ಜೂನ್ ತಿಂಗಳ ಭವಿಷ್ಯ 2023 : ಜೂನ್ ಮಾಸದಲ್ಲಿ 12 ದ್ವಾದಶಿ ರಾಶಿಗಳ ಗೋಚಾರ ಫಲ ಹೀಗಿರಲಿದೆ ನೋಡಿ!
ಜೂನ್ ತಿಂಗಳಿನಲ್ಲಿ 4 ಗ್ರಹಗಳ ರಾಶಿಚಕ್ರದ ಸ್ಥಾನ ಪಲ್ಲಟನೆಯಿಂದ ಯಾವ ರಾಶಿಗಳ ಮೇಲೆ ಉತ್ತಮ ಪರಿಣಾಮ ಬೀರಲಿದೆ ಎಂಬುದರ ಮಾಹಿತಿ ಇಲ್ಲಿದೆ. ಜೂನ್ ಮಾಸ ಭವಿಷ್ಯದ ಅನ್ವಯ ನಿಮ್ಮ ರಾಶಿಯಲ್ಲಿ ವೃತ್ತಿ ಜೀವನ, ಕೌಟುಂಬಿಕ ಜೀವನ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಿಲಿದೆ ಎಂಬುದನ್ನು ತಿಳಿದುಕೊಳ್ಳಿರಿ.
ಶೋಭಾಕೃತ ನಾಮ ಸಂವತ್ಸರದ ಉತ್ತರಾಯಣ, ಗ್ರೀಷ್ಮ ಋತು ಜೇಷ್ಠ ಮಾಸ ದಿನಾಂಕ 01/06/2023 ರಿಂದ 30/06/2023ವರೆಗಿನ ಮಾಸ ಭವಿಷ್ಯ

ಮೇಷ ರಾಶಿ
ಎರಡನೇ ಮನೆಯಲ್ಲಿ ಸೂರ್ಯ ಬುಧ ಇದ್ದು ನಿಮಗೆ ಮಾತಿನಿಂದ ಪ್ರಶಂಸೆ ಹಣ ಬರುವಂತೆ ಮಾಡುತ್ತಾರೆ. ಗೃಹಸೌಖ್ಯ ಚೆನ್ನಾಗಿದೆ. ನಾಲ್ಕನೇ ಮನೆಯಲ್ಲಿ ಶುಕ್ರ-ಮಂಗಳ ಇದ್ದು ವಾಹನದಿಂದ ಲಾಭ ಆಸ್ತಿಯಿಂದ ಲಾಭ ಮೊದಲಾದ ಶುಭಫಲಗಳು ಇವೆ. ಹನ್ನೊಂದರ ಶನಿ ನಿಮ್ಮನ್ನು ಇನ್ನೂ ಎರಡು ವರ್ಷಗಳ ಕಾಲ ಕಾಪಾಡುತ್ತಾನೆ. ಶನಿ ಲಾಭಸ್ಥಾನದಲ್ಲಿ ಇದ್ದರೆ ಬೇರೆ ಯಾವ ಗ್ರಹ ಎಲ್ಲಿ ಇದ್ದರೂ ತೊಂದರೆ ಇಲ್ಲ. ಶನಿ ಎಲ್ಲವನ್ನೂ ಸಂಭಾಳಿಸಬಲ್ಲ. ನಿಮಗೆ ಧನ ಲಾಭ, ಕಾರ್ಯ ಸಫಲತೆ, ಯಶಸ್ಸು ಮತ್ತು ಕೀರ್ತಿಯನ್ನು ಕೊಡುತ್ತಾನೆ. ಆದರೆ ಗುರು ನಿಮ್ಮ ರಾಶಿಯಲ್ಲಿ ರಾಹುವಿನೊಂದಿಗೆ ಇದ್ದಾನೆ. ಗುರು ನಿಮಗೆ ಭಾಗ್ಯಾಧಿಪತಿ. ರಾಹುವಿನಿಂದಿಗೆ ಇರುವುದರಿಂದ ಭಾಗ್ಯಗಳಿಗೆ ಕೊಂಚ ಅಡೆತಡೆ ಬರುವ ಸಾಧ್ಯತೆ ಇದೆ. ಸ್ವಲ್ಪ ನಿಮ್ಮ ಹೆಸರಿಗೆ ಕಳಂಕ ಬರಹುದು ಎಚ್ಚರಿಕೆಯಿಂದ ಇರಿ. ಜನರೊಂದಿಗೆ ಜಾಗ್ರತೆಯಿಂದ ವರ್ತಿಸಿ. ಸುಬ್ರಹ್ಮಣ್ಯನನ್ನು ಆರಾಧಿಸಿ. ಗುರುಚರಿತ್ರೆ ಓದಿ. ಜೂನ್ 16ರ ನಂತರ ಸೂರ್ಯ ನಿಮ್ಮ ರಾಶಿಯಿಂದ ಮೂರನೇ ಮನೆಗೆ ಪ್ರವೇಶವಾದಾಗ ನಿಮಗೆ ಹೆಚ್ಚಿನ ಶುಭಫಲಗಳು ದೊರೆಯಲಿದೆ. ವೃತ್ತಿಯಲ್ಲಿ ಒಳ್ಳೆಯ ಸ್ಥಾನ ಅಲಂಕರಿಸಲಿದ್ದಿರಿ.

