ಶ್ರೀಕೃಷ್ಣನ ಕೃಪೆ ಮತ್ತು ಐಶ್ವರ್ಯಕ್ಕಾಗಿ ಮನೆಯಲ್ಲಿ ಇಡಬೇಕಾದ ಶುಭ ವಸ್ತುಗಳಿವು!

Krishna Janmashtami:ಹಿಂದೂ ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಈ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ. ಮಾತ್ರವಲ್ಲ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ಜನ್ಮಾಷ್ಟಮಿಯ ದಿನದಂದು ಉಪವಾಸ ಮತ್ತು ಪೂಜೆಗಳನ್ನು ಮಾಡುವುದರ ಜೊತೆಗೆ, ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದ ಕೆಲವು ವಸ್ತುಗಳನ್ನು ಮನೆಗೆ ತರುವುದು ಕೂಡಾ ಶುಭ ಎಂದು ಹೇಳಲಾಗುತ್ತದೆ.

ವಾಸ್ತು ಶಾಸ್ತ್ರ ಮತ್ತು ಹಿಂದೂ ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಕೆಲವು ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಂಪತ್ತು ನೆಲೆಯಾಗುವುದು. ಹಾಗಾಗಿ ಈ ಐದು ವಸ್ತುಗಳು ಮನೆಯಲ್ಲಿದ್ದರೆ ಜೀವನ ಪರ್ಯಂತ ಆ ಮನೆ ಮತ್ತು ಮನೆ ಮಂದಿಯ ಮೇಲೆ ಶ್ರೀ ಕೃಷ್ಣನ ಆಶೀರ್ವಾದ ಇರುವುದು.

Krishna Janmashtami 2026 Bring Auspicious Things Home To Get Lord Krishnas Blessings Happiness Wealth

Krishna Janmashtami:ಕೃಷ್ಣನಿಗೆ ಪ್ರಿಯವಾದ ವಸ್ತುಗಳು

ನವಿಲು ಗರಿ : ಶ್ರೀಕೃಷ್ಣನ ಅಲಂಕಾರದಲ್ಲಿ ನವಿಲು ಗರಿಗಳಿಗೆ ವಿಶೇಷ ಸ್ಥಾನವಿದೆ. ಜನ್ಮಾಷ್ಟಮಿಯ ದಿನದಂದು ಮನೆಗೆ ನವಿಲು ಗರಿಯನ್ನು ತಂದರೆ ಶುಭ ಫಲ ಸಿಗುವುದು. ವಾಸ್ತು ನಂಬಿಕೆಗಳ ಪ್ರಕಾರ, ಇದು ಮನೆಯಲ್ಲಿನ ನೆಗೆಟಿವ್‌ ಎನರ್ಜಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮನೆಯ ತುಂಬೆಲ್ಲಾ ಪಾಸಿಟಿವ್‌ ಎನರ್ಜಿ ಪಸರಿಸುವಂತೆ ಮಾಡುತ್ತದೆ. ವಿಶೇಷವಾಗಿ ಉದ್ಯಮಿಗಳು ಅಥವಾ ರಾಹುವಿನ ಪ್ರಭಾವವನ್ನು ನಂಬುವವರು ನವಿಲು ಗರಿಗಳನ್ನು ಪೂಜಾ ಸ್ಥಳದಲ್ಲಿ ಅಥವಾ ಲಾಕರ್ ಬಳಿ ಇಡುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಹೀಗೆ ಮಾಡುವುದರಿಂದ ವ್ಯವಹಾರದಲ್ಲಿ ವಿಪರೀತ ಲಾಭವಾಗುವುದು ಮತ್ತು ದೊಡ್ಡ ಮಟ್ಟದಲ್ಲಿ ಹಣದ ಲಾಭವಾಗುವುದು.

Krishna Janmashtami: ಕಾಮಧೇನು ವಿಗ್ರಹ : ಶ್ರೀಕೃಷ್ಣನಿಗೆ ಹಸುಗಳೆಂದರೆ ತುಂಬಾ ಇಷ್ಟ. ಅದಕ್ಕಾಗಿಯೇ ಜನ್ಮಾಷ್ಟಮಿಯಂದು ಕರುವಿಗೆ ಹಾಲು ಕೊಡುವ ಕಾಮಧೇನು ಹಸುವಿನ ವಿಗ್ರಹವನ್ನು ಮನೆಗೆ ತರುವುದರಿಂದ ನಮ್ಮ ಅದೃಷ್ಟ ಹೆಚ್ಚಾಗುವುದು. ಈ ವಿಗ್ರಹವನ್ನು ದೇವರ ಕೋಣೆಯಲ್ಲಿ ಅಥವಾ ಮನೆಯಲ್ಲಿ ಸ್ವಚ್ಛವಾದ ಸ್ಥಳದಲ್ಲಿ ಇಡಬಹುದು. ಇದು ಮನೆಯಲ್ಲಿ ಯಾವತ್ತೂ ಆಹಾರ, ಸಂಪತ್ತು ಮತ್ತು ಕುಟುಂಬದ ಸಮೃದ್ಧಿ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ ಎನ್ನುವುದು ನಂಬಿಕೆ.

