗಲೂ ಹಿಮ್ಮುಖವಾಗಿಯೇ ಚಲಿಸುವುದು. ಇದೀಗ ಒಂದೂವರೆ ವರ್ಷಗಳ ಬಳಿಕ ಅಂದರೆ ಡಿಸೆಂಬರ್ 5ಕ್ಕೆ ಎರಡೂ ಗ್ರಹಗಳ ಸಂಚಾರದಲ್ಲಿ ಬದಲಾವಣೆಯಾಗಲಿದೆ. ರಾಹು ಕುಂಭ ರಾಶಿಯಿಂದ ಮಕರ ರಾಶಿಗೆ ಸಂಚರಿಸಿದರೆ, ಕೇತು ಸಿಂಹ ರಾಶಿಯಿಂದ ಕರ್ಕಾಟಕ ರಾಶಿಗೆ ಕಾಲಿಡುತ್ತಾನೆ. ಮುಂದಿನ 18 ತಿಂಗಳುಗಳವರೆಗೆ ರಾಹು-ಕೇತು ಇದೇ ರಾಶಿಯಲ್ಲಿ ಸಂಚಾರ ಮಾಡುತ್ತಾ ಇರುತ್ತಾರೆ.

ಡಿಸೆಂಬರ್‌ನಲ್ಲಿ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು :

ಅವಕಾಶಗಳಿಂದ ಹಿಡಿದು ಆದಾಯದ ಹೊಸ ಮಾರ್ಗಗಳವರೆಗೆ ಈ ಗ್ರಹ ಸಂಚಾರ ವಿಶೇಷವಾಗಿರುತ್ತದೆ. ರಾಹು ಕೇತುವಿನ ಸಂಚಾರದ ಮೂಲಕ ಕೆಲವರು ರಾಶಿಯವರ ಅದೃಷ್ಟದ ಬಾಗಿಲು ತೆರೆಯುವುದು. ಜೀವನದಲ್ಲಿ ಸಾಕಷ್ಟು ಪ್ರಗತಿ ನಿರೀಕ್ಷಿಸಬಹುದು. ರಾಹು ಕೇತುವಿನ ಸಂಚಾರ ಕೆಲವು ರಾಶಿಯವರಿಗೆ ವಿಶೇಷ ಪ್ರಯೋಜನ ನೀಡುತ್ತದೆ.

ಸಿಂಹ ರಾಶಿ (Leo):

ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಗಬಹುದು. ನಿರ್ದಿಷ್ಟವಾಗಿ, ಉದ್ಯೋಗ (jobs) ಮತ್ತು ಉದ್ಯೋಗದ ವಿಷಯದಲ್ಲಿ ಹೊಸ ಬದಲಾವಣೆಯಾಗುವ ಸಾಧ್ಯತೆ ಇದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ವಿಶೇಷ ಮನ್ನಣೆ ಸಿಗುವುದು. ಜವಾಬ್ದಾರಿ ಹೆಚ್ಚಾಗುವುದು. ಬಡ್ತಿ ಮೂಲಕ ಆದಾಯ ಕೂಡಾ ಹೆಚ್ಚಾಗುವುದು. ಒಮ್ಮೆಲೇ ಹಣ ಹರಿದು ಬರುವುದು. ನಿಮಗೆ ಗೊತ್ತಿಲ್ಲದ ಮೂಲದಿಂದಲೂ ಹಣ ಸಿಗುವುದು. ಕಠಿಣ ಪರಿಶ್ರಮ ಮತ್ತು ಪ್ರತಿಭೆಗೆ ಬೆಲೆ ಸಿಗುವುದು. ಮೇಲಧಿಕಾರಿಯಿಂದ ಪ್ರಶಂಸೆ ಸಿಗುವುದು. ಪಿತ್ರಾರ್ಜಿತ ಆಸ್ತಿಯಿಂದ ಲಾಭವಾಗುವುದು. ಯಾವುದೇ ಆಸ್ತಿ ವ್ಯವಹಾರದಿಂದ ಪ್ರಯೋಜನವಾಗುವುದು. ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ.

ತುಲಾ ರಾಶಿ (Libra) :

ವ್ಯಾಪಾರ (finance) ಮತ್ತು ಹಣಕಾಸಿನ ವಿಷಯಗಳಲ್ಲಿ ಪ್ರಗತಿಗೆ ಅವಕಾಶ ಸಿಗುವುದು. ಹೊಸ ಕೆಲಸದ ಆರಂಭದಲ್ಲಿ ಕೆಲವು ಅಡೆತಡೆಗಳು ಇದ್ದರೂ, ಪ್ರಯತ್ನ ನಿಲ್ಲಿಸಬೇಡಿ. ದೊಡ್ಡ ಯಶಸ್ಸು ಸಿಗುವುದು. ಕೆಲಸಕ್ಕೆ ಹೋಗುವವರಿಗೆ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳ ಬೆಂಬಲ ಸಿಗುವುದು. ಹೊಸ ಕೆಲಸ ಸಿಗುವ ಸಾಧ್ಯತೆಯೂ ಇದೆ. ಬಾಕಿ ಇರುವ ಹಣ ಕೈಸೇರುವುದು. ಹೊಸ ಜವಾಬ್ದಾರಿ ಸಿಗುವುದು. ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಭವಿಷ್ಯದಲ್ಲಿ ಉತ್ತಮ ಲಾಭವಾಗುವುದು. ಹೂಡಿಕೆ ಮಾಡುವುದಕ್ಕೂ ಇದು ಸರಿಯಾದ ಸಮಯ. ಹೊಸ ಮೂಲಗಳಿಂದ ಹಣ ಬರುವುದು. ಹೆಸರು, ಕೀರ್ತಿ ಎಲ್ಲವೂ ಸಿಗುವುದು.

ಧನು ರಾಶಿ (Sagittarius):

ವೃತ್ತಿಯಲ್ಲಿ ಪ್ರಗತಿಯಾಗುವುದು. ಹೊಸ ಅವಕಾಶಗಳು ಒಲಿದು ಬರುವುದು. ತುಂಬಾ ದಿನಗಳಿಂದ ಮಾಡುತ್ತಿರುವ ಪ್ರಯತ್ನಕ್ಕೆ ಯಶಸ್ಸು ಸಿಗುವುದು. ಹೊಸಕೆಲಸ ಶುರು ಮಾಡಿದರೆ ಖಂಡಿತಾ ಯಶಸ್ಸು ಸಿಗುವುದು. ಈ ಅವಧಿಯಲ್ಲಿ ಹಣಕ್ಕೆ ಕೊರತೆ ಇರುವುದಿಲ್ಲ. ಉದ್ಯೋಗಾಕಾಂಕ್ಷಿಗಳು ತಮ್ಮ ಕೌಶಲ್ಯಗಳಿಗೆ ಸರಿ ಹೊಂದುವ ಕೆಲಸ ಹುಡುಕುವ ಪ್ರಯತ್ನ ಮುಂದುವರೆಸಬಹುದು. ಹೆಚ್ಚಿನ ಹಣ ಗಳಿಸುವ ಆಸೆಯಿಂದ ಹೆಚ್ಚಿನ ಅಪಾಯ ತೆಗೆದುಕೊಳ್ಳಬೇಡಿ. ಸಂಗಾತಿ ಮತ್ತು ಮಕ್ಕಳ ಬೆಂಬಲ ಇರುವುದು. ಮನೆ ನಿರ್ಮಾಣದ ಕನಸು ನನಸಾಗುವ ಸಾಧ್ಯತೆ ಇದೆ. ಗೌರವ ಹೆಚ್ಚಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+