ವೃಷಭ ರಾಶಿ
ನಿಮ್ಮ ರಾಶಿಯಲ್ಲೇ ಬುಧ ಇದ್ದು ಅವನು ಎರಡನೇ ಮನೆ ಹಾಗೂ ಐದನೇ ಮನೆಯ ಅಧಿಪತಿಯಾಗಿದ್ದು ನಿಮಗೆ ಭಾಗ್ಯಗಳನ್ನು ಕೊಡುತ್ತಾನೆ. ನಿಮ್ಮನ್ನು ಆಪತ್ತಿನಿಂದ ರಕ್ಷಿಸುತ್ತಾನೆ. ಸೂರ್ಯ ನಿಮ್ಮ ರಾಶಿಯಲ್ಲಿ ಇರುವುದರಿಂದ ನಿಮಗೆ ಒತ್ತಡ ಹೆಚ್ಚುತ್ತದೆ. ಜೂನ್ 16ರ ನಂತರ ಮನಸ್ಸಿಗೆ ಸಮಾಧಾನ ಲಭಿಸಲಿದೆ. ಮನಸ್ಸು ಉಲ್ಲಸಿತವಾಗುತ್ತದೆ. ಮೂರನೇ ಮನೆಯಲ್ಲಿ ಕುಜ-ಶುಕ್ರರು ಕೂಡ ನಿಮಗೆ ಶುಭಫಲಗಳನ್ನು ನೀಡುತ್ತಾರೆ. ಗುರು ರಾಹು 12ನೇ ಮನೆಯಲ್ಲಿ ಇದ್ದು ನಿಮಗೆ ಧರ್ಮದ ಕೆಲಸಕ್ಕಾಗಿ ಖರ್ಚು ಮಾಡಿಸುತ್ತಾರೆ. ಗುರು ಧರ್ಮದ ಖರ್ಚು ಮಾಡಿಸಿದರೆ ರಾಹು ನಿಮಗೆ ಗೊತ್ತಿಲ್ಲದ ಹಾಗೆ ಅನಾವಶ್ಯಕ ಖರ್ಚು ಮಾಡಿಸುತ್ತಾನೆ. ರಾಹು ಮುಂದೆ ಕೆಲವೇ ತಿಂಗಳಲ್ಲಿ ಮೀನರಾಶಿಗೆ ಪ್ರವೇಶ ಮಾಡಿದಾಗ ನಿಮಗೆ ಇನ್ನೂ ಹೆಚ್ಚಿನ ಶುಭಫಲಗಳು ದೊರೆಯುತ್ತದೆ. ಸೂರ್ಯ ಎರಡನೇ ಮನೆಗೆ ಪ್ರವೇಶವಾದಾಗ ಸರ್ಕಾರದಿಂದ ಹಣವನ್ನು ಕೊಡಿಸುತ್ತಾನೆ. ಸರ್ಕಾರದ ಕೆಲಸಗಳು ಸುಲಭವಾಗಿ ನೆರವೇರುತ್ತದೆ. ಸರ್ಕಾರದಿಂದ ಕಾಂಟ್ರಾಕ್ಟ್ ಗಳು ಸಿಗುವುದು ಅವುಗಳ ಬಿಲ್ ಪಾಸಾಗುವುದು ಇಂತಹ ಕೆಲಸಗಳು ಶೀಘ್ರ ನೆರವೇರುತ್ತದೆ.

