Daily Horoscope October 14: ಆಯುಷ್ಮಾನ್, ಸರ್ವಾಮೃತ ಯೋಗದ ಪ್ರಭಾವ; ಈ ರಾಶಿಗಳಿಗೆ ಅದೃಷ್ಟ, ಹಣದ ಲಾಭ!

Daily Horoscope October 14: ಇಂದು ಅಶ್ವಿನಿ ಶುಕ್ಲ ಪಕ್ಷದ ಚತುರ್ಥಿ ತಿಥಿ ಇಡೀ ದಿನ ಇರುತ್ತದೆ. ಅನುರಾಧಾ ನಕ್ಷತ್ರದ ಶುಭ ಪರಿಣಾಮ ಕೂಡಾ ಇಡೀದಿನ ಇರುತ್ತದೆ. ಚಂದ್ರನು ದಿನವಿಡೀ ವೃಶ್ಚಿಕ ರಾಶಿಯಲ್ಲಿ ಮಂಗಳ ಗ್ರಹದಲ್ಲಿ ಸಂಚರಿಸುತ್ತಾನೆ. ಗ್ರಹಗಳ ಅಪರೂಪದ ಸಂಯೋಗದಿಂದಾಗಿ ಆಯುಷ್ಮಾನ್ ಯೋಗ, ಸರ್ವಾಮೃತ ಯೋಗ, ಲಕ್ಷ್ಮೀನಾರಾಯಣ ಯೋಗ, ಪಾರಿಜಾತ ಯೋಗ, ವಾಶಿ ಯೋಗ, ಆನಂದದಾದಿ ಯೋಗ, ಸುನ್ಫಾ ಯೋಗ ಮತ್ತು ಮಾಳವ್ಯ ಯೋಗಗಳು ರೂಪುಗೊಳ್ಳುತ್ತಿವೆ.

ಮೇಷ ರಾಶಿ (Aries)

ಹಣದ ವಿಷಯದಲ್ಲಿ ಈ ದಿನ ಉತ್ತಮವಾಗಿಲ್ಲ. ಕಾನೂನು ಅಡೆತಡೆಗಳ ಬಗ್ಗೆ ಜಾಗರೂಕರಾಗಿರಿ. ಮಾಡಬೇಕಿರುವ ಕೆಲಸ ನಿಧಾನವಾಗುವುದು. ನಡವಳಿಕೆಯಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಿ. ಯಾರನ್ನೂ ಕುರುಡಾಗಿ ನಂಬಬೇಡಿ. ಮೋಸ ಹೋಗುವ ಸಾಧ್ಯತೆಯಿದೆ. ಹಣಕಾಸಿನ ವಿಷಯದಲ್ಲಿ ಅಡೆತಡೆ ಎದುರಾಗಬಹುದು. ಅನಗತ್ಯ ಖರ್ಚು ಮಾಡಬೇಡಿ.

Daily Horoscope October 14 Auspicious Yogas Bring Luck Wealth and Success for These Zodiac Signs

ವೃಷಭ ರಾಶಿ (Taurus)

ಆಯುಷ್ಮಾನ್ ಮತ್ತು ಸರ್ವಾಮೃತ ಯೋಗದಿಂದ ದೈನಂದಿನ ವ್ಯವಹಾರ ಕಾರ್ಯ ಸುಲಭವಾಗಿ ಪೂರ್ಣಗೊಳ್ಳುವುದು. ಮಾರಾಟ ಮತ್ತು ಆದಾಯದಲ್ಲಿ ದೊಡ್ಡಮಟ್ಟದ ಲಾಭವಾಗುವುದು. ಹಿರಿಯರು, ಮೇಲಧಿಕಾರಿಗಳ ಸಹಾಯದಿಂದ ಅರ್ಧಕ್ಕೆ ನಿಂತಿರುವ ಕೆಲಸ ಪೂರ್ಣವಾಗುವುದು. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗುತ್ತದೆ. ಕೌಟುಂಬಿಕ ಸಂತೋಷ ಮತ್ತು ಮನಸ್ಸಿನ ಶಾಂತಿ ಹೆಚ್ಚಾಗುವುದು. ಆದಾಯದಲ್ಲಿ ಹೆಚ್ಚಳವಾಗುವುದು. ಬ್ಯಾಂಕ್ ಬ್ಯಾಲೆನ್ಸ್ ಸುಧಾರಿಸುತ್ತದೆ.

ಮಿಥುನ ರಾಶಿ (Gemini)

ಆಯುಷ್ಮಾನ್ ಮತ್ತು ಸರ್ವಾಮೃತ ಯೋಗದಿಂದ ದೊಡ್ಡ ಅರ್ಡರ್ ಸಿಗುವುದು. ಹೊಸ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡುವ ಸಾಧ್ಯತೆ ಇದೆ. ಪೊಲೀಸ್, ರಕ್ಷಣೆ ಮತ್ತು ಆಡಳಿತ ಸೇವೆಯ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಸಿಗುವುದು. ಕುಟುಂಬದೊಂದಿಗೆ ಸಂತೋಷಕರ ಸಮಯ ಕಳೆಯುವಿರಿ. ಆರೋಗ್ಯ ಉತ್ತಮವಾಗಿರುತ್ತದೆ.

ಕಟಕ ರಾಶಿ (Cancer)

ಉದ್ಯಮಿಗಳಿಗೆ ಜಾಕ್ ಪಾಟ್ ಹೊಡೆಯುವ ದಿನವಾಗಿದೆ. ವ್ಯವಹಾರದಲ್ಲಿ ಅನಿರೀಕ್ಷಿತ ಲಾಭವಾಗುವುದು. ಹಿರಿಯರೊಂದಿಗೆ ಸಮನ್ವಯ ಅತ್ಯುತ್ತಮವಾಗಿರುತ್ತದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವುದು. ಆರೋಗ್ಯ ಉತ್ತಮವಾಗಿರುತ್ತದೆ.

ಸಿಂಹ ರಾಶಿ (Leo)

ವ್ಯವಹಾರದಲ್ಲಿ ಎಚ್ಚರ ಇರಲಿ. ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ಕೆಲಸದಲ್ಲಿನ ಹೊರ ಹೆಚ್ಚಾಗುವುದು. ಕಚೇರಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ. ಯಾವುದೇ ರೀತಿಯ ವಿವಾದದಿಂದ ದೂರವಿರಿ. ಕುಟುಂಬ ಅಥವಾ ಆಪ್ತರೊಂದಿಗೆ ಮನಸ್ತಾಪ ಉಂಟಾಗಬಹುದು. ತಾಳ್ಮೆಯಿಂದಿರಿ. ಹಣದ ಸಮಸ್ಯೆಯಿಂದ ಒತ್ತಡ ಉಂಟಾಗಬಹುದು.

ಕನ್ಯಾರಾಶಿ (Virgo)

ನಿಮ್ಮ ಪಾಲಿನ ಲಕ್ಕಿ ದಿನವಾಗಿರುತ್ತದೆ. ಉದ್ಯಮದಲ್ಲಿ ಅತ್ಯುತ್ತಮ ಫಲಿತಾಂಶ ಸಿಗುವುದು. ಆಯುಷ್ಮಾನ್ ಮತ್ತು ಸರ್ವಾಮೃತ ಯೋಗದಿಂದ ನಿರೀಕ್ಷಿತ ಫಲ ಸಿಗುವುದು. ಆಧ್ಯಾತ್ಮಿಕ ವಿಚಾರದತ್ತ ಮನಸ್ಸು ವಾಲುವುದು. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ನೆಲೆಯಾಗುವುದು. ಮಾರಾಟದಲ್ಲಿ ಬಂಪರ್ ಲಾಭವಾಗುವುದು. ಆರೋಗ್ಯ ಉತ್ತಮವಾಗಿರುತ್ತದೆ.

ತುಲಾ ರಾಶಿ (Libra)

ನಿಂತು ಹೋಗಿದ್ದ ಕೆಲಸ ಮತ್ತೆ ಆರಂಭವಾಗುವುದು. ಇಂದು ನಿಮ್ಮ ಪಾಲಿನ ಅದೃಷ್ಟದ ದಿನ. ಆರ್ಥಿಕ ಲಾಭವಾಗುವುದು. ಕೆಲಸದ ಹೊರೆ ಹೆಚ್ಚಾಗುವುದು. ಕುಟುಂಬದೊಂದಿಗಿನ ಸಂಬಂಧ ಸಾಮರಸ್ಯದಿಂದ ಇರುತ್ತದೆ. ಹಣ ಖರ್ಚು ಮಾಡುವಾಗ ಎಚ್ಚರಿಕೆಯಿಂದ ಇರಿ. ವಿದ್ಯಾರ್ಥಿಗಳು ಮತ್ತು ಕಲಾವಿದರಿಗೆ ಅದೃಷ್ಟದ ದಿನವಾಗಿರುವುದು.

