Krishna Janmashtami 2026: ಜನ್ಮಾಷ್ಟಮಿಯಂದೇ ಅಪರೂಪದ ಗ್ರಹ ಸಂಯೋಗ : ಲಕ್ಷ್ಮೀ ಒಲಿಯುವ ಸಕಾಲ; ಹೆಚ್ಚುವುದು ಸಿರಿ ಸಂಪತ್ತು

Krishna Janmashtami 2026: ಸೆಪ್ಟೆಂಬರ್ 4 ರಂದು ಕೃಷ್ಣ ಜನ್ಮಾಷ್ಟಮಿಯ ಪವಿತ್ರ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ, ಚಂದ್ರ, ಗುರು ಮತ್ತು ಸೂರ್ಯ ಸೇರಿ ಶುಭ ಯೋಗಗಳನ್ನು ಸೃಷ್ಟಿಸುತ್ತಿದ್ದಾರೆ. ಜನ್ಮಾಷ್ಟಮಿಯಂದು, ಚಂದ್ರನು ತನ್ನ ಉಚ್ಚ ರಾಶಿಯಾದ ವೃಷಭ ರಾಶಿಯಲ್ಲಿ ಮತ್ತು ಗುರುವು ತನ್ನ ಉಚ್ಚ ರಾಶಿಯಾದ ಕರ್ಕ ರಾಶಿಯಲ್ಲಿ ಇರುತ್ತಾನೆ.

ಸೂರ್ಯನು ತನ್ನ ಅಧಿಪತ್ಯದ ಸಿಂಹ ರಾಶಿಯಲ್ಲಿ ಮತ್ತು ಶುಕ್ರನು ಕೂಡಾ ತನ್ನದೇ ರಾಶಿಯಾದ ತುಲಾ ರಾಶಿಯಲ್ಲಿ ಇರುತ್ತಾನೆ. ಬುಧನು ತನ್ನ ಸ್ನೇಹಪರ ರಾಶಿಯಲ್ಲಿಯೂ ಇರುತ್ತಾನೆ. ಮಂಗಳ ಮತ್ತು ಶುಕ್ರನ ನಡುವೆ ನವಪಂಚಮ ಯೋಗವೂ ಇರುವುದು. ಇದರರ್ಥ ಏಳು ಪ್ರಾಥಮಿಕ ಗ್ರಹಗಳಲ್ಲಿ ಐದು ಅನುಕೂಲಕರ ಸ್ಥಾನಗಳಲ್ಲಿರುತ್ತವೆ. ಮಾತ್ರವಲ್ಲ ಶುಭ ನವಪಂಚಮ ಯೋಗವು ಈ ದಿನ ರೂಪುಗೊಳ್ಳುವುದು. ಈ ಎಲ್ಲಾ ಶುಭ ಸಂಯೋಗಗಳಿಂದಾಗಿ ಜನ್ಮಾಷ್ಟಮಿ ಹಬ್ಬವು ನಾಲ್ಕು ರಾಶಿಯವರಿಗೆ ಅತ್ಯಂತ ಶುಭವಾಗಿರುವುದು.

Krishna Janmashtami 2026 Rare Graha Sanyoga Will Bring HUge Financial Benefits Luck To Zodiac People

Krishna Janmashtami 2026: ಈ ರಾಶಿಯವರಿಗೆ ಶುಭ

ವೃಷಭ ರಾಶಿ (Taurus)

ಜನ್ಮಾಷ್ಟಮಿಯ ಶುಭ ದಿನದಂದು, ಚಂದ್ರನು ವೃಷಭ ರಾಶಿಯಲ್ಲಿಯೇ ಉತ್ತುಂಗಕ್ಕೇರುತ್ತಾನೆ. ಈ ಚಂದ್ರನ ಸ್ಥಾನವು ಮನಸ್ಸಿನ ಶಾಂತಿಯನ್ನು ಹೆಚ್ಚಿಸುವುದು. ಕುಟುಂಬ ಜೀವನದಲ್ಲಿ ಸಂತೋಷ ಹೆಚ್ಚಾಗುವುದು. ಗ್ರಹ ಜೋಡಣೆಯು ನಿಮ್ಮ ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುವುದು. ಅನಿರೀಕ್ಷಿತವಾಗಿ ಆರ್ಥಿಕ ಲಾಭಗಳನ್ನು ಅನುಭವಿಸುವಿರಿ. ಹೊಸ ಕೆಲಸ ಆರಂಭಿಸಿದರೆ ಯಶಸ್ಸು ಸಿಗುವುದು. ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು.

