ಜ್ಯೇಷ್ಠ-ಅಧಿಕಾಷಾಢ ಮಾಸದ ವಾರದ ಪಂಚಾಂಗ
ಜ್ಯೇಷ್ಠ-ಅಧಿಕಾಷಾಢ ಮಾಸದ ಜೂ. 14ರಿಂದ 20ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

ಜೂ.14. ರವಿವಾರ : ಭರಣಿ ನಕ್ಷತ್ರ. ಜಾಗತಿಕ ರಕ್ತದಾನ ದಿನ. ದೂರ ಪ್ರಯಾಣದಿಂದ ಹಾನಿ.
ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.
ಜೂ.15. ಸೋಮವಾರ : ಕೃತ್ತಿಕ. ಮುಖ್ಯವಾದ ಕೌಟುಂಬಿಕ ಮಾತುಕತೆಗೆ ಸೂಕ್ತ ದಿನ. ದೂರ ಪ್ರಯಾಣದಿಂದ ಲಾಭ.
ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.
ಜೂ.16. ಮಂಗಳವಾರ : ರೋಹಿಣಿ. ಮಣ್ಣೆತ್ತಿನ ಅಮವಾಸ್ಯೆ (ಸೋಮವಾರ 15ರ ರಾತ್ರಿ 8-42ಕ್ಕೆ ಆರಂಭ, ಮಂಗಳವಾರ 16ರಂದು ರಾತ್ರಿ 7-35ಕ್ಕೆ ಮುಕ್ತಾಯ. ಜ್ಯೇಷ್ಠ ಮಾಸ ಮುಕ್ತಾಯ. ದೂರ ಪ್ರಯಾಣದಿಂದ ಶುಭ.
ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.
ಜೂ.17. ಬುಧವಾರ : ಮೃಗಶಿರ. ಅಧಿಕ ಆಷಾಢ ಮಾಸ ಆರಂಭ (ನಾಲ್ಕು ವರ್ಷಕ್ಕೊಮ್ಮೆ ಮಾತ್ರ ಬರುವುದು). ದೂರ ಪ್ರಯಾಣದಿಂದ ಲಾಭ.
ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.
ಜೂ.18. ಗುರುವಾರ : ಆರಿದ್ರಾ. ಹಣ ಹೂಡಿಕೆಗೆ ಸೂಕ್ತ ದಿನ.
ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.
ಜೂ.19. ಶುಕ್ರವಾರ : ಪುನರ್ವಸು. ಹೊಸ ವಾಹನ ಕೊಳ್ಳಲು ಮತ್ತು ತಾರಸಿ ಹಾಕಿಸಲು ಉತ್ತಮ. ದೂರ ಪ್ರಯಾಣದಿಂದ ನಷ್ಟ.
ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.
ಜೂ.20. ಶನಿವಾರ : ಪುಷ್ಯ. ಜಮೀನಿಗೆ ಸಂಬಂಧಪಟ್ಟ ಕಾಗದ ಮಾಡಿಸಲು ಸೂಕ್ತ ದಿನ. ದೂರ ಪ್ರಯಾಣದಿಂದ ಶುಭ.
ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.
ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.
ಮದುವೆಗೆ ಶುಭ ಮುಹೂರ್ತ : ಯಾವುದೂ ಇಲ್ಲ.
ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಯಾವುದೂ ಇಲ್ಲ.
ಈ ವಾರ ಹೊಸಮನೆಗೆ ಸಂಬಂಧಪಟ್ಟ ಕೆಲಸ ಕಾರ್ಯ ಮಾಡಿಕೊಳ್ಳದಿರುವುದು ಲೇಸು.
ಈ ವಾರದ ಗ್ರಹಗತಿ : ಮೇಷ : ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ). ವೃಷಭ: ರವಿ+ಬುಧ+ಮಂಗಳ. ಕರ್ಕ: ಗುರು+ಶುಕ್ರ. ಕನ್ಯಾ: ಸ್ವಕ್ಷೇತ್ರದಲ್ಲಿ ರಾಹು. ವೃಶ್ಚಿಕ: ನೀಚಶನಿ. ಮಕರ : ಮೀನ: ಕೇತು.












Click it and Unblock the Notifications