ವೃಶ್ಚಿಕ ರಾಶಿ (Scorpio)

ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಿರಿ. ವ್ಯವಹಾರ ಹೊಸ ಎತ್ತರಕ್ಕೆ ಏರುವುದು. ದೂರದ ಊರಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಆರ್ಥಿಕವಾಗಿ ದಿನ ಪ್ರಯೋಜನಕಾರಿಯಾಗಿರುವುದು. ಕುಟುಂಬದಲ್ಲಿ ಸಾಮರಸ್ಯ ಮತ್ತು ಪ್ರೀತಿಯ ವಾತಾವರಣವಿರುತ್ತದೆ. ಆದಾಯ ಹೆಚ್ಚಾಗುವುದು. ಆರೋಗ್ಯವು ಉತ್ತಮವಾಗಿರುತ್ತದೆ.

ಧನು ರಾಶಿ (Sagittarius)

ವಿವಾದದಲ್ಲಿ ಭಾಗಿಯಾಗಬೇಡಿ. ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗುವುದು. ಸುಖಾ ಸುಮ್ಮನೆ ಯಾರ ಮೇಲೂ ಕೋಪ ಮಾಡಬೇಡಿ. ಕುಟುಂಬದಲ್ಲಿ ಪರಸ್ಪರ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಾಗುವುದು. ಕೌಟುಂಬಿಕ ಸಂಘರ್ಷದ ಸಾಧ್ಯತೆಯಿದೆ. ಹಣಕಾಸಿನ ವಿಷಯಗಳಲ್ಲಿ ಮನಸ್ತಾಪ ಉಂಟಾಗಬಹುದು. ಅನಗತ್ಯ ಖರ್ಚು ನಿಗ್ರಹಿಸಿ. ತಲೆನೋವಿನ ಸಮಸ್ಯೆ ಕಾಡುವುದು.

ಮಕರ ರಾಶಿ (Capricorn)

ದೊಡ್ಡ ಕಂಪನಿಗಳು ನಿಮ್ಮ ವ್ಯವಹಾರದಲ್ಲಿ ಬಂಡವಾಳವನ್ನು ಹೂಡಿಕೆ ಮಾಡಬಹುದು. ಹೊಸ ಕೆಲಸ ಶುರು ಮಾಡುವುದಕ್ಕೆ ಇಂದು ಸೂಕ್ತ ದಿನ. ಪೂರ್ವಜರ ಆಸ್ತಿಯಿಂದ ಲಾಭವಾಗುವುದು. ನಿರುದ್ಯೋಗಿಗಳಿಗೆ ಕೆಲಸ ಸಿಗುವುದು. ಬಡ್ತಿ ಸಿಗುವ ಸಾಧ್ಯತೆಗಳಿವೆ. ಹೊಸ ಹೂಡಿಕೆ ಮತ್ತು ಬಡ್ತಿಯಿಂದ ಲಾಭವಾಗುವುದು.

ಕುಂಭ ರಾಶಿ (Aquarius)

ವ್ಯವಹಾರವನ್ನು ಹೆಚ್ಚಿಸಲು ಮತ್ತು ಹೊಸ ಫ್ರ್ಯಾಂಚೈಸ್ ತೆರೆಯಲು ಇದು ಉತ್ತಮ ಸಮಯ. ಉದ್ಯೋಗದಲ್ಲಿ ದೊಡ್ಡ ಜವಾಬ್ದಾರಿ ಸಿಗುವುದು. ಅಧಿಕಾರಿಗಳೊಂದಿಗೆ ಸಾಮರಸ್ಯದಿಂದ ಇರಿ. ಕುಟುಂಬ ಜೀವನವು ಉತ್ತಮವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಆರೋಗ್ಯ ಉತ್ತಮವಾಗಿರುತ್ತದೆ.

ಮೀನ ರಾಶಿ (Pisces)

ಕೆಲಸದ ಹೊರೆ ವಿಪರೀತವಾಗಿರುತ್ತದೆ. ಬಡ್ತಿ ಸಿಗುವ ಅವಕಾಶ ಹೆಚ್ಚಿದೆ. ಹಣವನ್ನು ಸರಿಯಾಗಿ ಹೂಡಿಕೆ ಮಾಡಿ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆರೋಗ್ಯ ಉತ್ತಮವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+