ಮಿಥುನ ರಾಶಿ
ಗುರು ಮತ್ತು ರಾಹು ಹನ್ನೊಂದನೇ ಮನೆಯ ಲಾಭಸ್ಥಾನದಲ್ಲಿದ್ದಾರೆ. ರಾಹು ಹಣವನ್ನು ಕೊಟ್ಟರೆ ಗುರು ಕೆಲಸ ಕಾರ್ಯಗಳಲ್ಲಿ ಸಫಲತೆ, ಕುಟುಂಬ ಸೌಖ್ಯವನ್ನು ವೃತ್ತಿಯಲ್ಲಿ ಯಶಸ್ಸನ್ನೂ ಕೊಡುತ್ತಾನೆ. ಈ ರಾಶಿಯ ರಾಜಕೀಯ ನಾಯಕರಿಗೆ ಒಳ್ಳೆಯ ಪರಿವರ್ತನೆ ಇದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಜೂನ್ 16ರ ನಂತರ ಸೂರ್ಯ ನಿಮ್ಮ ರಾಶಿಗೆ ಪ್ರವೇಶವಾದಾಗ ನಿಮಗೆ ಕೊಂಚ ಆತಂಕವಾಗಲಿದೆ. ಅನಾವಶ್ಯಕವಾಗಿ ಕೋಪ ಬರುವುದು, ಒತ್ತಡ ಹೆಚ್ಚಾಗಲಿದೆ. ಎರಡನೇ ಮನೆಯಲ್ಲಿ ಶುಕ್ರ ಹಾಗೂ ಕುಜ ಸಹ ನಿಮಗೆ ಹಣದ ಹರಿವನ್ನು ಹೆಚ್ಚಿಸುತ್ತಾರೆ. ನೀವು ಎಷ್ಟೋ ದಿನಗಳಿಂದ ಕಾಯುತ್ತಿದ್ದ ಶುಭ ಸುದ್ದಿ ನಿಮ್ಮ ಕಿವಿಗೆ ಬೀಳುತ್ತದೆ. ಅನಿರೀಕ್ಷಿತ ಪ್ರಯಾಣ ಇರುತ್ತದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಅನುಕೂಲ ಒದಗಿ ಬರುತ್ತದೆ. ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ.

ಕಟಕ ರಾಶಿ
ನಿಮಗೆ ವೃತ್ತಿಯಲ್ಲಿ ಒತ್ತಡ ಇರುತ್ತದೆ. ರಾಹು ಮೇಷದಿಂದ ಮೀನಕ್ಕೆ ಚಲಿಸುವ ವರೆಗೂ ನಿಮಗೆ ಒಂದಲ್ಲ ಒಂದು ಒತ್ತಡ ಕಿರಿಕಿರಿ ಇರುತ್ತದೆ. ದೇವರ ಕೃಪೆಗಾಗಿ ಪ್ರಾರ್ಥನೆ ಮಾಡಿ. ಹನ್ನೊಂದನೇ ಮನೆಯಲ್ಲಿ ಸೂರ್ಯ ಮತ್ತು ಬುಧ ಇರುವುದರಿಂದ ಹಣದ ಹರಿವು ಉತ್ತಮವಾಗಿರುತ್ತದೆ. ವೃತ್ತಿಯಲ್ಲಿ ನೀವು ಬಯಸಿದ ಸ್ಥಾನಮಾನ ಸಿಗಲು ಇನ್ನೂ ಕೆಲವು ಕಾಲ ಕಾಯಬೇಕು. ಮನಸ್ಸಿಗೆ ಯಾವುದೋ ಚಿಂತೆ ವ್ಯಾಕುಲವಾಗಿರುತ್ತದೆ. ಅಷ್ಠಮ ಶನಿಯ ಪ್ರಭಾವ ಇರುವುದರಿಂದ ನೀವು ಬಯಸಿದ ಕಾರ್ಯಗಳು ವಿಳಂಬವಾಗಲಿವೆ. ನಿಮ್ಮ ರಾಶಿಯಲ್ಲೇ ಕುಜ ಮತ್ತು ಶುಕ್ರ ಇದ್ದಾರೆ. ಕುಜ ನಿಮಗೆ ಉಷ್ಣತೆಯನ್ನು ಹೆಚ್ಚು ಮಾಡುತ್ತಾನೆ. ಆದರೆ ಶುಕ್ರ ನಿಮಗೆ ಶುಭಫಲ ಕೊಡುತ್ತಾನೆ. ಈ ಎಲ್ಲ ಗ್ರಹಗಳು ಕೊಡುವ ತೊಂದರೆ ಅಲ್ಪಮಟ್ಟಿಗಾದರೂ ಶುಕ್ರ ನಿವಾರಣೆ ಮಾಡುತ್ತಾನೆ. ನೀವು ಯಾರೊಂದಿಗೂ ವಾದ ಮಾಡಬೇಡಿ. ಒಳ್ಳೆಯ ಸಮಯ ಬರುವ ವರೆಗೆ ಕಾಯಬೇಕು. ಈಗ ಮೌನ ಧಾರಣೆ ನಿಮಗೆ ಅತ್ಯಂತ ಶುಭ.

