ನಾಲ್ಕು ರಾಶಿಯವರಿಗೆ ರಾಹು ಕೃಪೆ; ಸಾಲದ ಸಂಕಷ್ಟ ದೂರ, ಆಸ್ತಿ ಖರೀದಿ ಯೋಗ, ಸಂಪತ್ತಿನ ಸುರಿಮಳೆ!
Rahu Gochara 2026 : ಜ್ಯೋತಿಷ್ಯದಲ್ಲಿ, ರಾಹುವನ್ನು ನೆರಳು ಗ್ರಹ ಅಥವಾ ಛಾಯಾ ಗ್ರಹ ಎಂದು ಕರೆಯಲಾಗುತ್ತದೆ. ರಾಹುವಿನ ಚಲನೆಯ್ಲಿ ಆಗುವ ಬದಲಾವಣೆಗಳು ಜನರ ಜೀವನದಲ್ಲಿನ ಹಠಾತ್ ಬದಲಾವಣೆಗಳು ಮತ್ತು ಅನಿರೀಕ್ಷಿತ ಫಲಗಳಿಗೆ ಕಾರಣವಾಗುತ್ತದೆ. ಮತ್ತೊಂದೆಡೆ, ಮಕರ ರಾಶಿಯು ಕರ್ಮ, ಶಿಸ್ತು ಮತ್ತು ಕಠಿಣ ಪರಿಶ್ರಮದ ಮೂಲಕ ಸಾಧಿಸಿದ ಶಾಶ್ವತ ಯಶಸ್ಸನ್ನು ಸಂಕೇತಿಸುತ್ತದೆ. ಆದ್ದರಿಂದ, ಮಕರ ರಾಶಿಗೆ ರಾಹುವಿನ ಪ್ರವೇಶವು ಕೆಲವು ರಾಶಿಯವರಿಗೆ ಬಹಳ ಮುಖ್ಯವಾಗಿರುತ್ತದೆ. ಅವರು ತಮ್ಮ ವೃತ್ತಿ, ವ್ಯವಹಾರಗಳು ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸುವರು.
ರಾಹುವಿನ ಚಲನೆ ಯಾವಾಗ ಬದಲಾಗುತ್ತದೆ?
ಪಂಚಾಂಗದ ಪ್ರಕಾರ, ರಾಹು ಕುಂಭ ರಾಶಿಯಿಂದ ನವೆಂಬರ್ 25, 2026 ರಂದು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇದಾದ ನಂತರ, ಜೂನ್ 2028ರವರೆಗೆ ಮಕರ ರಾಶಿಯಲ್ಲಿಯೇ ಇರುತ್ತಾನೆ. ಧಾರ್ಮಿಕ ಮತ್ತು ಜ್ಯೋತಿಷ್ಯದ ಪ್ರಕಾರ, ರಾಹುವಿನ ಈ ಸಂಚಾರವು ಕೆಲವು ರಾಶಿಯವರಿಗೆ ಹಠಾತ್ ಲಾಭ ಮತ್ತು ಯಶಸ್ಸಿನ ಹೊಸ ಮಾರ್ಗಗಳನ್ನು ತೆರೆಯಬಹುದು. ರಾಹು ಯಾರ ಜಾತಕದಲ್ಲಿ ಉತ್ತಮ ಸ್ಥಾನದಲ್ಲಿ ಇರುತ್ತಾನೆಯೋ ಅವರು ರಾತೋರಾತ್ರಿ ಸಿರಿವಂತರಾಗುವ ಯೋಗ ಒಲಿದು ಬರುವುದು. ಹೆಸರು, ಕೀರ್ತಿ, ಹಣ ಎಲ್ಲವೂ ಸಿಗುವುದು.

ರಾಹುವಿನ ಮಕರ ರಾಶಿ ಪ್ರವೇಶದಿಂದ ಶುಭಫಲ ಪಡೆಯುವ ರಾಶಿಗಳು
ಮೇಷ ರಾಶಿ (Aries): ಈ ರಾಶಿಯವರಿಗೆ ರಾಹು ಸಂಚಾರವು ಪ್ರಗತಿಗೆ ಹೊಸ ಅವಕಾಶಗಳನ್ನು ತೆರೆಯುವುದು. ಬಹಳ ಕಾಲದಿಂದ ನಿಂತು ಹೋಗಿದ್ದ ಕೆಲಸಗಳು ಮತ್ತೆ ಚುರುಕು ಪಡೆಯುವುದು, ಮಾತ್ರವಲ್ಲ ಬೇಗನೇ ಪೂರ್ಣವೂ ಆಗುವುದು. ಕೈ ಹಾಕುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಈ ಅವಧಿಯಲ್ಲಿ ಶುರು ಮಾಡಿದ ಕೆಲಸಗಳು ದೊಡ್ಡ ಮಟ್ಟಿನ ಸಕ್ಸಸ್ ಕಾಣುವುದು. ಹಿರಿಯ ಅಧಿಕಾರಿಗಳಿಂದ ಬೆಂಬಲ ಸಿಗುವುದು. ಇದ್ದಕ್ಕಿದ್ದಂತೆ ಬಡ್ತಿಗೆ ಅವಕಾಶಗಳು ಒಲಿದು ಬರುವುದು. ಅಪೇಕ್ಷಿತ ಉದ್ಯೋಗ ಬದಲಾವಣೆ ಅಥವಾ ಬಡ್ತಿಯ ಸಾಧ್ಯತೆಯಿದೆ. ಹೊಸ ಉದ್ಯಮವನ್ನು ಪ್ರಾರಂಭಿಸಲು ಇದು ಅನುಕೂಲಕರ ಸಮಯ.
