Lucky Plants: ಮನೆಯ ಉತ್ತರ ದಿಕ್ಕಿನಲ್ಲಿ ಈ ಗಿಡ ನೆಟ್ಟರೆ ಒಲಿಯುತ್ತೆ ಅದೃಷ್ಟ, ಹುಡುಕಿ ಬರುತ್ತೆ ಹಣ
Lucky Plants: ಗಿಡಗಳನ್ನು ಬೆಳೆಸುವುದರಿಂದ ಮಾನಸಿಕ ಶಾಂತಿ ಸಿಗುವುದಲ್ಲದೆ, ಮನೆಯ ವಾತಾವರಣವೂ ಆಹ್ಲಾದಕರವಾಗಿರುವುದು. ಇದಕ್ಕಾಗಿಯೇ ಅನೇಕ ಜನರು ಮನೆಯ ಸುತ್ತ ಮುತ್ತ, ಮನೆಯ ಒಳಗೆ ಗಿಡಗಳನ್ನು ಬೆಳೆಸಲು ಇಷ್ಟಪಡುತ್ತಾರೆ. ಮನೆಯನ್ನು ಸುಂದರವಾಗಿ ಅಲಂಕರಿಸಲು ಬೇರೆ ಬೇರೆ ರೀತಿಯ ಗಿಡಗಳನ್ನು ಬೆಳೆಸಲಾಗುತ್ತದೆ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಿಶೇಷ ಸಸ್ಯಗಳು ಸೌಂದರ್ಯ ಮಾತ್ರವಲ್ಲದೆ ಮನೆಯೊಳಗೆ ಪಾಸಿಟಿವಿಟಿ ನೆಲೆಯಾಗುವುದು. ಸಂತೋಷ ಮತ್ತು ಸಮೃದ್ಧಿಯನ್ನು ತರುವುದು. ಅದರಲ್ಲಿಯೂ ಈ ಗಿಡಗಳನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಬೆಳೆಸುವುದರಿಂದ ಸಕಾರಾತ್ಮಕ ಪರಿಣಾಮ ಹೆಚ್ಚಾಗುವುದು.
ವಾಸ್ತು ಶಾಸ್ತ್ರದ ಪ್ರಕಾರ ದಿಕ್ಕು ಬಹಳ ಮುಖ್ಯವಾಗಿರುತ್ತದೆ. ಹಾಗೆಯೇ ಈ ಅದೃಷ್ಟ ತರುವ ಗಿಡಗಳನ್ನು ನೆಡುವಾಗಲೂ ದಿಕ್ಕು ಬಹಳ ಮುಖ್ಯವಾಗಿರುತ್ತದೆ. ಸರಿಯಾದ ದಿಕ್ಕಿನಲ್ಲಿ ಗಿಡಗಳನ್ನು ನೆಟ್ಟರೆ ಮಾತ್ರ ಶುಭ ಫಲ ಸಿಗುವುದು. ಮನೆಯ ಆವರಣದಲ್ಲಿ ಗಿಡಗಳನ್ನು ಬೆಳೆಸುವುದರಿಂದ ಆಹ್ಲಾದಕರ ವಾತಾವರಣ ಸೃಷ್ಟಿಯಾಗುವುಸು ಮಾತ್ರವಲ್ಲದೆ, ವಾಸ್ತು ಪ್ರಕಾರ ಸಕಾರಾತ್ಮಕ ಶಕ್ತಿಯೂ ಹೆಚ್ಚುವುದು. ಆದಾಯ ಹೆಚ್ಚಾಗುವುದಕ್ಕೆ ಮತ್ತು ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ಕಾರಣವಾಗುವುದು.

ಮನಿ ಪ್ಲಾಂಟ್, ತುಳಸಿ, ಲಕ್ಕಿ ಬ್ಯಾಂಬೂ, ಅಲೋವೆರಾ ಮತ್ತು ಹುಣಸೆಹಣ್ಣಿನಂತಹ ಸಸ್ಯಗಳನ್ನು ಬೆಳೆಸುವುದರಿಂದ ಅದ್ಭುತ ಪ್ರಯೋಜನ ಸಿಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.
