ಬಹುದೊಡ್ಡ ಅವಘಡ ಸಂಭವಿಸಲಿದೆ: ಮತ್ತೆ ಕೋಡಿಶ್ರೀಗಳ ಭಯಾನಕ ಭವಿಷ್ಯ
ಅರಸೀಕೆರೆ ಕೋಡಿಮಠ ಸಂಸ್ಥಾನದ ಶ್ರೀ ಶಿವಾನಂದ ಶಿವಯೋಗಿ ಸ್ವಾಮಿಗಳು ಆಗಾಗ ನೈಸರ್ಗಿಕವಾಗಿ, ರಾಜಕೀಯದಲ್ಲಿ ಏನಾಗಲಿದೆ ಎಂದು ಭವಿಷ್ಯ ನುಡಿಯುತ್ತಿರುತ್ತಾರೆ. ಕೊರೊನಾ ಕುರಿತಂತೆಯೂ ಭವಿಷ್ಯ ಹೇಳಿದ್ದರು. ಈಗ ಮತ್ತೊಮ್ಮೆ ಬಳ್ಳಾರಿಯಲ್ಲಿ ಭವಿಷ್ಯವನ್ನು ನುಡಿದಿದ್ದಾರೆ.
ಕಳೆದ ವರ್ಷದ ಡಿಸೆಂಬರ್ ನಲ್ಲಿ ರಾಣೆಬೆನ್ನೂರಿನಲ್ಲಿ ಮುಂದಿನ ವರ್ಷ ದೇಶದಲ್ಲಿ ದೊಡ್ಡ ಅವಗಢ ಸಂಭವಿಸಲಿದೆ ಎಂದು ಹೇಳಿದ್ದರು. ಈಗ ಅದನ್ನು ಮತ್ತೆ ಪುನರುಚ್ಚಿಸಿದ್ದಾರೆ. ಪೈಗಂಬರ್ ಅವರ ವಿಚಾರವನ್ನು ಶ್ರೀಗಳು ತಮ್ಮ ಭವಿಷ್ಯದಲ್ಲಿ ಪ್ರಸ್ತಾವಿಸಿದ್ದಾರೆ.
ದೇಶದಲ್ಲಿ ದೊಡ್ಡ ಅವಘಡ ಸಂಭವಿಸಲಿದೆ, ಅದರಂತೆಯೇ ಸೇನಾ ಪಡೆಯ ಮುಖ್ಯಸ್ಥರು ಮತ್ತು ಸೈನಿಕರು ದುರ್ಮರಣ ಹೊಂದಿದ್ದನ್ನು ಮತ್ತೆ ಪ್ರಸ್ತಾವಿಸಿರುವ ಕೋಡಿಶ್ರೀಗಳು, ರಾಜಕೀಯ ಮತ್ತು ಜಾತಿ ಕಲಹ ಸೇರಿದಂತೆ ದ್ವೇಷದ ವಾತಾವರಣ ನಿರ್ಮಾಣವಾಗಲಿದೆ. ಕೊರೊನಾ ಹಾವಳಿಯೂ ಜಾಸ್ತಿಯಾಗಲಿದೆ ಎಂದು ಹೇಳಿದ್ದಾರೆ.
ಬಿಜೆಪಿಯ ನಾಯಕಿ ನೂಪುರ್ ಶರ್ಮಾ ಅವರ ಹೇಳಿಕೆಯನ್ನು ಪರೋಕ್ಷವಾಗಿ ಉಲ್ಲೇಖಿಸಿದ ಕೋಡಿಶ್ರೀಗಳು, ದೇಶದಲ್ಲಿ ಸಾಲುಸಾಲು ಕಲಹಕ್ಕೆ ಇದು ನಾಂದಿ ಹಾಡಲಿದೆ ಎಂದು ಸೂಕ್ಷ್ಮವಾಗಿ ನುಡಿಯುವ ಮೂಲಕ ಅಶಾಂತಿಯ ವಾತಾವರಣ ನಿರ್ಮಾಣವಾಗಲಿದೆ ಎನ್ನುವ ಎಚ್ಚರಿಕೆಯನ್ನು ನೀಡಿದರು.

ಬಳ್ಳಾರಿಯಲ್ಲಿ ಭವಿಷ್ಯ ನುಡಿದ ಕೋಡಿಶ್ರೀಗಳು
ಸುಂದರವಾದ ಹೆಣ್ಣು ಮಕ್ಕಳಿಗೆ ಅಂಗಾಂಗಳನ್ನ ಕಿತ್ತು ತಿನ್ನುತ್ತವೆ. ರಾಜಕೀಯ ವಿಪ್ಲವವಾಗಿ, ಗುಂಪುಗಳಾಗುತ್ತವೆ. ಬೆಂಕಿ, ಗಾಳಿ, ಗುಡುಗು ಸಿಡಿಲಿನಿಂದ ವಿಪರೀತ ಅನಾಹುತಗಳಾಗುತ್ತವೆ. ಭಾರತದಲ್ಲಿ ಇಲ್ಲಿಯವರೆಗೂ ಕಂಡೂ ಕೇಳರಿಯದಂತ ಬಹುದೊಡ್ಡ ಆಘಾತ ಆಗುತ್ತದೆ ಎಂದು ಈ ವರ್ಷದ ಏಪ್ರಿಲ್‌ನಲ್ಲಿ ಹಾಸನದಲ್ಲಿ ಭವಿಷ್ಯವನ್ನು ನುಡಿದಿದ್ದರು. ಅದನ್ನು ಬಳ್ಳಾರಿಯಲ್ಲಿ ಮತ್ತೆ ಕೋಡಿಶ್ರೀಗಳು ಪುನರುಚ್ಚಿಸಿದ್ದಾರೆ.