ಸಿಂಹ ರಾಶಿ (Leo): ಈ ಸಂಚಾರವು ನಿಮಗೆ ಆರ್ಥಿಕ ಮತ್ತು ಪ್ರಾಯೋಗಿಕ ವಿಷಯಗಳಲ್ಲಿ ಪರಿಹಾರವನ್ನು ನೀಡುತ್ತದೆ. ವಿರೋಧಿಗಳ ಕಾಟ ಕಡಿಮೆಯಾಗುವುದು. ನೀವು ಮಾಡುವ ಎಲ್ಲಾ ಕೆಲಸಗಳಿಗೆ ಕುಟುಂಬ ಸದಸ್ಯರ ಬೆಂಬಲ ಸಿಗುವುದು. ಹಳೆಯ ಸಾಲಗಳಿಂದ ಪರಿಹಾರ ಸಿಗುವುದು. ಆರ್ಥಿಕ ನೆರವು ಮತ್ತು ಕಾನೂನು ವಿಷಯಗಳಲ್ಲಿ ಪರಿಹಾರ ಸಿಗುವುದು. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭವಾಗುವುದು. ನಿಮಗೆ ಗೊತ್ತಿಲ್ಲದ ಮೂಲಗಳಿಂದಲೂ ಹಣ ಹರಿದು ಬರುವುದು. ಹಣದ ಸಮಸ್ಯೆ ಕೊನೆಯಾಗುವುದು. ಇದ್ದಕ್ಕಿದ್ದಂತೆ ಎಲ್ಲಾ ಸಮಸ್ಯೆಗಳು ಬಗೆಹರಿಯುವುದು.
ತುಲಾ ರಾಶಿ (Libra): ಈ ರಾಶಿಯವರಿಗೆ ರಾಹುವಿನ ಸಂಚಾರವು ಸೌಕರ್ಯ ಮತ್ತು ಐಷಾರಾಮಿ ಜೀವನವನ್ನು ಒದಗಿಸುವುದು. ಕುಟುಂಬ ಮತ್ತು ಸಂಬಂಧಿಕರ ಬೆಂಬಲ ಸಿಗುವುದು. ಪೂರ್ವಜರ ಭೂಮಿಗೆ ಸಂಬಂಧಿಸಿದ ಹಳೆಯ ಸಮಸ್ಯೆ ಬಗೆಹರಿಯುವುದು. ಹೊಸ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಯೋಜನೆಗಳು ಮುಂದುವರಿಯಬಹುದು. ಹೂಡಿಕೆಗೆ ಹೆಚ್ಚು ಹೆಚ್ಚು ಅವಕಾಶಗಳು ಸಿಗುವುದು. ಮಾಡುವ ಹೂಡಿಕೆಯಿಂದ ಹೆಚ್ಚಿನ ಲಾಭವೂ ಆಗುವುದು. ಆದರೂ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.
ಮಕರ ರಾಶಿ (Capricorn): ರಾಹು ಮಕರ ರಾಶಿಗೆ ಪ್ರವೇಶಿಸುವುದರಿಂದ, ಈ ಸಮಯವು ಮಕರ ರಾಶಿಯವರಿಗೆ ಹೆಚ್ಚು ವಿಶೇಷವಾಗಿರುವುದು. ಆತ್ಮವಿಶ್ವಾಸ ಮತ್ತು ಸಾಮಾಜಿಕ ಪ್ರಭಾವ ಹೆಚ್ಚಾಗಬಹುದು. ತಮ್ಮ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಹೊಸ ಮಾರ್ಗಗಳು ತೆರೆದುಕೊಳ್ಳುವುದು. ಉದ್ಯಮ ವಿಸ್ತರಣೆಗೆ ಅವಕಾಶ ಸಿಗುವುದು. ಆರ್ಥಿಕ ಲಾಭ ಗಳಿಸುವ ಅವಕಾಶಗಳಿವೆ. ರಾಜಕೀಯ ಅಥವಾ ಸಾಮಾಜಿಕ ಕ್ಷೇತ್ರದಲ್ಲಿರುವವರ ಪ್ರತಿಷ್ಠೆ ಮತ್ತು ಪ್ರಭಾವ ಹೆಚ್ಚಾಗುವುದು.


Click it and Unblock the Notifications