ಸಿಂಹ ರಾಶಿ
ಭಾಗ್ಯದಲ್ಲಿ ಗುರು ಭಾಗ್ಯೋದಯವಾಗುವ ಸಮಯ. ರಾಜಕೀಯ ನಾಯಕರಿಗೆ ಉನ್ನತ ಮಟ್ಟದ ಅಧಿಕಾರ ಲಭ್ಯವಾಗುತ್ತದೆ. ವೃತ್ತಿಯಲ್ಲಿ ಕೂಡ ನಿಮಗೆ ಈಗ ಯಶಸ್ಸು ಕೀರ್ತಿ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯುವ ಸಮಯ. ವಿದ್ಯಾರ್ಥಿಗಳಿಗೆ ಶುಭಫಲಗಳಿವೆ. ನೀವು ಬಯಸಿದ ಕೋರ್ಸ್ ಗೆ ಸೇರಲು ಈಗ ಅನುಕೂಲ ಸಮಯ. ನಿಮ್ಮ ನೆಚ್ಚಿನ ವಿಷಯಕ್ಕೆ ಪ್ರವೇಶ ಪಡೆಯಲು ಈಗ ದೈವಾನುಗ್ರಹ ಕೂಡಿಬಂದಿದೆ. ಹಣದ ಹರಿವು ಉತ್ತಮವಾಗಿದೆ. 16 ಜೂನ್ ವರೆಗೂ ಸೂರ್ಯ ಹತ್ತನೇ ಮನೆಯಲ್ಲಿ ಇದ್ದು ವೃತ್ತಿಗೆ ಯಶಸ್ಸು ತಂದುಕೊಡುತ್ತಾನೆ. ನಂತರ ಲಾಭಸ್ಥಾನಕ್ಕೆ ಪ್ರವೇಶವಾದಾಗಲೂ ನಿಮಗೆ ಸರ್ಕಾರದಿಂದ ಲಾಭ ಇದೆ. ವ್ಯಾಪಾರ ವಹಿವಾಟು ತುಂಬಾ ಚೆನ್ನಾಗಿ ಅಭಿವೃದ್ಧಿ ಆಗುತ್ತದೆ. ನಿಂತು ಹೋಗಿದ್ದ ಕೆಲಸಗಳು ಈಗ ಚಾಲನೆ ಪಡೆಕೊಳ್ಳುತ್ತದೆ. ನಿಮಗೆ ಈಗ ಸವಾಲುಗಳು ಹೆಚ್ಚು ಆದರೂ ಆ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತೀರಿ. ಮೂರನೇ ಮನೆಯಲ್ಲಿ ಇರುವ ಕೇತು ಸಹ ನಿಮಗೆ ಸಹಾಯಕನಾಗಿದ್ದಾನೆ. ಧೈರ್ಯ ನೀಡುತ್ತಾನೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗಿ ಸಾಧಿಸುವ ಚಲ ಹೊಂದಿರುತ್ತಿರಿ.ಕುಟುಂಬಕ್ಕಾಗಿ ಸಮಯ ಮೀಸಲಿಡಿ.

ಕನ್ಯಾ ರಾಶಿ
ಆರನೇ ಮನೆಯಲ್ಲಿರುವ ಶನಿ ಬಹಳ ಒಳ್ಳೆಯ ಫಲಗಳನ್ನು ಕೊಡುತ್ತಿದ್ದಾನೆ. ಆದರೆ ಗುರುಬಲ ಇಲ್ಲ. ಗುರು ರಾಹು ಎಂಟನೇ ಮನೆಯಲ್ಲಿ ಇರುವುದರಿಂದ ನಿಮಗೆ ಒತ್ತಡ ತರುತ್ತಿದ್ದಾರೆ. ಪ್ರಣಾಪಾಯದಿಂದ ತಪ್ಪಿಸಿಕೊಂಡಿದ್ದೀರಿ. ಗುರು ಸ್ತೋತ್ರ ಮಾಡಿ, ರಾಹುವಿಗೆ ಸುಬ್ರಹ್ಮಣ್ಯನ ದರ್ಶನ ಮಾಡಿ. ಹತ್ತನೇ ಮನೆಯಲ್ಲಿ ಒಂಬತ್ತನೇ ಮನೆಯಲ್ಲಿ ಹಾಗೂ ಹನ್ನೊಂದನೇ ಮನೆಯಲ್ಲಿ ಬಲಾಢ್ಯ ಗ್ರಹಗಳು ಸೇರಿ ನಿಮಗೆ ರಕ್ಷಣೆ ನೀಡುತ್ತಿದೆ. ವಾಹನ ಮತ್ತು ಭೂಮಿಯಿಂದ ಲಾಭ ಇದೆ. ಜೂನ್ 16ರ ನಂತರ ಸೂರ್ಯ 10ನೇ ಮನೆಗೆ ಪ್ರವೇಶವಾಗುತ್ತಾನೆ ಆಗ ನಿಮಗೆ ವೃತ್ತಿಯಲ್ಲಿ ಇನ್ನೂ ಹೆಚ್ಚಿನ ಶುಭಫಲಗಳು ದೊರೆಯುತ್ತದೆ. ಒಂಬತ್ತರಲ್ಲಿ ಬುಧ ನಿಮಗೆ ರಕ್ಷಣೆಯಾಗಿ ನಿಲ್ಲುತ್ತಾನೆ. ಮಹಾ ವಿಷ್ಣುವಿನ ಅನುಗ್ರಹ ಸಿಗುತ್ತದೆ. ಹೊಸ ಆಸ್ತಿ ಖರೀದಿಸುವ ಯೋಗ ಇದೆ. ಆರನೇ ಮನೆಯ ಶನಿ ಕಾರ್ಯ ಸಫಲತೆಯನ್ನು ಕೊಡುತ್ತಾನೆ. ವಸೂಲಿಯಾಗದೇ ಬಾಕಿ ಉಳಿದುಕೊಂಡಿದ್ದ ಹಣ ಈಗ ಕೈ ಸೇರುವ ಸಾದ್ಯತೆ ಇದೆ. ಇನ್ನೂ ಎರಡು ವರ್ಷ ನಿಮಗೆ ಶನಿಯ ಅನುಗ್ರಹ ಸಿಗುವುದರಿಂದ ಹೊಸ ಯೋಜನೆಗಳಲ್ಲಿ ಲಾಭ ಯಶಸ್ಸು ಇದೆ.

