Mangala Gochara: ಈ ರಾಶಿಯವರ ಕಷ್ಟದ ದಿನಗಳು ಆರಂಭ; ಹೆಜ್ಜೆ ಹೆಜ್ಜೆಗೂ ಎದುರಾಗುವುದು ಸವಾಲುಗಳು

Mangala Gochara: ಮಂಗಳ ಗ್ರಹವು ಶೀಘ್ರದಲ್ಲೇ ಕರ್ಕ ರಾಶಿಗೆ ಪ್ರವೇಶಿಸಲಿದೆ. ಮಂಗಳನು ಕರ್ಕ ರಾಶಿಗೆ ಪ್ರವೇಶಿಸುವ ಅವಧಿ ಬಹಳ ಮುಖ್ಯವಾಗಿರುತ್ತದೆ. ಯಾಕೆಂದರೆ ಇದು ಅಶುಭ ಫಲವನ್ನು ನೀಡುವುದು. ಎಲ್ಲಾ ಹನ್ನೆರಡು ರಾಶಿಯವರ ಮೇಲೂ ಪ್ರಭಾವ ಇರುವುದಾದರೂ ನಾಲ್ಕು ರಾಶಿಯವ ಸಮಸ್ಯೆಗಳನ್ನು ಹೆಚ್ಚು ಮಾಡಬಹುದು. ಶತ್ರುಗಳ ಕೈ ಮೇಲಾಗಬಹುದು.

ಮಂಗಳ ಗ್ರಹವು ಕರ್ಕ ರಾಶಿಗೆ ಯಾವಾಗ ಪ್ರವೇಶಿಸುತ್ತದೆ?

ಮಂಗಳ ಗ್ರಹಗಳ ಅಧಿಪತಿ. ಭೌತಿಕ ಶಕ್ತಿಗೆ ಕಾರಣವಾದ ಗ್ರಹ. ಇನ್ನು ಒಂದು ವಾರದಲ್ಲಿ ಮಂಗಳ, ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ವರ್ಷ, ಮಂಗಳ ಗ್ರಹವು ಮುಂದಿನ ಶುಕ್ರವಾರ ಅಂದರೆ ಸೆಪ್ಟೆಂಬರ್ 18ರ ಸಂಜೆ 4.44 ಕ್ಕೆ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದೆ. ನಂತರ ನವೆಂಬರ್ ಹನ್ನೆರಡರವರೆಗೆ ಮಂಗಳ ಗ್ರಹವು ಇದೇ ರಾಶಿಯಲ್ಲಿ ಸಂಚಾರ ಮಾಡುತ್ತಾ ಇರುವುದು. ಜ್ಯೋತಿಷ್ಯದ ಪ್ರಕಾರ, ಕರ್ಕಾಟಕ ರಾಶಿಯಲ್ಲಿ ಮಂಗಳ ಅತ್ಯಂತ ದುರ್ಬಲವಾಗಿರುತ್ತದೆ. ಆದ್ದರಿಂದ, ಮಂಗಳ ಈ ರಾಶಿಗೆ ಪ್ರವೇಶಿಸಿದ ತಕ್ಷಣ ನಾಲ್ಕು ರಾಶಿಯಡಿಯಲ್ಲಿ ಹುಟ್ಟಿದವರಿಗೆ ಸಮಸ್ಯೆಗಳು ಹೆಚ್ಚಾಗಬಹುದು. ವೃತ್ತಿಯಿಂದ ಹಿಡಿದು ಆರ್ಥಿಕ ವಿಷಯಗಳವರೆಗೆ ಹೆಚ್ಚು ಜಾಗೃತೆ ವಹಿಸಬೇಕು. ಈ ಅವಧಿಯಲ್ಲಿ ಶತ್ರುಗಳು ಪ್ರಾಬಲ್ಯ ಸಾಧಿಸಬಹುದು.

Mangala Gochara In Kataka Rashi People Of Four Zodiac Sign May Face Tough Time Probem Will Increase

ಮಂಗಳನಿಂದ ಕಷ್ಟ ಅನುಭವಿಸುವ ರಾಶಿಗಳು

ಕರ್ಕಾಟಕ ರಾಶಿ (Cancer)

ಕರ್ಕಾಟಕ ರಾಶಿಗೆ ಮಂಗಳನ ಪ್ರವೇಶವು ನಿಮ್ಮ ಸವಾಲುಗಳನ್ನು ಹೆಚ್ಚಿಸಬಹುದು. ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ತಾಯಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಕೆಲವು ಸಮಸ್ಯೆಗಳಿಂದಾಗಿ ಮಾನಸಿಕ ಒತ್ತಡ ಉಂಟಾಗಬಹುದು. ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಲು ಪ್ರಯತ್ನಿಸಿ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಹಠಾತ್ ಆರ್ಥಿಕ ವೆಚ್ಚಗಳು ಹೆಚ್ಚಾಗಬಹುದು. ಶತ್ರುಗಳ ಬಾಧೆ ಕಾಡಬಹುದು.

