Horoscope Today: ದಿನ ಭವಿಷ್ಯ ಜನವರಿ 02; 12 ರಾಶಿಗಳಲ್ಲಿ ಈ ರಾಶಿಗೆ ಸುಖದ ಸುಪ್ಪತ್ತಿಗೆ

ಹೊಸ ವರ್ಷ ಪ್ರಾರಂಭವಾಗಿದೆ. 2025ನೇ ವರ್ಷ 12 ರಾಶಿಗಳಿಗೆ ಬಹಳ ವಿಶೇಷವಾಗಿದೆ. ಈ ವರ್ಷ ರಾಶಿಗಳನ್ನು ಅನೇಕ ನವಗ್ರಹಗಳು ಕಾಲ ಕಾಲಕ್ಕೆ ಬದಲಾಯಿಸುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ 2025 ಅನ್ನು ಮಂಗಳಕರ ವರ್ಷ ಎಂದು ಕರೆಯಲಾಗುತ್ತದೆ. ಗುರುವಾರ ಜನವರಿ 2ರಂದು ಚಂದ್ರನು ಶನಿಯ ರಾಶಿಯಾದ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.

ಈ ದಿನ ಪೌಷ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯಿದ್ದು ಈ ದಿನ ಹರ್ಷ ಯೋಗ, ರವಿಯೋಗ ಮತ್ತು ಶ್ರವಣ ನಕ್ಷತ್ರದ ಶುಭ ಸಂಯೋಗ ಸಂಭವಿಸಲಿದೆ. ಹಾಗಾದರೆ ವರ್ಷದ ಎರಡನೇ ದಿನ ಅಂದರೆ ಜನವರಿ 2, 2025ರಂದು 12 ರಾಶಿಯವರ ಭವಿಷ್ಯ ಹೇಗಿರಲಿದೆ ಎಂದು ತಿಳಿಯೋಣ.

horoscope today astrological prediction january 2 2025 for 12 zodiac signs in kannada

ಮೇಷ ರಾಶಿ

ಮೇಷ ರಾಶಿಯವರಿಗೆ ಗುರುವಾರ ಅದ್ಭುತ ದಿನವಾಗಿದೆ. ಈ ದಿನ ಮೇಷ ರಾಶಿಯವರು ಕೈಗೊಂಡ ವ್ಯಾಪಾರ ಯೋಜನೆಗಳು ಫಲಪ್ರದವಾಗುತ್ತವೆ. ಈ ದಿನ ಉದ್ಯೋಗ ಬದಲಾವಣೆಯ ಸಾಧ್ಯತೆಗಳಿವೆ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಈ ದಿನ ಸ್ನೇಹಿತರಿಂದ ಮೋಸ ಹೋಗಬಹುದು. ಮನಸ್ಸಿನಲ್ಲಿ ಏರಿಳಿತಗಳಿರುತ್ತವೆ. ಬೆಳಿಗ್ಗೆ ಹನುಮಾನ್ ಚಾಲೀಸಾವನ್ನು ಪಠಿಸಿ ಮತ್ತು ಗಣೇಶನ ಮಂತ್ರವನ್ನು ಪಠಿಸಿ.

ವೃಷಭ ರಾಶಿ

ಜನವರಿ 2 ವೃಷಭ ರಾಶಿಯವರಿಗೆ ಮಂಗಳಕರ ದಿನವಾಗಿದೆ. ಆಸ್ತಿ ವಿಚಾರದಲ್ಲಿ ಪ್ರಯತ್ನ ಸಾರ್ಥಕವಾಗಲಿದೆ. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಬಹುನಿರೀಕ್ಷಿತ ಕೆಲಸ ಪೂರ್ಣಗೊಳ್ಳುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಲಾಭದ ಮಾರ್ಗಗಳು ತೆರೆದುಕೊಳ್ಳುತ್ತವೆ. ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷ ಹೆಚ್ಚಾಗಲಿದ್ದು, ಬೆಳಿಗ್ಗೆ ಶುಕ್ರನ ಮಂತ್ರವನ್ನು ಪಠಿಸಿ, ಅಗತ್ಯವಿರುವವರಿಗೆ ಬಿಳಿ ಬಟ್ಟೆಗಳನ್ನು ದಾನ ಮಾಡಿ.

ಮಿಥುನ ರಾಶಿ

ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ವ್ಯಾಪಾರ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಅಳಿಯಂದಿರಿಂದ ಬೆಂಬಲ ಸಿಗಲಿದೆ. ಶೈಕ್ಷಣಿಕ ಕೆಲಸದಲ್ಲಿ ಆಸಕ್ತಿ ಇರುತ್ತದೆ. ಉದ್ಯೋಗ ಸ್ಥಳದಲ್ಲಿ ಬದಲಾವಣೆಯಾಗಬಹುದು. ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಆದಾಯ ಹೆಚ್ಚಲಿದೆ. ಬೆಳಿಗ್ಗೆ ಹಸುವಿಗೆ ಹಸಿರು ಮೇವನ್ನು ತಿನ್ನಿಸಿ ಮತ್ತು ಬುಧದ ಬೀಜ ಮಂತ್ರವನ್ನು ಜಪಿಸಿ.

ಕಟಕ ರಾಶಿ

ಜನವರಿ 2 ಕಟಕ ರಾಶಿಯವರಿಗೆ ಮಿಶ್ರ ಫಲ ನೀಡಲಿದೆ. ಯಾಕೆಂದರೆ ಈ ದಿನ ನೀವು ನಿಮ್ಮ ಮಾತಿನ ಮೇಲೆ ಹಿಡಿತವಿಡುವುದು ತುಂಬಾ ಮುಖ್ಯ. ಮಹಿಳಾ ಅಧಿಕಾರಿಯಿಂದ ನೀವು ಒತ್ತಡಕ್ಕೆ ಒಳಗಾಗಬಹುದು. ಕೌಟುಂಬಿಕ ಸಮಸ್ಯೆಗಳಿರುತ್ತವೆ. ಮನಸ್ಸು ವಿಚಲಿತವಾಗಬಹುದು. ಅನಗತ್ಯ ಕೋಪ ಮತ್ತು ಚರ್ಚೆಯಿಂದ ದೂರವಿರಿ. ಈ ಸಮಯದಲ್ಲಿ ಸರಕಾರದಿಂದ ಬೆಂಬಲ ಸಿಗಲಿದೆ. ಈ ಎಲ್ಲಾ ಸಮಸ್ಯೆಗಳಿಂದ ದೂರವಾಗಲು ಚಂದ್ರನ ಮಂತ್ರವನ್ನು ಜಪಿಸಿ. ಬಡವರಿಗೆ ಅಕ್ಕಿ ಅಥವಾ ಸಕ್ಕರೆಯನ್ನು ದಾನ ಮಾಡಿ.

ಸಿಂಹ ರಾಶಿ

ಗುರುವಾರ ಜನವರಿ 2ರಂದು ಸಿಂಹ ರಾಶಿಯವರಿಗೆ ಭಯಸಿದ ದಿನವಾಗಿದೆ. ಕುಟುಂಬದಲ್ಲಿ ಶುಭ ಕಾರ್ಯ ನಡೆಯಬಹುದು. ಹಲವಾರು ಕ್ಷೇತ್ರದಲ್ಲಿ ನೀವು ಪ್ರಗತಿ ಕಾಣುವಿರಿ. ಸೃಜನಾತ್ಮಕ ಪ್ರಯತ್ನಗಳು ಫಲ ನೀಡುತ್ತವೆ. ಮಾತಿನ ಪ್ರಭಾವದಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ಕೆಲಸದ ಸ್ಥಳದಲ್ಲಿ ಬದಲಾವಣೆ ಕಂಡುಬರಲಿದೆ. ಆಂತರಿಕ ತೃಪ್ತಿ ಇರುತ್ತದೆ. ಪರಿಹಾರವಾಗಿ ಬೆಳಿಗ್ಗೆ ಸೂರ್ಯನಿಗೆ ನೀರನ್ನು ಅರ್ಪಿಸಿ ಮತ್ತು ಸೂರ್ಯ ಮಂತ್ರವನ್ನು ಪಠಿಸಿ.

ಕನ್ಯಾ ರಾಶಿ

ಜನವರಿ 2 ಕನ್ಯಾ ರಾಶಿಯವರಿಗೆ ಶುಭ ದಿನವಾಗಿದೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸಾಮರಸ್ಯ ಇರುತ್ತದೆ. ಕೆಲಸದಲ್ಲಿ ಕುಟುಂಬದಿಂದ ಬೆಂಬಲ ಸಿಗಲಿದೆ. ಸ್ನೇಹಿತರ ಸಹಾಯದಿಂದ ನೀವು ಉದ್ಯೋಗಾವಕಾಶಗಳನ್ನು ಪಡೆಯಬಹುದು. ಅಂದುಕೊಂಡ ಕೆಲಸಗಳು ಅದ್ಭುತವಾಗಿ ನೆರವೇರುತ್ತವೆ. ಬೆಳಗ್ಗೆ ಹಸುವಿಗೆ ಆಹಾರ ನೀಡಿ ಗಾಯಗೊಂಡ ಹಸುವಿಗೆ ಚಿಕಿತ್ಸೆ ಕೊಡಿಸುವುರಿಂದ ನಿಮ್ಮ ಪಾಪಗಳು ದೂರವಾಗುತ್ತವೆ.

ತುಲಾ ರಾಶಿ

ತುಲಾ ರಾಶಿಯವರಿಗೆ ಈ ದಿನ ಮಂಗಳಕರವಾಗಿದೆ. ಹಣಕಾಸಿನ ವಿಷಯಗಳಲ್ಲಿ ಸಂಬಂಧಗಳು ಉತ್ತಮವಾಗಿರುತ್ತವೆ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯಬಹುದು. ಈ ಸಮಯದಲ್ಲಿ ಸಾಕಷ್ಟು ಹಣ ಗಳಿಸುವ ಲಕ್ಷಣಗಳಿವೆ. ಪರಿಹಾರವಾಗಿ ಬೆಳಗ್ಗೆ ಅಗತ್ಯವಿರುವವರಿಗೆ ಬಟ್ಟೆ ಕೊಟ್ಟು ಬಡವರಿಗೆ ಊಟ ನೀಡಿ. ಇದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ದಿನ ಆತ್ಮವಿಶ್ವಾಸ ಹೆಚ್ಚಾಗಲಿದೆ. ಅನಾವಶ್ಯಕ ಓಡಾಟ ಇರುತ್ತದೆ. ತಾಳ್ಮೆಯನ್ನು ಕಾಪಾಡಿಕೊಳ್ಳಿ. ಭರವಸೆ ಮತ್ತು ನಿರಾಶೆಯ ಭಾವನೆಗಳು ಇರಬಹುದು. ಕುಟುಂಬಸ್ಥರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನೀವು ಸ್ನೇಹಿತರಿಂದ ಒತ್ತಡಕ್ಕೆ ಒಳಗಾಗಬಹುದು. ಪರಿಹಾರವಾಗಿ ಬೆಳಿಗ್ಗೆ ಹನುಮಾನ್ ಚಾಲೀಸಾವನ್ನು ಪಠಿಸಿ. ಕೋತಿಗೆ ಬೆಲ್ಲ, ಬೇಳೆ ಅಥವಾ ಬಾಳೆಹಣ್ಣು ತಿನ್ನಿಸಿ. ಇದರಿಂದ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ.

ಧನು ರಾಶಿ

ಧನು ರಾಶಿಯವರಿಗೆ ಜನವರಿ 2 ಶುಭ ತರಲಿದೆ. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ. ಸಂಬಂಧಗಳಲ್ಲಿನ ಮನಸ್ತಾಪ ದೂರವಾಗಲಿದೆ. ನಿಮ್ಮ ಆರೋಗ್ಯ ಸುಧಾರಿಸಲಿದೆ. ಹೊಸ ಉತ್ಸಾಹ ಹೆಚ್ಚಾಗಲಿದೆ. ಆದರೆ ಅಧಿಕ ಖರ್ಚು ಇರುತ್ತದೆ. ಹೊರಗಿನ ಆಹಾರ ತ್ಯಜಿಸಿ. ಜೀವನದಲ್ಲಿ ಬರುವ ಸಮಸ್ಯೆಗಳ ನಿವಾರಣೆಗೆ ಹಸುವಿಗೆ ಆಹಾರ ನೀಡಿ. ಗುರುರಾಯರ ಮಂತ್ರವನ್ನು ಪಠಿಸಿ.