ತುಲಾ ರಾಶಿ
ಈಗ ನಿಮಗೆ ಅಧಿಕಾರ ಅಂತಸ್ತು ಹೆಚ್ಚಾಗುವ ಸಮಯ. ನೀವು ಬಹುದಿನಗಳಿಂದ ಆಸೆ ಪಡುತ್ತಿದ್ದ ಸಂಗತಿಗಳು ಈಗ ನೆರವೇರುವ ಸಮಯ. ವಿವಾಹಿತರಿಗೆ ವಿವಾಹ ನಡೆಯುತ್ತದೆ. ಮಕ್ಕಳಿಗಾಗಿ ಪ್ರಯತ್ನ ಮಾಡುವವರಿಗೆ ಕೂಡ ಶುಭಫಲ ಇದೆ. ಜೂನ್ 16 ರಂದು ಸೂರ್ಯ ಮಿಥುನ ರಾಶಿಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಶುಭಫಲಗಳು ಸಿಗುತ್ತದೆ. ಹತ್ತನೇ ಮನೆಯಲ್ಲಿ ಶುಕ್ರ ಹಾಗೂ ಕುಜ ಸೇರಿ ನಿಮ್ಮ ವೃತ್ತಿಗೆ ಒಂದು ಭದ್ರತೆಯನ್ನು ಕೊಡುತ್ತಾರೆ. ನಿಮ್ಮ ಇದುವರೆಗಿನ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಪಂಚಮ ಶನಿಯ ಪ್ರಭಾವ ಇದ್ದರೂ ಗುರುಬಲ ಇರುವುದರಿಂದ ಸಾಕಷ್ಟು ಅನುಕೂಲಗಳು ಒದಗಿ ಬರುತ್ತದೆ. ಕೆಲವು ದಿನಗಳ ನಂತರ ರಾಹು ಕೂಡ ನಿಮ್ಮ ರಾಶಿ ಬಿಟ್ಟು ಮೀನರಾಶಿಗೆ ಬಂದಾಗ ಧನಲಾಭವಾಗಲಿದೆ. ಪಂಚಮ ಶನಿಯಿಂದಾಗಿ ಅಲ್ಪಸ್ವಲ್ಪ ಕಿರಿಕಿರಿಗಳು ಅನುಭವಿಸುತ್ತಿರಿ. ಕಾರ್ಯ ವೈಫಲ್ಯಗಳು ಇರುತ್ತದೆ. ಆದರೂ ಗುರುಬಲ ನಿಮ್ಮ ಕೈಹಿಡಿದು ನಿಮ್ಮ ಕೆಲಸ ಕಾರ್ಯಗಳನ್ನು ಸುಲಭವಾಗುವಂತೆ ಮಾಡಿಕೊಡುತ್ತದೆ. ಈ ರಾಶಿಯ ಆಭರಣ ಚಿನ್ನದ ವ್ಯಾಪಾರಿಗಳು,ಸುಗಂಧದ ವ್ಯಾಪಾರಿಗಳು, ವಾಹನ ಉದ್ಯಮದವರು ಹಾಗೂ ರಾಜಕೀಯ ನಾಯಕರಿಗೆ ಈ ತಿಂಗಳು ಬಹಳ ಶುಭ ಫಲ ನೀಡಲಿದೆ.

