Daily Horoscope Aug 10: ಈ 3 ರಾಶಿಯವರಿಗೆ ಇಂದು ಧನಲಾಭ, ಕೈಗೊಂಡ ಕೆಲಸಗಳಿಗೆ ಸಿಗಲಿದೆ ಮನ್ನಣೆ!
Daily Horoscope Aug 10: ಸಾಮಾನ್ಯವಾಗಿ ಬೆಳಗ್ಗೆ ಆಯಿತೆಂದರೆ ಸಾಕು ಬಹುತೇಕರಿಗೆ ತಮ್ಮ ದಿನನಿತ್ಯದ ಬದುಕನ್ನು ಹೇಗೆ ಆರಂಭಿಸಬೇಕು ಎನ್ನುವ ಚಿಂತೆ ಇರುತ್ತದೆ. ಇಂದು ಹೇಗೆ ಇರುತ್ತದೆ, ಏನಾಗಲಿದೆಯೋ ಎನ್ನುವ ಆತಂಕವಿರುತ್ತದೆ. ಹಾಗಾದ್ರೆ ಚಿಂತೆ ಯಾಕೆ ಆಗಸ್ಟ್ 10ರ ಸೋಮವಾರದ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿದೆ. ಸೋಮವಾರದ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಇಂದಿನ 12 ರಾಶಿಗಳ ಸಂಪೂರ್ಣ ಭವಿಷ್ಯ, ಫಲಾಫಲಗಳ ವಿವರ ನೋಡೋಣ.
ಮೇಷ ರಾಶಿ (Aries)
ಆರ್ಥಿಕ ಸ್ಥಿತಿ ಸುಧಾರಿಸುವುದು. ಕೈ ಹಾಕುವ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ ಸಿಗುವುದು. ನಿಮ್ಮ ಮನೋಬಲ ಹೆಚ್ಚುವುದು. ಆರೋಗ್ಯ ಉತ್ತಮವಾಗಿರುವುದು.

ವೃಷಭ ರಾಶಿ (Taurus)
ಹಣಕಾಸಿನ ವಿಷಯಗಳ ಬಗ್ಗೆ ಎಚ್ಚರದಿಂದ ಇರಬೇಕು. ಖರ್ಚುಗಳನ್ನು ನಿಯಂತ್ರಿಸುವುದು ಒಳ್ಳೆಯದು. ಕೆಲಸಗಳ ಮೇಲೆ ಗಮನ ಹರಿಸಬೇಕು. ವೃತ್ತಿ ಬದುಕು ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಸಾಧಿಸುವಿರಿ. ಬದ್ಧತೆಯಿಂದ ಕೆಲಸ ಮಾಡುವಿರಿ. ಆರೋಗ್ಯವು ಉತ್ತಮವಾಗಿರುವುದು.
ಮಿಥುನ ರಾಶಿ (Gemini)
ವ್ಯವಹಾರದ ಬಗ್ಗೆ ಜಾಗರೂಕರಾಗಿರಬೇಕು. ಸರಿಯಾದ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ವ್ಯವಹಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದಲ್ಲಿ ಪ್ರಯೋಜನವಾಗುವುದು. ವೃತ್ತಿ ಮತ್ತು ವ್ಯವಹಾರದಲ್ಲಿ ಅಭಿವೃದ್ದಿಯಾಗುವುದು.
ಕಟಕ ರಾಶಿ (Cancer)
ನಿಮ್ಮ ಖರ್ಚುಗಳು ಇದ್ದಕ್ಕಿದ್ದಂತೆ ಹೆಚ್ಚಾಗುವುದು. ಇವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಉತ್ತಮ ಉಳಿತಾಯ ಮಾಡಲು ಸಾಧ್ಯವಾಗುವುದು. ಲಾಭ ಮತ್ತು ನಷ್ಟಗಳು ಸಮಾನವಾಗಿರುವುದು. ಅಮೂಲ್ಯವಾದ ಮತ್ತು ಆಕರ್ಷಕ ಉಡುಗೊರೆಗಳು ಸಿಗುವುದು.
ಸಿಂಹ ರಾಶಿ (Leo)
ಆರ್ಥಿಕ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು. ಆರ್ಥಿಕ ಗುರಿಗಳನ್ನು ಸಾಧಿಸಲು ಸಹಾಯವಾಗುವುದು. ಆದಾಯವನ್ನು ಹೆಚ್ಚಿಸಲು ಹೊಸ ಅವಕಾಶ ಸಿಗುವುದು. ಸಾಲ ತೀರಿಸಲು ಅವಕಾಶ ಸಿಗುವುದು. ವ್ಯವಹಾರ ಮತ್ತು ವೃತ್ತಿಯಲ್ಲಿ ಅಭಿವೃದ್ದಿಯಾಗುವುದು.
ಕನ್ಯಾರಾಶಿ (Virgo)
ಉದ್ಯೋಗ ಅಥವಾ ಸ್ವ-ಉದ್ಯೋಗದ ಮೂಲಕ ಆದಾಯ ಹೆಚ್ಚಾಗುವುದು. ಕೆಲಸಕ್ಕಾಗಿ ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು. ವ್ಯವಹಾರದ ವಿಷಯಗಳಲ್ಲಿ ಉತ್ಸಾಹ ಹೆಚ್ಚಾಗುವುದು. ಪಾಲುದಾರಿಕೆ ಉದ್ಯಮದಲ್ಲಿ ಲಾಭವಾಗುವುದು.
ತುಲಾ ರಾಶಿ (Libra)
ಆರ್ಥಿಕ ಸಮಸ್ಯೆ ಎದುರಾಗುವುದು. ಧೈರ್ಯ ಮತ್ತು ತಾಳ್ಮೆಯಿಂದ ಇದ್ದರೆ ಸಮಸ್ಯೆ ಬಗೆಹರಿಯುವುದು. ಖರ್ಚುಗಳ ಬಗ್ಗೆ ಜಾಗರೂಕರಾಗಿರಿ. ಅನಗತ್ಯವಾಗಿ ಖರ್ಚುಗಳನ್ನು ಮಾಡಬೇಡಿ. ಅನಿರೀಕ್ಷಿತವಾಗಿ ಆರ್ಥಿಕ ಲಾಭವಾಗುವುದು.
ವೃಶ್ಚಿಕ ರಾಶಿ (Scorpio)
ಆರ್ಥಿಕವಾಗಿ ಶುಭ ದಿನವಾಗಿರುವುದು. ಆದಾಯದ ಮೂಲಗಳು ಹೆಚ್ಚಾಗುವುದು. ಹಳೆಯ ವ್ಯವಹಾರದಲ್ಲಿ ಲಾಭವಾಗುವುದು. ಸಹೋದ್ಯೋಗಿಗಳೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳುವಿರಿ. ಆರೋಗ್ಯವು ಸಾಮಾನ್ಯವಾಗಿರುವುದು.
ಧನು ರಾಶಿ (Sagitarius)
ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಇದು ಒಳ್ಳೆಯ ಸಮಯ. ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುವಿರಿ. ಹೆಚ್ಚುವರಿ ಆದಾಯ ಸಿಗುವುದು. ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭವಾಗುವುದು. ಸಂತೋಷ ಹೆಚ್ಚಾಗುವುದು.
ಮಕರ ರಾಶಿ (Capricorn)
ಹಣಕಾಸಿನ ಗುರಿಗಳನ್ನು ಸಾಧಿಸಲು ಹೆಚ್ಚು ಶ್ರಮಿಸಬೇಕಾಗಬಹುದು. ಆರ್ಥಿಕ ಲಾಭಗಳು ದೊರೆಯುವುದು. ಬಾಕಿ ಇರುವ ವ್ಯವಹಾರ ಒಪ್ಪಂದಗಳು ಪೂರ್ಣಗೊಳ್ಳುವುದು. ಹೊಸ ವ್ಯಾಪಾರ ಅವಕಾಶಗಳು ತೆರೆದುಕೊಳ್ಳುವುದು.
ಕುಂಭ ರಾಶಿ (Aquarius)
ಆದಾಯವನ್ನು ಹೆಚ್ಚಿಸಲು ಬೇರೆ ಬೇರೆ ಮಾರ್ಗಗಳು ತೆರೆದುಕೊಳ್ಳುವುದು. ಮನೆಯಿಂದಲೇ ವ್ಯವಹಾರವನ್ನು ಪ್ರಾರಂಭಿಸುವುದು ಒಳ್ಳೆಯದು. ಪ್ರತಿಸ್ಪರ್ಧಿಗಳು ಶಾಂತವಾಗುವರು. ನಿಯಮಿತವಾಗಿ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳಿ.
ಮೀನ ರಾಶಿ (Pisces)
ಸ್ವಲ್ಪ ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದರೆ, ಸಂಪತ್ತು ಹೆಚ್ಚಾಗುವುದು. ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಪ್ರಸ್ತುತ ಸಮಯ ಹೂಡಿಕೆಗಳಿಗೆ ಅನುಕೂಲಕರವಾಗಿಲ್ಲ. ವ್ಯಾಪಾರ ಸಂಪರ್ಕಗಳು ಹೆಚ್ಚಾಗುವುದು. ಆರೋಗ್ಯ ಸುಧಾರಿಸುವುದು.


Click it and Unblock the Notifications