ಮಿಥುನ ರಾಶಿ (Gemini)

ಈ ಮಂಗಳ ಸಂಚಾರವು ಮಿಥುನ ರಾಶಿಯವರ ತೊಂದರೆಗಳನ್ನು ಹೆಚ್ಚಿಸಬಹುದು. ಯಾರಿಗೂ ಕಠಿಣ ಪದಗಳನ್ನು ಬಳಸಬೇಡಿ. ಮಾತೇ ನಿಮ್ಮ ಕೆಲಸ ಕೆಡಿಸಬಹುದು. ಅನಾವಶ್ಯಕವಾಗಿ ಯಾರೊಂದಿಗೂ ಮಾತಿಗೆ ಇಳಿಯಬೇಡಿ. ಜಗಳದಿಂದ ಸಾಧ್ಯವಾದಷ್ಟು ದೂರವಿರಿ. ದೈಹಿಕ ಸಮಸ್ಯೆಗಳು ಕೂಡಾ ಹೆಚ್ಚಾಗಬಹುದು. ಮಾನಸಿಕ ಕಿರಿಕಿರಿ ಹೆಚ್ಚಾಗಬಹುದು. ಸದಾ ಆತಂಕ ಕಾಡುವುದು. ಈ ಅವಧಿಯಲ್ಲಿ ನಿಮ್ಮ ಸಹವಾಸ ಯಾರ ಜೊತೆ ಇದೆ ಎನ್ನುವುದು ಮುಖ್ಯವಾಗುತ್ತದೆ. ಆ ಬಗ್ಗೆಯೂ ಗಮನ ಇರಲಿ. ನಿಮ್ಮ ಸಹವಾಸವೇ ಅನಿರೀಕ್ಷಿತ ನಷ್ಟಗಳಿಗೆ ಕಾರಣವಾಗಬಹುದು.

Mangala Gochara:ಸಿಂಹ ರಾಶಿ (Leo)

ಮಂಗಳ ಗ್ರಹದ ಸಂಚಾರವು ಸಿಂಹ ರಾಶಿಯವರ ಖರ್ಚುಗಳನ್ನು ಹೆಚ್ಚಿಸಬಹುದು. ಜಗಳ ಮತ್ತು ವಿವಾದಗಳಿಂದ ದೂರವಿರಿ. ಭೂಮಿ ಅಥವಾ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಮಾರಾಟ, ಖರೀದಿ ಎರಡೂ ನಷ್ಟಕ್ಕೆ ಕಾರಣವಾಗಬಹುದು. ಶಿಕ್ಷಣ ಕ್ಷೇತ್ರದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ನ್ಯಾಯಾಲಯದ ಬಾಗಿಲು ತಟ್ಟಬೇಕಾಗಬಹುದು. ತಾಳ್ಮೆಯನ್ನು ಕಾಪಾಡಿಕೊಳ್ಳಿ. ಈ ಸಂದರ್ಭದಲ್ಲಿ ತಾಳ್ಮೆ ತುಂಬಾ ಮುಖ್ಯವಾಗುವುದು. ಸಣ್ಣ ಸಣ್ಣ ವಿಷಯಗಳಿಗೆ ದ್ವೇಷದ ಮಾತುಗಳನ್ನು ಆಡಬೇಡಿ.

Mangala Gochara:ಧನು ರಾಶಿ (Sagittarius)

ಕರ್ಕಾಟಕ ರಾಶಿಗೆ ಮಂಗಳನ ಪ್ರವೇಶವು ಧನು ರಾಶಿಯವರಿಗೆ ಅಶುಭವಾಗಬಹುದು. ಆಹಾರ ಪದ್ಧತಿಯಲ್ಲಿ ಸಂಯಮವನ್ನು ಕಾಪಾಡಿಕೊಳ್ಳಿ. ಮಕ್ಕಳು ನಿಮ್ಮ ಚಿಂತೆಯನ್ನು ಹೆಚ್ಚಿಸಬಹುದು. ವಾದ ಮಾಡುವುದನ್ನು ತಪ್ಪಿಸಿ. ಕಚೇರಿ ರಾಜಕೀಯದಿಂದ ದೂರವಿರಿ. ಗುಪ್ತ ಶತ್ರುಗಳು ಗಮನಾರ್ಹ ನಷ್ಟವನ್ನು ಉಂಟುಮಾಡಬಹುದು. ಹಣಕಾಸಿನ ವಹಿವಾಟಿನ ಬಗ್ಗೆ ಜಾಗರೂಕರಾಗಿರಿ. ಹೊಸ ಕೆಲಸದ ಯೋಚನೆಯನ್ನು ನವೆಂಬರ್‌ವರೆಗೆ ಮುಂದೂಡುವುದು ಒಳ್ಳೆಯದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+