ಭಾರತ ದೇಶದಲ್ಲಿ ಅವಗಢ ಸಂಭವಿಸಲಿದೆ
"ರಾಜಕೀಯ ಅಸ್ಥಿರತೆ ಎಂದು ಹಿಂದೆ ಹೇಳಿದ್ದೆ, ಗುಂಪುಗಳಾಗುತ್ತವೆ ಎಂದು ಹೇಳಿದ್ದೆ, ಅದನ್ನು ಈಗ ನೋಡುತ್ತಿದ್ದೀರಾ. ಭಾರತ ದೇಶದಲ್ಲಿ ಅವಗಢ ಸಂಭವಿಸಲಿದೆ, ಇದರಿಂದ ಜಗತ್ತಿನ ಅರಸುಗಳು ಭರತಖಂಡದ ವಿರುದ್ದ ತಿರುಗಿ ಬೀಳಲಿದ್ದಾರೆ. ಪೈಗಂಬರ್ ಬಗ್ಗೆ ಅವಹೇಳನ ಮಾಡಿ ಇದು ಆರಂಭವಾಗಿದೆ. ಇದು ಭಾರತದಲ್ಲೂ ಆರಂಭವಾಗಿದೆ. ಮುಂಗಾರು ಮಳೆ ಮತ್ತಷ್ಟು ಚುರುಕಾಗುತ್ತದೆ. ಇದರಿಂದ ಮಹಾನಗರಗಳಿಗೆ ತೊಂದರೆಯಾಗಲಿದೆ"ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಪೈಗಂಬರ್ ವಿರುದ್ದ ಹೇಳಿಕೆ ನೀಡಿದ್ದರಿಂದ ಭಾರತ ದೇಶದಲ್ಲಿ ಅಶಾಂತಿ
ಪೈಗಂಬರ್ ವಿರುದ್ದ ಹೇಳಿಕೆ ನೀಡಿದ್ದರಿಂದ ಭಾರತ ದೇಶದಲ್ಲಿ ಅಶಾಂತಿ ಹೆಚ್ಚಾಗಲಿದೆ. ಮತೀಯ ಗಲಭೆಯಾಗಲಿದೆ, ಸಾವುನೋವುಗಳು ಹೆಚ್ಚಾಗಲಿದೆ ಎಂದು ಹೇಳಿದ್ದೆ. ರಾಜಕೀಯ ಅಸ್ಥಿರತೆ ಉಂಟಾಗಲಿದೆ, ಮಾನವೀಯ ಮೌಲ್ಯಕ್ಕೆ ಬೆಲೆಕೊಡುವುದನ್ನು ಜನರು ನಿಧಾನವಾಗಿ ಮರೆಯುತ್ತಿದ್ದಾರೆ. ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಲಲಿದ್ದಾರೆ, ಒಂದೂವರೆ ವರ್ಷದಲ್ಲಿ ಕೋವಿಡ್ ಸಂಪೂರ್ಣ ನಿರ್ಮೂಲನೆಯಾಗಲಿದೆ. ಕೋವಿಡ್ ಅಂತ್ಯಕಾಲದಲ್ಲಿ ಜಗತ್ತಿಗೆ ವಿಪರೀತ ತೊಂದರೆಯಾಗಲಿದೆ"ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.

ಧರ್ಮ ಎನ್ನುವುದು ಕಿತ್ತಳೆ ಹಣ್ಣಿನಂತೆ, ಒಳಗೆ ತೊಳೆಗಳು ಸಣ್ಣದು
"ಗಾಳಿಯಿಂದ ಸೋಂಕು ಹರಡಲಿದೆ, ಉಸಿರಾಟದ ತೊಂದರೆಯಾಗಲಿದೆ, ಕುಡಿಯಲು ನೀರಿಲ್ಲದಂತಾಗುತ್ತದೆ. ಹಾಗಾಗಿ ಈಗಲೇ ಎಚ್ಚೆತ್ತುಕೊಳ್ಳುವುದು ಸೂಕ್ತ"ಎಂದು ಕೋಡಿಶ್ರೀಗಳು ಹೇಳಿದ್ದಾರೆ. ಮುಂಗಾರು ಚೆನ್ನಾಗಿ ಆಗುತ್ತದೆ, ಹಿಂಗಾರು ಕಡಿಮೆ, ಧರ್ಮ ಎನ್ನುವುದು ಕಿತ್ತಳೆ ಹಣ್ಣಿನಂತೆ, ಒಳಗೆ ತೊಳೆಗಳು ಸಣ್ಣದು, ದೊಡ್ಡದಾಗಿರುತ್ತದೆ. ಮೇಲೆ ಸಿಪ್ಪೆ ಎಲ್ಲವನ್ನೂ ಸುತ್ತಿಕೊಂಡು ಇರುತ್ತದೆ. ಸಣ್ಣ ತೊಳೆ, ದೊಡ್ಡ ತೊಳೆ, ಎರಡನ್ನೂ ರಕ್ಷಿಸುತ್ತದೆ. ಎಲ್ಲಾ ಹಣ್ಣುಗಳಿಗೂ ತೊಳೆಗಳಿದ್ದರೂ, ಕಿತ್ತಳೆ ಹಣ್ಣು ಎನ್ನುವುದು ಜಗತ್ತು ಇದ್ದಂತೆ ಎಂದು ಕೋಡಿಶ್ರೀಗಳು ಯುಗಾದಿಯ ವೇಳೆ ಭವಿಷ್ಯವನ್ನು ನುಡಿದಿದ್ದರು.












Click it and Unblock the Notifications