Daily Horoscope: ವೃತ್ತಿಜೀವನದಲ್ಲಿ ಹೊಸ ಅವಕಾಶ; ವ್ಯವಹಾರದಲ್ಲಿ ಅನಿರೀಕ್ಷಿತವಾಗಿ ಲಾಭ 12 ರಾಶಿಗಳ ನಿತ್ಯ ಭವಿಷ್ಯ

ಅಶ್ವಿನಿ ಶುಕ್ಲ ಪಕ್ಷದ ಹುಣ್ಣಿಮೆ ತಿಥಿ. ಸಂಜೆ 5.41ರವರೆಗೆ ಅಶ್ವಿನಿ ನಕ್ಷತ್ರ ಇರುವುದು. ನಂತರ ಭರಣಿ ನಕ್ಷತ್ರ ಶುರುವಾಗುವುದು. ಮಧ್ಯಾಹ್ನದವರೆಗೆ ವಜ್ರ ಯೋಗ ಇದ್ದು ನಂತರ ಸಿದ್ದಿ ಯೋಗ ಇರುವುದು.

ಮೇಷ ರಾಶಿ (Aries) : ಇಂದು ಕಚೇರಿಯಲ್ಲಿ ಅನುಕೂಲಕರ ಬದಲಾವಣೆಗಳು ಆಗುವುದು. ಕೈಗೆತ್ತಿಕೊಂಡ ಕೆಲಸ ಬೇಗನೆ ಮುಗಿಯುವುದು. ಮೇಲಧಿಕಾರಿಯಿಂದ ಮೆಚ್ಚುಗೆ ಸಿಗುವುದು. ವ್ಯವಹಾರ ಕ್ಷೇತ್ರದಲ್ಲಿ ಹೊಸ ಅವಕಾಶ ಒಟ್ಟಿಗೆ ಬರುತ್ತವೆ. ಹಣಕಾಸಿನ ವಿಷಯಗಳಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಆರೋಗ್ಯ ಸ್ಥಿರವಾಗಿರುವುದು.

Daily Horoscope Today Rashi Bhavishya October 26 Zodiac Predictions Lucky Number Colour Of All Signs

ವೃಷಭ ರಾಶಿ (Taurus): ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಆರ್ಥಿಕ ಸ್ಥಿತಿ ಬಲಗೊಳ್ಳುವುದು. ಹೊರಗೆ ಉಳಿದಿರುವ ಹಣ ಮತ್ತೆ ವಾಪಸ್ ಕೈ ಸೇರುವುದು. ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರ ಸಿಗುತ್ತದೆ. ಹೊಸ ಹೂಡಿಕೆ ಆಸ್ತಿ ಖರೀದಿಗೆ ಅವಕಾಶವಿದೆ. ಸಂಗಾತಿಯೊಂದಿಗಿನ ಸಂಬಂಧ ಮಧುರವಾಗಿರುತ್ತದೆ.

ಮಿಥುನ ರಾಶಿ (Gemini) : ವೃತ್ತಿಜೀವನದಲ್ಲಿ ಹೊಸ ಅವಕಾಶ ಸಿಗುವುದು. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುವುದು. ಹೊಸ ಒಪ್ಪಂದದಿಂದ ಉದ್ಯಮಿಗಳಿಗೆ ಲಾಭವಾಗುವುದು. ಆದಾಯ ಹೆಚ್ಚಾಗುವುದು. ಅನಗತ್ಯ ವೆಚ್ಚವನ್ನು ನಿಯಂತ್ರಿಸುವುದು ಅಗತ್ಯ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗುವುದು.

ಕಟಕ ರಾಶಿ (Cancer): ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರ ತೊಂದರೆಗೆ ಗುರಿ ಮಾಡಬಹುದು. ವ್ಯವಹಾರ ವಿಸ್ತರಣೆ ಬಗ್ಗೆ ಆಲೋಚಿಸಬಹುದು. ಇದು ಬಹಳ ಅನುಕೂಲಕರ ಸಮಯ. ಮೇಲಧಿಕಾರಿಯೊಂದಿಗೆ ಮಾತನಾಡುವಾಗ ಯೋಚಿಸಿ ಪದ ಬಳಸಿ. ಶಾಂತ ವಾತಾವರಣದಲ್ಲಿ ಸಮಯ ಕಳೆಯುವುದರಿಂದ ಮನಸ್ಸಿನ ಶಾಂತಿ ಹೆಚ್ಚಾಗುವುದು.

ಸಿಂಹ ರಾಶಿ (Leo): ಆತ್ಮವಿಶ್ವಾಸ ಹೆಚ್ಚಾಗುವುದು. ವ್ಯವಹಾರದಲ್ಲಿ ಅನಿರೀಕ್ಷಿತವಾಗಿ ಲಾಭವಾಗುವುದು. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಮತ್ತಷ್ಟು ಹೆಚ್ಚಾಗುವುದು. ಕುಟುಂಬ ಸದಸ್ಯರೊಂದಿಗೆ ಸಂತೋಷದ ಕ್ಷಣ ಕಳೆಯುವಿರಿ. ಆರೋಗ್ಯ ಸುಧಾರಿಸುವುದು.