ಲಕ್ಕಿ ಬ್ಯಾಂಬೂ (Lucky Bamboo)
ಈ ಲಕ್ಕಿ ಬ್ಯಾಂಬೂ ಸಸ್ಯವನ್ನು ಬೆಳೆಸುವುದರಿಂದ ಮನೆಯಲ್ಲಿ ಪಾಸಿಟಿವಿಟಿ ಮತ್ತು ಸಂಪತ್ತು ಹರಿದು ಬರುವುದು. ಈ ಸಸ್ಯವನ್ನು ಮನೆ ಅಥವಾ ಕಚೇರಿಯಲ್ಲಿ ಸರಿಯಾದ ದಿಕ್ಕಿನಲ್ಲಿ ಇರಿಸಿದರೆ, ಅದು ಆರ್ಥಿಕ ಸಮೃದ್ಧಿ ಮತ್ತು ಸಂಪತ್ತನ್ನು ತರುವುದು. ಈ ಸಸ್ಯ ಮನೆಯಲ್ಲಿರುವ ವಾಸ್ತು ದೋಷಗಳನ್ನು ತೆಗೆದುಹಾಕುವುದು. ಮನೆಯಲ್ಲಿನ ನೆಗೆಟಿವ್ ಎನರ್ಜಿಯನ್ನು ತೆಗೆದುಹಾಕುವುದು. ವಾಸ್ತು ಶಾಸ್ತ್ರದ ಪ್ರಕಾರ, ಲಕ್ಕಿಬ್ಯಾಂಬೂ ಅಥವಾ ಲಕ್ಕಿ ಬಿದಿರನ್ನು ಪೂರ್ವ ಅಥವಾ ಆಗ್ನೇಯ ಮೂಲೆಯಲ್ಲಿ ಇಟ್ಟರೆ ಒಳ್ಳೆಯದು.
ಮನಿ ಪ್ಲಾಂಟ್ (Money Plant)
ವಾಸ್ತು ಗಿಡಗಳ ವಿಷಯಕ್ಕೆ ಬಂದಾಗ ಮೊದಲು ನೆನಪಿಗೆ ಬರುವುದೇ ಮನಿ ಪ್ಲಾಂಟ್. ಈ ಸಸ್ಯದ ಹೆಸರಿನಲ್ಲೇ ಹಣ ಇದೆ. ಈ ಸಸ್ಯ ಗಾಳಿಯನ್ನು ಶುದ್ಧೀಕರಿಸುವುದಲ್ಲದೆ, ಆರ್ಥಿಕ ತೊಂದರೆಗಳನ್ನು ಕೂಡಾ ನಿವಾರಣೆ ಮಾಡುವುದು. ಈ ಸಸ್ಯವನ್ನು ಮನೆಯಲ್ಲಿ ಬೆಳೆಸಿದರೆ ಮನೆಯ ಹಣದ ಹರಿವನ್ನು ಹೆಚ್ಚಿಸುತ್ತದೆ ಎನ್ನುವುದು ನಂಬಿಕೆ. ಮನೆಯ ಆಗ್ನೇಯ ಮೂಲೆಯಲ್ಲಿ ಈ ಮನಿ ಪ್ಲಾಂಟನ್ನು ಇಟ್ಟರೆ ಶುಭಫಲ ಸಿಗುವುದು. ಯಾವಾಗಲೂ ಶುಭ.
