Mercury Transit 2024: ಸಿಂಹ ರಾಶಿಯಲ್ಲಿ ಬುಧ ಸಂಕ್ರಮಣ: ಈ 3 ರಾಶಿಗೆ ಶನಿಯಿಂದ ಕನಕವೃಷ್ಟಿ
ಸೌರವ್ಯೂಹದಲ್ಲಿ ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಇದರ ಪರಿಣಾಮ ದ್ವಾದಶಿ ರಾಶಿಗಳ ಮೇಲೆ ಬೀಳಲಿದೆ.
ವೈದಿಕ ಜ್ಯೋತಿಷ್ಯದಲ್ಲಿ ಬುಧವನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಈ ಬುಧನು ಅಲ್ಪ ದಿನಗಳಲ್ಲಿ ರಾಶಿಯನ್ನು ಬದಲಾಯಿಸುತ್ತದೆ. ಇದು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿಯೂ ಆಗಿದೆ. ಬುದ್ಧಿವಂತಿಕೆ, ಮಾತು, ಅಧ್ಯಯನ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾದ ಬುಧ ಪ್ರಸ್ತುತ ಕರ್ಕಟಕ ರಾಶಿಯಲ್ಲಿ ಸಾಗುತ್ತಿದೆ.
ಜುಲೈ 19ರಂದು ಸೂರ್ಯನ ರಾಶಿಯಾದ ಸಿಂಹ ರಾಶಿಯನ್ನು ಬುಧ ಪ್ರವೇಶಿಸುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯ ಮತ್ತು ಬುಧದ ನಡುವೆ ಸೌಹಾರ್ದ ಸಂಬಂಧವಿದೆ. ಆದ್ದರಿಂದ ಬುಧ ಸಿಂಹ ರಾಶಿಗೆ ಸಾಗುವುದರಿಂದ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಮುಖ್ಯವಾಗಿ ಕೆಲವು ರಾಶಿಯವರಿಗೆ ತುಂಬಾ ಅದೃಷ್ಟ ಒಲಿಯಲಿದೆ.
ಇದರಿಂದ ವ್ಯಾಪಾರ ಮತ್ತು ಉದ್ಯಮದಲ್ಲಿ ಪ್ರಗತಿ ಆಕಾಶದೆತ್ತರಕ್ಕೆ ಹೋಗುವುದನ್ನು ಕಾಣಬಹುದು. ಅಲ್ಲದೆ ಹಣದ ಹರಿವು ಉತ್ತಮವಾಗಿರುತ್ತದೆ. ಬುಧನು ಸಿಂಹರಾಶಿಗೆ ಹೋಗುವುದರಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಎಂದು ಈಗ ನೋಡೋಣ.

ಮಿಥುನ ರಾಶಿ
ಬುಧನು ಮಿಥುನ ರಾಶಿಯ 3ನೇ ಮನೆಗೆ ಹೋಗುತ್ತಾನೆ. ಇದು ಈ ರಾಶಿಗಳ ಗೌರವ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ವ್ಯಾಪಾರಿಗಳು ತಮ್ಮ ಪ್ರತಿಸ್ಪರ್ಧಿಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ. ಅಲ್ಲದೆ ಅವರು ಅನಿರೀಕ್ಷಿತ ಲಾಭವನ್ನು ಪಡೆಯಬಹುದು.
ಒಡಹುಟ್ಟಿದವರಿಂದ ಕೆಲಸದಲ್ಲಿ ಬೆಂಬಲ ಸಿಗಲಿದ್ದು ಗುರುರಾಯರ ಆಶೀರ್ವಾದ ಸಿಗಲಿದೆ. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳ ಇತ್ಯಾದಿಗಳು ದೊರೆಯುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಅಂದುಕೊಂಡಂತೆ ಲಾಭ ದೊರೆಯಲಿದೆ.

ಸಿಂಹ ರಾಶಿ
ಬುಧನು ಸಿಂಹ ರಾಶಿಯ ಮೊದಲ ಮನೆಗೆ ಹೋಗುತ್ತದೆ. ಇದು ಈ ರಾಶಿಗಳ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ಉದ್ಯಮಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಹಿಂದೆ ಮಾಡಿದ ಹೂಡಿಕೆಯು ಉತ್ತಮ ಲಾಭವನ್ನು ತಂದು ಕೊಡಲಿದೆ.
ಮುಟ್ಟಿದ ಕೆಲಸದಲ್ಲಿ ಧನಲಾಭ ಸಿಗಲಿದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ಯೋಜಿತ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ವಿವಾಹಿತರ ಜೀವನ ತುಂಬಾ ಸಂತೋಷದಿಂದ ಕೂಡಿರುತ್ತದೆ. ಅವಿವಾಹಿತರಿಗೆ ಒಳ್ಳೆಯ ವರ ಸಿಗಲಿದ್ದಾರೆ.

ಕುಂಭ ರಾಶಿ
ಬುಧನು ಕುಂಭ ರಾಶಿಯ 7ನೇ ಮನೆಗೆ ಚಲಿಸುತ್ತಾನೆ. ಹೀಗಾಗಿ ಈ ರಾಶಿಚಕ್ರದವರು ಅನಿರೀಕ್ಷಿತ ಸ್ಥಳಗಳಿಂದ ಹಣವನ್ನು ಪಡೆಯುತ್ತಾರೆ. ಅಲ್ಲದೆ ಈ ಸಮಯದಲ್ಲಿ ಬಹಳಷ್ಟು ಹಣವನ್ನು ಉಳಿಸಬಹುದು. ಕೌಟುಂಬಿಕ ಜೀವನ ತುಂಬಾ ಸಂತೋಷದಿಂದ ಕೂಡಿರುತ್ತದೆ.
ಕುಟುಂಬ ಸದಸ್ಯರೊಂದಿಗಿನ ಸಂಬಂಧ ಆಹ್ಲಾದಕರವಾಗಿರುತ್ತದೆ. ಜಂಟಿ ಉದ್ಯಮಗಳನ್ನು ಮಾಡುವವರು ಅಂದುಕೊಂಡ ಫಲಿತಾಂಶಗಳನ್ನು ಪಡೆಯುತ್ತಾರೆ. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರೆಯಲಿದೆ. ಆದಾಯದಲ್ಲಿ ಏರಿಕೆ ಕಂಡುಬರಲಿದೆ. ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸಲು ಅವಕಾಶವಿರಬಹುದು.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications