Dhanu Sankranti: ಧನು ಸಂಕ್ರಾಂತಿಯಂದು ರಾಶಿಗನುಗುಣವಾಗಿ ದಾನ ಮಾಡಿ ಸೂರ್ಯನ ಆಶೀರ್ವಾದ ಪಡೆಯಿರಿ...
ಗ್ರಹಗಳ ಜಗತ್ತಿನಲ್ಲಿ ಸೂರ್ಯ ದೇವರಿಗೆ ರಾಜನ ಬಿರುದು ನೀಡಲಾಗಿದೆ. ಇದು ಜೀವನದ ಮೂಲ ಎಂದು ಕರೆಯಲ್ಪಡುವ ಅತ್ಯಂತ ಪ್ರಮುಖ ಗ್ರಹವಾಗಿದೆ.
ಒಂದು ನಿರ್ದಿಷ್ಟ ಅವಧಿಯ ನಂತರ ಸೂರ್ಯ ದೇವರು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಗುತ್ತಾನೆ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಕ್ರಮಿಸುವ ಪ್ರಕ್ರಿಯೆಯನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ.
ಸೂರ್ಯನು ಈಗ ವೃಶ್ಚಿಕ ರಾಶಿಯಿಂದ ಹೊರಬಂದು ಡಿಸೆಂಬರ್ 16 ರಂದು ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದನ್ನು ಧನು ಸಂಕ್ರಾಂತಿ ಎನ್ನುತ್ತಾರೆ. ಇದು ಅತ್ಯಂತ ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಧನು ಸಂಕ್ರಾಂತಿಯಂದು ಗಂಗಾ ಅಥವಾ ಯಾವುದೇ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳಿಂದ ಮುಕ್ತಿ ಸಿಗುತ್ತದೆ.
ಅಷ್ಟೇ ಅಲ್ಲ ಸೂರ್ಯನನ್ನು ಪೂಜಿಸಲು ಇದು ಅತ್ಯುತ್ತಮ ದಿನವಾಗಿದೆ. ಪ್ರಸ್ತುತ ಧನು ಸಂಕ್ರಾಂತಿಯ ದಿನದಂದು ನಿಮ್ಮ ರಾಶಿಯ ಪ್ರಕಾರ ಯಾವ ವಸ್ತುಗಳನ್ನು ದಾನ ಮಾಡುವ ಮೂಲಕ ನೀವು ಸೂರ್ಯ ದೇವನನ್ನು ಮೆಚ್ಚಿಸಬಹುದು ಎಂಬುದನ್ನು ತಿಳಿಯೋಣ.

ಮೇಷ ರಾಶಿ:
ಧನು ಸಂಕ್ರಾಂತಿಯಂದು ಸೂರ್ಯ ದೇವರ ಆಶೀರ್ವಾದ ಪಡೆಯಲು ಮೇಷ ರಾಶಿಯ ಜನರು ಕೆಂಪು ಬಣ್ಣದ ವಸ್ತುಗಳನ್ನು ದಾನ ಮಾಡಬೇಕು. ಈ ದಿನ ನೀವು ಕೆಂಪು ಮೆಣಸಿನಕಾಯಿ, ಸ್ಟ್ರಾಬೆರಿ ಮತ್ತು ಸೇಬುಗಳಂತಹ ಕೆಂಪು ಹಣ್ಣುಗಳನ್ನು ದಾನ ಮಾಡಬಹುದು.

ವೃಷಭ ರಾಶಿ:
ವೃಷಭ ರಾಶಿಯವರು ಧನು ಸಂಕ್ರಾಂತಿಯ ದಿನದಂದು ಸಕ್ಕರೆ, ಉಪ್ಪು, ಮೂಲಂಗಿ, ಹಾಲು, ಮೊಸರು ಮುಂತಾದ ಬಿಳಿ ಪದಾರ್ಥಗಳನ್ನು ದಾನ ಮಾಡಬೇಕು.

ಮಿಥುನ ರಾಶಿ:
ಮಿಥುನ ರಾಶಿಯ ಜನರು ಧನು ಸಂಕ್ರಾಂತಿಯಂದು ಹಸಿರು ತರಕಾರಿಗಳು, ಹಸಿ ಪಪ್ಪಾಯಿ, ಹಸಿರು ಬಳೆಗಳು, ಹೆಸರು ಬೇಳೆ ಇತ್ಯಾದಿಗಳನ್ನು ದಾನ ಮಾಡಬೇಕು.

ಕರ್ಕಾಟಕ ರಾಶಿ:
ಡಿಸೆಂಬರ್ 16 ರಂದು ಧನು ಸಂಕ್ರಾಂತಿಯ ಸಂದರ್ಭದಲ್ಲಿ ಕರ್ಕ ರಾಶಿಯ ಜನರು ಎಲೆಕೋಸು, ಬಿಳಿ ಬಟ್ಟೆ, ಅಕ್ಕಿ, ಮೊಸರು ಮತ್ತು ಚೀಸ್ ಅನ್ನು ದಾನ ಮಾಡಬಹುದು.