ತುಳಸಿ (Tulsi)
ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡವನ್ನು ಲಕ್ಷ್ಮೀ ದೇವಿಯ ಒಂದು ರೂಪ ಎಂದು ಹೇಳಲಾಗುತ್ತದೆ. ತುಳಸಿ ಅತ್ಯಂತ ಪವಿತ್ರ ಸಸ್ಯ. ಈ ಕಾರಣಕ್ಕಾಗಿಯೇ ಇದನ್ನು ಪ್ರತಿ ಮನೆಯಲ್ಲಿ ಪೂಜಿಸಲಾಗುತ್ತದೆ. ಈ ಗಿಡವನ್ನು ಮನೆಯ ಮುಂದೆ ಅಥವಾ ಮಧ್ಯದಲ್ಲಿ ಇರಿಸಿ ಪೂಜಿಸಿದರೆ, ಅದು ಪಾಸಿಟಿವ್ ಎನರ್ಜಿಯನ್ನು ಹೆಚ್ಚಿಸುತ್ತದೆ. ಮನೆಗೆ ಅದೃಷ್ಟವನ್ನು ತರುತ್ತದೆ ಎನ್ನುವ ನಂಬಿಕೆ ಇದೆ. ಆಯುರ್ವೇದದಲ್ಲಿಯೂ ಈ ಸಸ್ಯವು ಅನೇಕ ಪ್ರಯೋಜನಗಳನ್ನು ಹೊಂದಿದೆ. ವಾಸ್ತು ದೋಷಗಳನ್ನು ನಿವಾರಿಸುವಲ್ಲಿ ಮತ್ತು ಮನೆಗೆ ಅದೃಷ್ಟವನ್ನು ತರುವಲ್ಲಿ ತುಳಸಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆಯಂತೆ. ಈ ಗಿಡವನ್ನು ಯಾವಾಗಲೂ ಈಶಾನ್ಯ ಅಥವಾ ಪೂರ್ವ ಉತ್ತರ ದಿಕ್ಕಿನಲ್ಲಿ ಇರಿಸಬಹುದು.
ವೀಳ್ಯದ ಬಳ್ಳಿ (Betel Leaf)
ಮನೆಯಲ್ಲಿ ವೀಳ್ಯದ ಬಳ್ಳಿಯನ್ನು ಬೆಳೆಸಿದರೆ ಅದು ಸುತ್ತಲಿನ ಗಾಳಿಯನ್ನು ಶುದ್ಧೀಕರಿಸುವುದು ಅಲ್ಲದೆ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಎಲೆಗಳನ್ನು ಅನೇಕರು ಪೂಜೆಗಳಿಗೆ ಬಳಸುತ್ತಾರೆ. ಈ ಸಸ್ಯವನ್ನು ಲಕ್ಷ್ಮೀ ದೇವಿಯ ಸಂಕೇತ ಎಂದು ಹೇಳಲಾಗುತ್ತದೆ. ಈ ಸಸ್ಯವನ್ನು ಮನೆಯಲ್ಲಿ ಬೆಳೆಸಿದರೆ, ಅದು ಪಾಸಿಟಿವ್ ಎನರ್ಜಿಯನ್ನು ತರುತ್ತದೆ.ಮನೆಯ ಆರ್ಥಿಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಸಸ್ಯವನ್ನು ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಬೆಳೆಸಿದರೆ ಬಹಳ ಬೇಗನೆ ಶುಭ ಫಲ ಸಿಗುವುದು.
ಅಲೋವೆರಾ ಸಸ್ಯ (Aleovera)
ಆಯುರ್ವೇದದಲ್ಲಿ ಈ ಅಲೋವೆರಾ ಸಸ್ಯವು ಅನೇಕ ಗುಣಗಳನ್ನು ಹೊಂದಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ವಾಸ್ತು ಶಾಸ್ತ್ರದ ಪ್ರಕಾರ, ಅಲೋವೆರಾ ಸಸ್ಯವನ್ನು ಬೆಳೆಸುವುದರಿಂದ ಅದೃಷ್ಟ, ಸಕಾರಾತ್ಮಕ ಶಕ್ತಿ ಮತ್ತು ಸಂಪತ್ತು ಹರಿದು ಬರುವುದು. ಈ ಸಸ್ಯದ ಅಪರೂಪದ ಹೂವುಗಳನ್ನು ಅದೃಷ್ಟ ಮತ್ತು ಶುಭದ ಸಂಕೇತವೆಂದು ಹೇಳಲಾಗುತ್ತದೆ. ಈ ಸಸ್ಯವನ್ನು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಡುವುದರಿಂದ ಉತ್ತಮ ಫಲಿತಾಂಶ ಸಿಗುವುದು.


Click it and Unblock the Notifications