ಮಕರ ರಾಶಿ

ಮಕರ ರಾಶಿಯವರಿಗೆ ಜನವರಿ 2 ಅತ್ಯಾದ್ಭುತವಾಗಿದೆ. ನಿಮಗೆ ಸರಕಾರದಿಂದ ಬೆಂಬಲ ಸಿಗಲಿದೆ. ತಾಳ್ಮೆ ಹೆಚ್ಚಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಗೌರವವನ್ನು ಗಳಿಸುವಿರಿ. ಉದ್ಯೋಗದಲ್ಲಿ ಸಂಬಳ ಹೆಚ್ಚಾಗಲಿದೆ. ಕೆಲಸಗಳನ್ನು ನಿಭಾಯಿಸುವ ಶಕ್ತಿ ಹೆಚ್ಚಾಗಲಿದೆ. ಒತ್ತಡ ರಹಿತ ಜೀವನವನ್ನು ನೀವು ಮಾಡುವಿರಿ. ಜೀವನದಲ್ಲಿ ಬರುವ ಅಡೆತಡೆಗಳ ನಿವಾರಣೆಗಾಗಿ ಬೆಳಿಗ್ಗೆ ನಾಯಿಗೆ ಆಹಾರ ನೀಡಿ. ಗಾಯಗೊಂಡ ನಾಯಿಗೆ ಚಿಕಿತ್ಸೆ ಕೊಡಿಸಲು ಸಹಾಯ ಮಾಡಿ. ಇದರಿಂದ ನೀವು ಮಾಡುವ ತಪ್ಪುಗಳಿಗೆ ಕ್ಷಮೆ ಸಿಗಲಿದೆ.

ಕುಂಭ ರಾಶಿ

ಜನವರಿ 2 ಕುಂಭ ರಾಶಿಯವರ ಜೀವನದಲ್ಲಿ ಬರುವ ಅಡೆತಡೆಗಳು ದೂರವಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಸ್ನೇಹಿತರ ಸಹಾಯದಿಂದ ನೀವು ವ್ಯಾಪಾರ ಅವಕಾಶಗಳನ್ನು ಪಡೆಯಬಹುದು. ಜೀವನದಲ್ಲಿ ಯಾವುದೇ ತೊಂದರೆಗಳು ಹೆಚ್ಚಾದಲ್ಲಿ ಬೆಳಿಗ್ಗೆ ಶನಿ ಮಂತ್ರವನ್ನು ಪಠಿಸಿ ಮತ್ತು ಸಂಜೆ ಶನಿ ದೇವಸ್ಥಾನಕ್ಕೆ ಹೋಗಿ ಎಣ್ಣೆ ದೀಪವನ್ನು ಬೆಳಗಿಸಿ.

ಮೀನ ರಾಶಿ

ಮೀನ ರಾಶಿಯವರಿಗೆ ಗುರುವಾರ ಮಿಶ್ರ ದಿನವಾಗಿದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಕೆಲಸದ ಸ್ಥಳದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ವ್ಯಾಪಾರ ವಿಸ್ತರಣೆಯಾಗಲಿದೆ. ಮಾತಿನಲ್ಲಿ ಮಾಧುರ್ಯ ಇರಲಿ. ನಿಮಗೆ ದೈಹಿಕ ಕೆಲಸಗಳು ಕಷ್ಟವಾಗಬಹುದು. ಪರಿಹಾರವಾಗಿ ಬೆಳಿಗ್ಗೆ ಹಸುವಿಗೆ ಆಹಾರ ನೀಡಿ ಮತ್ತು ಗುರುರಾಯರ ಅಥವಾ ವಿಷ್ಣುದೇವನ ಮಂತ್ರವನ್ನು ಜಪಿಸಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಒಳಗೊಂಡಿದೆ. ಮಾಹಿತಿಯನ್ನು ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿಯನ್ನು ಅನುಷ್ಠಾನಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+