ವೃಶ್ಚಿಕ ರಾಶಿ
ಬಹು ದಿನಗಳ ಬಯಕೆಯೊಂದು ನಿಮ್ಮ ಕೈ ಸೇರಲಿದೆ. ರಾಹು ಬಲದಿಂದಾಗಿ ಹಣದ ಹರಿವು ಉತ್ತಮವಾಗಿರುತ್ತದೆ. ಸಾಲ ತೀರಿಸಿ ಋಣ ಮುಕ್ತರಾಗಲಿದ್ದಿರಿ. ಗುರು ಆರನೇ ಮನೆಗೆ ಬಂದಿರುವುದು ಅಷ್ಟು ಬೆಂಬಲ ಕೊಡುವುದಿಲ್ಲ. ಕೆಲವು ಸೋಲುಗಳು ಹುಡುಕಿ ಬರುತ್ತದೆ. ತುಂಬಾ ನಿರೀಕ್ಷೆ ಇಟ್ಟುಕೊಂಡ ಕೆಲವು ಸಂಗತಿಗಳು ಕೈಕೊಡುತ್ತದೆ. ಸ್ವಲ್ಪ ಮನಸ್ಸಿಗೆ ಬೇಸರವೂ ಮುಖ ಭಂಗವೂ ಆಗಬಹುದು. ಮನುಷ್ಯನ ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಮನಸ್ಸನ್ನು ಸಮಸ್ಥಿತಿಗೆ ತಂದುಕೊಳ್ಳಿ. ವೃತ್ತಿ ಸಂಬಂಧವಾಗಿ ಒಳ್ಳೆಯ ಅಭಿವೃದ್ಧಿ ಇದೆ. ರಾಜಕೀಯ ನಾಯಕರಿಗೆ ಕೊಂಚ ಹಿನ್ನಡೆ ಇರುತ್ತದೆ. ಒಂಬತ್ತನೇ ಮನೆಯಲ್ಲಿ ಶುಕ್ರ ಕುಜ ಇರುವುದರಿಂದ ಪಿತ್ರಾರ್ಜಿತ ಆಸ್ತಿ ದೊರೆಯುವ ಒಂದು ಶುಭಸೂಚನೆ ಇದೆ. ವಾಹನ ಉದ್ಯಮಿಗಳಿಗೆ, ವಿದ್ಯುತ್ ಗೆ ಸಂಬಂಧಪಟ್ಟ ಉದ್ಯಮಿಗಳಿಗೆ ಲಾಭ ಇದೆ. ಅರ್ಹರಿಗೆ ಮನೆಯಲ್ಲಿ ಮದುವೆಯ ಮಾತುಕತೆಗಳು ನಡೆಯಬಹುದು. ಏಳರ ಬುಧ ಮನೆಯಲ್ಲಿ ಶುಭಕಾರ್ಯ ನಡೆಯುವಂತೆ ಮಾಡುತ್ತಾನೆ. ಆಸ್ತಿ ಮಾರುವುದು ಅಥವಾ ಕೊಳ್ಳುವ ಯೋಜನೆಗಳಿದ್ದರೆ ಮುಂದಕ್ಕೆ ಹಾಕಿ. ಪ್ರೇಮಕ್ಕೆ ಸಂಬಂಧಪಟ್ಟ ಸಂಗತಿಗಳಿದ್ದರೆ ನಿಮ್ಮ ಪ್ರೇಮಿಯೊಡನೆ ಧೈರ್ಯವಾಗಿ ಮಾತನಾಡಿ.

ಧನಸ್ಸು ರಾಶಿ
ಈಗ ನಿಮಗೆ ಯಾವ ಕೆಲಸಕ್ಕೆ ಕೈಹಾಕಿದರೂ ವಿಜಯ ನಿಶ್ಚಿತ. ವೃತ್ತಿ, ಹಣ, ಬಂಧುಬಾಂಧವ್ಯ, ಮರ್ಯಾದೆ ಗೌರವ ವಿಷಯಗಳಲ್ಲಿ ಈಗ ನಿಮಗೆ ಶುಭ ಫಲಗಳು ಸಿಗುತ್ತದೆ. ಹೊಸ ಯೋಜನೆಗಳು ನಿಮ್ಮ ಕೈ ಸೇರುವ ಸಮಯ. ವಿದೇಶಕ್ಕೆ ಪ್ರಯಾಣಕ್ಕೆ ಉತ್ತಮ ಸಮಯ. ಈ ರಾಶಿಯ ರಾಜಕೀಯ ನಾಯಕರಿಗೆ ಈಗ ಬಹಳ ದೊಡ್ಡ ಅಧಿಕಾರ ಸಿಗುವ ಸಮಯ. ದೊಡ್ಡ ಪರಿವರ್ತನೆ ಆಗುವ ಸಮಯ. ಈ ಸದಾವಕಾಶವನ್ನು ಗುಣಾತ್ಮಕವಾಗಿ ಉಪಯೋಗಿಸಿಕೊಂಡು ನಿಮ್ಮ ಅಭಿವೃದ್ಧಿ ಮಾಡಿಕೊಳ್ಳಿ. ಅವಿವಾಹಿತರು ಬಯಸಿದಂತಹ ಸಂಗಾತಿ ನಿಮಗೆ ದೊರೆಯುತ್ತಾರೆ. ಯಾವುದೇ ಬಲವಂತ ಒತ್ತಡ ಇಲ್ಲದೆ ಸುಮನಸ್ಸಿನಿಂದ ಮದುವೆ ಕಲಾಪಗಳು ನಡೆದು ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ. ಇದು ನಿಮ್ಮ ಜೀವನದ ಎರಡನೇ ಅಧ್ಯಾಯ ಎಂದು ಭಾವಿಸಿ. ಸದ್ಯದಲ್ಲಿಯೇ ಭಾಗ್ಯದ ಬಾಗಿಲು ತೆರೆಯಲಿದೆ.