ಸಿಂಹ ರಾಶಿ:
ಈ ರಾಶಿಯವರು ಧನು ರಾಶಿ ಸಂಕ್ರಾಂತಿಯ ದಿನದಂದು ಶೇಂಗಾ, ಬೆಲ್ಲ, ಚಿಕ್ಕಿ, ಜೇನು, ಬೀನ್ಸ್ ಮುಂತಾದವುಗಳನ್ನು ದಾನ ಮಾಡಿ ಸೂರ್ಯದೇವನ ಅನುಗ್ರಹವನ್ನು ಪಡೆಯಬಹುದು.

ಕನ್ಯಾರಾಶಿ:
ಧನು ರಾಶಿ ಸಂಕ್ರಾಂತಿಯು ಸೂರ್ಯನ ಅನುಗ್ರಹವನ್ನು ಪಡೆಯಲು ಉತ್ತಮ ದಿನವಾಗಿದೆ. ಕನ್ಯಾ ರಾಶಿಯ ಜನರು ಈ ದಿನ ಹಸಿರು ಹಣ್ಣುಗಳು ಮತ್ತು ಹಸಿರು ಎಲೆಗಳ ತರಕಾರಿಗಳನ್ನು ದಾನ ಮಾಡಬೇಕು.

ತುಲಾ ರಾಶಿ
ಧನು ಸಂಕ್ರಾಂತಿಯಂದು ತುಲಾ ರಾಶಿಯ ಜನರು ಬೆಣ್ಣೆ, ಅಣಬೆ ಮುಂತಾದವುಗಳನ್ನು ದಾನ ಮಾಡಬಹುದು.

ವೃಶ್ಚಿಕ ರಾಶಿ
ಡಿಸೆಂಬರ್ 16 ರಂದು ಧನು ರಾಶಿ ಸಂಕ್ರಾಂತಿಂದು ವೃಶ್ಚಿಕ ರಾಶಿಯ ಜನರು ದಾಳಿಂಬೆ, ಸಿಹಿ ಗೆಣಸು ಮತ್ತು ಕೆಂಪು ಬಣ್ಣದ ಬಟ್ಟೆಗಳನ್ನು ದಾನ ಮಾಡಿ ಶುಭ ಫಲಿತಾಂಶಗಳನ್ನು ಪಡೆಯಬಹುದು.

ಧನು ರಾಶಿ
ಸೂರ್ಯ ದೇವನು ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಯ ಜನರು ಸಕಾರಾತ್ಮಕ ಫಲಿತಾಂಶಗಳಿಗಾಗಿ ಮಾಗಿದ ಪಪ್ಪಾಯಿ, ಕಾಳುಗಳು, ನಿಂಬೆ, ಬಾಳೆಹಣ್ಣು, ಹುರುಳಿ ಹಿಟ್ಟು ಇತ್ಯಾದಿಗಳನ್ನು ದಾನ ಮಾಡಬಹುದು.

ಮಕರ ರಾಶಿ
ಮಕರ ರಾಶಿಯವರು ಧನು ಸಂಕ್ರಾಂತಿಯಂದು ಚರ್ಮದ ಪಾದರಕ್ಷೆ, ಕಪ್ಪು ಎಳ್ಳು ಮತ್ತು ಚಪ್ಪಲಿಯನ್ನು ದಾನ ಮಾಡಿದರೆ ತುಂಬಾ ಒಳ್ಳೆಯದು.

ಕುಂಭ ರಾಶಿ
ಸೂರ್ಯ ದೇವರನ್ನು ಮೆಚ್ಚಿಸಲು ಮತ್ತು ಅವನ ಅನುಗ್ರಹವನ್ನು ಪಡೆಯಲು ಕುಂಭ ರಾಶಿಯ ಜನರು ಧನು ಸಂಕ್ರಾಂತಿಯ ದಿನದಂದು ದೇವಾಲಯದಲ್ಲಿ ಪೊರಕೆಯನ್ನು ದಾನ ಮಾಡಬೇಕು.

ಮೀನ ರಾಶಿ
ಧನು ಸಂಕ್ರಾಂತಿಯಂದು ಮೀನ ರಾಶಿಯವರು ಹಳದಿ ಕ್ಯಾಪ್ಸಿಕಂ, ಜೋಳ, ಕುಂಬಳಕಾಯಿ ಮುಂತಾದವುಗಳನ್ನು ದಾನ ಮಾಡಿದರೆ ತುಂಬಾ ಒಳ್ಲೆಯದು.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications