Gold Astrology: ಚಿನ್ನ ಧರಿಸಿದರೆ ಈ 6 ರಾಶಿಯವರಿಗೆ ಸಂಕಷ್ಟ: ಬಂಗಾರದ ಶತ್ರುಗಳಿವರು! ಏನು ಹೇಳುತ್ತೆ ನಿಮ್ಮ ರಾಶಿ?

Gold Astrology :ಚಿನ್ನ ಎಲ್ಲರಿಗೂ ಇಷ್ಟ. ಗಂಡಸರಾಗಲಿ, ಹೆಂಗಸರಾಗಲಿ ಚಿನ್ನ ಇಷ್ಟಪಡದೆ ಇರುವವರು ಬಹಳ ಕಡಿಮೆ. ಕೆಲವರಂತೂ ಮೈ ತುಂಬಾ ಚಿನ್ನದ ಒಡವೆ ಧರಿಸಿಕೊಂಡೇ ಇರುತ್ತಾರೆ. ಚಿನ್ನವನ್ನು ಸಂಪತ್ತು, ಆಚರಣೆ ಮತ್ತು ಅದೃಷ್ಟದ ಸಂಕೇತವಾಗಿ ನೋಡಲಾಗ್ತದೆ. ಮದುವೆಯ ಆಭರಣಗಳಿಂದ ಹಿಡಿದು ದೈನಂದಿನ ಉಂಗುರಗಳವರೆಗೆ, ಅನೇಕ ಜನರು ಚಿನ್ನವನ್ನು ಧರಿಸ್ತಾರೆ. ಅದು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನುವುದೇ ಹಲವರ ಭಾವನೆ. ಆದರೆ, ಜ್ಯೋತಿಷ್ಯದ ಪ್ರಕಾರ ಹೇಳುವುದಾದರೆ ಅದು ನಿಜ ಅಲ್ಲ.

Gold Astrology Wearing Gold Is Unlucky for These 6 Zodiac Signs Virgo taurus Capricorn Gemini should not wear yellow metal

ವೈದಿಕ ಜ್ಯೋತಿಷ್ಯದ ಪ್ರಕಾರ, ಚಿನ್ನವು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಯಶಸ್ಸಿನ ಗ್ರಹವಾದ ಗುರುವಿಗೆ ಸಂಬಂಧಿಸಿದ್ದಾಗಿದೆ. ಕೆಲವು ರಾಶಿಯವರಿಗೆ ಚಿನ್ನ ತುಂಬಾ ಶುಭ. ಆದರೆ, ಇನ್ನು ಕೆಲವರು ಚಿನ್ನ ಹಾಕಿದ ಕೂಡಲೇ ಮಾನಸಿಕ ತೊಳಲಾಟ ಅನುಭವಿಸಿ ಬಿಡ್ತಾರೆ. ಕೆಲವೊಮ್ಮೆ ಇದ್ದಕ್ಕಿದ್ದಂತೆ ಸೋಲು, ಕಿರಿಕಿರಿಯಾದಾಗ ಯಾಕಾಗಿ ಹೀಗಾಗುತ್ತಿದೆ ಅನ್ನಿಸಬಹುದು. ಈ ಬದಲಾವಣೆಗೆ ನೀವು ಧರಿಸಿರುವ ಚಿನ್ನವೇ ಕಾರಣವಾಗಿರಲೂ ಬಹುದು.

Gold Astrology :ಈ 6 ರಾಶಿಯವರು ಚಿನ್ನದಿಂದ ದೂರವೇ ಇರಬೇಕು :

ಸಾಂಪ್ರದಾಯಿಕ ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಆರು ರಾಶಿಯವರು ಚಿನ್ನವನ್ನು ಧರಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ಅವರಿಗೂ ಚಿನ್ನಕ್ಕೂ ಆಗಿ ಬರುವುದಿಲ್ಲ.

ವೃಷಭ ರಾಶಿ : ವೃಷಭ ರಾಶಿಯವರು ಚಿನ್ನದಿಂದ ದೂರವೇ ಇದ್ದರೆ ಒಳ್ಳೆಯದು. ಇವರು ಚಿನ್ನವನ್ನು ಧರಿಸಿದರೆ ಒತ್ತಡ, ಭಾವನಾತ್ಮಕ ಅಸಮತೋಲನ ಅಥವಾ ಮಾನಸಿಕ ಚಡಪಡಿಕೆಯನ್ನು ಹೆಚ್ಚಿಸುವುದು. ಚಿನ್ನ ಧರಿಸಿದರೆ ಇವರ ನೆಮ್ಮದಿ ಭಂಗವಾಗುತ್ತಲೇ ಇರುವುದು.

ಮಿಥುನ ರಾಶಿ : ಮಿಥುನ ರಾಶಿಯವರಿಗೂ ಚಿನ್ನ ಶುಭವಲ್ಲ. ಅವರು ಕೂಡಾ ಮಾನಸಿಕ ಗೊಂದಲವನ್ನು ಅನುಭವಿಸುತ್ತಲೇ ಇರಬೇಕಾಗುವುದು. ಭಾವನಾತ್ಮಕ ಗೊಂದಲಗಳು ಹೆಚ್ಚಾಗುವುದು. ಹೀಗಾಗಿ ಯಾವ ಕೆಲಸಗಳಲ್ಲಿಯೂ ಗಮನ ಇಡುವುದು ಸಾಧ್ಯವಾಗುವುದಿಲ್ಲ. ಕೆಲಸ ಕಾರ್ಯಗಳಲ್ಲಿ ಸೋಲು ಅನುಭವಿಸಬೇಕಾಗುವುದು.

ಕನ್ಯಾರಾಶಿ : ಕನ್ಯಾ ರಾಶಿಯವರು ಚಿನ್ನವನ್ನು ಬಹಳ ಎಚ್ಚರಿಕೆಯಿಂದ ಧರಿಸಬೇಕು. ಇವರು ಚಿನ್ನವನ್ನು ಧರಿಸಿದರೆ ಆರ್ಥಿಕ ಒತ್ತಡವನ್ನು ಎದುರಿಬೇಕಾಗುವುದು. ಅನಗತ್ಯ ಖರ್ಚುಗಳಿಗೆ ದಾರಿಯಾಗುವುದು.

ಮಕರ ರಾಶಿ : ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ ಮಕರ ರಾಶಿಯವರಿಗೆ ಕೂಡಾ ಚಿನ್ನ ಒಳ್ಳೆಯದಲ್ಲ. ಇವರು ಚಿನ್ನದ ಆಭರಣಗಳನ್ನು ಧರಿಸಿದರೆ ಇವರ ಆರ್ಥಿಕ ಸ್ಥಿರತೆ ಹಾಳಾಗಬಹುದು. ಹಣದ ಸಮಸ್ಯೆ ಕಾಡುತ್ತಲೇ ಇರುವುದು.

ವೃಶ್ಚಿಕ ರಾಶಿ : ಈ ರಾಶಿಯವರು ಚಿನ್ನ ಧರಿಸಿದರೆ ಇವರ ಸಂಬಂಧಗಳಲ್ಲಿ ಸಮಸ್ಯೆ ಎದುರಿಸಬೇಕಾಗುವುದು. ಭಾವನಗಳನ್ನು ನಿಯಂತ್ರಿಸುವುಉ ಇವರಿಗೆ ಕಷ್ಟವಾಗಬಹುದು. ಇದರಿಂದ ಸಂಬಂಧಗಳು ಹಾಳಾಗಬಹುದು.

ಕುಂಭ ರಾಶಿ : ಕುಂಭ ರಾಶಿಯವರು ಚಿನ್ನ ಧರಿಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಚಿನ್ನ ಇವರ ಆರೋಗ್ಯ ಸಂಬಂಧಿತ ಸಮಸ್ಯೆ ಅಥವಾ ವೈಯಕ್ತಿಕ ಒತ್ತಡವನ್ನು ಉಂಟುಮಾಡಬಹುದು.

ಯಾವ ರಾಶಿಯವರಿಗೆ ಚಿನ್ನ ಅದೃಷ್ಟ :

ಮೇಷ ರಾಶಿಯಲ್ಲಿ ಜನಿಸಿದವರು ಚಿನ್ನವನ್ನು ಧರಿಸುವುದರಿಂದ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುವುದು. ಸಿಂಹ ರಾಶಿಯವರಿಗೆ ಚಿನ್ನವು ಸೌಕರ್ಯ ಮತ್ತು ಸಮೃದ್ಧಿಯನ್ನು ತರುವುದು.

ಗುರುವಿನ ಅಧಿಪತ್ಯದ ಧನು ಮತ್ತು ಮೀನ ರಾಶಿಯವರಿಗೆ ಕೂಡಾ ಚಿನ್ನ ವಿಶೇಷ ಅದೃಷ್ಟವನ್ನು ನೀಡುವುದು. ಅದು ವೃತ್ತಿಜೀವನದ ಬೆಳವಣಿಗೆ, ಖ್ಯಾತಿ ಮತ್ತು ಯಶಸ್ಸಿಗೆ ಬೆಂಬಲ ನೀಡುವುದು. ಚಿನ್ನ ಕರ್ಕ ರಾಶಿಯವರಿಗೆ ಕೂಡಾ ಅನುಕೂಲಕರವಾಗಿಯೇ ಇರುವುದು.

ಚಿನ್ನ ಧರಿಸಲು ಜ್ಯೋತಿಷ್ಯ ಶಾಸ್ತ್ರದ ಪ್ರಮುಖ ನಿಯಮಗಳು

ಜ್ಯೋತಿಷ್ಯವು (gold) ನೀವು ಚಿನ್ನವನ್ನು ಹೇಗೆ ಧರಿಸುತ್ತೀರಿ ಎಂಬುದರ ಮೇಲೆ ಹೆಚ್ಚಿನ ಒತ್ತು ನೀಡುತ್ತದೆ. ಚಿನ್ನದ ಉಂಗುರವನ್ನು ಯಾವಾಗಲೂ ಉಂಗುರದ ಬೆರಳು ಅಥವಾ ತೋರುಬೆರಳಿನ ಮೇಲೆ ಧರಿಸಬೇಕು. ಇವುಗಳನ್ನು ಅತ್ಯಂತ ಮಂಗಳಕರ ಸ್ಥಾನಗಳೆಂದು ಪರಿಗಣಿಸಲಾಗುತ್ತದೆ.ಚಿನ್ನವನ್ನು ಯಾವತ್ತೂ ಸೊಂಟಕ್ಕಿಂತ ಕೆಳಗೆ ಧರಿಸಬಾರದು.

ಚಿನ್ನವು ಗುರು ಗ್ರಹಕ್ಕೆ (planet) ಸಂಬಂಧಿಸಿರುವುದರಿಂದ, ಹೊಸ ಚಿನ್ನವನ್ನು ಗುರುವಾರ ಧರಿಸಬೇಕು. ಇದು ಶುಭಫಲವನ್ನು ನೀಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+