ಕರ್ಕಾಟಕ ರಾಶಿ (Cancer)

ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ, ಗುರುವು ನಿಮ್ಮದೇ ರಾಶಿಯಲ್ಲಿ ಉತ್ತುಂಗದಲ್ಲಿರುತ್ತಾನೆ. ಮಾತ್ರವಲ್ಲ ಚಂದ್ರನು ಕೂಡಾ ಲಾಭದ ಮನೆಯಲ್ಲಿ ಉತ್ತುಂಗದಲ್ಲಿರುತ್ತಾನೆ. ಈ ದಿನ ಸೂರ್ಯನು ನಿಮ್ಮ ಸಂಪತ್ತಿನ ಮನೆಯಲ್ಲಿರುತ್ತಾನೆ. ಪರಿಣಾಮವಾಗಿ, ಜನ್ಮಾಷ್ಟಮಿ ನಿಮಗೆ ಸ್ಮರಣೀಯ ಹಬ್ಬವಾಗಬಹುದು. ವೃತ್ತಿ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಅನುಕೂಲಕರ ಬದಲಾವಣೆಗಳನ್ನು ಕಾಣಬಹುದು. ಸಂತೋಷ, ಸಮೃದ್ದಿ ಹೆಚ್ಚುವುದು. ನಷ್ಟದಿಂದ ಕೂಡಿದ್ದ ವ್ಯವಹಾರ ಮತ್ತೆ ಲಾಭದತ್ತ ಸಾಗುವುದು. ಹಣದ ಸಮಸ್ಯೆ ನಿಧಾನವಾಗಿ ಕಡಿಮೆಯಾಗುವುದು. ಆತ್ಮವಿಶ್ವಾಸವೂ ಹೆಚ್ಚಾಗಬಹುದು. ಕೆಲಸದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗುವುದು.

ಕನ್ಯಾ ರಾಶಿ (Virgo)

ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಸಕಾರಾತ್ಮಕ ಫಲ ಸಿಗುವುದು. ಲಾಭದ ಮನೆಯಲ್ಲಿ ಗುರುವು ಉತ್ತುಂಗದಲ್ಲಿದ್ದು, ನಿಮಗೆ ಆರ್ಥಿಕ ಲಾಭಗಳನ್ನು ತರಬಹುದು. ಬಾಕಿ ಇರುವ ಕೆಲಸಗಳು ಪೂರ್ಣವಾಗುವುದು. ಈ ಮೂಲಕ ಬಹಳ ದಿನಗಳ ನಂತರ ತೃಪ್ತಿಯನ್ನು ಕಾಣುವಿರಿ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಅವಕಾಶ ಸಿಗಬಹುದು. ವಿದೇಶ ಪ್ರಯಾಣದ ಯೋಗವಿದೆ. ವ್ಯವಹಾರದಲ್ಲಿ ಮಹತ್ವದ ಡೀಲ್‌ಗಳನ್ನು ಪಡೆಯುವ ಸಾಧ್ಯತೆಯಿದೆ. ಪೂರ್ವಜರ ಆಸ್ತಿಯಿಂದ ಲಾಭವಾಗುವುದು. ಹಿಸ ಆಸ್ತಿ ಖರೀದಿಸುವ ಸಾಧ್ಯತೆಯೂ ಇದೆ.

ಧನು ರಾಶಿ (Sagittarius)

ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಸಿಗಬಹುದು. ಉದ್ಯಮಿಗಳ ಯೋಜನೆಗಳು ಯಶಸ್ವಿಯಾಗಬಹುದು. ವೈವಾಹಿಕ ಜೀವನದಲ್ಕಿ ಎದುರಾಗಿದ್ದ ಭಿನ್ನಾಭಿಪ್ರಾಯಗಳು ಕೊನೆಯಾಗುವುದು. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ತಂದೆಯ ಬೆಂಬಲದಿಂದ ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭವಾಗುವುದು. ಈ ರಾಶಿಯವರು ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುವಿರಿ. ಮಕ್ಕಳ ಸಾಧನೆಯಿಂದ ಹೆಮ್ಮೆ ಪಡುವಿರಿ. ಆರೋಗ್ಯದಲ್ಲಿನ ಸಕಾರಾತ್ಮಕ ಬದಲಾವಣೆಗಳು ನಿಮಗೆ ಜೀವನವನ್ನು ಆನಂದಿಸಲು ಸಹಾಯ ಮಾಡುವುದು. ಬಹು ದಿನಗಳಿಂದ ಅಂದುಕೊಂಡಿದ್ದ ಧಾರ್ಮಿಕ ಯಾತ್ರೆಗೆ ತೆರಳುವ ಅವಕಾಶ ಸಿಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+