ಮಕರ ರಾಶಿ
ನಾಲ್ಕನೇ ಮನೆಯಲ್ಲಿ ರಾಹು-ಗುರು, ಬುಧ ಸೇರಿ ನಿಮಗೆ ಕೊಂಚ ಕಿರಿಕಿರಿ ಮಾಡುತ್ತಾರೆ. ಆದರೆ ಶುಕ್ರ ಏಳನೇ ಮನೆಯಲ್ಲಿ ಇದ್ದು ನಿಮ್ಮ ರಾಶಿಯನ್ನು ನೋಡುತ್ತಾನೆ. ಶುಕ್ರ ನಿಮಗೆ ಯೋಗಕಾರಕ ಗ್ರಹ. ಹೀಗಾಗಿ ಶುಕ್ರನ ದೃಷ್ಟಿ ನಿಮ್ಮ ರಾಶಿಗೆ ಬಿದ್ದಾಗ ಅದು ತುಂಬಾ ಒಳ್ಳೆಯ ಸೂಚನೆಗಳನ್ನು ನೀಡುತ್ತದೆ. ಶುಭ ಫಲಗಳನ್ನು ಕೊಡುತ್ತದೆ. ವೈಯುಕ್ತಿಕವಾಗಿ ಅಭಿವೃದ್ಧಿಯ ಒಂದು ಶುಭ ಸೂಚನೆ ಕಾಣಿಸುತ್ತದೆ. ಹಿತೈಷಿಗಳ ಸೂಕ್ತ ಸಲಹೆ ಸೂಚನೆ ಪಡೆಯಿರಿ. ಗುರುಬಲ ಇಲ್ಲದಿರುವುದರಿಂದ ಒಳ್ಳೆಯ ಅವಕಾಶಗಳು ಕೈ ತಪ್ಪಿ ಹೋಗುವ ಸಾಧ್ಯತೆಗಳಿವೆ. ಇನ್ನು ಕೆಲವು ದಿನಗಳ ನಂತರ ರಾಹು ಮೀನರಾಶಿಗೆ ಬಂದಾಗ ನಿಮಗೆ ಹಣದ ಹರಿವು ಉತ್ತಮವಾಗುತ್ತದೆ. ಅಲ್ಲಿಯ ವರೆಗೂ ಕೊಂಚ ಸಮಾಧಾನ ಇರಲಿ. ಈಗ ಹಣಕಾಸಿಗೆ ಕೊಂಚ ಬಿಗಿ ಇದೆ. ಸರಾಗವಾಗಿ ಹರಿದು ಬರುವುದಿಲ್ಲ. ಮದುವೆ, ಆಸ್ತಿ ಕೊಳ್ಳುವುದು ಅಥವಾ ಮಾರುವುದು ಮುಂತಾದ ಪ್ರಯತ್ನಗಳನ್ನು ಮುಂದಕ್ಕೆ ಹಾಕಿ. ಈಗ ನೀವು ನಿಮ್ಮ ವೈಯುಕ್ತಿಕ ಅಭಿವೃದ್ಧಿಯ ಕಡೆ ಮಾತ್ರ ಗಮನಕೊಡಿ.