ಕನ್ಯಾರಾಶಿ (Virgo) : ಅಳೆದು ತೂಗಿ ಖರ್ಚು ಮಾಡಿದರೆ ಒಳ್ಳೆಯದು. ಇಲ್ಲವಾದರೆ ಹಣದ ಸಮಸ್ಯೆ ಎದುರಾಗುವುದು. ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಾಗುವುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಿಗುವುದು. ಕುಟುಂಬದಲ್ಲಿ ಪರಸ್ಪರ ತಿಳುವಳಿಕೆ ಮತ್ತು ಸಾಮರಸ್ಯ ಇರುತ್ತದೆ.

ತುಲಾ ರಾಶಿ (Libra) : ಪ್ರಭಾವಿ ಸೆಲೆಬ್ರಿಟಿಗಳೊಂದಿಗೆ ಸಂಪರ್ಕ ಸಾಧಿಸುವಿರಿ. ಕಲೆ, ಬರವಣಿಗೆ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿರುವವರಿಗೆ ವಿಶೇಷ ಮನ್ನಣೆ ಹೊಸ ಅವಕಾಶ ಸಿಗುತ್ತವೆ. ವ್ಯವಹಾರದಲ್ಲಿ ತೆಗೆದುಕೊಳ್ಳುವ ನಿರ್ಧಾರ ಲಾಭ ತಂದುಕೊಡುವುದು. ಹಳೆಯ ಸಾಲದಿಂದ ಮುಕ್ತಿ ಸಿಗುವುದು.

ವೃಶ್ಚಿಕ ರಾಶಿ (Scorpio) : ದೊಡ್ಡ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಬಾಕಿ ಉಳಿದಿರುವ ಕೆಲಸ ವೇಗವಾಗಿ ಮುಗಿಯುವುದು. ಹಣಕಾಸಿನ ಸಮ್ಯೆಗೆ ಪರಿಹಾರ ಸಿಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಯೋಚಿಸಿ ಮುಂದುವರಿಯುವುದು ಸೂಕ್ತ. ಹೊಸ ಮಾರ್ಕೆಟಿಂಗ್ ತಂತ್ರ ಸಕಾರಾತ್ಮಕ ಫಲ ನೀಡುತ್ತವೆ.

ಧನು ರಾಶಿ (Sagittarius): ಕೈ ಹಾಕಿದ ಕೆಲಸದಲ್ಲಿ ಯಶಸ್ಸು ಸಿಗುವುದು. ಪ್ರಯಾಣದಿಂದ ಪ್ರಯೋಜನವಾಗುವುದು. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಉತ್ತಮ ಪ್ರಗತಿಯಾಗುವುದು. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಬಹಳ ಅನುಕೂಲಕರ ಸಮಯ.

ಮಕರ ರಾಶಿ (Capricorn) : ಇಂದು ಕೆಲಸದಲ್ಲಿ ಶಿಸ್ತು ಮತ್ತು ತಾಳ್ಮೆ ಬಹಳ ಮುಖ್ಯ. ಆಸ್ತಿ ಸಂಬಂಧಿತ ವಿಷಯಗಳಲ್ಲಿ ಉತ್ತಮ ಪ್ರಗತಿಯಾಗುವುದು. ಹಣಕಾಸಿನ ವಹಿವಾಟಿನಲ್ಲಿ ಸ್ವಲ್ಪ ಜಾಗರೂಕರಾಗಿರುವುದು ಸೂಕ್ತ. ಅನಗತ್ಯ ವಾದಗಳಿಂದ ದೂರವಿರುವುದು ಸೂಕ್ತ. ವೈವಾಹಿಕ ಜೀವನ ನೆಮ್ಮದಿಯಿಂದ ನಡೆಯಲಿದೆ.

ಕುಂಭ ರಾಶಿ (Aquarius): ಹೊಸ ಪರಿಚಯಸ್ಥರು ಭವಿಷ್ಯಕ್ಕೆ ತುಂಬಾ ಒಳ್ಳೆಯವರಾಗಿರುತ್ತಾರೆ. ವ್ಯಾಪಾರದಲ್ಲಿ ಲಾಭ ಸ್ಥಿರವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳು ಬಗೆಹರಿಯುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ.

ಮೀನ ರಾಶಿ (Pisces): ಕಲೆ, ಬರವಣಿಗೆ ಮತ್ತು ವ್ಯವಹಾರ ಕ್ಷೇತ್ರದಲ್ಲಿರುವವರಿಗೆ ಹೊಸ ಅವಕಾಶ ಸಿಗುತ್ತವೆ. ಹಣಕಾಸಿನ ವಿಷಯಗಳಲ್ಲಿ ಸೂಕ್ತ ಹೆಜ್ಜೆ ಇಡುವುದು ಸೂಕ್ತ. ಈ ಹಿಂದೆ ಮಾಡಿದ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಕುಟುಂಬದಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಇರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+