ಹಳದಿ ಬಟ್ಟೆ :ಹಳದಿ ಶ್ರೀಕೃಷ್ಣನ ನೆಚ್ಚಿನ ಬಣ್ಣ. ಇದೇ ಕಾರಣಕ್ಕೆ ಜನ್ಮಾಷ್ಟಮಿಯ ಸಂದರ್ಭದಲ್ಲಿ, ಶ್ರೀಕೃಷ್ಣನಿಗೆ ಹಳದಿ ಬಟ್ಟೆಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಖರೀದಿಸಿ ಅರ್ಪಿಸುತ್ತಾರೆ. ಶ್ರೀ ಕೃಷ್ಣನನ್ನು ಹಳದಿ ಬಟ್ಟೆಗಳಿಂದ ಅಲಂಕರಿಸಿ ಭಕ್ತಿಯಿಂದ ಪೂಜಿಸುವುದರಿಂದ ಮನೆಯಲ್ಲಿ ಸಂಪತ್ತು, ಸಂತೋಷ ಮತ್ತು ಶುಭ ಫಲ ಸಿಗುವುದು ಎನ್ನುವುದು ನಂಬಿಕೆ.

ಬಾಲ ಕೃಷ್ಣನ ತೊಟ್ಟಿಲು : ಬಾಲ್ಯದಲ್ಲಿ ಶ್ರೀಕೃಷ್ಣನನ್ನು ತೊಟ್ಟಿಲಲ್ಲಿ ತೂಗಾಡಿಸುವ ಸಂಪ್ರದಾಯ ಅನೇಕ ಸ್ಥಳಗಳಲ್ಲಿ ಕಂಡುಬರುವುದು. ಅದಕ್ಕಾಗಿಯೇ ಜನ್ಮಾಷ್ಟಮಿಯ ದಿನದಂದು, ಮರ ಅಥವಾ ಲೋಹದಿಂದ ಮಾಡಿದ ಸುಂದರವಾದ ಸಣ್ಣ ತೊಟ್ಟಿಲುಗಳನ್ನು ಮನೆಗೆ ತಂದರೆ ಅದೃಷ್ಟವನ್ನು ಮನೆಗೆ ತಂದಂತೆ. ಬಾಲ ಕೃಷ್ಣನ ವಿಗ್ರಹವನ್ನು ಅದರಲ್ಲಿ ಇರಿಸಿ ಭಕ್ತಿಯಿಂದ ತೊಟ್ಟಿಲನ್ನು ತೂಗುವುದರಿಂದ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುವುದು. ಇದು ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿ ಮಾಡುವುದು.

ಜನ್ಮಾಷ್ಟಮಿಯಂದು ನವಿಲು ಗರಿಗಳು, ಕೊಳಲುಗಳು, ಕಾಮಧೇನುವಿನ ವಿಗ್ರಹಗಳು, ಹಳದಿ ಬಟ್ಟೆಗಳು ಮತ್ತು ಬಾಲಕೃಷ್ಣನ ತೊಟ್ಟಿಲು ಮುಂತಾದ ವಸ್ತುಗಳನ್ನು ಮನೆಗೆ ತರುವುದರಿಂದ ಅದೃಷ್ಟ ಹೆಚ್ಚಾಗುತ್ತದೆ ಎಂದು ಹೇಳಲಾಗುವುದು. ಇವುಗಳನ್ನು ಕೃಷ್ಣನಿಗೆ ಭಕ್ತಿಯಿಂದ ಅರ್ಪಿಸಿ ಪೂಜಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ, ಸಂತೋಷ ಮತ್ತು ಸಂಪತ್ತು ವೃದ್ಧಿಯಾಗುವುದು ಎನ್ನುವುದು ನಂಬಿಕೆ.

ಆದರೆ ಇಲ್ಲಿ ನೆನಪಿಡಬೇಕಾದ ಅಂಶ ಎಂದರೆ ಇವು ಕೇವಲ ಆಧ್ಯಾತ್ಮಿಕ ಮತ್ತು ವಾಸ್ತು ನಂಬಿಕೆಗಳನ್ನು ಆಧರಿಸಿವೆ. ಅವುಗಳಿಗೆ ಯಾವುದೇ ರೀತಿಯ ವೈಜ್ಞಾನಿಕ ಪುರಾವೆಗಳಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+