ಕುಂಭ ರಾಶಿ
ಈಗ ನಿಮಗೆ ದೊಡ್ಡ ಅಧಿಕಾರವಿಲ್ಲದಿದ್ದರೂ ಪ್ರಾಮುಖ್ಯತೆ ಸಿಗುವ ಸಮಯ. ಕತ್ತಿಯ ಮೇಲೆ ನಡೆದಯುವಂಥ ನಡಿಗೆ ಈಗ ನಿಮ್ಮದು. ಬಹಳ ನಾಜೂಕಾಗಿ ನಿಭಾಯಿಸಿ. ಆರನೇ ಮನೆಯಲ್ಲಿ ಕುಜ ಇದ್ದು ನಿಮ್ಮ ಅಧಿಕಾರ ಸ್ಥಾನಮಾನವನ್ನು ಉಳಿಸಿಕೊಡುತ್ತಾನೆ. ಮೂರನೇ ಮನೆಯ ರಾಹು ನಿಮ್ಮ ಧೈರ್ಯ ಮತ್ತು ಶಕ್ತಿಯನ್ನು ದ್ವಿಗುಣಗೊಳಿಸಿ ನಿಮಗೆ ಜಯವನ್ನು ತಂದುಕೊಡುತ್ತಾನೆ. ಮೂರನೇ ಮನೆಯ ಗುರು ಕೂಡ ಅಲ್ಪ ಪ್ರಮಾಣದಲ್ಲಿ ನಿಮಗೆ ಬೆಂಬಲ ನೀಡುತ್ತಾನೆ. ಸಹೋದರರಿಂದ ಸಹಾಯ ಇದೆ. ಕಂಪ್ಯೂಟರ್ ಗೆ ಸಂಬಂಧಪಟ್ಟ ಕೆಲಸ ಮಾಡುವವರು, ಲೆಕ್ಕ ಪರಿಶೋಧಕರು, ಕಾನೂನಿಗೆ ಸಂಬಂಧಪಟ್ಟ ಕೆಲಸ ಮಾಡುವವರು ಇವರಿಗೆಲ್ಲ ಈ ತಿಂಗಳು ಉತ್ತಮ ಫಲ ಸಿಗಲಿದೆ. ರಾಶಿಯಲ್ಲೇ ಶನಿ ಇರುವುದರಿಂದ ಆಗಾಗ ನಿಮ್ಮ ಕಾಲಿಗೆ ಲಗಾಮು ಹಾಕಿದಂತೆ ಆದರೂ ಕೆಲವು ಒಳ್ಳೆಯ ಫಲಗಳು ನಿಮಗೆ ಸಿಗಲಿದೆ. ಒಟ್ಟಾರೆಯಾಗಿ ಸಮ್ಮಿಶ್ರಫಲ. ಬಂದ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಆನಂದವನ್ನು ಅನುಭವಿಸುವುದು ನಿಮ್ಮ ಕೈಯಲ್ಲೇ ಇದೆ.

ಮೀನ ರಾಶಿ
ಈಗ ನಿಮಗೆ ಸಂಪೂರ್ಣ ಗುರುಬಲ. ಯಾವುದೇ ಕೆಲಸವನ್ನು ಭಯವಿಲ್ಲದೆ ಮಾಡಬಹುದು. ಹೊಸ ಯೋಜನೆಗಳನ್ನು ಶುರು ಮಾಡಬಹುದು. ಅವಿವಾಹಿತರಿಗೆ ವಿವಾಹವಾಗುವ ಸಮಯ. ಮೂರರಲ್ಲಿ ಸೂರ್ಯ-ಬುಧ ಐದರಲ್ಲಿ ಶುಕ್ರ-ಕುಜ ಎರಡರಲ್ಲಿ ಗುರು ಹೀಗೆ ಬಹು ಸಂಖ್ಯಾತ ಗ್ರಹಗಳು ನಿಮಗೆ ಬೆಂಬಲ ಸೂಚಿಸುತ್ತಿದೆ. ಹೊಸ ನೌಕರಿ ಸಿಗುವ ಯೋಗ ಇದೆ. ರಾಜಕೀಯ ನಾಯಕರಿಗೆ ಒಳ್ಳೆಯ ಅಧಿಕಾರ ಸಿಗುವ ಯೋಗ ಇದೆ. ಆದರೆ ಒತ್ತಡವೂ ಇರುತ್ತದೆ. ಖರ್ಚುಗಳು ಇರುತ್ತದೆ. ಸಾಡೆಸಾತಿಯ ಪ್ರಥಮ ಪಾದದಲ್ಲಿ ಇರುವುದರಿಂದ ಖರ್ಚುಗಳು ಹೇರಳವಾಗಿ ಬರುತ್ತದೆ. ಹಣದ ಹರಿವು ಉತ್ತಮವಾಗಿದ್ದರೂ ಅಧಿಕ ಖರ್ಚಿನಿಂದ ಬಳಲುತ್ತೀರಿ. ಎಂಟನೇ ಮನೆಯಲ್ಲಿ ಕೇತು ಇರುವುದರಿಂದ ಚೂಪಾದ ವಸ್ತುಗಳು ಚುಚ್ಚಿ ರಕ್ತಸ್ರಾವ ಆಗುವ ಸಾಧ್ಯತೆ ಇದೆ. ವಾಹನ ಓಡಿಸುವಾಗ ಜಾಗ್ರತೆ ಇರಲಿ. ಮಕ್ಕಳ ಫಲ ಬಯಸುವವರು ನಿಮ್ಮ ಯೋಜನೆ ಅಥವಾ ಆಸೆಯನ್ನು ಕೊಂಚ ಮುಂದಕ್ಕೆ ಹಾಕಿ. ಈಗ ಗರ್ಭ ಧರಿಸಿದರೆ ಅದರಿಂದ ತೊಂದರೆ ಆಗುವ ಸಾಧ್ಯತೆಯೇ ಹೆಚ್ಚು. ಯಾವುದರಲ್ಲಾದರೂ ಹಣ ಹೂಡಿಕೆ ಮಾಡುವುದಾದರೆ ಈಗ ಒಳ್ಳೆಯ ಸಮಯ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ












Click it and Unblock the Notifications